Ind vs Wi 2nd test: 518 ರನ್ ಬಾರಿಸಿ ವಿಶ್ವ ದಾಖಲೆ ಬರೆದ ಭಾರತ
India vs West Indies: ಭಾರತದ 518 ರನ್ ಬೆನ್ನಟ್ಟಿದ ವಿಂಡೀಸ್ ತಂಡ ಭಾನುವಾರ ಮೂರನೇ ದಿನದಾಟದ ವೇಳೆ 248 ರನ್ಗಳಿಸಿ ಆಲೌಟ್ ಆಯತು. 270 ರನ್‌ಗಳ ಮುನ್ನಡೆ ಪಡೆದ ಭಾರತ, ಎದುರಾಳಿ ತಂಡದ ಮೇಲೆ ಫಾಲೋ ಆನ್ ಹೇರುವ ಮೂಲಕ ಮತ್ತೆ ಬ್ಯಾಟಿಂಗ್ಗೆ ಆಹ್ವಾನಿಸಿದೆ.

-

ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್(India vs West Indies) ವಿರುದ್ಧದ ಎರಡನೇ(Ind vs Wi 2nd test) ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ(Team India) ಗೆಲುವಿನ ಕಡೆ ಹೆಜ್ಜೆ ಹಾಕಿದೆ. ನಾಯಕ ಶುಭಮನ್ ಗಿಲ್ (129*) ಮತ್ತು ಯಶಸ್ವಿ ಜೈಸ್ವಾಲ್ (175) ಅವರ ಶತಕಗಳ ನೆರವಿನಿಂದ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ನಷ್ಟಕ್ಕೆ 518 ರನ್‌ಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿತು. ಈ ಪ್ರಕ್ರಿಯೆಯಲ್ಲಿ, ಟೆಸ್ಟ್ ಕ್ರಿಕೆಟ್‌ನ ಸುದೀರ್ಘ ಇತಿಹಾಸದಲ್ಲಿ ಭಾರತ ತಂಡ ಬಾಂಗ್ಲಾದೇಶದ ವಿಶ್ವ ದಾಖಲೆಯನ್ನು ಮುರಿದಿದೆ.
ಬೈ ಅಥವಾ ಲೆಗ್ ಬೈ ಇಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಮೊತ್ತ ದಾಖಿಸಿದ ವಿಶ್ವ ದಾಖಲೆಯನ್ನು ಭಾರತ ತನ್ನ ಹೆಸರಿಗೆ ಬರೆದಿದೆ. ಇದಕ್ಕೂ ಮುನ್ನ ಈ ದಾಖಲೆ ಬಾಂಗ್ಲಾದೇಶ ಹೆಸರಿನಲ್ಲಿತ್ತು. ಬಾಂಗ್ಲಾ, ಏಳು ವರ್ಷಗಳ ಹಿಂದೆ, 2018 ರಲ್ಲಿ ಚಟ್ಟೋಗ್ರಾಮ್‌ನಲ್ಲಿ ಶ್ರೀಲಂಕಾ ವಿರುದ್ಧ 513 ರನ್‌ಗಳನ್ನು ಗಳಿಸಿತ್ತು. ಇದೀಗ ಭಾರತ 518 ರನ್‌ಗಳನ್ನು ಕಲೆಹಾಕಿ ದಾಖಲೆ ತನ್ನ ಹೆಸರಿಗೆ ಬರೆದಿದೆ. ವಿಂಡೀಸ್ ಇತರ ರೂಪದಲ್ಲಿ ಕೇವಲ 2 ರನ್ ಮಾತ್ರ ಬಿಟ್ಟುಕೊಟ್ಟಿತು. ಅದು ಎರಡೂ ವೈಡ್ ಎಸೆತಗಳ ಮೂಲಕವೇ ಆಗಿತ್ತು.
ಬೈ ಅಥವಾ ಲೆಗ್ ಬೈ ಇಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್
ಭಾರತ-518
ಬಾಂಗ್ಲಾದೇಶ-513
ಆಸ್ಟ್ರೇಲಿಯಾ-494
ಪಾಕಿಸ್ತಾನ-465
ಬಾಂಗ್ಲಾದೇಶ-429
ಇದನ್ನೂ ಓದಿ Kuldeep Yadav: 68 ವರ್ಷಗಳ ಹಳೆಯ ದಾಖಲೆಯನ್ನು ಸರಿಗಟ್ಟಿದ ಕುಲದೀಪ್ ಯಾದವ್
ಫಾಲೋ ಆನ್ ಹೇರಿದ ಭಾರತ
ಭಾರತದ 518 ರನ್ ಬೆನ್ನಟ್ಟಿದ ವಿಂಡೀಸ್ ತಂಡ ಭಾನುವಾರ ಮೂರನೇ ದಿನದಾಟದ ವೇಳೆ 248 ರನ್ಗಳಿಸಿ ಆಲೌಟ್ ಆಯತು. 270 ರನ್‌ಗಳ ಮುನ್ನಡೆ ಪಡೆದ ಭಾರತ, ಎದುರಾಳಿ ತಂಡದ ಮೇಲೆ ಫಾಲೋ ಆನ್ ಹೇರುವ ಮೂಲಕ ಮತ್ತೆ ಬ್ಯಾಟಿಂಗ್ಗೆ ಆಹ್ವಾನಿಸಿದೆ. ಅದರಂತೆ ವೆಸ್ಟ್ ಇಂಡೀಸ್ ತಂಡವು 270 ರನ್ಗಳಿಸುವ ಮುನ್ನ ಆಲೌಟ್ ಆದರೆ, ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ ರನ್‌ಗಳ ಜಯ ಸಾಧಿಸಬಹುದು.