ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RCB v CSK: ಆರ್‌ಸಿಬಿ ವಿರುದ್ಧ ಸೋತರೂ ವಿಶ್ವ ದಾಖಲೆ ನಿರ್ಮಿಸಿದ ಚೆನ್ನೈ

IPL 2026: ಚೆನ್ನೈ ಪರ ಸರ್ಫರಾಜ್‌ 25 ಎಸೆತಕ್ಕೆ 50 ರನ್‌ ಸಿಡಿಸಿದರು. ಪವರ್‌ಪ್ಲೇ ಬಳಿಕ ತಂಡ ಮಂಕಾಯಿತು. ಪ್ರಶಾಂತ್‌ ವೀರ್‌(29 ಎಸೆತಕ್ಕೆ 43) ಹಾಗೂ ಜೆಮೀ ಓವರ್ಟನ್‌(16 ಎಸೆತಕ್ಕೆ 37) ಕೆಲಹೊತ್ತು ಅಬ್ಬರಿಸಿ ಸಿಎಸ್‌ಕೆ ತಂಡದ ಸೋಲಿನ ಅಂತರವನ್ನು ತಗ್ಗಿಸಿದರು.

ಆರ್‌ಸಿಬಿ ವಿರುದ್ಧ ಸೋತರೂ ವಿಶ್ವ ದಾಖಲೆ ನಿರ್ಮಿಸಿದ ಚೆನ್ನೈ

Chennai Super Kings -

Abhilash BC
Abhilash BC Apr 6, 2026 9:18 AM

ಬೆಂಗಳೂರು, ಎ.6: ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌(IPL 2026) ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs CSK) ವಿರುದ್ಧ 43 ರನ್‌ಗಳಿಂದ ಸೋಲು ಅನುಭವಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಸತತ ಮೂರನೇ ಸೋಲಿಗೆ ಶರಣಾಯಿತು. ಆದಾಗ್ಯೂ, ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ತಂಡ ಬೃಹತ್ ವಿಶ್ವ ದಾಖಲೆಯನ್ನು ಸೃಷ್ಟಿಸಿತು.

251 ರನ್‌ಗಳ ಗುರಿ ಬೆನ್ನಟ್ಟುವಿಕೆಯಲ್ಲಿ 9 ಸಿಎಸ್‌ಕೆ ಬ್ಯಾಟ್ಸ್‌ಮನ್‌ಗಳು ಕನಿಷ್ಠ ಒಂದು ಸಿಕ್ಸರ್ ಬಾರಿಸಿದರು. ಒಂದೇ ಟಿ20 ಇನ್ನಿಂಗ್ಸ್‌ನಲ್ಲಿ ಒಂಬತ್ತು ಬ್ಯಾಟ್ಸ್‌ಮನ್‌ಗಳು ಗರಿಷ್ಠ ಸಿಕ್ಸರ್‌ ಬಾರಿಸಿದ್ದು ಇದೇ ಮೊದಲು. ಸರ್ಫರಾಜ್ ಖಾನ್ ಮತ್ತು ಜೇಮೀ ಓವರ್ಟನ್ ತಲಾ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಉಳಿದಂತೆ 7 ಮಂದಿ ತಲಾ ಒಂದು ಸಿಕ್ಸರ್‌ ಬಾರಿಸಿದರು.

ಒಟ್ಟಾರೆಯಾಗಿ, ಚೆನ್ನೈ ಸೂಪರ್‌ ಕಿಂಗ್ಸ್‌ ತಮ್ಮ ಬ್ಯಾಟಿಂಗ್‌ ಇನ್ನಿಂಗ್ಸ್‌ನಲ್ಲಿ 11 ಸಿಕ್ಸರ್‌ಗಳನ್ನು ಬಾರಿಸಿದರು. ಆರ್‌ಸಿಬಿ 19 ಸಿಕ್ಸರ್‌ಗಳನ್ನು ಬಾರಿಸಿತು. ಆರ್‌ಸಿಬಿ ಪರ ಬ್ಯಾಟಿಂಗ್‌ ನಡೆಸಿದ ಐದು ಬ್ಯಾಟ್ಸ್‌ಮನ್‌ಗಳು ಕನಿಷ್ಠ ಒಂದು ಸಿಕ್ಸರ್ ಬಾರಿಸಿದರು. ಒಟ್ಟಾರೆಯಾಗಿ 14 ಬ್ಯಾಟ್ಸ್‌ಮನ್‌ಗಳು ಕನಿಷ್ಠ ಒಂದು ಸಿಕ್ಸರ್ ಬಾರಿಸಿದರು. ಇಷ್ಟೊಂದು ಬ್ಯಾಟ್ಸ್‌ಮನ್‌ಗಳು ಬೌಂಡರಿ ಗೆರೆ ದಾಟಿದ್ದು ಇದು ಎರಡನೇ ನಿದರ್ಶನ. ಮೊದಲ ಬಾರಿಗೆ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) 2020-21ರ ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಸಿಡ್ನಿ ಥಂಡರ್ ನಡುವಿನ ಪಂದ್ಯದಲ್ಲಿ ದಾಖಲೆ ನಿರ್ಮಾಣವಾಗಿತ್ತು.

RCB vs CSK: ಅರ್ಧಶತಕ ಬಾರಿಸಿ ಐಪಿಎಲ್‌ನಲ್ಲಿ ನೂತನ ದಾಖಲೆ ಬರೆದ ಸರ್ಫರಾಜ್‌ ಖಾನ್‌

ಟಿಮ್ ಡೇವಿಡ್, ದೇವದತ್ ಪಡಿಕ್ಕಲ್ ಮತ್ತು ರಜತ್ ಪಾಟೀದಾರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ 250 ರನ್ ಗಳಿಸಿದರೆ, ಈ ಬೃಹತ್ ಮೊತ್ತ ಬೆನ್ನತ್ತಿದ ಸಿಎಸ್‌ಕೆ 207 ರನ್‌ಗಳಿಗೆ ಆಲೌಟಾಯಿತು. ಆರ್‌ಸಿಬಿಯಲ್ಲಿ ವಿರಾಟ್‌ ಕೊಹ್ಲಿ ಹೊರತಾಗಿ ಇತರೆಲ್ಲರೂ ಅಬ್ಬರಿಸಿದರು. 2 ಜೀವದಾನ ಸಿಕ್ಕರೂ ಕೊಹ್ಲಿ 28 ರನ್‌ಗಳನ್ನಷ್ಟೇ ಗಳಿಸಿದರು.

ಚೆನ್ನೈ ಪರ ಸರ್ಫರಾಜ್‌ 25 ಎಸೆತಕ್ಕೆ 50 ರನ್‌ ಸಿಡಿಸಿದರು. ಪವರ್‌ಪ್ಲೇ ಬಳಿಕ ತಂಡ ಮಂಕಾಯಿತು. ಪ್ರಶಾಂತ್‌ ವೀರ್‌(29 ಎಸೆತಕ್ಕೆ 43) ಹಾಗೂ ಜೆಮೀ ಓವರ್ಟನ್‌(16 ಎಸೆತಕ್ಕೆ 37) ಕೆಲಹೊತ್ತು ಅಬ್ಬರಿಸಿ ಸಿಎಸ್‌ಕೆ ತಂಡದ ಸೋಲಿನ ಅಂತರವನ್ನು ತಗ್ಗಿಸಿದರು.

ಸಂಕ್ಷಿಪ್ತ ಸ್ಕೋರ್: ಆರ್‌ಸಿಬಿ 20 ಓವರ್‌ನಲ್ಲಿ 250/3 (ಡೇವಿಡ್‌ 70*, ದೇವದತ್‌ 50, ರಜತ್‌ 48*, ಸಾಲ್ಟ್‌ 46, ದುಬೆ 1-30), ಸಿಎಸ್‌ಕೆ 19.4 ಓವರ್‌ನಲ್ಲಿ 207/10 (ಸರ್ಫರಾಜ್‌ 50, ಪ್ರಶಾಂತ್‌ 43, ಓವರ್ಟನ್‌ 37, ಭುವನೇಶ್ವರ್‌ 3-41, ಸುಯಶ್‌ 1-21).