RCB vs CSK: ಅರ್ಧಶತಕ ಬಾರಿಸಿ ಐಪಿಎಲ್‌ನಲ್ಲಿ ನೂತನ ದಾಖಲೆ ಬರೆದ ಸರ್ಫರಾಜ್ ಖಾನ್
IPL 2026: ಚೇಸಿಂಗ್ ವೇಳೆ ಚೆನ್ನೈ 30 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಈ ವೇಳೆ ಬ್ಯಾಟಿಂಗ್ ನಡೆಸಲು ಮೈದಾನಕ್ಕಿಳಿದ ಸರ್ಫರಾಜ್ ಖಾನ್ ಬಿರುಸಿನ ಬ್ಯಾಟಿಂಗ್ ನಡೆಸಿದರು. 25 ಎಸೆತಗಳಿಂದ ಭರ್ತಿ 50 ರನ್ ಚಚ್ಚಿದರು. ಆದರೆ ಉಳಿದ ಬ್ಯಾಟರ್‌ಗಳಿಂದ ಉತ್ತಮ ಪ್ರದರ್ಶನ ಕಂಡು ಬಾರದ ಕಾರಣ ಪಂದ್ಯ ಸೋಲಿಗೆ ತುತ್ತಾಯಿತು.
sarfaraz khan csk -
ಬೆಂಗಳೂರು, ಎ.6: ಆರ್‌ಸಿಬಿ(RCB vs CSK) ವಿರುದ್ಧದ ಸೋಲಿನ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿದ ಸರ್ಫರಾಜ್ ಖಾನ್(Sarfaraz Khan) ಐಪಿಎಲ್‌ನಲ್ಲಿ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಐಪಿಎಲ್(IPL 2026) ಇನ್ನಿಂಗ್ಸ್‌ನ ಮೊದಲ ಆರು ಓವರ್‌ಗಳಲ್ಲಿ 4 ನೇ ಕ್ರಮಾಂಕ ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಅರ್ಧಶತಕ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಆರ್‌ಸಿಬಿ ವಿರುದ್ಧ ಸರ್ಫರಾಜ್ ಗಳಿಸಿದ ಅರ್ಧಶತಕ ಅವರ ಐಪಿಎಲ್ ವೃತ್ತಿಜೀವನದಲ್ಲಿ ಎರಡನೇ ಅರ್ಧಶತಕ. ಬಲಗೈ ಬೌಲರ್ 2,556 ದಿನಗಳ ನಂತರ ಈ ಅರ್ಧಶತಕ ಗಳಿಸಿದರು. ಹೀಗಾಗಿ, ಅವರು ಎರಡು ಐಪಿಎಲ್ ಅರ್ಧಶತಕಗಳ ನಡುವೆ ಹೆಚ್ಚು ಸಮಯ ತೆಗೆದುಕೊಂಡ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಜಂಟಿ-ಎರಡನೇ ಬ್ಯಾಟರ್ ಎನಿಸಿಕೊಂಡರು.
🚨 Krunal Pandya the clutch for RCB
— Tejash (@Tejashyyyyy) April 5, 2026
6.1 – Took the wicket of the dangerous Sarfaraz Khan on the first ball
6.2 – Shivam Dube smashed 6
6.3 & 6.4 – Cameback with solid bouncers
6.5 – Got the wicket of Kartik Sharma
6.6 – Bowled a delivery at 126.1 km/hpic.twitter.com/Il8fubkoec
ಚೇಸಿಂಗ್ ವೇಳೆ ಚೆನ್ನೈ 30 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಈ ವೇಳೆ ಬ್ಯಾಟಿಂಗ್ ನಡೆಸಲು ಮೈದಾನಕ್ಕಿಳಿದ ಸರ್ಫರಾಜ್ ಖಾನ್ ಬಿರುಸಿನ ಬ್ಯಾಟಿಂಗ್ ನಡೆಸಿದರು. 25 ಎಸೆತಗಳಿಂದ ಭರ್ತಿ 50 ರನ್ ಚಚ್ಚಿದರು. ಆದರೆ ಉಳಿದ ಬ್ಯಾಟರ್‌ಗಳಿಂದ ಉತ್ತಮ ಪ್ರದರ್ಶನ ಕಂಡು ಬಾರದ ಕಾರಣ ಪಂದ್ಯ ಸೋಲಿಗೆ ತುತ್ತಾಯಿತು.
Updated IPL 2026 Points Table: ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಿಂದ ಅಗ್ರಸ್ಥಾನಕೇರಿದ ಆರ್‌ಸಿಬಿ
ಆರ್‌ಸಿಬಿ ಪರ ಪಡಿಕ್ಕಲ್ (50) ಮತ್ತು ಫಿಲ್ ಸಾಲ್ಟ್ (46) ಪಾಟಿದಾರ್ (48*) ಮತ್ತು ಡೇವಿಡ್ (70*) ಉತ್ತಮ ಬ್ಯಾಟಿಂಗ್ ನಡೆಸಿದರು. 15 ನೇ ಓವರ್ ವೇಳೆಗೆ ಆರ್‌ಸಿಬಿ 150 ರನ್ ಗಡಿ ದಾಟಿತು. ಅದರಲ್ಲೂ ಕೊನೆಯ ಐದು ಓವರ್‌ಗಳಲ್ಲಿ 97 ರನ್‌ಗಳನ್ನು ಗಳಿಸಿದರು. ಡೇವಿಡ್ ಮತ್ತು ಪಾಟಿದಾರ್ ಅಜೇಯ 99 ರನ್‌ಗಳ ಜೊತೆಯಾಟವನ್ನು ನೀಡಿದರು. ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ಪ್ರಾಬಲ್ಯ ಸಾಧಿಸಿದ್ದರಿಂದ ಸಿಎಸ್‌ಕೆ ಬೌಲರ್‌ಗಳು ಸರಿಯಾಗಿ ದಂಡಿಸಿಕೊಂಡರು. ಧೋನಿ ಅವರ ಅನುಪಸ್ಥಿತಿ ಪಂದ್ಯದಲ್ಲಿ ಎದ್ದು ಕಾಣುತ್ತಿತ್ತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಚೆನ್ನೈ ತಂಡವು ಆರ್‌ಸಿಬಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ 3 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿತು. ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಚೆನ್ನೈ ತಂಡವು 19.4 ಓವರುಗಳಲ್ಲಿ 207 ರನ್ ಗಳಿಸಿ ಆಲೌಟ್ ಆಯಿತು. ಚೆನ್ನೈ ಪರ ಸರ್ಫರಾಜ್ ಖಾನ್ (50), ಪ್ರಶಾಂತ್ ವೀರ್ (43 ) ಮತ್ತು ಜೇಮಿ ಓವರ್ಟನ್ (37) ಹೊರತುಪಡಿಸಿ ಉಳಿದವರೆಲ್ಲ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು.