ವಿರಾಟ್ ಕೊಹ್ಲಿಯ "ನೋ-ಲುಕ್ ಸಿಕ್ಸರ್" ಕಂಡು ಫಿದಾ ಆದ ಪತ್ನಿ ಅನುಷ್ಕಾ; ವಿಡಿಯೊ ವೈರಲ್
Virat Kohli's No-Look Six: ಖಲೀಲ್ ಅಹ್ಮದ್ ಅವರ ಸ್ಲೆಡ್ಜಿಂಗ್‌ನಿಂದ ಕೋಪಗೊಂಡ ವಿರಾಟ್ ಕೊಹ್ಲಿ, ಮುಂದಿನ ಓವರ್‌ನಲ್ಲಿ ಮ್ಯಾಟ್ ಹೆನ್ರಿ ಬೌಲಿಂಗ್‌ನಲ್ಲಿ "ನೋ-ಲುಕ್" ಸಿಕ್ಸ್ ಬಾರಿಸುವ ಮೂಲಕ ಬಲವಾದ ಉತ್ತರ ನೀಡಿದರು. ಕೊಹ್ಲಿಯ ಈ ಸಿಕ್ಸರ್ ಕಂಡು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅನುಷ್ಕಾ ಶರ್ಮ ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸಿದರು.
Virat Kohli (L) and Anushka Sharma -
ಬೆಂಗಳೂರು, ಎ.6: ಚೆನ್ನೈ ಸೂಪರ್ ಕಿಂಗ್ಸ್(RCB vs CSK) ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli) ಬಾರಿಸಿದ ನೋ-ಲುಕ್ ಸಿಕ್ಸರ್(Virat Kohli's No-Look Six) ಹೊಡೆತದ ವಿಡಿಯೊವೊಂದು ಭಾರೀ ವೈರಲ್ ಆಗಿದೆ. ಕೊಹ್ಲಿಯ ಈ ಸಿಕ್ಸರ್ ಕಂಡು ಅಭಿಮಾನಿಗಳು ಮಾತ್ರವಲ್ಲದೆ ಪತ್ನಿ ಅನುಷ್ಕಾ ಶರ್ಮ ಕೂಡ ಸಂತಸಗೊಂಡಿದ್ದಾರೆ.
ಚೆನ್ನೈ ಬೌಲರ್ ಖಲೀಲ್ ಅಹ್ಮದ್ ತಮ್ಮ ಅತ್ಯುತ್ತಮ ಲೈನ್ ಮತ್ತು ಲೆಂಗ್ತ್ ನಿಂದ ಕೊಹ್ಲಿಗೆ ತೊಂದರೆ ನೀಡಿದರು. ಮೂರನೇ ಓವರ್‌ನ ಕೊನೆಯ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಕೊಹ್ಲಿ ಈ ಯತ್ನದಲ್ಲಿ ವಿಫಲರಾದರು. ಈ ವೇಳೆ ಖಲೀಲ್ ಏನೋ ಹೇಳಿದರು. ಕೊಹ್ಲಿ ಕೂಡ ಇದಕ್ಕೆ ತಕ್ಕ ರೀತಿಯಲ್ಲಿ ಪ್ರತಿಕ್ರಿಯಿಸಿದರು. ಇಬ್ಬರ ನಡುವೆ ಸ್ವಲ್ಪ ವಾಗ್ವಾದ ನಡೆಯಿತು.
ಖಲೀಲ್ ಅಹ್ಮದ್ ಅವರ ಸ್ಲೆಡ್ಜಿಂಗ್‌ನಿಂದ ಕೋಪಗೊಂಡ ವಿರಾಟ್ ಕೊಹ್ಲಿ, ಮುಂದಿನ ಓವರ್‌ನಲ್ಲಿ ಮ್ಯಾಟ್ ಹೆನ್ರಿ ಬೌಲಿಂಗ್‌ನಲ್ಲಿ "ನೋ-ಲುಕ್" ಸಿಕ್ಸ್ ಬಾರಿಸುವ ಮೂಲಕ ಬಲವಾದ ಉತ್ತರ ನೀಡಿದರು. ಕೊಹ್ಲಿಯ ಈ ಸಿಕ್ಸರ್ ಕಂಡು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅನುಷ್ಕಾ ಶರ್ಮ ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸಿದರು.
What a beautiful no look shot from Virat Kohli it was 🔥pic.twitter.com/08JIBT4ZQO
— VIKASH KUMAR (@vkc1000) April 5, 2026
ಪಂದ್ಯದಲ್ಲಿ ಕೊಹ್ಲಿ 18 ಎಸೆತಗಳಲ್ಲಿ 28 ರನ್ (2 ಬೌಂಡರಿ, 1 ಸಿಕ್ಸರ್) ಗಳಿಸಿದರು. ಇದೇ ವೇಳೆ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಒಂದೇ ತಂಡ (ಚೆನ್ನೈ) ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದರು. ಕೊಹ್ಲಿ ಈಗ ಚೆನ್ನೈ ವಿರುದ್ಧ 1188 ರನ್‌ಗಳೊಂದಿಗೆ ಅಗ್ರಸ್ಥಾನ ತಲುಪಿದ್ದಾರೆ.
ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ 3 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿತು. ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಚೆನ್ನೈ ತಂಡವು 19.4 ಓವರುಗಳಲ್ಲಿ 207 ರನ್ ಗಳಿಸಿ ಆಲೌಟ್ ಆಯಿತು. ಚೆನ್ನೈ ಪರ ಸರ್ಫರಾಜ್ ಖಾನ್ (50), ಪ್ರಶಾಂತ್ ವೀರ್ (43 ) ಮತ್ತು ಜೇಮಿ ಓವರ್ಟನ್ (37) ಹೊರತುಪಡಿಸಿ ಉಳಿದವರೆಲ್ಲ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು.
RCB vs CSK: ಅರ್ಧಶತಕ ಬಾರಿಸಿ ಐಪಿಎಲ್‌ನಲ್ಲಿ ನೂತನ ದಾಖಲೆ ಬರೆದ ಸರ್ಫರಾಜ್ ಖಾನ್
ಆರ್‌ಸಿಬಿ ಪರ ಪಡಿಕ್ಕಲ್ (50) ಮತ್ತು ಫಿಲ್ ಸಾಲ್ಟ್ (46) ಪಾಟಿದಾರ್ (48*) ಮತ್ತು ಡೇವಿಡ್ (70*) ಉತ್ತಮ ಬ್ಯಾಟಿಂಗ್ ನಡೆಸಿದರು. 15 ನೇ ಓವರ್ ವೇಳೆಗೆ ಆರ್‌ಸಿಬಿ 150 ರನ್ ಗಡಿ ದಾಟಿತು. ಅದರಲ್ಲೂ ಕೊನೆಯ ಐದು ಓವರ್‌ಗಳಲ್ಲಿ 97 ರನ್‌ಗಳನ್ನು ಗಳಿಸಿದರು. ಡೇವಿಡ್ ಮತ್ತು ಪಾಟಿದಾರ್ ಅಜೇಯ 99 ರನ್‌ಗಳ ಜೊತೆಯಾಟವನ್ನು ನೀಡಿದರು.