Asia Cup: ಶುಭಮನ್ ಗಿಲ್‌ರನ್ನು ಹಿಂದಿಕ್ಕಬಲ್ಲ ಕಿಲಾಡಿ ಆಟಗಾರನನ್ನು ಆರಿಸಿದ ಆಕಾಶ್ ಚೋಪ್ರಾ!
Asia Cup 2025, Yashasvi Jaiswal, Shubman Gill,Aakash Chopra, India's Asia Cup Squad, ಆಕಾಶ್ ಚೋಪ್ರಾ, ಏಷ್ಯಾ ಕಪ್ 2025, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಭಾರತ ಏಷ್ಯಾ ಕಪ್ ತಂಡ

ಶುಭಮನ್ ಗಿಲ್ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಆಕಾಶ್ ಚೋಪ್ರಾ!

ನವದೆಹಲಿ: ಮುಂಬರುವ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯ ಭಾರತ ತಂಡದ ಆಯ್ಕೆಯಲ್ಲಿ ಶುಭಮನ್ ಗಿಲ್ (Shubman Gill) ಅವರನ್ನು ಯಶಸ್ವಿ ಜೈಸ್ವಾಲ್ ಹಿಂದಿಕ್ಕಲಿದ್ದಾರೆ ಎಂದು ಟೀಮ್ ಇಂಡಿಯಾ ಟೆಸ್ಟ್ ತಂಡದ ಮಾಜಿ ಆರಂಭಿಕ ಆಕಾಶ್ ಚೋಪ್ರಾ (Aakash Chopra) ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಏಷ್ಯಾ ಕಪ್ ಟೂರ್ನಿಯ ಭಾರತ ತಂಡವನ್ನು ಆಗಸ್ಟ್ 19 ರಂದು ಮಂಗಳವಾರ ಅಜಿತ್ ಅಗರ್ಕರ್ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು ಪ್ರಕಟಿಸುವ ಸಾಧ್ಯತೆ ಇದೆ. ಸೆಪ್ಟೆಂಬರ್ 9 ರಿಂದ 28 ರವರೆಗೆ ನಡೆಯಲಿರುವ ಈ ಟೂರ್ನಿಗೆ ಜೈಸ್ವಾಲ್ ಮತ್ತು ಗಿಲ್ ಇಬ್ಬರೂ ಭಾರತದ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಭಾರತ ಟಿ20ಐ ತಂಡಕ್ಕೆ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಬರುವವರೆಗೂ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಚುಟುಕು ತಂಡದಲ್ಲಿ ಇನಿಂಗ್ಸ್ ಆರಂಭಿಸಿದ್ದರು. ಹಾಗಾಗಿ ಏಷ್ಯಾ ಕಪ್ ಟೂರ್ನಿಯಲ್ಲಿಯೂ ಸಂಜು-ಅಭಿಷೇಕ್ ಮೊದಲ ಆಯ್ಕೆ ಆರಂಭಿಕರಾಗಿದ್ದಾರೆ. ಹಾಗಾಗಿ ಆರಂಭಿಕ ಸ್ಥಾನಕ್ಕೆ ಮೀಸಲು ಸ್ಥಾನಕ್ಕೆ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, ತಂಡದ ಅಗತ್ಯಕ್ಕೆ ತಕ್ಕಂತೆ ಶುಭಮನ್ ಗಿಲ್ ಅವರಿಗಿಂತ ಜೈಸ್ವಾಲ್ ಒಂದು ಹೆಜ್ಜೆ ಮುಂದಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Asia Cup 2025: ಫಿಟ್‌ನೆಸ್ ಟೆಸ್ಟ್ ಪಾಸ್ ಮಾಡಿದ ಸೂರ್ಯಕುಮಾರ್ ಯಾದವ್!
ಶುಭಮನ್ ಗಿಲ್ ಅವರನ್ನು ಮೂರನೇ ಆರಂಭಿಕ ಆಟಗಾರನಾಗಿ ಆಯ್ಕೆ ಮಾಡುವುದು ಒಳ್ಳೆಯದಲ್ಲ ಏಕೆಂದರೆ ಅವರು ಇತರ ಎರಡು ಸ್ವರೂಪಗಳಲ್ಲಿ ನಾಯಕತ್ವದ ಗುಂಪಿನ ಭಾಗವಾಗಿದ್ದಾರೆ ಎಂದು ಚೋಪ್ರಾ ಹೇಳಿದ್ದಾರೆ.
"ಹಿಂದಿನ 15 ಸದಸ್ಯರ ತಂಡವನ್ನು ಎಣಿಸುವಾಗ, ಭಾರತ ತಂಡದಲ್ಲಿ ಮೂರನೇ ಆರಂಭಿಕ ಆಟಗಾರ ಇರಲಿಲ್ಲವಾದ್ದರಿಂದ, ನಿಮ್ಮೊಂದಿಗೆ ಒಬ್ಬ ಆರಂಭಿಕ ಆಟಗಾರನನ್ನು ಇಟ್ಟುಕೊಳ್ಳುವುದು ಮುಖ್ಯ. ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ತಮ್ಮ ಫಾರ್ಮ್ ಕಳೆದುಕೊಂಡರೆ, ಅವರ ಸ್ಥಾನದಲ್ಲಿ ಯಾರು ಆರಂಭಿಕ ಆಟಗಾರರಾಗುತ್ತಾರೆ ಎಂದು ಯಾರಿಗೂ ತಿಳಿದಿಲ್ಲ. ಹಾಗಾಗಿ, ನೀವು ವಿಶ್ವಕಪ್ ಟೂರ್ನಿಗಾಗಿ ಮೂರನೇ ಆರಂಭಿಕ ಆಟಗಾರನನ್ನು ಇಟ್ಟುಕೊಳ್ಳಬೇಕಾಗುತ್ತದೆ," ಎಂದು ಅವರು ತಿಳಿಸಿದ್ದಾರೆ.
Asia Cup ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್‌ಗೆ ಅವಕಾಶ ನೀಡಲು ಪ್ರಮುಖ 3 ಕಾರಣಗಳು!
"ಟಿ20 ಸ್ವರೂಪದ ಬೇಡಿಕೆಯ ವಿಷಯದಲ್ಲಿ ಶುಭಮನ್ ಗಿಲ್ ಅವರಿಗಿಂತ ಯಶಸ್ವಿ ಜೈಸ್ವಾಲ್ ಮುಂಚೂಣಿಯಲ್ಲಿದ್ದಾರೆ. ಟಿ20 ಸ್ವರೂಪದಲ್ಲಿನ ಅವರ ಹಾದಿ ಹಾಗೂ ತಂಡದ ಡಿಎನ್‌ಎ ಅನ್ನು ಅವರ ಬ್ಯಾಟಿಂಗ್ ಶೈಲಿ ವಿವಾಹವಾಗಲಿದೆ. ಭಾರತ ಟೆಸ್ಟ್ ತಂಡದ ನಾಯಕ ಹಾಗೂ ಭಾರತ ಏಕದಿನ ತಂಡದ ಉಪ ನಾಯಕನಾಗಿರುವ ಶುಭಮನ್ ಗಿಲ್ ಅವರನ್ನು ಟಿ20ಐ ತಂಡಕ್ಕೆ ಆಯ್ಕೆ ಮಾಡಿದರೆ, ಬೆಂಚ್ ಕಾಯಿಸಲು ಸಾಧ್ಯವಾಗುವುದಿಲ್ಲ. ಅದನ್ನು ನೋಡುವುದು ಉತ್ತಮವಾಗಿರಲಿಲ್ಲ," ಎಂಬುದು ಆಕಾಶ್ ಚೋಪ್ರಾ ಅಭಿಪ್ರಾಯ.
"ಆದ್ದರಿಂದ ಆಯ್ಕೆದಾರರು ಶುಭಮನ್ ಅವರನ್ನು ಆಯ್ಕೆ ಮಾಡಬೇಕಾದರೆ, ಅವರಿಗೆ ಹನ್ನೊಂದರಲ್ಲಿ ಸ್ಥಾನ ನೀಡಬೇಕು ಎಂದು ಯೋಚಿಸುತ್ತಿರಬಹುದು. ಶುಭಮನ್ ಅವರನ್ನು ಆಯ್ಕೆ ಮಾಡುವುದು ಆಕರ್ಷಕವಾಗಿದ್ದರೂ, ಈ ರೇಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಸ್ವಲ್ಪ ಮುಂದಿರಬೇಕು ಎಂದು ನಾನು ಭಾವಿಸುತ್ತೇನೆ," ಎಂದು ತಿಳಿಸಿದ್ದಾರೆ.
ಶುಭಮನ್ ಗಿಲ್ ಯಾರ ಸ್ಥಾನವನ್ನು ತುಂಬಲಿದ್ದಾರೆ?
ಒಂದು ವೇಳೆ ಶುಭಮನ್ ಗಿಲ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿದರೆ, ಎದುರಾಗುವ ಸಮಸ್ಯೆಯನ್ನು ಆಕಾಶ್ ಚೋಪ್ರಾ ಆರಂಭಿಸಿದ್ದಾರೆ. ಒಂದು ವೇಳೆ ಗಿಲ್ ತಂಡಕ್ಕೆ ಬಂದರೆ, ಅವರು ಯಾರ ಸ್ಥಾನವನ್ನು ತುಂಬಲಿದ್ದಾರೆಂದು ಚೋಪ್ರಾ ಪ್ರಶ್ನೆ ಮಾಡಿದ್ದಾರೆ.
"ಆದರೆ, ಶುಭಮನ್ ಗಿಲ್ ಮೂರನೇ ಓಪನರ್, ನೀವು ಅವರನ್ನು ಬೆಂಚ್ ಕಾಯಿಸುತ್ತೀರಾ? ನೀವು ಅವರನ್ನು ಬೆಂಚ್ ಕಾಯಿಸಿಲ್ಲವಾದರೆ, ಪ್ಲೇಯಿಂಗ್ XIನಲ್ಲಿ ಇವರು ಯಾರ ಸ್ಥಾನದಲ್ಲಿ ಆಡಬೇಕು? ಸಂಜು ಸ್ಯಾಮ್ಸನ್ ಅವರ ಸ್ಥಾನದಲ್ಲಿ ನೀವು ನೀಡುವುದಾದರೆ, ವಿಕೆಟ್ ಕೀಪಿಂಗ್ ನಿರ್ವಹಿಸುವುದು ಯಾರು?" ಎಂದು ಆಕಾಶ್ ಚೋಪ್ರಾ ಪ್ರಶ್ನಿಸಿದ್ದಾರೆ.