IND vs ENG: ವೈಭವ್‌ಗೆ ಚಾನ್ಸ್ ಇಲ್ಲ, ಎರಡನೇ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI ಆರಿಸಿದ ಆಕಾಶ್ ಚೋಪ್ರಾ!
ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಎರಡನೇ ಟಿ20ಐ ಪಂದ್ಯಕ್ಕೆ ಇನ್ನು ಕೇಲವೇ ಗಂಟೆಗಳು ಬಾಕಿ ಇವೆ. ಇದರ ನಡುವೆ ಟೆಸ್ಟ್ ತಂಡದ ಮಾಜಿ ಆರಂಭಿಕ ಆಕಾಶ್ ಚೋಪ್ರಾ ಅವರು, ಭಾರತ ತಂಡಕ್ಕೆ ಪ್ಲೇಯಿಂಗ್ XI ಆರಿಸಿದ್ದು, ಸತತ ವೈಫಲ್ಯದ ಹೊರತಾಗಿಯೂ ಸಂಜು ಸ್ಯಾಮ್ಸನ್‌ಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಭಾರತದ ಪ್ಲೇಯಿಂಗ್ XI ಆರಿಸಿದ ಆಕಾಶ್ ಚೋಪ್ರಾ. -
ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್ ತಂಡಗಳ (IND vs ENG) ನಡುವಣ ಎರಡನೇ ಟಿ20ಐ ಪಂದ್ಯದ ಆರಂಭಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಈ ಪಂದ್ಯ ನಡೆಯಲಿದ್ದು, ಸರಣಿಯಲ್ಲಿ ಖಾತೆ ತೆರೆಯಲು ಉಭಯ ತಂಡಗಳು ಎದುರು ನೋಡುತ್ತಿವೆ. ಇದರ ನಡುವೆ ಭಾರತ ಟೆಸ್ಟ್ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ (Aakash Chopra) ಅವರು, ಟೀಮ್ ಇಂಡಿಯಾದ ಪ್ಲೇಯಿಂಗ್ XI ಅನ್ನು ಆಯ್ಕೆ ಮಾಡಿದ್ದಾರೆ. ಆದರೆ, ಕಳೆದ ಮೂರು ಇನಿಂಗ್ಸ್‌ಗಳಲ್ಲಿ ಸತತ ವೈಫಲ್ಯ ಅನುಭವಿಸಿದರೂ ಸಂಜು ಸ್ಯಾಮ್ಸನ್ ಅವರನ್ನು ಬೆಂಬಲಿಸಿದ್ದಾರೆ.
ಜುಲೈ ಒಂದರಂದು ಚೆಸ್ಟರ್-ಲೀ-ಸ್ಟ್ರೀಟ್‌ನ ರಿವರ್‌ಸೈಡ್ ಗ್ರೌಂಡ್‌ನಲ್ಲಿ ನಡೆದಿದ್ದ ಮೊದಲನೇ ಪಂದ್ಯ ಮಳೆಗೆ ಬಲಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ, 189 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಎರಡನೇ ಇನಿಂಗ್ಸ್‌ಗೆ ಮಳೆ ಅಡ್ಡಿ ಉಂಟು ಮಾಡಿತ್ತು. ಹಾಗಾಗಿ ಫಲಿತಾಂಶವಿಲ್ಲದೆ ಪಂದ್ಯ ಅಂತ್ಯವಾಗಿತ್ತು. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಬೆಂಚ್ ಕಾದಿದ್ದರು. ಇದೀಗ ಎರಡನೇ ಪಂದ್ಯದಲ್ಲಿಯೂ ವೈಭವ್ ಆಡುವ ಬಗ್ಗೆ ಅನುಮಾನವಿದೆ.
IND vs ENG: ಎರಡನೇ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ XI ವಿವರ!
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್‌ನಲ್ಲಿ ವಿಡಿಯೊದಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, ವೈಭವ್ ಸೂರ್ಯವಂಶಿಯನ್ನು ಕಡೆಗಣಿಸಿ, ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಿದ್ದಾರೆ. ಇನ್ನು ಮೂರನೇ ಸ್ಥಾನಕ್ಕೆ ಇಶಾನ್ ಕಿಶನ್ ಅವರನ್ನು ಆರಿಸಿದ್ದಾರೆ. ಆ ಮೂಲಕ ಆಕಾಶ್ ಚೋಪ್ರಾ, ಸತತ ವೈಫಲ್ಯದ ಹೊರತಾಗಿಯೂ ಸಂಜು ಸ್ಯಾಮ್ಸನ್ ಅವರನ್ನು ಬೆಂಬಲಿಸಿದ್ದಾರೆ.
"ನಾಯಕ ಶ್ರೇಯಸ್ ಅಯ್ಯರ್‌ಗೆ ನಾಲ್ಕನೇ ಕ್ರಮಾಂಕ ಹಾಗೂ ಐದನೇ ಕ್ರಮಾಂಕಕ್ಕೆ ಉಪ ನಾಯಕ ತಿಲಕ್ ವರ್ಮಾಗೆ ಐದನೇ ಸ್ಥಾನ. ಇನ್ನು ಆಲ್‌ರೌಂಡರ್ ಶಿವಂ ದುಬೇ ಅವರನ್ನು ಆರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಇದರ ಬಗ್ಗೆ ಯಾವುದೇ ಅನುಮಾನವಿಲ್ಲ. ಅಕ್ಷರ್ ಪಟೇಲ್ ಹಾಗೂ ಹರ್ಷಿತ್ ರಾಣಾ ಅವರಿಗೆ ಕ್ರಮವಾಗಿ 7 ಮತ್ತು 8ನೇ ಸ್ಥಾನವನ್ನು ನೀಡಲಾಗಿದೆ. ಇವರ ಬಳಿಕ ಮೂವರು ಬೌಲರ್‌ಗಳನ್ನು ಆಡಿಸಲಾಗುತ್ತದೆ. ಅರ್ಷದೀಪ್ ಸಿಂಗ್ ಹಾಗೂ ಇಬ್ಬರು ಪೂರ್ಣಾವಧಿ ಸ್ಪಿನ್ನರ್‌ಗಳಾದ ರವಿ ಬಿಷ್ಣೋಯ್ ಮತ್ತು ವರುಣ್ ಚಕ್ರವರ್ತಿಗೆ ಅವಕಾಶ ನೀಡಲಾಗುವುದು," ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.
IND vs ENG: ಎರಡನೇ ಟಿ20ಐಗೆ ಇಂಗ್ಲೆಂಡ್ ಪ್ಲೇಯಿಂಗ್ XIನಲ್ಲಿ ಎರಡು ಬದಲಾವಣೆ!
"ನೀವು ಪಿಚ್‌ಗೆ ತಕ್ಕಂತೆ ಕೆಲಸವನ್ನು ಮಾಡಬೇಕಾಗುತ್ತದೆ. ಹಾಗಾಗಿ ನಾನು ಪ್ಲೇಯಿಂಗ್ Xiನಲ್ಲಿ ಯಾವುದೇ ಬದಲಾವಣೆಯನ್ನು ನೋಡುತ್ತಿಲ್ಲ. ಅದೇ ಆಡುವ ಬಳಗವನ್ನು ಮುಂದುವರಿಸಬಹುದು. ಮ್ಯಾಂಚೆಸ್ಟರ್ ಪಿಚ್ ವೇಗಿಗಳ ಸ್ನೇಹಿಯಾಗಿದ್ದು, ಸ್ಪಿನ್ನರ್‌ಗಳ ಬದಲಾಗಿ ಫಾಸ್ಟ್ ಬೌಲರ್‌ಗಳನ್ನೇ ಆಡಿಸಬೇಕಾಗುತ್ತದೆ," ಎಂದು ಮಾಜಿ ಆರಂಭಿಕ ಹೇಳಿದ್ದಾರೆ.
ಎರಡನೇ ಟಿ20ಐಗೆ ಆಕಾಶ್ ಚೋಪ್ರಾ ಆರಿಸಿದ ಭಾರತದ ಪ್ಲೇಯಿಂಗ್ XI
ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೇ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್