ಏಷ್ಯಾ ಕಪ್ ಭಾರತ ತಂಡದಲ್ಲಿ ನಾಲ್ವರು ಮುಂಬೈ ಇಂಡಿಯನ್ಸ್ ಸ್ಟಾರ್‌ಗಳು!
ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ 2025ರ ಏಷ್ಯಾ ಕಪ್ ಟೂರ್ನಿಯ 15 ಸದಸ್ಯರ ಭಾರತ ತಂಡವನ್ನು ಆಗಸ್ಟ್ 19 ರಂದು ಪ್ರಕಟಿಸಲಾಗಿದೆ. ಈ ತಂಡದಲ್ಲಿ ನಾಯಕತ್ವ ವಹಿಸಿರುವ ಸೂರ್ಯಕುಮಾರ್ ಸೇರಿದಂತೆ 4 ಜನ ಮುಂಬೈ ಇಂಡಿಯನ್ಸ್ ಆಟಗಾರರು ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಏಷ್ಯಾ ಕಪ್ ಭಾರತ ತಂಡದಲ್ಲಿ ನಾಲ್ವರು ಮುಂಬೈ ಇಂಡಿಯನ್ಸ್ ಆಟಗಾರರು.

ದುಬೈ: ಬಹು ನಿರೀಕ್ಷಿತ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯ ಭಾರತ ತಂಡವನ್ನು (India's Squad) ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಪ್ರಕಟಿಸಿದೆ. ಇನ್ನು ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ತಂಡದ ಉಪ ನಾಯಕನ ಶುಭಮನ್ ಗಿಲ್ (Shubman Gill) ಕಾಣಿಸಿಕೊಳ್ಳಲಿದ್ದಾರೆ. ಆದರೆ ಇನ್ನೊಂದು ಗಮನಿಸಬೇಕಾದ ಸಂಗತಿ ಏನೆಂದರೆ, ಶುಭ್‌ಮನ್ ಗಿಲ್ 2024 ರಿಂದ ಟಿ20ಐ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ. ಆದರೂ ಆಯ್ಕೆ ಸಮಿತಿ ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡಿ, ಉಪ ನಾಯಕನ ಜವಾಬ್ದಾರಿಯನ್ನು ನೀಡಿದ್ದಾರೆ.
ಆ ಮೂಲಕ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಲವು ಬದಲಾವಣೆಗಳು ಅತ್ಯಗತ್ಯ ಎನ್ನುವುದು ಸ್ಪಷ್ಟವಾಗಿದೆ. ಇದರ ನಡುವೆ ಈ ಬಾರಿ ಏಷ್ಯಾಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ಸೇರಿದಂತೆ 4 ಮಂದಿ ಮುಂಬೈ ಇಂಡಿಯನ್ಸ್ ಆಟಗಾರರು ಕಣಕ್ಕಿಳಿಯುತ್ತಿರುವುದು ವಿಶೇಷ. ಇನ್ನುಳಿದ ಮೂರು ಮಂದಿ ಆಟಗಾರರ ವಿವರ ಇಲ್ಲಿದೆ.
Asia Cup 2025: ಭಾರತ ಏಷ್ಯಾ ಕಪ್ ತಂಡದಲ್ಲಿ ಸ್ಥಾನ ಪಡೆಯದ ಟಾಪ್ 5 ಆಟಗಾರರು!
1.ಹಾರ್ದಿಕ್ ಪಾಂಡ್ಯ: ನಿರೀಕ್ಷೆಯಂತೆ ಭಾರತದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಟೀಮ್ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಕಣಕ್ಕಿಳಿಯಲಿದ್ದಾರೆ. ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲೂ ಕೂಡ ಅಷ್ಟೇ ಕ್ಷಮತೆ ಹೊಂದಿರುವ ಪಾಂಡ್ಯ 2015ರಲ್ಲಿ ಮುಂಬೈ ಪರ ಐಪಿಲ್ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ತಂಡದಲ್ಲಿ ಸ್ಥಿರ ಪ್ರದರ್ಶನ ತೋರಿ ಮ್ಯಾನೇಜ್‌ಮೆಂಟ್ ಮನಸ್ಸು ಗೆದ್ದಿದ್ದ ಪಾಂಡ್ಯ ಬ್ರದರ್ಸ್, ದೀರ್ಘಾವಧಿ ಮುಂಬೈ ಪರ ಆಡಿದ್ದರು. ತದ ನಂತರ 2022ರ ಮೆಗಾ ಹರಾಜಿಗೂ ಮುನ್ನ ಮುಂಬೈ ಪ್ರಾಂಚೈಸಿಯನ್ನು ಪಾಂಡ್ಯ ಸಹೋದರರು ತೊರೆದಿದ್ದರು. ಮೆಗಾ ಹರಾಜಿನಲ್ಲಿ ಗುಜರಾತ್ ಟೈಟನ್ಸ್ ಸೇರಿದ್ದ ಹಾರ್ದಿಕ್, ನಾಯಕನಾಗಿದ್ದರು. ಚೊಚ್ಚಲ ಆವೃತ್ತಿಯಲ್ಲಿಯೇ ಜಿಟಿಗೆ ಹಾರ್ದಿಕ್ ಪ್ರಶಸ್ತಿ ಗೆದ್ದುಕೊಟ್ಟಿದ್ದರು.
2023ರ ಸೀಸನ್‌ನಲ್ಲಿಯೂ ಹಾರ್ದಿಕ್ ನೇತೃತ್ವದ ಜಿಟಿ ತಂಡ ಫೈನಲ್ ಪ್ರವೇಶಿಸಿತ್ತು. ಪುನಃ 2024ರ ಐಪಿಎಲ್ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಅಂದಿನ ನಾಯಕ ರೋಹಿತ್ ಶರ್ಮಾ ನಾಯಕತ್ವ ತ್ಯಜಿಸಿದ ಕಾರಣ ಪಾಂಡ್ಯ ಪುನಃ ತವರು ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
Asia Cup 2025: ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ; ಗಿಲ್‌ಗೆ ಉಪನಾಯಕನ ಪಟ್ಟ
2.ಜಸ್‌ಪ್ರೀತ್ ಬುಮ್ರಾ: ಟೀಮ್ ಇಂಡಿಯಾದ ಪ್ರಮುಖ ವೇಗದ ಅಸ್ತ್ರವಾಗಿರುವ ಜಸ್‌ಪ್ರೀತ್ ಬುಮ್ರಾ ಏಷ್ಯಾಕಪ್ ಟೂರ್ನಿಯಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ತಂಡಕ್ಕೆ ಅಗತ್ಯವಿದ್ದಾಗಲೆಲ್ಲಾ ಎದುರಾಳಿಗಳ ವಿರುದ್ದ ಬಲವಾದ ತಂತ್ರ ರೂಪಿಸಿ ವಿಕೆಟ್ ಕಿತ್ತು ನೆರವಾಗುವ ಬುಮ್ರಾ, 2013ರ ಐಪಿಎಲ್ ಸೀಸನ್‌ನಲ್ಲಿ ಮುಂಬೈ ಪರ ಐಪಿಎಲ್ ವೃತ್ತಿ ಜೀವನ ಪ್ರಾರಂಭಿಸಿದ್ದರು. ಅಂದಿನಿಂದ ಇಂದಿನವರೆಗೂ ಮುಂಬೈ ತಂಡದ ಪಾಲಿನ ಬೌಲಿಂಗ್ ವಿಭಾಗದಲ್ಲಿ ಸ್ಥಿರ ಪ್ರದರ್ಶನ ತೋರುತ್ತಿದ್ದಾರೆ. ಇಂತಹ ಅದ್ಬುತ ವೇಗಿಯ ಜೊತೆ 2014ರಲ್ಲಿ ಮುಂಬೈ ಫ್ರಾಂಚೈಸಿ ಮರು ಒಪ್ಪಂದ ಮಾಡಿಕೊಂಡಿತು. 2018ರ ಮೆಗಾ ಹರಾಜು ಸೇರಿದಂತೆ ಪ್ರತೀ ವರ್ಷ ಮುಂಬೈ, ಬುಮ್ರಾ ಅವರನ್ನು ತಂಡದಲ್ಲಿ ಉಳಿಸಿಕೊಂಡು ಬಂದಿದೆ. ಬುಮ್ರಾ ಟಿ20ಐನಲ್ಲಿ ತಂಡವನ್ನು ಮುನ್ನಡೆಸಿದ ಅನುಭವವೂ ಹೊಂದಿದ್ದಾರೆ. ಆದರೆ ಐಪಿಲ್‌ನಲ್ಲಿ ಅವರಿಗೆ ತಂಡವನ್ನು ಮುನ್ನಡೆಸುವ ಅವಕಾಶ ದೊರಕಿಲ್ಲ. 2024ರ ವಿಶ್ವಕಪ್ ನಂತರ ಮೊದಲ ಬಾರಿ ಬಲಗೈ ವೇಗಿ ಟಿ20ಐ ತಂಡಕ್ಕೆ ಮರಳಿದ್ದು, ಟೀಮ್ ಇಂಡಿಯಾ ಬೌಲಿಂಗ್‌ನ್ನು ಮತ್ತಷ್ಟೂ ಬಲಿಷ್ಠಗೊಳಿಸಿದ್ದಾರೆ.
Asia Cup squads: ಇಂದು ಭಾರತ ತಂಡ ಪ್ರಕಟ; 15 ಮಂದಿಯ ತಂಡಕ್ಕೆ 30 ಆಟಗಾರರ ಪೈಪೋಟಿ
3. ತಿಲಕ್ ವರ್ಮಾ: ಮುಂಬೈ ಇಂಡಿಯನ್ಸ್ ತಂಡದ ಮಧ್ಯ ಕ್ರಮಾಂಕದ ಪ್ರಮುಖ ಬ್ಯಾಟರ್ ತಿಲಕ್ ವರ್ಮಾ ಎಲೆ ಮರೆ ಕಾಯಿಯಂತೆ ಇನಿಂಗ್ಸ್ ಕಟ್ಟುವಲ್ಲಿ ನಿಪುಣರಾಗಿದ್ದಾರೆ. 2022ರಲ್ಲಿ ಮುಂಬೈ ಪರ ಕಣಕ್ಕಿಳಿದ ತಿಲಕ್ ಇಂದಿಗೂ ತಂಡದಲ್ಲಿದ್ದಾರೆ. ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ, ತಿಲಕ್ ಅವರು ಭಾರತ ತಂಡಕ್ಕಾಗಿ ಆಡುತ್ತಾರೆ ಎಂದು ಭವಿಷ್ಯ ನುಡಿದು ಶ್ಲಾಘಿಸಿದ್ದರು. ಬಳಿಕ 2025ರ ಮೆಗಾ ಹರಾಜಿಗೂ ಮುನ್ನ ಮುಂಬೈ ಫ್ರಾಂಚೈಸಿ ಅವರನ್ನು ಉಳಿಸಿಕೊಂಡಿತ್ತು. ಕಳೆದ ಸೀಸನ್‌ನಲ್ಲಿಯೂ ಮುಂಬೈ ತಂಡಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ತಿಲಕ್ ಈ ಬಾರಿ ಏಷ್ಯಾಕಪ್ ಟೂರ್ನಿಯಲ್ಲಿ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ. ಜೊತೆಗೆ ವಿಕೆಟ್ ಅಗತ್ಯವಿದ್ದಾಗ ಆಲ್‌ರೌಂಡರ್ ಪಾತ್ರ ನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ.
ಈ ಮೂಲಕ ಭಾರತ ತಂಡದಲ್ಲಿ ಮುಂಬೈನ 4 ಜನ ಆಟಗಾರರು ಸ್ಥಾನ ಗಿಟ್ಟಿಸಿಕೊಂಡಿದ್ದು, ಬ್ಯಾಟಿಂಗ್, ಬೌಲಿಂಗ್ ಮತ್ತು ಆಲ್‌ರೌಂಡರ್ ವಿಭಾಗದಲ್ಲಿ ತಂಡಕ್ಕೆ ನೆರವಾಗಲಿದ್ದಾರೆ.
ಬರಹ: ಕೆ. ಎನ್. ರಂಗು, ಚಿತ್ರದುರ್ಗ