ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಶ್ರೇಯಸ್‌ ಅಯ್ಯರ್‌ ಏನು ತಪ್ಪು ಮಾಡಿದ್ದಾರೆ? ಆರ್‌ ಅಶ್ವಿನ್‌ ಪ್ರಶ್ನೆ!

2025ರ ಏಷ್ಯಾ ಕಪ್‌ ಭಾರತ ತಂಡದಲ್ಲಿ ಶ್ರೇಯಸ್‌ ಅಯ್ಯರ್‌ ಅವರಿಗೆ ಅವಕಾಶ ನೀಡದ ಬಗ್ಗೆ ಸ್ಪಿನ್‌ ದಂತಕತೆ ಆರ್‌ ಅಶ್ವಿನ್‌ ಪ್ರಶ್ನೆ ಮಾಡಿದ್ದಾರೆ. ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಹಾಗೂ ಐಪಿಎಲ್‌ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನವನ್ನು ತೋರಿದ ಹೊರತಾಗಿಯೂ ಅಯ್ಯರ್‌ಗೆ ಚಾನ್ಸ್‌ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಅವರು ದೂರಿದ್ದಾರೆ.

ʻಶ್ರೇಯಸ್‌ ಅಯ್ಯರ್‌ಗೆ ಅನ್ಯಾಯ ಮಾಡಲಾಗಿದೆʼ: ಆರ್‌ ಅಶ್ವಿನ್‌!

ಶ್ರೇಯಸ್‌ ಅಯ್ಯರ್‌ಗೆ ಅನ್ಯಾಯ ಮಾಡಲಾಗಿದೆ ಎಂದ ಆರ್‌ ಅಶ್ವಿನ್.

Profile Ramesh Kote Aug 19, 2025 9:34 PM

ನವದೆಹಲಿ: ಬಹುನಿರೀಕ್ಷಿತ 2025ರ ಏಷ್ಯಾ ಕಪ್‌ ಟೂರ್ನಿಯ (Asia Cup 2025) ಭಾರತ ತಂಡದಲ್ಲಿ ಶ್ರೇಯಸ್‌ ಅಯ್ಯರ್‌ (Shreyas Iyer) ಅವರಿಗೆ ಸ್ಥಾನ ನೀಡದ ಬಗ್ಗೆ ಸ್ಪಿನ್‌ ದಂತಕತೆ ಆರ್‌ ಅಶ್ವಿನ್‌ (R Ashwin) ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಶ್ರೇಯಸ್‌ ಅಯ್ಯರ್‌ ಏನು ತಪ್ಪು ಮಾಡಿದ್ದಾರೆಂದು ಬಿಸಿಸಿಐ ಆಯ್ಕೆದಾರರನ್ನು ಅಶ್ವಿನ್‌ ಪ್ರಶ್ನೆ ಮಾಡಿದ್ದಾರೆ. ಆಗಸ್ಟ್‌ 19 ರಂದು ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು ಭಾರತ ತಂಡವನ್ನು ಆಯ್ಕೆ ಮಾಡಿದ್ದಾರೆ. ಅಂದ ಹಾಗೆ ಭಾರತ ಟೆಸ್ಟ್‌ ತಂಡದ ನಾಯಕ ಶುಭಮನ್‌ ಗಿಲ್‌ ಟಿ20ಐ ತಂಡಕ್ಕೂ ಲಗ್ಗೆ ಇಟ್ಟಿದ್ದು, ಉಪನಾಯಕನ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ನಾಯಕ ಸೂರ್ಯಕುಮಾರ್‌ ಯಾದವ್‌ಗೆ ನೆರವು ನೀಡಲಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸ್ಥಿರವಾಗಿ ರನ್‌ ಗಳಿಸಿದ ಹೊರತಾಗಿಯೂ ಶ್ರೇಯಸ್‌ ಅಯ್ಯರ್‌ ಅವರು ಏಷ್ಯಾ ಕಪ್‌ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. 2023ರಲ್ಲಿ ಆಸ್ಟ್ರೇಲಿಯಾ ವಿರುದ್ದ ಕೊನೆಯ ಬಾರಿ ಅಯ್ಯರ್‌ ಟಿ20ಐ ಸರಣಿಯನ್ನು ಆಡಿದ್ದರು. ಇದಾದ ಬಳಿಕ ಅವರು 2024ರ ಐಸಿಸಿ ಟಿ20ಐ ವಿಶ್ವಕಪ್‌ ಭಾರತ ತಂಡದ ಸ್ಟ್ಯಾಂಡ್‌ ಬೈನಲ್ಲಿದ್ದರು. ಆದರೆ, ಅವರಿಗೆ ಒಂದು ಒಂದು ಪಂದ್ಯದಲ್ಲಿಯೂ ಆಡಲು ಅವಕಾಶ ಸಿಕ್ಕಿರಲಿಲ್ಲ.

Asia Cup 2025: ಭಾರತ ಏಷ್ಯಾ ಕಪ್‌ ತಂಡದಲ್ಲಿ ಸ್ಥಾನ ಪಡೆಯದ ಟಾಪ್‌ 5 ಆಟಗಾರರು!

ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆರ್‌ ಅಶ್ವಿನ್‌, "ಶ್ರೇಯಸ್ ಅಯ್ಯರ್ ಉತ್ತಮ ಸಾಮರ್ಥ್ಯ ಹೊಂದಿದ್ದಾರೆ. ಅವರು ತಂಡದಿಂದ ಹೊರಗಿದ್ದರು, ಆದರೆ ಅವರು ನಿಮ್ಮನ್ನು ಚಾಂಪಿಯನ್ಸ್ ಟ್ರೋಫಿ ಗೆಲ್ಲುವಂತೆ ಮಾಡಿದ್ದರು. ಶುಭಮನ್ ಗಿಲ್ ಸ್ಫೋಟಕ ಫಾರ್ಮ್‌ನಲ್ಲಿದ್ದಾರೆ ಎಂದು ನೀವು ವಾದಿಸಿದರೆ, ಶ್ರೇಯಸ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಈ ಎಲ್ಲಾ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ? ಶ್ರೇಯಸ್ ಏನು ತಪ್ಪು ಮಾಡಿದ್ದಾರೆ, ” ಎಂದು ಪ್ರಶ್ನೆ ಮಾಡಿದ್ದಾರೆ.

ಇದಲ್ಲದೆ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡಗಳ ಪರ ಐಪಿಎಲ್ ಪ್ರದರ್ಶನಗಳನ್ನು ಆರ್‌ ಅಶ್ವಿನ್‌ ಉಲ್ಲೇಖಿಸಿದರು ಮತ್ತು ತಮ್ಮ ಶಾರ್ಟ್-ಬಾಲ್ ದೌರ್ಬಲ್ಯಗಳನ್ನು ಎದುರಿಸಿದ್ದಾರೆ ಎಂದು ಹೇಳಿದ್ದಾರೆ.

Asia Cup 2025: ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ; ಗಿಲ್‌ಗೆ ಉಪನಾಯಕನ ಪಟ್ಟ

"ಅವರು ಕೆಕೆಆರ್ ಪರ ಅದ್ಭುತ ಪ್ರದರ್ಶನ ನೀಡಿದ್ದರು, ತಂಡವನ್ನು ಗೆಲ್ಲಿಸಿದ್ದರು. ಆದರೂ ಅವರನ್ನು ಹರಾಜಿಗೆ ಕಳುಹಿಸಲಾಗಿತ್ತು. ನಂತರ ಅವರು 2014ರ ನಂತರ ಮೊದಲ ಬಾರಿ ಪಂಜಾಬ್ ಕಿಂಗ್ಸ್‌ ತಂಡವನ್ನು ಫೈನಲ್‌ಗೆ ಕರೆದೊಯ್ದಿದ್ದರು. ಅವರು ಶಾರ್ಟ್ ಬಾಲ್ ಸಮಸ್ಯೆಯನ್ನು ಪರಿಹರಿಸಿಕೊಂಡಿದ್ದರು. ಐಪಿಎಲ್‌ ಟೂರ್ನಿಯಲ್ಲಿ ಅವರು ಕಗಿಸೊ ರಬಾಡ ಮತ್ತು ಜಸ್‌ಪ್ರೀತ್‌ ಬುಮ್ರಾ ಅವರಂತಹ ಬೌಲರ್‌ಗಳನ್ನು ಸುಲಭವಾಗಿ ಎದುರಿಸಿದ್ದರು. ಅವರ ಮತ್ತು ಯಶಸ್ವಿ ಜೈಸ್ವಾಲ್‌ರ ಬಗ್ಗೆ ನನಗೆ ತುಂಬಾ ದುಃಖವಾಗಿದೆ; ಇದು ಅವರಿಗೆ ದೊಡ್ಡ ಅನ್ಯಾಯವಾಗಿದೆ," ಎಂದು ಅಶ್ವಿನ್ ತಿಳಿಸಿದ್ದಾರೆ.

Asia Cup 2025: ಪಾಕಿಸ್ತಾನ ವಿರುದ್ಧ ಭಾರತ ತಂಡ ಆಡಬಾರದೆಂದ ಕೇದರ್‌ ಜಾಧವ್!

ಶ್ರೇಯಸ್‌ ಅಯ್ಯರ್‌ ಆಯ್ಕೆದಾರರ ಯೋಜನೆಗಳಲ್ಲಿ ಇಲ್ಲ: ಅಭಿಷೇಕ್‌ ನಾಯರ್‌

ಬಿಸಿಸಿಐ ಆಯ್ಕೆ ಸಮಿತಿಯು ಧ್ರುವ್ ಜುರೆಲ್ ಅವರನ್ನು ಮೂರನೇ ವಿಕೆಟ್ ಕೀಪರ್ ಆಗಿ ಹೆಸರಿಸಿದೆ. ಆದರೆ, ಬ್ಯಾಕಪ್ ಆಟಗಾರರಲ್ಲಿ ಅಯ್ಯರ್ ಅವರ ಹೆಸರಿಲ್ಲದಿರುವ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಅಭಿಷೇಕ್ ನಾಯರ್ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.

"ಶ್ರೇಯಸ್ ಅಯ್ಯರ್ 20 ಸದಸ್ಯರ ತಂಡದಲ್ಲಿಲ್ಲದಿರಲು ಕಾರಣವೇನೆಂದು ನನಗೆ ಅರ್ಥವಾಗುತ್ತಿಲ್ಲ. ನಾನು ಆಯ್ಕೆಯಾಗಿರುವ 15 ಆಟಗಾರರ ಬಗ್ಗೆ ಮಾತನಾಡುತ್ತಿಲ್ಲ, ಆದರೆ 20 ಜನರ ಬಗ್ಗೆಯೇ ಮಾತನಾಡುತ್ತಿದ್ದೇನೆ. ಕನಿಷ್ಠ ಟಿ20 ದೃಷ್ಟಿಕೋನದಿಂದ ಇದು ಶ್ರೇಯಸ್ ಅಯ್ಯರ್ ಆಯ್ಕೆದಾರರ ಯೋಜನೆಯಲ್ಲಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುತ್ತದೆ," ಎಂದು ಜಿಯೋಹಾಟ್‌ಸ್ಟಾರ್‌ನಲ್ಲಿ ಅಭಿಷೇಕ್ ನಾಯರ್ ಹೇಳಿದ್ದಾರೆ.