ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮೂರೂ ಸ್ವರೂಪದ ಭಾರತ ತಂಡಕ್ಕೆ ಭವಿಷ್ಯದ ನಾಯಕನನ್ನು ಆರಿಸಿದ ಆಕಾಶ್‌ ಚೋಪ್ರಾ!

ಮುಂಬರುವ 2025ರ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಗೆ 15 ಸದಸ್ಯರ ಭಾರತ ತಂಡವನ್ನು ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದೆ. ಭಾರತ ಟೆಸ್ಟ್‌ ತಂಡದ ನಾಯಕ ಶುಭಮನ್‌ ಗಿಲ್‌ ಒಂದೂವರೆ ವರ್ಷದ ಬಳಿಕ ಟಿ20ಐ ತಂಡಕ್ಕೆ ಮರಳಿದ್ದಾರೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ಶ್ಲಾಘಿಸಿದ್ದಾರೆ.

ಭಾರತ ತಂಡಕ್ಕೆ ಪೂರ್ಣ ಪ್ರಮಾಣದ ನಾಯಕನ್ನು ಆರಿಸಿದ ಚೋಪ್ರಾ!

ಭಾರತ ತಂಡಕ್ಕೆ ಮೂರೂ ಸ್ವರೂಪದ ನಾಯಕನನ್ನು ಆರಿಸಿದ ಆಕಾಶ್‌ ಚೋಪ್ರಾ.

Profile Ramesh Kote Aug 19, 2025 11:02 PM

ನವದೆಹಲಿ: ಮುಂಬರುವ 2025ರ ಏಷ್ಯಾ ಕಪ್‌ ಕ್ರಿಕೆಟ್‌ (Asia Cup 2025) ಟೂರ್ನಿಗೆ 15 ಸದಸ್ಯರ ಭಾರತ ತಂಡವನ್ನು ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದೆ. ಒಂದೂವರೆ ವರ್ಷದ ಬಳಿಕ ಭಾರತ ಟೆಸ್ಟ್‌ ತಂಡದ ನಾಯಕ ಶುಭಮನ್‌ ಗಿಲ್‌ (Shubman Gill) ಟಿ20ಐ ತಂಡಕ್ಕೆ ಮರಳಿದ್ದಾರೆ. ಇದನ್ನು ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಆಕಾಶ್‌ ಚೋಪ್ರಾ (Aakash Chopra) ಶ್ಲಾಘಿಸಿದ್ದಾರೆ. ಶುಭಮನ್‌ ಗಿಲ್‌ಗೆ ಭಾರತ ಟಿ20ಐ ತಂಡದಲ್ಲಿ ಸ್ಥಾನ ನೀಡುವ ಮೂಲಕ ಬಿಸಿಸಿಐ, ಯುವ ಬ್ಯಾಟ್ಸ್‌ಮನ್‌ ಅನ್ನು ಮೂರೂ ಸ್ವರೂಪದ ರಾಷ್ಟ್ರೀಯ ತಂಡಕ್ಕೆ ಮುಂದಿನ ನಾಯಕನನ್ನಾಗಿ ಬೆಳೆಸುವ ಯೋಜನೆ ಇರಬಹುದು ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ ಟೆಸ್ಟ್‌ ತಂಡದ ನಾಯಕ ಶುಭಮನ್‌ ಗಿಲ್‌ 2023ರಲ್ಲಿ ಕೊನೆಯ ಬಾರಿ ಟಿ20ಐ ಪಂದ್ಯವನ್ನು ಆಡಿದ್ದರು ಹಾಗೂ 2024ರಲ್ಲಿ ಅವರು ಒಂದೇ ಒಂದು ಪಂದ್ಯವನ್ನು ಆಡಿರಲಿಲ್ಲ. ಜಿಂಬಾಬ್ವೆ ವಿರುದ್ದದ ಟಿ20ಐ ಸರಣಿಯಲ್ಲಿ ಭಾರತ ಎರಡನೇ ತಂಡವನ್ನು ಗಿಲ್‌ ಮುನ್ನಡೆಸಿದ್ದರು. ಆದರೂ ಅವರನ್ನು 2024ರ ಐಸಿಸಿ ಟಿ20ಐ ವಿಶ್ವಕಪ್‌ ಭಾರತ ತಂಡದ ಸ್ಟ್ಯಾಂಡ್‌ಬೈನಲ್ಲಿದ್ದರು. ಇದೀಗ ಏಷ್ಯಾ ಕಪ್‌ ಭಾರತ ತಂಡಕ್ಕೆ ಮರಳಿದ್ದಾರೆ.

Asia Cup 2025: ಪಾಕಿಸ್ತಾನ ವಿರುದ್ಧ ಭಾರತ ತಂಡ ಆಡಬಾರದೆಂದ ಕೇದರ್‌ ಜಾಧವ್!

ತಮ್ಮ ಎಕ್ಸ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆಕಾಶ್‌ ಚೋಪ್ರಾ, "ಭಾರತ ಟಿ20ಐ ತಂಡಕ್ಕೆ ಶುಭಮನ್‌ ಗಿಲ್‌ ಉಪ ನಾಯಕರಾಗಿದ್ದಾರೆ. ಇದರರ್ಥ ಏನು? ಆ ಮೂಲಕ ಭಾರತ ತಂಡ, ತನ್ನ ಮೂರೂ ಸ್ವರೂಪಕ್ಕೆ ನಾಯಕನನ್ನು ಆರಿಸುವ ಹಾದಿಯಲ್ಲಿದೆ. ಅವರು ಭಾರತ ಟೆಸ್ಟ್‌ ತಂಡದ ನಾಯಕ, ಏಕದಿನ ತಂಡದ ನಾಯಕನಾಗಲಿದ್ದಾರೆ ಹಾಗೂ ಇದೀಗ ಭಾರತ ಟಿ20ಐ ತಂಡಕ್ಕೆ ಅವರು ಉಪ ನಾಯಕರಾಗಿದ್ದಾರೆ. ಇದರ ಮೂಲಕ ಭವಿಷ್ಯದ ನಾಯಕನನ್ನು ಬಿಸಿಸಿಐ ತಯಾರಿ ನಡೆಸುತ್ತಿದೆ," ಎಂದು ತಿಳಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ಬದಲಿಗೆ ಶುಭಮನ್ ಗಿಲ್ ತಂಡದ ಉಪನಾಯಕನಾಗಿ ಮರಳಿರುವುದು ಮತ್ತೊಂದು ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ: ಈಗಾಗಲೇ ಸ್ಥಿರವಾಗಿರುವಂತೆ ಕಾಣುವ ಪ್ಲೇಯಿಂಗ್‌ XIನಲ್ಲಿ ಅವರು ಎಲ್ಲಿ ಹೊಂದಿಕೊಳ್ಳುತ್ತಾರೆ? ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಆರಂಭಿಕರಾಗಿ ತಮ್ಮನ್ನು ತಾವು ಭದ್ರಪಡಿಸಿಕೊಳ್ಳುವುದರೊಂದಿಗೆ ಮತ್ತು ತಿಲಕ್ ವರ್ಮಾ 3ನೇ ಕ್ರಮಾಂಕದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವುದರಿಂದ, ಭಾರತದ ಅಗ್ರ ಕ್ರಮಾಂಕ ಬಹುತೇಕ ಖಚಿತವಾಗಿದೆ ಎಂದು ಹೇಳಬಹುದು.

Asia Cup 2025: ಭಾರತ ಏಷ್ಯಾ ಕಪ್‌ ತಂಡದಲ್ಲಿ ಸ್ಥಾನ ಪಡೆಯದ ಟಾಪ್‌ 5 ಆಟಗಾರರು!

ಶುಭಮನ್‌ ಗಿಲ್‌ ಅವರು ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಆಡುವುದು ಖಚಿತ, ಆದರೆ ಸಂಜು ಸ್ಯಾಮ್ಸನ್‌ ಅವರು ತಮ್ಮ ಆರಂಭಿಕ ಸ್ಥಾನವನ್ನು ತ್ಯಾಗ ಮಾಡಬೇಕಾಗುತ್ತದೆ ಎಂದು ಆಕಾಶ್‌ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಭಾರತ ತಂಡ ಎಲ್ಲಾ ಮಾದರಿಯ ನಾಯಕನ ದಿಕ್ಕಿನಲ್ಲಿ ಸಾಗುತ್ತಿರುವಂತೆ ತೋರುತ್ತಿದೆ. ಶುಭಮನ್ ಗಿಲ್ ಮರಳುವಿಕೆಯೊಂದಿಗೆ, ಸಂಜು ಸ್ಯಾಮ್ಸನ್ ಅವರ ಭವಿಷ್ಯವು ಹೆಚ್ಚು ಕಡಿಮೆ ಖಚಿತವಾಗಿದೆ; ಅವರು ಈಗ ಆಡುವ XI ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಗಿಲ್ ಉಪನಾಯಕನಾಗಿ ಬಂದಿರುವುದರಿಂದ, ಅವರು ಖಂಡಿತವಾಗಿಯೂ ಆಡುತ್ತಾರೆ ಮತ್ತು ಇನಿಂಗ್ಸ್‌ ಆರಂಭಿಸುತ್ತಾರೆ. ಇದು ಮೂಲಭೂತವಾಗಿ ಸಂಜು ಸ್ಯಾಮ್ಸನ್ ಅವರನ್ನು XIನಿಂದ ಹೊರಹಾಕುತ್ತದೆ," ಎಂದು ಚೋಪ್ರಾ ಇಎಸ್‌ಪಿಎನ್‌ಗೆ ತಿಳಿಸಿದ್ದಾರೆ.