IPL 2026 Auction: ಡಬಲ್ ಸೆಂಚುರಿ ಬಾರಿಸಿ ಸಿಎಸ್‌ಕೆಗೆ ತಿರುಗೇಟು ನೀಡಿದ ಡೆವೋನ್ ಕಾನ್ವೆ!
Devon Conway Hits Double Century: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಿನಿ ಹರಾಜಿನಲ್ಲಿ ಅನ್‌ಸೋಲ್ಡ್ ಆದ ಮೂರು ದಿನಗಳಲ್ಲಿ ನ್ಯೂಜಿಲೆಂಡ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ಡೆವೋನ್ ಕಾನ್ವೆ ಟೆಸ್ಟ್ ಪಂದ್ಯದಲ್ಲಿ ದ್ವಿಶತಕವನ್ನು ಬಾರಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್‌ಗೆ ತಿರುಗೇಟು ನೀಡಿದ ಡೆವೋನ್ ಕಾನ್ವೆ. -
ನವದೆಹಲಿ: ಡಿಸೆಂಬರ್ 16 ರಂದು ನಡೆದಿದ್ದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026 Mini Auction) ಟೂರ್ನಿಯ ಮಿನಿ-ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಬ್ಯಾಟ್ಸ್‌ಮನ್ ಹಾಗೂ ನ್ಯೂಜಿಲೆಂಡ್ ವಿಕೆಟ್ ಕೀಪರ್ ಡೆವೋನ್ ಕಾನ್ವೆ (Devon Conway) ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ 227 ರನ್‌ಗಳ ಅದ್ಭುತ ಇನಿಂಗ್ಸ್ ಆಡಿದ್ದಾರೆ. ಆ ಮೂಲಕ ಮಿನಿ ಹರಾಜಿನಲ್ಲಿ ಖರೀದಿಸಲು ಆಸಕ್ತಿ ತೋರದ ಹಾಗೂ ತನ್ನನ್ನು ಉಳಿಸಿಕೊಳ್ಳಲು ನಿರಾಸಕ್ತಿ ತೋರಿದ್ದ ಚೆನ್ನೈ ಫ್ರಾಂಚೈಸಿಗೆ ತಿರುಗೇಟು ನೀಡಿದ್ದಾರೆ. ಕಾನ್ವೇ ಮತ್ತು ಟಾಮ್ ಲೇಥಮ್ ದಾಖಲೆಯ 323 ರನ್‌ಗಳ ಆರಂಭಿಕ ಪಾಲುದಾರಿಕೆಯನ್ನು ಹಂಚಿಕೊಂಡರು, ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಇತಿಹಾಸದಲ್ಲಿ ಮೊದಲನೇ ವಿಕೆಟ್‌ಗೆ ದಾಖಲಾದ ಅತಿ ಹೆಚ್ಚು ಮೊತ್ತ ಇದಾಗಿದೆ. ತಮ್ಮ ಟೆಸ್ಟ್ ವೃತ್ತಿ ಜೀವನದ ಎರಡನೇ ದ್ವಿಶತಕದ ಮೂಲಕ ಕಿವೀಸ್ ಆರಂಭಿಕ ಹಲವು ದಾಖಲೆಗಳನ್ನು ಬರೆದಿದ್ದಾರೆ.
ಹತ್ತೊಂಬತ್ತನೇ ಆವೃತ್ತಿಯ ಐಪಿಎಲ್ ಮಿನಿ-ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ಒಟ್ಟು 77 ಆಟಗಾರರನ್ನು ಖರೀದಿಸಿದ್ದವು. ಆದರೆ ಡೆವೊನ್ ಕಾನ್ವೆ ಸೇರಿದಂತೆ ವಿಶ್ವದ ಹಲವು ಸ್ಟಾರ್ ಆಟಗಾರರು ಮಿನಿ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಡೆವೋನ್ ಕಾನ್ವೆ ಅವರು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಕ್ಕೆ ಪ್ರಮುಖ ಆಟಗಾರರಾಗಿದ್ದರು. ಆದರೆ, ಕಳೆದ ಸೀಸನ್‌ನಲ್ಲಿ ನಿರಾಶದಾಯಕ ಪ್ರದರ್ಶನದ ಕಾರಣ ಚೆನ್ನೈ ಫ್ರಾಂಚೈಸಿ ಕಾನ್ವೆ ಅವರನ್ನು ಕೈ ಬಿಟ್ಟಿದೆ ಹಾಗೂ ಮಿನಿ ಹರಾಜಿನಲ್ಲಿ ಖರೀದಿಸಲು ಆಸಕ್ತಿ ತೋರಲಿಲ್ಲ. ಆದರೆ, ಇದೀಗ ಅವರು ತಮ್ಮ ದೇಶಕ್ಕಾಗಿ ಸ್ಮರಣೀಯ ಇನಿಂಗ್ಸ್‌ನೊಂದಿಗೆ ತಮ್ಮ ಫಾರ್ಮ್‌ಗೆ ಮರಳಿದ್ದಾರೆ.
IPL 2026: ಮಿನಿ ಹರಾಜಿನಲ್ಲಿ ಕೋಟಿ-ಕೋಟಿ ಜೇಬಿಗಿಳಿಸಿಕೊಂಡ ಅನ್‌ಕ್ಯಾಪ್ಡ್ ಆಟಗಾರರು!
ಪ್ರಥಮ ಇನಿಂಗ್ಸ್‌ನಲ್ಲಿ 575 ರನ್ ಗಳಿಸಿದ ಕಿವೀಸ್
ಮೌಂಟ್ ಮೌಂಗನುಯಿಯಲ್ಲಿ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕಿವೀಸ್ ಪ್ರಥಮ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 575 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿ ಡಿಕ್ಲೆರ್ ಮಾಡಿಕೊಂಡಿತು. ಈ ಸ್ಕೋರ್‌ನಲ್ಲಿ ಡೆವೋನ್ ಕಾನ್ವೇ ಪ್ರಮುಖ ಪಾತ್ರ ವಹಿಸಿದರು. ಅವರು 367 ಎಸೆತಗಳಲ್ಲಿ 31 ಬೌಂಡರಿಗಳನ್ನು ಒಳಗೊಂಡಂತೆ 227 ರನ್ ಗಳಿಸಿದರು. ಇದು ಅವರ ಅಂತಾರಾಷ್ಟ್ರೀಯ ವೃತ್ತಿಜೀವನದ ಅತ್ಯಧಿಕ ವೈಯಕ್ತಿಕ ಮೊತ್ತವಾಗಿದೆ.
Devon Conway reaches 200 for the second time in his Test career 🥹#NZvWIN | 📸 @PhotosportNZ pic.twitter.com/FvBYvPBWK9
— BLACKCAPS (@BLACKCAPS) December 18, 2025
ಕಾನ್ವೇ ಅವರ ಎರಡನೇ ದ್ವಿಶತಕ
ಇದು ಕಾನ್ವೇ ಅವರ ಟೆಸ್ಟ್ ವೃತ್ತಿಜೀವನದ ಎರಡನೇ ದ್ವಿಶತಕವಾಗಿದೆ. ಅವರು ವೆಸ್ಟ್ ಇಂಡೀಸ್ ವಿರುದ್ಧ ದ್ವಿಶತಕ ಗಳಿಸಿದ ಎರಡನೇ ನ್ಯೂಜಿಲೆಂಡ್ ಆರಂಭಿಕ ಆಟಗಾರರಾಗಿದ್ದಾರೆ. ಇವರಿಗಿಂತ ಮೊದಲು ದಂತಕತೆ ಗ್ಲೆನ್ ಟರ್ನರ್ ಈ ಸಾಧನೆ ಮಾಡಿದ್ದಾರೆ. ಕಾನ್ವೇ ಅವರ 227 ರನ್‌ಗಳು ವೆಸ್ಟ್ ಇಂಡೀಸ್ ವಿರುದ್ಧ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಗಳಿಸಿದ ಮೂರನೇ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ. ಈ ಪಟ್ಟಿಯಲ್ಲಿ ಗ್ಲೆನ್ ಟರ್ನರ್ (259) ಮತ್ತು ಕೇನ್ ವಿಲಿಯಮ್ಸನ್ (251) ಅವರಿಗಿಂತ ಮೊದಲು ಇದ್ದಾರೆ.
IPL 2026 Auction: ಐಪಿಎಲ್ ಮಿನಿ ಹರಾಜಿನ ಟಾಪ್ 5 ದುಬಾರಿ ಆಟಗಾರರು!
ರೋಹಿತ್-ಅಗರ್ವಾಲ್ ದಾಖಲೆ ಮುರಿದ ಕಾನ್ವೆ
ಡೆವೋನ್ ಕಾನ್ವೇ ಮತ್ತು ಟಾಮ್ ಲೇಥಮ್ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ವಿಕೆಟ್‌ಗೆ 323 ರನ್ ಸೇರಿಸಿದರು. ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಇತಿಹಾಸದಲ್ಲಿ ದಾಖಲಿಸಿದ ಅತ್ಯಧಿಕ ಜೊತೆಯಾಟ ಇದಾಗಿದೆ. 2019 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್ ಹಂಚಿಕೊಂಡ 317 ರನ್‌ಗಳ ದಾಖಲೆಯನ್ನು ಅವರು ಮುರಿದಿದ್ದಾರೆ.