ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾರ 2027ರ ವಿಶ್ವಕಪ್‌ ಭವಿಷ್ಯ ನುಡಿದ ಇರ್ಫಾನ್‌ ಪಠಾಣ್!

ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಭಾರತ ತಂಡದಲ್ಲಿ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಉಪಸ್ಥಿತಿಯ ಮೌಲ್ಯವನ್ನು ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಒತ್ತಿ ಹೇಳಿದ್ದಾರೆ. ಟಿ20ಐ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ಈಗಾಗಲೇ ವಿದಾಯ ಹೇಳಿರುವ ಕೊಹ್ಲಿ, ರೋಹಿತ್‌ ಮುಂದಿನ ಏಕದಿನ ವಿಶ್ವಕಪ್‌ ನಿಮಿತ್ತ 50 ಓವರ್‌ಗಳ ಸ್ವರೂಪದಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ.

ರೋಹಿತ್‌, ಕೊಹ್ಲಿಯ 2027ರ ವಿಶ್ವಕಪ್‌ ಭವಿಷ್ಯ ನುಡಿದ ಪಠಾಣ್‌!

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಬಗ್ಗೆ ಇರ್ಫಾನ್‌ ಪಠಾಣ್‌ ಮಹತ್ವದ ಸಲಹೆ. -

Profile
Ramesh Kote Jun 5, 2026 4:48 PM

ನವದೆಹಲಿ: ಮುಂಬರುವ 2026ರ ಐಸಿಸಿ ಏಕದಿನ ವಿಶ್ವಕಪ್‌ (ODI World Cup 2026) ಟೂರ್ನಿಯಲ್ಲಿ ಭಾರತ ತಂಡದ ಪರ ಮಾಜಿ ನಾಯಕರಾದ ವಿರಾಟ್‌ ಕೊಹ್ಲಿ (Virat Kohli) ಹಾಗೂ ರೋಹಿತ್‌ ಶರ್ಮಾ (Rohit Sharma) ಆಡಬೇಕೆಂದು ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ (Irfan Pathan) ಆಗ್ರಹಿಸಿದ್ದಾರೆ. ಇದಕ್ಕೆ ಬಲವಾದ ಕಾರಣವನ್ನು ಕೂಡ ವಿವರಿಸಿದ್ದಾರೆ. ಈ ಇಬ್ಬರೂ ಹಿರಿಯ ಆಟಗಾರರ ಡ್ರೆಸ್ಸಿಂಗ್‌ ರೂಂನಲ್ಲಿನ ಉಪಸ್ಥಿತಿ ಹೆಚ್ಚಿನ ಮೌಲ್ಯವನ್ನು ತಂದುಕೊಡುತ್ತದೆ ಎಂದು ಅವರು ಹೇಳಿದ್ದಾರೆ.

ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಏಕದಿನ ಸೇರಿದಂತೆ ಸೀಮಿತ ಓವರ್‌ಗಳ ಕ್ರಿಕೆಟ್ ಇತಿಹಾಸದಲ್ಲೇ ಶ್ರೇಷ್ಠ ಆಟಗಾರರಾಗಿದ್ದಾರೆ ಆದರೆ, ಈ ಇಬ್ಬರೂ ತಮ್ಮ ಅದ್ಭುತ ಕ್ರಿಕೆಟ್ ವೃತ್ತಿಜೀವನದ ಅಂತಿಮ ಹಂತದಲ್ಲಿದ್ದಾರೆ. ಮುಂದಿನ ವರ್ಷ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಪ್ರತಿಷ್ಠಿತ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು, ಏಕದಿನ ಕ್ರಿಕೆಟ್‌ನಲ್ಲಿ ಅವರ ಭವಿಷ್ಯದ ಕುರಿತು ನಿರಂತರ ಊಹಾಪೋಹಗಳು ಕೇಳಿಬರುತ್ತಿವೆ.

IND vs AFG: ರಾಹುಲ್‌-ಜೈಸ್ವಾಲ್‌ ಓಪನರ್ಸ್‌, ಏಕೈಕ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಬೌನ್ಸ್‌ ಪಿಚ್‌ಗಳನ್ನು ರೋಹಿತ್‌ ಶರ್ಮಾ ಉತ್ತಮ

ಈ ಹಿನ್ನೆಲೆಯಲ್ಲಿ, ಭಾರತದ ಪ್ರಸ್ತುತ ತಂಡದಲ್ಲಿ ಈ ಇಬ್ಬರು ಹಿರಿಯ ಆಟಗಾರರ ಸ್ಥಾನಮಾನ ಕುರಿತು ಇರ್ಫಾನ್‌ ಪಠಾಣ್‌ ಅವರನ್ನು ಪ್ರಶ್ನಿಸಲಾಯಿತು. ರೋಹಿತ್ ಶರ್ಮಾ ಕುರಿತು ಮಾತನಾಡಿದ ಪಠಾಣ್, ವೇಗದ ಬೌಲಿಂಗ್‌ ವಿರುದ್ಧ ರೋಹಿತ್ ಅವರ ಆಟ ಅತ್ಯಂತ ಪರಿಣಾಮಕಾರಿಯಾಗಿದ್ದು, ದಕ್ಷಿಣ ಆಫ್ರಿಕಾದ ಬೌನ್ಸ್ ಮತ್ತು ವೇಗಕ್ಕೆ ಅನುಕೂಲಕರವಾದ ಪಿಚ್‌ಗಳಿಗೆ ಅವರ ಬ್ಯಾಟಿಂಗ್ ಶೈಲಿ ಚೆನ್ನಾಗಿ ಹೊಂದಿಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.

“ರೋಹಿತ್ ಶರ್ಮಾ ಅವರ ವಿಶೇಷ ಸಾಮರ್ಥ್ಯ ಏನು ಗೊತ್ತೇ? ಅವರು ಶಾರ್ಟ್‌ಪಿಚ್ ಎಸೆತಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಎದುರಿಸುತ್ತಾರೆ. ಕಟ್ ಮತ್ತು ಪುಲ್ ಶಾಟ್‌ಗಳು ಅವರ ಪ್ರಮುಖ ಬಲ. ಶಾರ್ಟ್ ಬಾಲ್‌ಗಳ ವಿರುದ್ಧ ಅವರು ಸುಲಭವಾಗಿ ಸಮಯ ಹೊಂದಿಸಿಕೊಂಡು ರನ್ ಗಳಿಸುತ್ತಾರೆ. ದಕ್ಷಿಣ ಆಫ್ರಿಕಾದಲ್ಲೂ ಇದೇ ರೀತಿಯ ಪರಿಸ್ಥಿತಿಗಳು ಎದುರಾಗಲಿವೆ. ಹೊಸ ಚೆಂಡಿನೊಂದಿಗೆ ಸ್ವಿಂಗ್‌ ಖಂಡಿತವಾಗಿಯೂ ಇರುತ್ತದೆ. ಆದರೆ ಅಲ್ಲಿನ ಪಿಚ್‌ಗಳಲ್ಲಿ ಉತ್ತಮ ಬೌನ್ಸ್ ಕೂಡ ದೊರೆಯುತ್ತದೆ. ಆ ಬೌನ್ಸ್‌ನ ಪ್ರಯೋಜನವನ್ನು ರೋಹಿತ್ ಶರ್ಮಾ ಅವರಿಗಿಂತ ಉತ್ತಮವಾಗಿ ಮತ್ತಾರು ಪಡೆದುಕೊಳ್ಳಬಲ್ಲರು?” ಎಂದು ಪಠಾಣ್‌ ಪ್ರತಿಕ್ರಿಯಿಸಿದರು.

IND vs AFG: ಟೆಸ್ಟ್‌ ಕ್ರಿಕೆಟ್‌ನಲ್ಲಿ ನೂತನ ದಾಖಲೆಯ ಸನಿಹದಲ್ಲಿ ರಿಷಭ್‌ ಪಂತ್‌!

ವಿರಾಟ್‌ ಕೊಹ್ಲಿ ಅತ್ಯುತ್ತಮ ರನ್‌ ಚೇಸರ್‌

ಇನ್ನು ವಿರಾಟ್ ಕೊಹ್ಲಿ ಕುರಿತು ಮಾತನಾಡಿದ ಭಾರತದ ಮಾಜಿ ವೇಗದ ಬೌಲರ್, ಬಲಗೈ ಬ್ಯಾಟರ್ ಅಪಾರ ಅನುಭವವನ್ನು ತಂಡಕ್ಕೆ ತಂದುಕೊಡುತ್ತಾರೆ ಮತ್ತು ಒತ್ತಡದ ಸಂದರ್ಭಗಳಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

“ವಿರಾಟ್ ಕೊಹ್ಲಿ ತಂಡಕ್ಕೆ ಏನು ತರುತ್ತಾರೆ ಗೊತ್ತೇ? ಅವರು ತಮ್ಮ ಅಪಾರ ಅನುಭವವನ್ನು ತರುತ್ತಾರೆ. ಏಕದಿನ ಕ್ರಿಕೆಟ್‌ನಲ್ಲಿ ಗುರಿ ಬೆನ್ನಟ್ಟುವಲ್ಲಿ ಅವರಿಗಿಂತ ಉತ್ತಮ ಆಟಗಾರ ಮತ್ತೊಬ್ಬರಿಲ್ಲ. ಅವರ ಅಂಕಿಅಂಶಗಳೇ ಅದನ್ನು ಸಾಬೀತುಪಡಿಸುತ್ತವೆ.

ಒಂದು ವೇಳೆ ಆರಂಭದಲ್ಲೇ ವಿಕೆಟ್ ಪತನವಾದರೆ, ಮೂರನೇ ಕ್ರಮಾಂಕದಲ್ಲಿ ಅವರ ಅನುಭವ ತಂಡಕ್ಕೆ ಬಹಳ ಉಪಯುಕ್ತವಾಗುತ್ತದೆ. ಅವರು ಪರಿಸ್ಥಿತಿಗೆ ತಕ್ಕಂತೆ ಎಚ್ಚರಿಕೆಯಿಂದ ಬ್ಯಾಟ್‌ ಮಾಡುವುದರ ಜೊತೆಗೆ ದೀರ್ಘ ಇನಿಂಗ್ಸ್ ಕಟ್ಟುವ ಸಾಮರ್ಥ್ಯ ಹೊಂದಿದ್ದಾರೆ. ದಕ್ಷಿಣ ಆಫ್ರಿಕಾದಂತಹ ಪರಿಸ್ಥಿತಿಗಳಲ್ಲಿ ಇಂತಹ ಗುಣಗಳು ಅತ್ಯಗತ್ಯ,” ಎಂದು ಪಠಾಣ್ ಹೇಳಿದ್ದಾರೆ.‌