ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಆರ್‌ಸಿಬಿ ಸಕ್ಸಸ್‌ನಲ್ಲಿ ರಜತ್‌ ಪಾಟಿದಾರ್‌ ಪಾತ್ರವನ್ನು ತಿಳಿಸಿದ ಸಚಿನ್‌ ತೆಂಡೂಲ್ಕರ್‌!

IPL 2026: 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸಕ್ಸಸ್‌ನಲ್ಲಿ ರಜತ್‌ ಪಾಟಿದಾರ್‌ ಅವರ ಪಾತ್ರವನ್ನು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ವಿವರಿಸಿದ್ದಾರೆ. ಮೇ 31 ರಂದು ಗುಜರಾತ್‌ ಟೈಟನ್ಸ್‌ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್‌ ಗೆಲುವು ಪಡೆಯುವ ಮೂಲಕ ಎರಡನೇ ಬಾರಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ಆರ್‌ಸಿಬಿ ಸಕ್ಸಸ್‌ನಲ್ಲಿ ರಜತ್‌ ಪಾಟಿದಾರ್‌ ಪಾತ್ರವನ್ನು ವಿವರಿಸಿದ ಸಚಿನ್‌!

ರಜತ್‌ ಪಾಟಿದಾರ್‌ ನಾಯಕತ್ವಕ್ಕೆ ಸಚಿನ್‌ ತೆಂಡೂಲ್ಕರ್‌ ಮೆಚ್ಚುಗೆ. -

Profile
Ramesh Kote Jun 3, 2026 4:02 PM

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ ಟೂರ್ನಿಯಲ್ಲಿ (IPL 2026) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ (RCB) ಪ್ರದರ್ಶನದಲ್ಲಿ ರಜತ್‌ ಪಾಟಿದಾರ್‌ (Rajat Patidar) ಅವರ ಪಾತ್ರವನ್ನು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ (Sachin Tendulkar) ಶ್ಲಾಘಿಸಿದ್ದಾರೆ. ಮೇ 31 ರಂದು ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ಎದುರಿನ ಪಂದ್ಯದಲ್ಲಿ 5 ವಿಕೆಟ್‌ಗಳ ಗೆಲುವಿನ ಬಳಿಕ ಆರ್‌ಸಿಬಿ ಎರಡನೇ ಬಾರಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ರಜತ್‌ ಪಾಟಿದಾರ್‌ ಅವರ ನಾಯಕತ್ವದಲ್ಲಿ ಸತತ ಎರಡನೇ ಬಾರಿ ಐಪಿಎಲ್‌ ಟ್ರೋಫಿಯನ್ನು ಗೆದ್ದು ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳನ್ನು ಒಳಗೊಂಡ ಎಲೈಟ್‌ ಲಿಸ್ಟ್‌ಗೆ ಆರ್‌ಸಿಬಿ ಸೇರ್ಪೆಡೆಯಾಗಿತ್ತು.

ರಜತ್‌ ಪಾಟಿದಾರ್‌ ಅವರ ನಾಯಕತ್ವ ಶೈಲಿಯನ್ನು ಶ್ಲಾಘಿಸಿದ ಸಚಿನ್‌ ತೆಂಡೂಲ್ಕರ್‌, ತಂಡದ ಪ್ರತಿಯೊಬ್ಬ ಆಟಗಾರನು ಜವಾಬ್ದಾರಿಯನ್ನು ಹೊತ್ತುಕೊಳ್ಳುವಂತಹ ವಾತಾವರಣವನ್ನು ಅವರು ನಿರ್ಮಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು. ನಾಯಕತ್ವ ಮತ್ತು ವೈಯಕ್ತಿಕ ಕೊಡುಗೆಗಳ ನಡುವಿನ ಸಮತೋಲನವನ್ನು ಪಾಟಿದಾರ್ ಯಶಸ್ವಿಯಾಗಿ ಸಾಧಿಸಿದ್ದಾರೆ ಎಂದು ಹೇಳಿದರು.

IPL 2026: ಟೂರ್ನಿಯ ಎರಡನೇ ಅವಧಿಯಲ್ಲಿ ಪಂಜಾಬ್‌ ಕಿಂಗ್ಸ್‌ ವೈಫಲ್ಯಕ್ಕೆ ಕಾರಣ ತಿಳಿಸಿದ ಸಚಿನ್‌ ತೆಂಡೂಲ್ಕರ್‌!

ರಜತ್‌ ಪಾಟಿದಾರ್‌ ನಾಯಕತ್ವಕ್ಕೆ ಸಚಿನ್‌ ಮೆಚ್ಚುಗೆ

"ಯಶಸ್ವಿ ತಂಡಗಳು ಸಾಮಾನ್ಯವಾಗಿ ಒಂದು ಟೂರ್ನಿಯ ಅವಧಿಯಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ರೂಪಿಸಿಕೊಳ್ಳುತ್ತವೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಗುರುತು ಪರಸ್ಪರ ಜವಾಬ್ದಾರಿಯನ್ನು ಹಂಚಿಕೊಳ್ಳುವ ಸಂಸ್ಕೃತಿಯ ಸುತ್ತ ನಿರ್ಮಾಣವಾಗಿರುವಂತೆ ಕಂಡಿತು. ರಜತ್‌ ಪಾಟಿದಾರ್‌ ಆರಂಭದಿಂದ ಅಂತ್ಯದವರೆಗೆ ಮುಂಚೂಣಿಯಲ್ಲಿ ನಿಂತು ನಾಯಕತ್ವ ವಹಿಸಿದ್ದರು. ಆದರೆ ಅದಕ್ಕಿಂತ ಮುಖ್ಯವಾಗಿ, ಇತರ ಆಟಗಾರರೂ ಅದೇ ರೀತಿಯಲ್ಲಿ ಜವಾಬ್ದಾರಿ ಹೊತ್ತು ಪ್ರದರ್ಶನ ನೀಡುವಂತಹ ವಾತಾವರಣವನ್ನು ಅವರು ಸೃಷ್ಟಿಸಿದರು. ನಾಯಕತ್ವ ಮತ್ತು ವೈಯಕ್ತಿಕ ಕೊಡುಗೆಗಳ ನಡುವಿನ ಈ ಸಮತೋಲನವೇ ತಂಡವು ಮತ್ತೊಮ್ಮೆ ಫೈನಲ್ ತಲುಪಲು ಪ್ರಮುಖ ಕಾರಣವಾಗಿತ್ತು," ಎಂದು ಸಚಿನ್‌ ತೆಂಡೂಲ್ಕರ್‌ ಅವರು ರೆಡಿಟ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಆಫ್ಘಾನ್‌ ಟೆಸ್ಟ್ ಪಂದ್ಯಕ್ಕೆ ಮೊಹಮ್ಮದ್ ಸಿರಾಜ್ ಅನುಮಾನ; ಔಕಿಬ್ ನಬಿ ತಂಡ ಸೇರ್ಪಡೆ ಸಾಧ್ಯತೆ

501 ರನ್‌ ಬಾರಿಸಿದ ರಜತ್‌ ಪಾಟಿದಾರ್‌

ರಜತ್‌ ಪಾಟಿದಾರ್‌ ಅವರು ನಾಯಕನಾಗಿ ಮಾತ್ರವಲ್ಲದೆ, ಒಬ್ಬ ಬ್ಯಾಟ್ಸ್‌ಮನ್‌ ಆಗಿಯೂ ಅತ್ಯಂತ ಯಶಸ್ವಿಯಾಗಿದಾರೆ. ಅವರು 14 ಇನಿಂಗ್ಸ್‌ಗಳಲ್ಲಿ 192.69ರ ಅದ್ಭುತ ಸ್ಟ್ರೈಕ್‌ರೇಟ್‌ನೊಂದಿಗೆ 501 ರನ್‌ಗಳನ್ನು ಕಲೆಹಾಕಿದರು.33 ವರ್ಷದ ಪಾಟಿದಾರ್, ಧರ್ಮಶಾಲಾದಲ್ಲಿ ನಡೆದಿದ್ದ ಗುಜರಾತ್‌ ಟೈಟನ್ಸ್ ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೇವಲ 33 ಎಸೆತಗಳಲ್ಲಿ 93 ರನ್‌ಗಳ ಸ್ಫೋಟಕ ಇನಿಂಗ್ಸ್ ಆಡಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಈ ಪ್ರದರ್ಶನದ ಮೂಲಕ ಪಾಟಿದಾರ್, ಭಾರತದ ಟಿ20 ತಂಡಕ್ಕೆ ಆಯ್ಕೆಯಾಗುವ ಸಂಬಂಧ ಆಯ್ಕೆದಾರರಿಗೆ ಬಲವಾದ ಸಂದೇಶವನ್ನು ರವಾನಿಸಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿರುವ ಅವರು ಇನ್ನೂ ಭಾರತದ ಪರ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿಲ್ಲ. ಇದುವರೆಗೆ ಅವರು ಭಾರತದ ಪರ ಕೇವಲ ಒಂದು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದಾರೆ.

ಭಾರತದ ಐತಿಹಾಸಿಕ ನ್ಯೂಜಿಲೆಂಡ್ ಪ್ರವಾಸದ ವೇಳಾಪಟ್ಟಿ ಪ್ರಕಟ

ಎಂಎಸ್‌ ಧೋನಿ ಒಳಗೊಂಡ ಎಲೈಟ್‌ ಲಿಸ್ಟ್‌ಗೆ ಸೇರಿದ ರಜತ್‌

ನಾಯಕನಾಗಿ ಪಾಟಿದಾರ್ ಮತ್ತೊಂದು ವಿಶೇಷ ಸಾಧನೆಯನ್ನೂ ಮಾಡಿದ್ದಾರೆ. ಐಪಿಎಲ್ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡ ಮೂರನೇ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದು, ಈ ಸಾಧನೆಯನ್ನು ಈ ಹಿಂದೆ ಎಂಎಸ್‌ ಧೋನಿ ಮತ್ತು ರೋಹಿತ್‌ ಶರ್ಮಾ ಮಾತ್ರ ಮಾಡಿದ್ದರು. ಜೊತೆಗೆ, ಒಂದಕ್ಕಿಂತ ಹೆಚ್ಚು ಬಾರಿ ಐಪಿಎಲ್ ಟ್ರೋಫಿ ಗೆದ್ದ ನಾಲ್ಕನೇ ನಾಯಕ ಎಂಬ ದಾಖಲೆಯನ್ನೂ ಅವರು ಬರೆದಿದ್ದಾರೆ. ಈ ಪಟ್ಟಿಯಲ್ಲಿ ಧೋನಿ, ರೋಹಿತ್ ಶರ್ಮಾ ಹಾಗೂ ಗೌತಮ್‌ ಗಂಭಿರ್‌ ಸೇರಿದ್ದಾರೆ.