ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS: ಸಿರಾಜ್‌-ಲಬುಶೇನ್‌ ಮಧ್ಯೆ 'ಬೆಲ್ಸ್‌ ವಾರ್‌'; ವಿಡಿಯೊ ವೈರಲ್‌

IND vs AUS: ಟೆಸ್ಟ್ ಕ್ರಿಕೆಟ್​ನಲ್ಲಿ ಈ ರೀತಿಯ ಬೇಲ್ಸ್ ಬದಲಾವಣೆಯ ಟ್ರಿಕ್ ಪರಿಚಯಿಸಿದ್ದು ಇಂಗ್ಲೆಂಡ್ ತಂಡದ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್. ಎದುರಾಳಿ ತಂಡದ ವಿಕೆಟ್ ಬೀಳದಿದ್ದಾಗ ಬ್ರಾಡ್ ಬೇಲ್ಸ್ ಅನ್ನು ಅದಲು ಬದಲು ಮಾಡಿ ಬೌಲಿಂಗ್ ಮಾಡುತ್ತಿದ್ದರು. ಅವರು ಈ ರೀತಿ ಬೇಲ್ಸ್‌ ಬದಲಿಸಿದಾಗಲೆಲ್ಲ ವಿಕೆಟ್‌ ಪತನಗೊಂಡಿದೆ.

Abhilash BC Abhilash BC Dec 15, 2024 8:47 PM
ಬ್ರಿಸ್ಬೇನ್: ಆಸ್ಟ್ರೇಲಿಯಾ ಮತ್ತು ಭಾರತ(IND vs AUS) ನಡುವಣ ಮೂರನೇ ಪಂದ್ಯದ ದ್ವಿತೀಯ ದಿನದಾಟದಲ್ಲಿ ವೇಗಿ ಮೊಹಮ್ಮದ್‌ ಸಿರಾಜ್‌(Mohammed Siraj) ಮತ್ತು ಮಾರ್ನಸ್‌ ಲಬುಶೇನ್‌(Marnus Labuschagne) ನಡೆಸಿದ ಬೆಲ್ಸ್‌ ವಾರ್‌ನ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.
ಅತ್ಯಂತ ತಾಳ್ಮೆಯುತ ಬ್ಯಾಟಿಂಗ್‌ ಮೂಲಕ ಭಾರತೀಯ ಬೌಲರ್‌ಗಳನ್ನು ಬೆವರಿಳಿಸುತ್ತಿದ್ದ ಮಾರ್ನಸ್‌ ಲಬುಶೇನ್‌ ಮತ್ತು ಸಿರಾಜ್‌ ಮಧ್ಯೆ ಮಾತಿನ ಯುದ್ಧ ನಡೆಯುತ್ತಲೇ ಇತ್ತು. ಲಬುಶೇನ್‌ 50 ಎಸೆತಗಳಿಂದ 10 ರನ್‌ ಗಳಿಸಿದ್ದ ವೇಳೆ ಬೌಲಿಂಗ್‌ ನಡೆಸುತ್ತಿದ್ದ ಸಿರಾಜ್‌ ಮೈಂಡ್‌ ಗೇಮ್‌ ಮಾಡುವ ನಿಟ್ಟಿನಲ್ಲಿ ನೇರವಾಗಿ ಸ್ಟಂಪ್‌ ಬಳಿ ಬಂದು ಬೇಲ್ಸ್ ಅನ್ನು ಅದಲು ಬದಲು ಮಾಡಿ ಬೌಲಿಂಗ್ ಮಾಡಲು ಮುಂದಾದರು.
ಸಿರಾಜ್‌ ಬೇಲ್ಸ್‌ ಅದಲು ಬದಲು ಮಾಡಿ ತೆರಳಿದ ತಕ್ಷಣ ಮಾರ್ನಸ್ ಲಾಬುಶೇನ್ ಮತ್ತೆ ಬೇಲ್ಸ್‌ ತೆಗೆದು ಮೊದಲ ಇದ್ದ ರೀತಿಯಲ್ಲೇ ಜೋಡಿಸಿದರು. ಆದರೆ ಇದನ್ನು ಸಿರಾಜ್ ಗಮನಿಸಿರಲಿಲ್ಲ. ಅಚ್ಚರಿ ಎಂದರೆ ಈ ಬೇಲ್ಸ್ ಬದಲಿಯಾಟ ಮುಂದಿನ ಓವರ್‌ನಲ್ಲೇ ಲಬುಶೇನ್ ಅವರು ವಿಕೆಟ್‌ ಕಳೆದುಕೊಂಡರು. ಈ ವಿಕೆಟ್‌ ನಿತೀಶ್‌ ರೆಡ್ಡಿ ಪಾಲಾಯಿತು. ಸದ್ಯ ಲಾಬುಶೇನ್ ಹಾಗೂ ಸಿರಾಜ್ ನಡುವಣ ಬೇಲ್ಸ್ ಬದಲಾಟದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://twitter.com/7Cricket/status/1868105369328701612
ಟೆಸ್ಟ್ ಕ್ರಿಕೆಟ್​ನಲ್ಲಿ ಈ ರೀತಿಯ ಬೇಲ್ಸ್ ಬದಲಾವಣೆಯ ಟ್ರಿಕ್ ಪರಿಚಯಿಸಿದ್ದು ಇಂಗ್ಲೆಂಡ್ ತಂಡದ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್. ಎದುರಾಳಿ ತಂಡದ ವಿಕೆಟ್ ಬೀಳದಿದ್ದಾಗ ಬ್ರಾಡ್ ಬೇಲ್ಸ್ ಅನ್ನು ಅದಲು ಬದಲು ಮಾಡಿ ಬೌಲಿಂಗ್ ಮಾಡುತ್ತಿದ್ದರು. ಅವರು ಈ ರೀತಿ ಬೇಲ್ಸ್‌ ಬದಲಿಸಿದಾಗಲೆಲ್ಲ ವಿಕೆಟ್‌ ಪತನಗೊಂಡಿದೆ. ಇದೇ ಉಪಾಯವನ್ನು ಸಿರಾಜ್‌ ಕೂಡ ಇಲ್ಲಿ ಪ್ರಯೋಗಿಸಿದರು.
ಬೃಹತ್‌ ಮೊತ್ತದತ್ತ ಆಸೀಸ್‌
ಟ್ರಾವಿಸ್ ಹೆಡ್(152 ) ಮತ್ತು ಸ್ವೀವನ್‌ ಸ್ಮಿತ್(101) ಬಾರಿಸಿದ ಅಮೋಘ ಶತಕದ ನೆರೆವಿನಿಂದ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಬೃಹತ್‌ ಮೊತ್ತದತ್ತ ದಾಪುಗಾಲಿಕ್ಕಿದೆ. ದ್ವಿತೀಯ ದಿನದಾಟದ ಅಂತ್ಯಕ್ಕೆ 7 ವಿಕೆಟ್‌ಗೆ 405 ರನ್‌ ಬಾರಿಸಿದೆ. ಸದ್ಯ ಅಲೆಕ್ಸ್‌ ಕ್ಯಾರಿ(45) ಮತ್ತು ಮಿಚೆಲ್‌ ಸ್ಟಾರ್ಕ್‌(7) ರನ್‌ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.