IND vs ENG: ಎಂಎಸ್ ಧೋನಿಯ ಟೆಸ್ಟ್ ಸಿಕ್ಸರ್‌ಗಳ ದಾಖಲೆ ಮುರಿದ ರಿಷಭ್ ಪಂತ್!
Rishabh Pant breaks MS Dhoni's Record: ಇಂಗ್ಲೆಂಡ್ ವಿರುದ್ದ ಪ್ರಸ್ತುತ ನಡೆಯುತ್ತಿರುವ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಭಾರತ ತಂಡದ ಉಪ ನಾಯಕ ರಿಷಭ್ ಪಂತ್, ಹಲವು ದಾಖಲೆಗಳನ್ನು ಮುರಿದಿದ್ದಾರೆ. ಇದರಲ್ಲಿ ಮಾಜಿ ನಾಯಕ ಎಂಎಸ್ ಧೋನಿಯ ಹಲವು ದಾಖಲೆಗಳನ್ನು ಮುರಿದ್ದಾರೆ.

ಎಂಎಸ್ ಧೋನಿಯ ಸಿಕ್ಸರ್ ದಾಖಲೆ ಮುರಿದ ರಿಷಭ್ ಪಂತ್.

ಲೀಡ್ಸ್: ಇಂಗ್ಲೆಂಡ್ ವಿರುದ್ದ ಪ್ರಸ್ತುತ ನಡೆಯುತ್ತಿರುವ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯ (IND vs ENG) ಮೊದಲನೇ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತ ತಂಡದ ಉಪ ನಾಯಕ ರಿಷಭ್ ಪಂತ್ (Rishabh Pant) ಹಲವು ದಾಖಲೆಗಳನ್ನು ಬರೆದಿದ್ದಾರೆ. ಭಾರತೀಯ ವಿಕೆಟ್ ಕೀಪರ್ ಆಗಿ ಏಳು ಶತಕಗಳನ್ನು ಸಿಡಿಸುವ ಮೂಲಕ ಮಾಜಿ ನಾಯಕ ಎಂಎಸ್ ಧೋನಿಯನ್ನು (MS Dhoni) ಹಿಂದಿಕ್ಕಿದ್ದಾರೆ. ಇದರ ಜೊತೆಗೆ ಅವರು ಟೆಸ್ಟ್ ಸಿಕ್ಸರ್‌ಗಳಲ್ಲಿಯೂ ಕೂಡ ತಮ್ಮ ಗುರು ಎಂಎಸ್ ಧೋನಿಯ ದಾಖಲೆಯನ್ನು ರಿಷಭ್ ಪಂತ್ ಮುರಿದಿದ್ದಾರೆ.
ಶನಿವಾರ ಅಜೇಯ 65 ರನ್‌ಗಳಿಂದ ಎರಡನೇ ದಿನದಾಟವನ್ನು ಆರಂಭಿಸಿದ ರಿಷಭ್ ಪಂತ್ ತಮ್ಮ ಟೆಸ್ಟ್ ವೃತ್ತಿ ಜೀವನದ ಏಳನೇ ಶತಕವನ್ನು ಪೂರ್ಣಗೊಳಿಸಲು ಹೆಚ್ಚು ಸಮಯವನ್ನು ತೆಗೆದುಕೊಂಡಿಲ್ಲ. ಅವರು 146 ಎಸೆತಗಳಲ್ಲಿ ಮೂರಂಕಿ ವೈಯಕ್ತಿಕ ಮೊತ್ತವನ್ನು ಪೂರ್ಣಗೊಳಿಸಿದರು. ಅವರು ಸಿಕ್ಸರ್ ಬಾರಿಸುವ ಮೂಲಕ ಸೆಂಚುರಿಯನ್ನು ಪೂರ್ಣಗೊಳಿಸಿದರು. ಆ ಮೂಲಕ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಸಿಡಿಸಿದ ಭಾರತೀಯ ವಿಕೆಟ್ ಕೀಪರ್‌ಗಳ ಸಾಲಿನಲ್ಲಿ ಎಂಎಸ್ ಧೋನಿಯನ್ನು (6 ಶತಕ) ಅವರನ್ನು ಪಂತ್ ಹಿಂದಿಕ್ಕಿದರು. ಅಲ್ಲದೆ, ಅತಿ ಹೆಚ್ಚು ಶತಕಗಳನ್ನು ಬಾರಿಸಿದ ವಿಶ್ವದ ನಾಲ್ಕನೇ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ. ಬಿಜೆ ವ್ಯಾಟ್ಲಿಂಗ್, ಮ್ಯಾಟ್ ಪ್ರಿಯರ್, ಎಬಿ ಡಿವಿಲಿಯರ್ಸ್ ಹಾಗೂ ಕುಮಾರ ಸಂಗಕ್ಕಾರ ಈ ಪಟ್ಟಿಯಲ್ಲಿದ್ದಾರೆ.
IND vs ENG: ಶುಭಮನ್ ಗಿಲ್ ಶತಕ ಸಿಡಿಸುತ್ತಿದ್ದಂತೆ ಯೂಟರ್ನ್ ಹೊಡೆದ ಸಂಜಯ್ ಮಾಂಜ್ರೇಕರ್!
ಎಂಎಸ್ ಧೋನಿಯ ಸಿಕ್ಸರ್ ದಾಖಲೆ ಮುರಿದ ರಿಷಭ್ ಪಂತ್
ಶತಕದ ದಾಖಲೆಯ ಜೊತೆಗೆ ರಿಷಭ್ ಪಂತ್ ಟೆಸ್ಟ್ ಸಿಕ್ಸರ್‌ಗಳ ಪಟ್ಟಿಯಲ್ಲಿ ಎಂಎಸ್ ಧೋನಿಯನ್ನು ಹಿಂದಿಕ್ಕಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಎಂಎಸ್ ಧೋನಿಯನ್ನು ಉಪ ನಾಯಕ ಹಿಂದಿಕ್ಕಿದ್ದಾರೆ. ಎಂಎಸ್ ಧೋನಿ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 78 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಪಂದ್ಯಕ್ಕೂ ಮುನ್ನ ಪಂತ್ 73 ಸಿಕ್ಸರ್‌ಗಳನ್ನು ಹೊಂದಿದ್ದರು. ಆದರೆ, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ವಿಕೆಟ್ ಕೀಪರ್ 6 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಒಟ್ಟು 79ಕ್ಕೆ ಏರಿಸಿಕೊಂಡಿದ್ದಾರೆ. ಅವರು ಇನ್ನೊಂದು ಸಿಕ್ಸರ್ ಸಿಡಿಸಿದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ 80 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸಸ್‌ಗಳನ್ನು ಸಿಡಿಸಿದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ. ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ವೀರೇಂದ್ರ ಸೆಹ್ವಾಗ್ ಮತ್ತು ರೋಹಿತ್ ಶರ್ಮಾ ಅವರು ಈ ದಾಖಲೆಯನ್ನು ಬರೆದಿದ್ದಾರೆ.
HUNDRED for Vice-captain Rishabh Pant! 🫡
— BCCI (@BCCI) June 21, 2025
His 7th TON in Test cricket 👏👏
4⃣0⃣0⃣ up for #TeamIndia in the 1st innings 👌👌
Updates ▶️ https://t.co/CuzAEnBkyu#ENGvIND | @RishabhPant17 pic.twitter.com/IowAP2df6L
134 ರನ್ ಬಾರಿಸಿದ ರಿಷಭ್ ಪಂತ್
ಪಂದ್ಯದ ಮೊದಲನೇ ದಿನ ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ರಿಷಭ್ ಪಂತ್, ಬ್ಯಾಝ್‌ಬಾಲ್ ಆಟವನ್ನು ಆಡಿದ್ದರು. ಅವರು ಮೊದಲನೇ ದಿನ 65 ರನ್‌ಗಳನ್ನು ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಅದರಂತೆ ಎರಡನೇ ದಿನವೂ ಸ್ಪೋಟಕ ಬ್ಯಾಟ್ ಮಾಡಿದ ಅವರು, ಇಂಗ್ಲೆಂಡ್ ಬೌಲರ್‌ಗಳಿಗೆ ಬೆವರಿಳಿಸಿದರು. ಅವರು ಆಡಿದ 178 ಎಸೆತಗಳಲ್ಲಿ ಬರೋಬ್ಬರಿ 6 ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ 134 ರನ್ ಗಳಿಸಿದರು. ಆ ಮೂಲಕ ಭಾರತ ತಂಡದ ಮೊತ್ತವನ್ನು 450 ಗಡಿ ದಾಟಿಸಿ ವಿಕೆಟ್ ಒಪ್ಪಿಸಿದ್ದರು.