IND vs ENG: ರಿಷಭ್ ಪಂತ್ ಔಟ್! ವಿಕೆಟ್ ಕೀಪರ್ ಆಗಿ ಮೊದಲನೇ ಟೆಸ್ಟ್ ಆಡಲಿರುವ ಧ್ರುವ್ ಜುರೆಲ್?
ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯು ಜೂನ್ 20 ರಂದು ಆರಂಭವಾಗಲಿದೆ. ಈ ಟೆಸ್ಟ್ ಸರಣಿಯಲ್ಲಿ ಯಾವ ಪ್ಲೇಯಿಂಗ್ XIನೊಂದಿಗೆ ಭಾರತ ಕಣಕ್ಕೆ ಇಳಿಯಲಿದೆ ಎಂಬುದು ಇನ್ನೂ ಖಚಿತವಿಲ್ಲ. ಆದರೆ, ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಧ್ರುಬ್ ಜುರೆಲ್, ಔಟ್ ಆಫ್ ಫಾರ್ಮ್ ರಿಷಭ್ ಪಂತ್ ಅವರನ್ನು ಹಿಂದಿಕ್ಕುವ ಸಾಧ್ಯತೆ ಇದೆ.

ಭಾರತ ಎ ಪರ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಧ್ರುವ್ ಜುರೆಲ್.

ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ (IND vs ENG) ಮೊದಲ ಪಂದ್ಯ ಜೂನ್ 20 ರಂದು ಇಂಗ್ಲೆಂಡ್ನ ಹೆಡಿಂಗ್ಲಿಯಲ್ಲಿ ನಡೆಯಲಿದೆ. ಈ ಸರಣಿಯನ್ನು ಆಡಲು ಟೀಮ್ ಇಂಡಿಯಾ, ಇಂಗ್ಲೆಂಡ್ಗೆ ತಲುಪಿದೆ. ಈ ಸರಣಿಯು ಭಾರತೀಯ ತಂಡಕ್ಕೆ ಬಹಳ ವಿಶೇಷವಾಗಲಿದೆ. ಟೀಮ್ ಇಂಡಿಯಾದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಆದ್ದರಿಂದ ಯುವ ಆಟಗಾರರಿಗೆ ಈ ಸರಣಿಯಲ್ಲಿ ಅವಕಾಶ ಸಿಕ್ಕಿದೆ. ಶುಭಮನ್ ಗಿಲ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ರಿಷಭ್ ಪಂತ್ ( Rishabh Pant) ಉಪನಾಯಕರಾಗಿದ್ದಾರೆ. ಇದರ ನಡುವೆ ರಿಷಭ್ ಪಂತ್ ಸದ್ಯ ಫಾರ್ಮ್ನಲ್ಲಿ ಇಲ್ಲದೇ ಇರುವುದರಿಂದ ಧ್ರುವ ಜುರೆಲ್ಗೆ (Dhruv Jurel) ಆಡಲು ಅವಕಾಶ ಸಿಗಬಹುದು.
ಟೀಮ್ ಇಂಡಿಯಾದ ಹೊಸ ಉಪನಾಯಕ ರಿಷಭ್ ಪಂತ್ ಸದ್ಯ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ. ಕಳೆದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಿಷಭ್ ಪಂತ್ ಕೂಡ ನಿರಾಶಾದಾಯಕ ಪ್ರದರ್ಶನವನ್ನು ತೋರಿದ್ದರು. ಆದರೆ, ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಶತಕ ಗಳಿಸಿ ಲಖನೌ ಸೂಪರ್ ತಂಡಕ್ಕೆ ಸಮಾಧಾನವನ್ನು ತಂದಿದ್ದರು. ಆದರೂ ಈ ಪಂದ್ಯದಲ್ಲಿ ಎಲ್ಎಸ್ಜಿ ತಂಡ, ಆರ್ಸಿಬಿ ವಿರುದ್ದ ಸೋಲು ಅನುಭವಿಸಿತ್ತು.
IND vs ENG: ಯಶಸ್ವಿ ಜೈಸ್ವಾಲ್ ಜೊತೆ ಸಾಯಿ ಸುದರ್ಶನ್ ಇನಿಂಗ್ಸ್ ಆರಂಭಿಸಬೇಕೆಂದ ರಿಕಿ ಪಾಂಟಿಂಗ್!
ರಿಷಬ್ ಪಂತ್ ಟೀಮ್ ಇಂಡಿಯಾದ ಉಪನಾಯಕ, ಆದ್ದರಿಂದ ಆರಂಭಿಕ ಟೆಸ್ಟ್ ಪಂದ್ಯಗಳಲ್ಲಿ ಅವರನ್ನು ಆಡುವ 11 ರ ಬಳಗದಿಂದ ಹೊರಗಿಡುವುದು ಕಷ್ಟದ ಸಂಗತಿ. ಆದರೆ ಪಂತ್ ಆರಂಭಿಕ ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ತೋರುವಲ್ಲಿ ವಿಫಲರಾದರೆ, ಆಗ ಧ್ರುವ್ ಜುರೆಲ್ ಅವರನ್ನು ವಿಕೆಟ್ ಕೀಪರ್ ಆಗಿ ಪ್ಲೇಯಿಂಗ್ XIಗೆ ಕರೆ ತರಬಹುದು. ಅಂದ ಹಾಗೆ ಧ್ರುಬ್ ಜುರೆಲ್ ಸದ್ಯ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ.
IND vs ENG: ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಭಾರತದ ಟಾಪ್ 5 ಬ್ಯಾಟರ್ಸ್!
ಉತ್ತಮ ಫಾರ್ಮ್ನಲ್ಲಿರುವ ಜುರೆಲ್
ಧ್ರುವ್ ಜುರೆಲ್ ಅವರನ್ನು ಭಾರತ ತಂಡದಲ್ಲಿ ಸೇರಿಸಲಾಗಿದೆ ಮತ್ತು ಅವರು ಪ್ರಸ್ತುತ ಇಂಗ್ಲೆಂಡ್ನಲ್ಲಿ ಅನಧಿಕೃತ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. ಅಲ್ಲಿ ಅವರು ಮೂರು ಇನಿಂಗ್ಸ್ಗಳಲ್ಲಿ ಮೂರು ಬಾರಿ 50ಕ್ಕೂ ಅಧಿಕ ರನ್ಗಳನ್ನು ಗಳಿಸಿದ್ದಾರೆ. ಸದ್ಯ ಅವರು 199 ರನ್ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಅವರು ಉತ್ತಮ ಫಾರ್ಮ್ನಲ್ಲಿದ್ದಾರೆ ಮತ್ತು ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕವನ್ನು ಚೆನ್ನಾಗಿ ನಿಭಾಯಿಸಬಲ್ಲರು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಪಂತ್ ಉತ್ತಮ ರನ್ ಗಳಿಸದಿದ್ದರೆ, ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಮತ್ತು ಕೋಚ್ ಗೌತಮ್ ಗಂಭೀರ್, ರಿಷಭ್ ಪಂತ್ ಅವರನ್ನು ಆಡುವ 11 ರಿಂದ ಕೈಬಿಡಬಹುದು.