IND vs ENG: ಬೆನ್ ಡಕೆಟ್ ಜತೆ ಮಾತಿನ ಚಕಮಕಿ ನಡೆಸಿದ ಮೊಹಮ್ಮದ್ ಸಿರಾಜ್!
ಲೀಡ್ಸ್‌ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಮೊದಲನೇ ಟೆಸ್ಟ್ ಪಂದ್ಯದ ಐದನೇ ಹಾಗೂ ಅಂತಿಮ ದಿನ ಮೊಹಮ್ಮದ್ ಸಿರಾಜ್ ಹಾಗೂ ಬೆನ್ ಡಕೆಟ್ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಸಾಕಷ್ಟು ಹೈಡ್ರಾಮಾ ನಡೆದಿತ್ತು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಬೆನ್ ಡಕೆಟ್-ಮೊಹಮ್ಮದ್ ಸಿರಾಜ್ ನಡುವೆ ಮಾತಿನ ಚಕಮಕಿ.

ಲೀಡ್ಸ್: ಇಲ್ಲಿನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳ (IND vs ENG) ನಡುವಣ ಮೊದಲನೇ ಟೆಸ್ಟ್ ಪಂದ್ಯದ ಐದನೇ ದಿನ ಹೈಡ್ರಾಮಾ ನಡೆಯಿತು. ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್(Mohammed Siraj) ಹಾಗೂ ಇಂಗ್ಲೆಂಡ್ ಆರಂಭಿಕ ಬೆನ್ ಡಕೆಟ್ (Ben Ducket) ನಡುವೆ ಮಾತಿನ ಚಕಮಕಿ ನಡೆದಿತ್ತು. ಇದಕ್ಕೆ ಸಂಬಂಧಿಸಿದ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಭೋಜನ ವಿರಾಮಕ್ಕೂ ಮುನ್ನ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ಸಮಯವನ್ನು ವ್ಯರ್ಥ ಮಾಡುತ್ತಿದ್ದರು. ಇದರಿಂದ ಸಿರಾಜ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಈ ವೇಳೆ ಸ್ಕ್ರೀನ್ ಹಿಂದೆ ಯಾವುದೇ ಚಲನೆ ಇರಲಿಲ್ಲ. ಆದರೂ ಕ್ರಾವ್ಲಿ ಸಮಯವನ್ನು ವ್ಯರ್ಥ ಮಾಡುವ ಮೂಲಕ ಇನ್ನೊಂದು ಓವರ್ ಮಾಡುವುದನ್ನು ತಪ್ಪಿಸುತ್ತಿದ್ದಾರೆಂದು ಹರ್ಷ್ ಬೋಗ್ಲೆ ಹೇಳಿದ್ದರು.
ಬೆನ್ ಡಕೆಟ್ ಹಾಗೂ ಝ್ಯಾಕ್ ಕ್ರಾವ್ಲಿ ಅವರು ಸಿದ್ದವಾಗಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದ್ದರು. ಭೋಜನ ವಿರಾಮಕ್ಕೂ ಮುನ್ನ ಭಾರತ ತಂಡ ಹಾಗೂ ಮೊಹಮ್ಮದ್ ಸಿರಾಜ್ ಅವರು ಇಂಗ್ಲೆಂಡ್ ಓಪನರ್‌ಗಳಿಗೆ ಮತ್ತೊಂದು ಓವರ್ ನೀಡಲು ಬಯಸಿದ್ದರು. ಆ ಮೂಲಕ ಜಸ್‌ಪ್ರೀತ್ ಬುಮ್ರಾಗೆ ಮತ್ತೊಂದು ಓವರ್ ಕೊಡಬೇಕೆಂದು ಅಂದುಕೊಂಡಿದ್ದರು. ಆದರೆ, ಬೆನ್ ಡಕೆಟ್ ಹಾಗೂ ಝ್ಯಾಕ್ ಕ್ರಾವ್ಲಿ ಅವರು ಭೋಜನ ವಿರಾಮಕ್ಕೆ ತೆರಳುತ್ತಿದ್ದರು.
ENG vs IND: ಟೆಸ್ಟ್‌ನಲ್ಲಿ ಮೊದಲ ಬಾರಿಗೆ ಪಂದ್ಯದಲ್ಲಿ 5 ಶತಕ ದಾಖಲಿಸಿದ ಭಾರತ
30ನೇ ಓವರ್‌ನ ಕೊನೆಯ ಎಸೆತದಲ್ಲಿ ಝ್ಯಾಕ್ ಕ್ರಾವ್ಲಿ ತಡ ಮಾಡುತ್ತಿದ್ದರು ಹಾಗೂ ಸ್ಕ್ರೀನ್ ಕಡೆ ಬೆರಳು ತೋರಿಸಿದ್ದರು. ಈ ವೇಳೆ ಸಿರಾಜ್ ಮತ್ತೊಮ್ಮೆ ಬೌಲ್ ಮಾಡಲು ಹಿಂದಕ್ಕೆ ಮರಳಿದ್ದರು. ಈ ಕೊನೆಯ ಎಸೆತವನ್ನು ಕ್ರಾವ್ಲಿ ಸುರಕ್ಷಿತವಾಗಿ ಆಡಿದ್ದರು. ಇದಾದ ಬಳಿಕ ಅಂಪೈರ್‌ಗಳು ಭೋಜನ ವಿರಾಮಕ್ಕೆ ಸೂಚಿಸಿದರು. ಈ ವೇಳೆ ಆಯಾ ತಂಡದ ಆಟಗಾರರು ಅವರವರ ಡ್ರೆಸ್ಸಿಂಗ್ ರೂಂಗೆ ತೆರಳುವ ಹಾದಿಯಲ್ಲಿದ್ದರು. ಇದರಿಂದ ಸಿರಾಜ್‌ಗೆ ತೃಪ್ತರಾಗಲಿಲ್ಲ ಹಾಗೂ ಇಂಗ್ಲೆಂಡ್ ಓಪನರ್‌ಗಳಿಗೆ ಕೆಲವು ಅಸಮಾಧಾನದ ಮಾತುಗಳನ್ನು ಆಡಿದ್ದರು. ಕೆಎಲ್ ರಾಹುಲ್ ಕೂಡ ಡಕೆಟ್ ಮತ್ತು ಕ್ರಾವ್ಲಿ ಅವರೊಂದಿಗೆ ಮಾತನಾಡಿದ್ದರು.
Mohammed Siraj heated argument with Ben Duckett & Zack Crawley on 5th Day of Ind vs Eng Match pic.twitter.com/s5tij90Zy9
— Sadak Chaps (@republicofgames) June 24, 2025
ಮೊಹಮ್ಮದ್ ಸಿರಾಜ್ ಅವರು ಅಸಮಾಧಾನಗೊಂಡಿದ್ದು ಇದೇ ಮೊದಲೇನಲ್ಲ. ಪ್ರಥಮ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಅವರೊಂದಿಗೆ ಕೂಡ ಮೊಹಮ್ಮದ್ ಸಿರಾಜ್ ಮಾತಿನ ಚಕಮಕಿ ನಡೆಸಿದ್ದರು. ಐದನೇ ದಿನ ಮೊದಲನೇ ಸೆಷನ್‌ನಲ್ಲಿ ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ, ಶಾರ್ದುಲ್ ಠಾಕೂರ್ ಹಾಗೂ ರವೀಂದ್ರ ಜಡೇಜಾ ಅವರಿಂದ ಇಂಗ್ಲೆಂಡ್ ತಂಡದ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ.
The sledging between Mohammed Siraj and Ben Duckett isn't gonna stop soon 😁
— InsideSport (@InsideSportIND) June 24, 2025
📸: JioHotstar#ENGvsIND #MohammedSiraj #BenDuckett #CricketTwitter pic.twitter.com/ppX0PJdpBb
ಬೆನ್ ಡಕೆಟ್ ಶತಕ
ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಬೆನ್ ಡಕೆಟ್ ಹಾಗೂ ಝ್ಯಾಕ್ ಕ್ರಾವ್ಲಿ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಝ್ಯಾಕ್ ಕ್ರಾವ್ಲಿ ಅವರು 126 ಎಸೆತಗಳಲ್ಲಿ 65 ರನ್ ಗಳಿಸಿ ಇಂಗ್ಲೆಂಡ್‌ಗೆ ಉತ್ತಮ ಆರಂಭ ತಂದುಕೊಟ್ಟು ಔಟ್ ಆದರು. ಆದರೆ, ಮತ್ತೊಬ್ಬ ಆರಂಭಿಕ ಬೆನ್ ಡಕೆಟ್ ಅವರು ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದರು. ಅವರು 51 ಓವರ್‌ಗಳ ಹೊತ್ತಿಗೆ 158 ಎಸೆತಗಳಲ್ಲಿ ಅಜೇಯ 143 ರನ್‌ಗಳನ್ನು ಗಳಿಸಿದ್ದಾರೆ ಹಾಗೂ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಇದೀಗ ಇಂಗ್ಲೆಂಡ್ ತಂಡ 52 ಓವರ್‌ಗಳ ಮುಕ್ತಾಯದ ಹೊತ್ತಿಗೆ 2 ವಿಕೆಟ್ ನಷ್ಟಕ್ಕೆ 246 ರನ್‌ಗಳನ್ನು ಗಳಿಸಿದೆ ಹಾಗೂ ಗೆಲ್ಲಲು ಆತಿಥೇಯ ತಂಡಕ್ಕೆ 125 ರನ್‌ಗಳ ಅಗತ್ಯವಿದೆ.