ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻನನ್ನ ಟೆಸ್ಟ್‌ ಸರಾಸರಿ ಬಗ್ಗೆ ಈಗಲೂ ನೋವಿದೆʼ: ಶತಕದ ಹೊರತಾಗಿಯೂ ಕೆಎಲ್‌ ರಾಹುಲ್‌ ಬೇಸರ!

ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯ ಮೊದಲನೇ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ ಶತಕವನ್ನು ಬಾರಿಸಿದರು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಮಾತನಾಡಿದ ಕೆಎಲ್‌ ರಾಹುಲ್‌, ತಮ್ಮ ಟೆಸ್ಟ್‌ ಸರಾಸರಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಆದರೆ, ಅಂಕಿಅಂಶಗಳನ್ನು ನೋಡುವ ಬದಲು ಕ್ರಿಕೆಟ್‌ ಅನ್ನು ಆನಂದಿಸುತ್ತೇನೆಂದು ಹೇಳಿದ್ದಾರೆ.

ಶತಕದ ಹೊರತಾಗಿಯೂ ಬೇಸರ ವ್ಯಕ್ತಪಡಿಸಿದ ಕೆಎಲ್‌ ರಾಹುಲ್‌!

ತಮ್ಮ ಟೆಸ್ಟ್‌ ಸರಾಸರಿ ಬಗ್ಗೆ ಕೆಎಲ್‌ ರಾಹುಲ್‌ ಹೇಳಿಕೆ.

Profile Ramesh Kote Jun 24, 2025 5:03 PM

ಲೀಡ್ಸ್‌: ತಮ್ಮ ಟೆಸ್ಟ್‌ ವೃತ್ತಿ ಜೀವನದ ಬ್ಯಾಟಿಂಗ್‌ ಸರಾಸರಿ ಈಗಲೂ ನೋವುಂಟು ಮಾಡುತ್ತದೆ ಆದರೆ, ಅಂಕಿಅಂಶಗಳ ಕಡೆಗೆ ಗಮನ ಕೊಡುವುದರ ಬದಲಿಗೆ ನನ್ನ ಕ್ರಿಕೆಟ್‌ ಅನ್ನು ನಾನು ಆನಂದಿಸುತ್ತೇನೆಂದು ಭಾರತ ತಂಡದ (India) ಆರಂಭಿಕ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ (KL Rahul) ತಿಳಿಸಿದ್ದಾರೆ. ಕನ್ನಡಿಗ ರಾಹುಲ್‌ ದೀರ್ಘಾವಧಿ ಸ್ವರೂಪದಲ್ಲಿ ಸ್ಥಿರ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದಾರೆ. ಆದರೆ, ಇಂಗ್ಲೆಂಡ್‌ ಇಲ್ಲಿನ ಹೆಡಿಂಗ್ಲೆಯಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್‌ ಪಂದ್ಯದ (IND vs ENG) ದ್ವಿತೀಯ ಇನಿಂಗ್ಸ್‌ನಲ್ಲಿ 137 ರನ್‌ಗಳನ್ನು ದಾಖಲಿಸಿದ್ದರು. ಆ ಮೂಲಕ ಎದುರಾಳಿ ಇಂಗ್ಲೆಂಡ್‌ ತಂಡಕ್ಕೆ 371 ರನ್‌ಗಳ ಗುರಿಯನ್ನು ನೀಡಲು ನೆರವು ನೀಡಿದ್ದರು.

ಪಂದ್ಯದ ನಾಲ್ಕನೇ ದಿನವಾದ ಸೋಮವಾರ ಕೆಎಲ್‌ ರಾಹುಲ್‌ ಸೋಗಸಾದ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಅವರು 137 ರನ್‌ಗಳ ಮೂಲಕ ತಮ್ಮ ಟೆಸ್ಟ್‌ ವೃತ್ತಿ ಜೀವನದ 9ನೇ ಶತಕವನ್ನು ಬಾರಿಸಿದ್ದರು. ಇದು ಅವರ 8ನೇ ವಿದೇಶಿ ಶತಕವಾಗಿದೆ. ಆ ಮೂಲಕ ಭಾರತ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 364 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಸ್ಕೈ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಕೆಎಲ್‌ ರಾಹುಲ್‌, ತಮ್ಮ ಮಾನಸಿಕ ರೂಪಾಂತರ ಮತ್ತು ದೃಷ್ಟಿಕೋನದಲ್ಲಿನ ಬದಲಾವಣೆಯನ್ನು ಪ್ರತಿಬಿಂಬಿಸಿದರು ಹಾಗೂ ಇದು ಆಟದಲ್ಲಿ ಲಯವನ್ನು ಮರುಶೋಧಿಸಲು ಸಹಾಯ ಮಾಡಿದೆ ಎಂದು ಹೇಳಿದ್ದಾರೆ.

ENG vs IND: ಟೆಸ್ಟ್‌ನಲ್ಲಿ ಮೊದಲ ಬಾರಿಗೆ ಪಂದ್ಯದಲ್ಲಿ 5 ಶತಕ ದಾಖಲಿಸಿದ ಭಾರತ

ನನ್ನ ಟೆಸ್ಟ್‌ ಸರಾಸರಿ ಬಗ್ಗೆ ನೋವಿದೆ: ರಾಹುಲ್‌

"ನನ್ನ ಟೆಸ್ಟ್‌ ಸರಾಸರಿಯನ್ನು ನೋಡಿದಾಗ, ಸಹಜವಾಗಿ ನನಗೆ ನೋವಾಗುತ್ತದೆ. ಆದರೆ, ಈ ಹಂತದಲ್ಲಿ ನಾನು ಅಂಕಿಅಂಶಗಳ ಬಗ್ಗೆ ಯೋಚಿಸುವುದಿಲ್ಲ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡದ ಪರ ಆಡಲು ಅವಕಾಶ ಸಿಕ್ಕಾಗಲೆಲ್ಲಾ ನಾನು ನನ್ನ ಆಟವನ್ನು ಆನಂದಿಸುತ್ತೇನೆ ಹಾಗೂ ಪಂದ್ಯದ ಪ್ರಭಾವ ಬೀರಲು ಪ್ರಯತ್ನಿಸುತ್ತೇನೆ. ಇದನ್ನು ನೋಡಿಕೊಂಡೆ ನಾನು ಬೆಳೆದಿದ್ದೇನೆ," ಎಂದು ಕೆಎಲ್‌ ರಾಹುಲ್‌ ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಟೆಸ್ಟ್‌ ಕ್ರಿಕೆಟ್‌ನಲ್ಲಿ ಉತ್ತಮ ಆರಂಭ ಪಡೆದರೂ ಕೆಎಲ್‌ ರಾಹುಲ್‌ ದೊಡ್ಡ ಮೊತ್ತವನ್ನಾಗಿ ಪರಿವರ್ತಿಸದೆ ವಿಫಲರಾಗುತ್ತಿದ್ದಾರೆ. ಈಗ ಮಾನಸಿಕವಾಗಿ ಶಾಂತವಾಗಿದ್ದೇನೆ ಹಾಗೂ ಆಟದ ಅನಿಶ್ಚಿತತೆಗಳನ್ನು ಹೆಚ್ಚು ಒಪ್ಪಿಕೊಳ್ಳುತ್ತಿದ್ದೇನೆಂದು ಅವರು ಹೇಳಿಕೊಂಡಿದ್ದಾರೆ.

IND vs ENG: ʻಪಲ್ಟಿ ಹೊಡೆದು ಸಂಭ್ರಮಿಸಿʼ-ರಿಷಭ್‌ ಪಂತ್‌ಗೆ ಸುನೀಲ್‌ ಗವಾಸ್ಕರ್‌ ಆಗ್ರಹ! ವಿಡಿಯೊ

ಅಂಕಿಅಂಶಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ

"ನಾನು ಈಗ ರನ್ ಗಳಿಸುತ್ತಿದ್ದೇನೆ. ಒಂದು ಕಾಲದಲ್ಲಿ ನಾನು ಉತ್ತಮ ಆರಂಭ ಪಡೆಯುತ್ತಿದ್ದೆ ಆದರೆ ಅವುಗಳನ್ನು ದೊಡ್ಡ ಸ್ಕೋರ್‌ಗಳಾಗಿ ಪರಿವರ್ತಿಸುತ್ತಿರಲಿಲ್ಲ, ವಿಶೇಷವಾಗಿ ಟೆಸ್ಟ್‌ ಕ್ರಿಕೆಟ್‌ನಲ್ಲಿ. ನಾನು ನನ್ನ ಮನಸ್ಸಿನಲ್ಲಿ ಹೆಚ್ಚು ಶಾಂತವಾಗಿದ್ದೇನೆ ಮತ್ತು ಇನ್ನು ಮುಂದೆ ಸಂಖ್ಯೆಗಳನ್ನು ಚೇಸ್‌ ಮಾಡುವುದಿಲ್ಲ. ನಾನು ನನ್ನ ಕ್ರಿಕೆಟ್ ಅನ್ನು ಸಾಧ್ಯವಾದಷ್ಟು ಆನಂದಿಸಲು ಬಯಸುತ್ತೇನೆ," ಎಂದು ಅವರು ತಿಳಿಸಿದ್ದಾರೆ.

ರಿಷಭ್‌ ಪಂತ್‌-ಕೆಎಲ್‌ ರಾಹುಲ್ 195 ರನ್‌ ಜೊತೆಯಾಟ

ಕೆಎಲ್‌ ರಾಹುಲ್‌ ಶತಕವನ್ನು ಬಾರಿಸುವ ಜೊತೆಗೆ ರಿಷಭ್‌ ಪಂತ್‌ ಜೊತೆ ಮುರಿಯದ ನಾಲ್ಕನೇ ವಿಕೆಟ್‌ಗೆ 195 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದ ರಿಷಭ್‌ ಪಂತ್‌ 118 ರನ್‌ಗಳನ್ನು ಬಾರಿಸಿದ್ದರು. ಇವರು ಈ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕವನ್ನು ಬಾರಿಸಿದ್ದಾರೆ.