IND vs ENG: ಲೀಡ್ಸ್ ಟೆಸ್ಟ್ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಸಿಡಿಸಿ ಇತಿಹಾಸ ಬರೆದ ರಿಷಭ್ ಪಂತ್!
Rishabh Pant scored hundred: ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್, ಇಂಗ್ಲೆಂಡ್ ವಿರುದ್ದದ ಮೊದಲನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿಯೂ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ನ ಎರಡೂ ಇನಿಂಗ್ಸ್‌ನಲ್ಲಿ ಶತಕವನ್ನು ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬರೆದಿದ್ದಾರೆ.

ಇಂಗ್ಲೆಂಡ್ ವಿರುದ್ಧ ದ್ವಿತೀಯ ಇನಿಂಗ್ಸ್‌ನಲ್ಲಿಯೂ ಶತಕ ಸಿಡಿಸಿ ಸಂಭ್ರಮಿಸಿದ ರಿಷಭ್ ಪಂತ್.

ಲೀಡ್ಸ್: ಇಂಗ್ಲೆಂಡ್ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದ(IND vs ENG) ದ್ವಿತೀಯ ಇನಿಂಗ್ಸ್‌ನಲ್ಲಿಯೂ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಲೀಡ್ಸ್ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಶತಕವನ್ನು ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ವಿಶ್ವದ ಎರಡನೇ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ರಿಷಭ್ ಪಂತ್ ಬರೆದಿದ್ದಾರೆ. ಆ ಮೂಲಕ ಜಿಂಬಾಬ್ವೆ ಮಾಜಿ ವಿಕೆಟ್ ಕೀಪರ್ ಆಂಡಿ ಫ್ಲವರ್ (Andy Flower) ಒಳಗೊಂಡ ಎಲೈಟ್ ಲಿಸ್ಟ್‌ಗೆ ರಿಷಭ್ ಪಂತ್ ಸೇರ್ಪಡೆಯಾಗಿದ್ದಾರೆ. ಅಲ್ಲದೆ ಈ ಶತಕದ ಮೂಲಕ ಪಂತ್ ಇನ್ನು ಕೆಲ ದಾಖಲೆಗಳನ್ನು ಬರೆದಿದ್ದಾರೆ.
ಇಲ್ಲಿನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಸೋಮವಾರ ಶುಭಮನ್ ಗಿಲ್ ವಿಕೆಟ್ ಒಪ್ಪಿಸಿದ ಬಳಿಕ ಕ್ರೀಸ್‌ಗೆ ಬಂದ ರಿಷಭ್ ಪಂತ್ ಬಹಳಾ ಬುದ್ದಿವಂತಿಕೆಯ ಆಟವನ್ನು ಆಡಿದರು. ಅವರು 50 ರನ್ ಗಳಿಸುವವರೆಗೂ ನಿಧಾನಗತಿಯ ಆಟವನ್ನು ಆಡಿದರು. ಒಮ್ಮೆ ಅರ್ಧಶತಕ ಸಿಡಿಸಿದ ಬಳಿಕ ಅವರು ತಮ್ಮ ನೈಜ ಆಟವನ್ನು ಪ್ರದರ್ಶಿಸಿದರು. ಅವರು 129 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ತಮ್ಮ ಟೆಸ್ಟ್ ವೃತ್ತಿ ಜೀವನದ 8ನೇ ಶತಕವನ್ನು ಪೂರ್ಣಗೊಳಿಸಿದರು ಹಾಗೂ ಹಲವು ದಾಖಲೆಗಳನ್ನು ಬರೆದಿದ್ದಾರೆ.
IND vs ENG: 9ನೇ ಟೆಸ್ಟ್ ಶತಕ ಬಾರಿಸಿ ಭಾರತಕ್ಕೆ ಆಸರೆಯಾದ ಕೆಎಲ್ ರಾಹುಲ್!
ಆಂಡಿ ಫ್ಲವರ್ ಒಳಗೊಂಡ ಎಲೈಟ್ ಲಿಸ್ಟ್ ಸೇರಿದ ಪಂತ್
ಇಂಗ್ಲೆಂಡ್ ವಿರುದ್ದ ಮೊದಲನೇ ಟೆಸ್ಟ್ ಪ್ರಥಮ ಇನಿಂಗ್ಸ್‌ನಲ್ಲಿ 134 ರನ್ ಬಾರಿಸಿದ್ದ ರಿಷಭ್ ಪಂತ್, ದ್ವಿತೀಯ ಇನಿಂಗ್ಸ್‌ನಲ್ಲಿ ಅದೇ ಫಾರ್ಮ್ ಅನ್ನು ಮುಂದುವರಿಸಿದರು. ಅವರು ತಮ್ಮ 129 ಎಸೆತಗಳಲ್ಲಿಯೇ ಶತಕವನ್ನು ಬಾರಿಸಿದರು. ಇವರು ಆಡಿದ 140 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 15 ಬೌಂಡರಿಗಳೊಂದಿಗೆ 118 ರನ್ ಗಳಿಸಿದರು ಹಾಗೂ ಕೆಎಲ್ ರಾಹುಲ್ ಜೊತೆ ನಾಲ್ಕನೇ ವಿಕೆಟ್‌ಗೆ 195 ರನ್‌ಗಳ ಜೊತೆಯಾಟವನ್ನು ಆಡಿದರು. ಅಂದ ಹಾಗೆ ಈ ಇನಿಂಗ್ಸ್ ಮೂಲಕ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಶತಕಗಳನ್ನು ಬಾರಿಸಿದ ವಿಶ್ವದ ಎರಡನೇ ವಿಕೆಟ್ ಎನಿಸಿಕೊಂಡರು. ಇದಕ್ಕೂ ಮುನ್ನ ಜಿಂಬಾಬ್ವೆ ಮಾಜಿ ವಿಕೆಟ್ ಕೀಪರ್ ಆಂಡಿ ಫ್ಲವರ್ ಈ ಸಾಧನೆಗೆ ಭಾಜನರಾಗಿದ್ದರು.
8⃣𝘁𝗵 𝗧𝗲𝘀𝘁 💯 𝗳𝗼𝗿 𝗥𝗶𝘀𝗵𝗮𝗯𝗵 𝗣𝗮𝗻𝘁! 🙌
— BCCI (@BCCI) June 23, 2025
1⃣st Indian to score hundreds in both innings of a Test in England 🔝
7⃣th Indian to score hundreds in both innings of a Test! 👏
Incredible batting display in the series opener from the #TeamIndia vice-captain! 👍 👍… pic.twitter.com/RzNA9lfFQr
ಮೊದಲನೇ ಭಾರತೀಯ ಬ್ಯಾಟ್ಸ್‌ಮನ್
ಇಂಗ್ಲೆಂಡ್‌ನಲ್ಲಿನ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕವನ್ನು ಬಾರಿಸಿದ ಭಾರತದ ಮೊದಲನೇ ಬ್ಯಾಟ್ಸ್‌ಮನ್ ಎಂಬ ಮತ್ತೊಂದು ದಾಖಲೆಯನ್ನು ರಿಷಭ್ ಪಂತ್ ಬರೆದಿದ್ದಾರೆ. ಇಂಗ್ಲೆಂಡ್‌ನಲ್ಲಿ ಇದುವರೆಗೂ ಯಾವುದೇ ಬ್ಯಾಟ್ಸ್‌ಮನ್ ಈ ದಾಖಲೆಯನ್ನು ಬರೆದಿರಲಿಲ್ಲ. ಆದರ, ಪಂತ್ ಇದೀಗ ಇಂಗ್ಲೆಂಡ್‌ನಲ್ಲಿ ತಮ್ಮ ನಾಲ್ಕನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಜಂಡಿ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಪಟ್ಟಿಯಲ್ಲಿ ಮಾಜಿ ನಾಯಕ ರಾಹುಲ್ ದ್ರಾವಿಡ್ 6 ಶತಕಗಳ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ.
ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕಗಳನ್ನು ಬಾರಿಸಿದ ಭಾರತದ ಏಳನೇ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಕೂಡ ರಿಷಭ್ ಪಂತ್ ಬರೆದಿದ್ದಾರೆ. ಅಗ್ರ ಸ್ಥಾನದಲ್ಲಿ ವಿಜಯ್ ಹಝಾರೆ ಇದ್ದಾರೆ. ಸುನೀಲ್ ಗವಾಸ್ಕರ್ ಮೂರು ಬಾರಿ ಈ ಸಾಧನೆ ಮಾಡಿದ್ದರೆ, ರಾಹುಲ್ ದ್ರಾವಿಡ್ ಎರಡು ಬಾರಿ ಈ ಸಾಧನೆಗೆ ಭಾಜನರಾಗಿದ್ದಾರೆ.
ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳು
ವಿಜಯ್ ಹಝಾರೆ
ಸುನೀಲ್ ಗವಾಸ್ಕರ್ (3 ಬಾರಿ)
ರಾಹುಲ್ ದ್ರಾವಿಡ್ (2 ಬಾರಿ)
ವಿರಾಟ್ ಕೊಹ್ಲಿ
ಅಜಿಂಕ್ಯ ರಹಾನೆ
ರೋಹಿತ್ ಶರ್ಮಾ
ರಿಷಭ್ ಪಂತ್