IND vs ENG: ಶುಭಮನ್ ಗಿಲ್ ನಾಯಕತ್ವದ ಬಗ್ಗೆ ಮೊಹಮ್ಮದ್ ಕೈಫ್ ಅಭಿಪ್ರಾಯ!
Mohammad Kaif on Shubman Gill's Captaincy: ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ಗಿಂತ ಶುಭಮನ್ ಗಿಲ್ ನಾಯಕತ್ವ ಉತ್ತಮವಾಗಿತ್ತು ಎಂದು ಟೀಮ್ ಇಂಡಿಯಾ ಮಾಜಿ ಬ್ಯಾಟ್ಸ್ಮನ್ ಮೊಹಮ್ಮದ್ ಕೈಫ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ಗಳಿಂದ ಸೋಲು ಅನುಭವಿಸಿತ್ತು.

ಶುಭಮನ್ ಗಿಲ್ ನಾಯಕತ್ವದ ಬಗ್ಗೆ ಮೊಹಮ್ಮದ್ ಕೈಫ್ ಮೆಚ್ಚುಗೆ.

ಲೀಡ್ಸ್: ಹೆಡಿಂಗ್ಲೆಯಲ್ಲಿ ಮಂಗಳವಾರ ಮುಕ್ತಾಯವಾಗಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ(IND vs ENG) ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರಿಗಿಂತ ಭಾರತ ತಂಡದ ಶುಭಮನ್ ಗಿಲ್ (Shubman Gill) ಅವರ ನಾಯಕತ್ವ ಉತ್ತಮವಾಗಿತ್ತು ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ (Mohammad Kaif) ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿ ಭಾರತ ತಂಡವನ್ನು ಮುನ್ನಡೆಸಿದ ಶುಭಮನ್ ಗಿಲ್, ಬ್ಯಾಟ್ಸ್ಮನ್ ಆಗಿ ಯಶಸ್ವಿಯಾದರು. ಅವರು ಪ್ರಥಮ ಇನಿಂಗ್ಸ್ನಲ್ಲಿ 147 ರನ್ಗಳನ್ನು ಬಾರಿಸಿದ್ದರು. ಆ ಮೂಲಕ ಟೆಸ್ಟ್ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ ಭಾರತದ ಐದನೇ ನಾಯಕ ಎಂಬ ದಾಖಲೆಯನ್ನು ಗಿಲ್ ಬರೆದಿದ್ದರು.
ಬ್ಯಾಟ್ಸ್ಮನ್ ಆಗಿ ಶುಭಮನ್ ಗಿಲ್ ಯಶಸ್ವಿಯಾದರೂ ನಾಯಕನಾಗಿ ಅವರು ವಿಫಲರಾದರು. ಏಕೆಂದರೆ ಭಾರತ ತಂಡ ನೀಡಿದ್ದ 371 ರನ್ಗಳ ಗುರಿಯನ್ನು ಇಂಗ್ಲೆಂಡ್ ತಂಡ ಐದನೇ ದಿನ ಯಶಸ್ವಿಯಾಗಿ ಚೇಸ್ ಮಾಡಿತ್ತು ಹಾಗೂ ಟೀಮ್ ಇಂಡಿಯಾ 5 ವಿಕೆಟ್ ಸೋಲು ಅನುಭವಿಸಿತ್ತು. ಈ ಪಂದ್ಯದ ಸೋಲಿನ ಬಳಿಕ ಗಿಲ್ ಅವರ ನಾಯಕತ್ವದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಆದರೆ, ಭಾರತದ ಮಾಜಿ ಬ್ಯಾಟ್ಸ್ಮನ್ ಮೊಹಮ್ಮದ್ ಕೈಫ್, ಶುಭಮನ್ ಗಿಲ್ ನಾಯಕತ್ವಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಬೆನ್ ಸ್ಟೋಕ್ಸ್ಗಿಂತ ಗಿಲ್ರ ನಾಯಕತ್ವ ಉತ್ತಮವಾಗಿತ್ತು ಎಂದು ಶ್ಲಾಘಿಸಿದ್ದಾರೆ.
IND vs ENG: ಹೆಡಿಂಗ್ಲೆ ಟೆಸ್ಟ್ ಸೋಲಿನ ಬಳಿಕ ಗೌತಮ್ ಗಂಭೀರ್ಗೆ ರವಿ ಶಾಸ್ತ್ರಿ ಮಹತ್ವದ ಸಲಹೆ!
ಬೆನ್ ಸ್ಟೋಕ್ಸ್ಗಿಂತ ಗಿಲ್ ನಾಯಕತ್ವ ಚೆನ್ನಾಗಿತ್ತು: ಕೈಫ್
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಮೊಹಮ್ಮದ್ ಕೈಫ್, "ಯುವ ನಾಯಕನಾಗಿ ಶುಭಮನ್ ಗಿಲ್, ಜಸ್ಪ್ರೀತ್ ಬುಮ್ರಾಗೆ 4-4 ಓವರ್ಗಳನ್ನು ನೀಡುವ ಮೂಲಕ ಬುದ್ದಿವಂತಿಕೆಯಿಂದ ಬಳಸಿಕೊಂಡಿದ್ದಾರೆ. ಬೆನ್ ಸ್ಟೋಕ್ಸ್ ಅವರಿಗಿಂತ ಗಿಲ್ ಉತ್ತಮವಾಗಿ ನಾಯಕತ್ವದ ಜವಚಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಚೆನ್ನಾಗಿ ಮಾಡಿದ್ದೀರಿ, ಹೆಬ್ಬೆರಳು ಮೇಲಕ್ಕೆತ್ತಿ. ಒಂದೂವರೆ ಬೌಲರ್ಗಳೊಂದಿಗೆ ಆಡುತ್ತಿದ್ದ ಕಾರಣ ಅವರು ಅಸಹಾಯಕ ನಾಯಕ. ಒಬ್ಬರು ಬುಮ್ರಾ, ಉಳಿದ ಅರ್ಧ ರವೀಂದ್ರ ಜಡೇಜಾ. ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಅಥವಾ ಶಾರ್ದುಲ್ ಅವರಿಂದ ಯಾವುದೇ ಬೆಂಬಲವಿರಲಿಲ್ಲ. 1.5 ಬೌಲರ್ಗಳೊಂದಿಗೆ ನೀವು ಟೆಸ್ಟ್ ಪಂದ್ಯವನ್ನು ಗೆಲ್ಲಲು ಸಾಧ್ಯವಿಲ್ಲ. ಅವರು ನಾಯಕತ್ವವನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ ಮತ್ತು ಅವರು ನನಗೆ ಚೆನ್ನಾಗಿ ಕಾಣುತ್ತಿದ್ದರು. ಅವರು ತಮ್ಮ ಸಂಪನ್ಮೂಲಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ," ಎಂದು ಹೊಗಳಿದ್ದಾರೆ.
IND vs ENG: ಎರಡನೇ ಟೆಸ್ಟ್ಗೂ ಮುನ್ನ ಇಂಗ್ಲೆಂಡ್ನಿಂದ ತವರಿಗೆ ಮರಳಿದ ಟೀಮ್ ಇಂಡಿಯಾ ಯುವ ವೇಗಿ?
ಗಿಲ್ ಬ್ಯಾಟಿಂಗ್ ಪ್ರದರ್ಶನಕ್ಕೆ ಕೈಫ್ ಮೆಚ್ಚುಗೆ
"ನಾನು ಅವರನ್ನು ಹೊಗಳುತ್ತೇನೆ ಏಕೆಂದರೆ, ಈ ಸರಣಿಯಲ್ಲಿ ಅವರಿಗೆ ಇದು ದೊಡ್ಡ ಟೆಸ್ಟ್ ಪಂದ್ಯವಾಗಿತ್ತು. ಇಂಗ್ಲೆಂಡ್ನಲ್ಲಿ ರನ್ ಗಳಿಸುವುದು ಅವರಿಗೆ ತುಂಬಾ ಮುಖ್ಯವಾಗಿತ್ತು. ಇಂಗ್ಲೆಂಡ್ನಲ್ಲಿ ಅವರಿಗೆ ರನ್ ಗಳಿಸುವುದು ಹೇಗೆಂದು ಗೊತ್ತಿಲ್ಲ ಎಂದು ಪ್ರತಿಯೊಬ್ಬರೂ ತಿಳಿಸಿದ್ದರು. ಅವರನ್ನು ನಾಯಕನ್ನಾಗಿ ನೇಮಿಸಿದರೆ, ಅವರು ರನ್ ಗಳಿಸುವುದಿಲ್ಲ ಎಂದು ದೂರಿದ್ದರು. ಆದರ, ಗಿಲ್ ತಮ್ಮ ಬ್ಯಾಟಿಂಗ್ ಮೂಲಕ ತೋರಿಸಿದ್ದಾರೆ ಹಾಗೂ ಶತಕವನ್ನು ಬಾರಿಸಿದ್ದಾರೆ. ಅವರದು ಅದ್ಭುತ ಬ್ಯಾಟಿಂಗ್. ನಾಯಕತ್ವದ ಜೊತೆಗೆ ಬ್ಯಾಟಿಂಗ್ನಲ್ಲಿಯೂ ತಂಡಕ್ಕೆಕೊಡುಗೆ ನೀಡುತ್ತೇನೆಂದು ಅವರು ಸಾಬೀತುಪಡಿಸಿದ್ದಾರೆ," ಎಂದು ಮಾಜಿ ಕ್ರಿಕೆಟಿಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
IND vs ENG: ಸಚಿನ್ , ದ್ರಾವಿಡ್ರ ದೊಡ್ಡ ದಾಖಲೆ ಮುರಿಯುವ ಸನಿಹದಲ್ಲಿ ಜೋ ರೂಟ್!
ಮೊದಲನೇ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಜುಲೈ 2 ರಂದು ಬರ್ಮಿಂಗ್ಹ್ಯಾಮ್ನ ಎಜ್ಬಾಸ್ಟನ್ ಕ್ರೀಡಾಂಗಣದಲ್ಲಿ ಆರಂಭವಾಗುವ ಎರಡನೇ ಟೆಸ್ಟ್ ಪಂದ್ಯದ ನಿಮಿತ್ತ ತಂಡವನ್ನು ಮರುವಿಂಗಡಿಸಬೇಕಾದ ದೊಡ್ಡ ಸವಾಲು ಶುಭಮನ್ ಗಿಲ್ ಮೇಲಿದೆ. ಏಕೆಂದರೆ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಭಾರತ ತಂಡ ಈ ಮೈದಾನದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಈ ಅಂಗಣದಲ್ಲಿ ಆಡಿದ 8 ಪಂದ್ಯಗಳ ಪೈಕಿ ಟೀಮ್ ಇಂಡಿಯಾ 7 ರಲ್ಲಿ ಸೋಲು ಅನುಭವಿಸಿದೆ.