IND vs ENG: ಸುನೀಲ್ ಗವಾಸ್ಕರ್‌ರ 47 ವರ್ಷಗಳ ಹಳೆಯ ದಾಖಲೆ ಮುರಿದ ಶುಭಮನ್ ಗಿಲ್!
ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಐದನೇ ಹಾಗೂ ಟೆಸ್ಟ್ ಸರಣಿಯ ಕೊನೆಯ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತ ಬಳಿಕ ಬ್ಯಾಟ್ ಮಾಡುವಂತಾದ ಟೀಮ್ ಇಂಡಿಯಾ ಆರಂಭದಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನಾಯಕ ಶುಭಮನ್ ಗಿಲ್, ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ದಾಖಲೆಯನ್ನು ಮುರಿದಿದ್ದಾರೆ.

ಸುನೀಲ್ ಗವಾಸ್ಕರ್‌ರ ಅಪರೂಪದ ದಾಖಲೆ ಮುರಿದ ಶುಭಮನ್ ಗಿಲ್.

ಲಂಡನ್: ಭಾರತ ಹಾಗೂ ಇಂಗ್ಲೆಂಡ್ ತಂಡಗಳು(IND vs ENG) ಪ್ರಸ್ತುತ ಇಲ್ಲಿನ ಕೆನಿಂಗ್ಟನ್ ಓವಲ್‌ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟ್ ಮಾಡುವಂತಾಗಿದೆ. ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 10 ರನ್‌ಗಳಿಗೆ ಯಶಸ್ವಿ ಜೈಸ್ವಾಲ್ ಹಾಗೂ 38 ರನ್‌ಗಳಿದ್ದಾಗ ಕೆಎಲ್ ರಾಹುಲ್ ಔಟ್ ಆದರು. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನಾಯಕ ಶುಭಮನ್ ಗಿಲ್ (Shubman Gill), ಮಳೆ ಬಂದು ಆಟ ನಿಲ್ಲಿಸುವ ವೇಳೆಗೆ ಅಜೇಯ 15 ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ಅವರು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ (Sunil Gavaskar) ಅವರ 47 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
ಭಾರತ ತಂಡ ಬಹುಬೇಗ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಬಳಿಕ ಮೂರನೇ ವಿಕೆಟ್‌ಗೆ ಜೊತೆಯಾದ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ 34 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಏಕೈಕ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ನಾಯಕ ಎನಿಸಿಕೊಳ್ಳಲು ಶುಭಮನ್ ಗಿಲ್‌ಗೆ ಕೇವಲ 11 ರನ್ ಅಗತ್ಯವಿತ್ತು. ಅದರಂತೆ ಅವರು ಬಹುಬೇಗ ಈ ದಾಖಲೆಯನ್ನು ಬರೆದಿದ್ದಾರೆ. ಗಿಲ್ ನಾಯಕನಾಗಿ ಈ ಟೆಸ್ಟ್ ಸರಣಿಯಲ್ಲಿ ಅಜೇಯ 737 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಸುನೀಲ್ ಗವಾಸ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ಗವಾಸ್ಕರ್ 1978-79ರ ಸಾಲಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 732 ರನ್ ಕಲೆ ಹಾಕಿದ್ದರು. ಪಂದ್ಯದ ಮೊದಲನೇ ದಿನ ಜೇಮಿ ಓವರ್ಟನ್‌ಗೆ ಬೌಂಡರಿ ಬಾರಿಸುವ ಮೂಲಕ ಗಿಲ್, ನೂತನ ಮೈಲುಗಲ್ಲು ಸ್ಥಾಪಿಸಿದರು.
IND vs ENG: ಟಾಸ್ ವೇಳೆ ರವಿ ಶಾಸ್ತ್ರಿ ಪ್ರಶ್ನೆಗೆ ಗೊಂದಲದ ಉತ್ತರವನ್ನು ಕೊಟ್ಟ ಶುಭಮನ್ ಗಿಲ್!
ತಮ್ಮ ಬ್ಯಾಟಿಂಗ್ ಮುಂದುವರಿಸಿದ ಶುಭಮನ್ ಗಿಲ್ ಅವರು ಭೋಜನ ವಿರಾಮಕ್ಕೂ ಮುನ್ನ ಭಾರತ ತಂಡ ಎರಡು ವಿಕೆಟ್ ನಷ್ಟಕ್ಕೆ 72 ರನ್‌ಗಳನ್ನು ಕಲೆ ಹಾಕಿದೆ. ಶುಭಮನ್ ಗಿಲ್ ಜೊತೆ ಮತ್ತೊಂದು ತುದಿಯಲ್ಲಿ ಸಾಯಿ ಸುದರ್ಶನ್ 67 ಎಸೆತಗಳಲ್ಲಿ ಅಜೇಯ 25 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ.
7⃣3⃣7⃣* runs and counting 🙌
— BCCI (@BCCI) July 31, 2025
Shubman Gill now has the most runs for an Indian captain in a single Test series 👏
Scorecard ▶️ https://t.co/Tc2xpWMCJ6#TeamIndia | #ENGvIND | @ShubmanGill pic.twitter.com/jNvINjXuXN
ಗವಾಸ್ಕರ್‌ರ ಮತ್ತೊಂದು ದಾಖಲೆಯ ಮೇಲೆ ಗಿಲ್ ಕಣ್ಣು
ಸುನೀಲ್ ಗವಾಸ್ಕರ್ ಅವರ ಮತ್ತೊಂದು ದಾಖಲೆಯನ್ನು ಮುರಿಯಲು ಶುಭಮನ್ ಗಿಲ್‌ಗೆ ಇನ್ನು ಕೇವಲ 38 ರನ್‌ಗಳ ಅಗತ್ಯವಿದೆ. ದ್ವಿಪಕ್ಷೀಯ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆ ಸದ್ಯ ಸುನೀಲ್ ಗವಾಸ್ಕರ್ ಹೆಸರಿನಲ್ಲಿದೆ. ಅವರು 1971ರಲ್ಲಿ ವೆಸ್ಟ್ ಇಂಡೀಸ್ ಎದುರು ಟೆಸ್ಟ್ ಸರಣಿಯಲ್ಲಿ 774 ರನ್‌ಗಳನ್ನು ಕಲೆ ಹಾಕಿದ್ದರು. ಇದರಲ್ಲಿ ಅವರು ನಾಲ್ಕು ಶತಕಗಳು ಹಾಗೂ ಮೂರು ಅರ್ಧಶತಕಗಳನ್ನು ಬಾರಿಸಿದ್ದರು. ಈ ಸರಣಿಯಲ್ಲಿ ಗವಾಸ್ಕರ್ ಕೇವಲ ನಾಲ್ಕು ಪಂದ್ಯಗಳಿಂದ 154.80ರ ಸರಾಸರಿಯಲ್ಲಿ ರನ್ ಗಳಿಸಿದ್ದರು.
IND vs ENG 5th Test: ಭಾರತ ವಿರುದ್ದ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಇಂಗ್ಲೆಂಡ್!
ಶುಭಮನ್ ಗಿಲ್‌ಗೆ ಅಗ್ರ ಸ್ಥಾನ
ಶುಭಮನ್ ಗಿಲ್ ಅವರು ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಸರಣಿಯಲ್ಲಿ ಅವರು ಎಂಟು ಇನಿಂಗ್ಸ್‌ಗಳಿಂದ 737 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು 90.25ರ ಸರಾಸರಿಯಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ್ದಾರೆ. ಆ ಮೂಲಕ ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.