IND vs ENG: ಮೊದಲನೇ ಟೆಸ್ಟ್ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI ಆರಿಸಿದ ರವಿ ಶಾಸ್ತ್ರಿ!
Ravi Shastri picks India's Playing XI: ಇಂಗ್ಲೆಂಡ್ ವಿರುದ್ದ ಜೂನ್ 20 ರಂದು ಆರಂಭವಾಗಲಿರುವ ಮೊದಲನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ, ಭಾರತ ತಂಡದ ತಮ್ಮ ನೆಚ್ಚಿನ ಪ್ಲೇಯಿಂಗ್ XI ಅನ್ನು ಆರಿಸಿದ್ದಾರೆ. ಕುಲ್ದೀಪ್ ಯಾದವ್ ಅವರನ್ನು ಕೈ ಬಿಟ್ಟಿರುವ ಅವರು, ಅರ್ಷದೀಪ್ ಸಿಂಗ್ಗೆ ಅವಕಾಶವನ್ನು ನೀಡಿದ್ದಾರೆ.

ಭಾರತದ ಪ್ಲೇಯಿಂಗ್ XI ಆರಿಸಿದ ರವಿ ಶಾಸ್ತ್ರಿ.

ನವದೆಹಲಿ: ಇಂಗ್ಲೆಂಡ್ ವಿರುದ್ದ ಜೂನ್ 20 ರಂದು ಲೀಡ್ಸ್ನ ಹೆಡಿಂಗ್ಲೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗುವ ಮೊದಲನೇ ಟೆಸ್ಟ್ ಪಂದ್ಯಕ್ಕೆ (IND vs ENG) ಭಾರತ ತಂಡದ (India's Playing XI) ಪ್ಲೇಯಿಂಗ್ XI ಆರಿಸಿದ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ (Ravi Shastri) ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಕೈ ಬಿಟ್ಟಿದ್ದಾರೆ. ಆದರೆ, ಎಡಗೈ ವೇಗಿ ಅರ್ಷದೀಪ್ ಸಿಂಗ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಅವಕಾಶದ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ನೆಚ್ಚಿನ ತಂಡದಲ್ಲಿ ನಾಲ್ವರು ವೇಗಿಗಳಿಗೆ ರವಿ ಶಾಸ್ತ್ರಿ ಅವಕಾಶವನ್ನು ನೀಡಿದ್ದಾರೆ. ನಾಲ್ಕನೇ ವೇಗದ ಬೌಲರ್ ಸ್ಥಾನಕ್ಕೆ ನಿತೀಶ್ ಕುಮಾರ್ ರೆಡ್ಡಿ ಅವರ ಬದಲು ಶಾರ್ದುಲ್ ಠಾಕೂರ್ ಅವರನ್ನು ಆರಿಸಿದ್ದಾರೆ.
ತಂಡದ ಇನ್ನುಳಿದ ಮೂವರು ವೇಗದ ಬೌಲರ್ಗಳ ಸ್ಥಾನಕ್ಕೆ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಮೊದಲ ಆಯ್ಕೆಯಾಗಿ ಆರಿಸಿದ್ದಾರೆ. ಎಡಗೈ ವೇಗಿ ಅರ್ಷದೀಪ್ ಸಿಂಗ್ ಹಾಗೂ ಆಕಾಶ್ ದೀಪ್ ಅವರ ಬದಲು ಕನ್ನಡಿಗ ಪ್ರಸಿಧ್ ಕೃಷ್ಣಗೆ ಅವಕಾಶವನ್ನು ನೀಡಿದ್ದಾರೆ.
"ನಾನು ಮೂವರು ಫಾಸ್ಟ್ ಬೌಲರ್ಗಳನ್ನು ಆರಿಸುತ್ತೇನೆ, ಇವರ ಜೊತೆಗೆ ಶಾರ್ದುಲ್ ಠಾಕೂರ್. ಶಾರ್ದುಲ್ ಹಾಗೂ ನಿತೀಶ್ ರೆಡ್ಡಿ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಕಠಿಣ ಸಂಗತಿ. ಯಾರು ಎಷ್ಟು ಬೌಲ್ ಮಾಡುತ್ತಾರೆಂದು ನೀವು ನೋಡಬೇಕಾಗುತ್ತದೆ. ರೆಡ್ಡಿ 12, 14 ಓವರ್ಗಳನ್ನು ಬೌಲ್ ಮಾಡಿದರೆ, ಅವರಿಗೆ ಬ್ಯಾಟಿಂಗ್ ಪ್ಲಸ್ ಪಾಯಿಂಟ್ ಆಗಬಹುದು. ಇನ್ನುಳಿದ ಮೂವರು ಫಾಸ್ಟ್ ಬೌಲರ್ಗಳಾಗಿ ಜಸ್ಪ್ರೀತ್ ಬುಮ್ರಾ, ಪ್ರಸಿಧ್ ಕೃಷ್ಣ ಹಾಗೂ ಮೊಹಮ್ಮದ್ ಸಿರಾಜ್ಗೆ ಸ್ಥಾನವನ್ನು ನೀಡುತ್ತೇನೆಂದು," ಎಂದು ಹೇಳಿದ್ದಾರೆ.
IND vs ENG: ವಿರಾಟ್ ಕೊಹ್ಲಿಯ ಲಂಡನ್ ಮನೆಯಲ್ಲಿ ಶುಭಮನ್ ಗಿಲ್, ರಿಷಭ್ ಪಂತ್ ಮೀಟಿಂಗ್!
"ಲಿಡ್ಸ್ನಲ್ಲಿ ಮೋಡ ಮುಸುಕಿದ ಹವಾಮಾನ ಇರಲಿದೆ. ಹಾಗಾಗಿ ಅದನ್ನು ನೋಡಿಕೊಂಡು ಅರ್ಷದೀಪ್ ಅಥವಾ ಪ್ರಸಿಧ್ ಕೃಷ್ಣ ಅವರನ್ನು ಆರಿಸಬೇಕಾಗುತ್ತದೆ. ಇನ್ನುಳಿದ ಇಬ್ಬರು ವೇಗದ ಬೌಲರ್ಗಳಾಗಿ ಸಿರಾಜ್ ಮತ್ತು ಬುಮ್ರಾ ಅವರನ್ನು ತೆಗೆದುಕೊಳ್ಳುತ್ತೇನೆ," ಎಂದು ಐಸಿಸಿ ರಿವ್ಯೂವ್ನಲ್ಲಿ ರವಿ ಶಾಸ್ತ್ರಿ ತಿಳಿಸಿದ್ದಾರೆ.
ಯಶಸ್ವಿ ಜೈಸ್ವಾಲ್-ಕೆಎಲ್ ರಾಹುಲ್ ಓಪನರ್ಸ್
"ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಓಪನರ್ಸ್. ಇದು ರಾಹುಲ್ ಪಾಲಿಗೆ ದೊಡ್ಡ ಪ್ರವಾಸ ಹಾಗೂ ಅವರು ಅತಿ ಹೆಚ್ಚು ಅನುಭವವನ್ನು ಹೊಂದಿರುವ ಆಟಗಾರ. ಕೊನೆಯ ಬಾರಿ ಇನಿಂಗ್ಸ್ ಆರಂಭಿಸಿ ಅವರು ಶತಕವನ್ನು ಬಾರಿಸಿದ್ದರು. ಅದು ಅವರ ಪಾಲಿಗೆ ಒಳ್ಳೆಯ ಪ್ರವಾಸವಾಗಿತ್ತು. ಇವರೇ ಇನಿಂಗ್ಸ್ ಆರಂಭಿಸಬಹುದೆಂದು ಭಾವಿಸುತ್ತೇನೆ. ಇದಾದ ಬಳಿಕ ಯುವ ಆಟಗಾರ ಸಾಯಿ ಸುದರ್ಶನ್ ಅವರನ್ನು ಆಯ್ಕೆ ಮಾಡುತ್ತೇನೆ. ಅವರು ತುಂಬಾ ಆಕರ್ಷಕವಾಗಿದ್ದಾರೆ," ಎಂದು ಅವರು ಹೇಳಿದ್ದಾರೆ.
IND vs ENG: ಭಾರತೀಯ ಕ್ರಿಕೆಟ್ನ ದೊಡ್ಡ ಸೂಪರ್ ಸ್ಟಾರ್ ಆಟಗಾರನನ್ನು ಹೆಸರಿಸಿದ ಜೋಸ್ ಬಟ್ಲರ್!
"ನಾಲ್ಕನೇ ಕ್ರಮಾಂಕಕ್ಕೆ ನಾಯಕ ಶುಭಮನ್ ಗಿಲ್, ಪ್ರಸ್ತುತ ಅದ್ಭುತ ಪಾರ್ಮ್ನಲ್ಲಿರುವ ಕರುಣ್ ನಾಯರ್ಗೆ ಐದನೇ ಕ್ರಮಾಂಕ ಹಾಗೂ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಆಗಿ ಆರನೇ ಕ್ರಮಾಂಕಕ್ಕೆ ರಿಷಭ್ ಪಂತ್. ನಾಯರ್ ಸಾಕಷ್ಟು ಕಠಿಣ ಪರಿಶ್ರಮ ಪಟ್ಟಿದ್ದಾರೆಂದು ಭಾವಿಸುತ್ತೇನೆ. ರಾಷ್ಟ್ರೀಯ ತಂಡಕ್ಕೆ ಕಮ್ಬ್ಯಾಕ್ ಮಾಡಲು ಅವರು ಸಾಕಷ್ಟು ಪರಿಶ್ರಮವನ್ನು ಪಟ್ಟಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅವರ ಅಂಕಿಗಳು ಅದ್ಭುತವಾಗಿವೆ," ಎಂದು ಮಾಜಿ ಹೆಡ್ ಕೋಚ್ ಶ್ಲಾಘಿಸಿದ್ದಾರೆ.
ಮೊದಲನೇ ಟೆಸ್ಟ್ಗೆ ರವಿ ಶಾಸ್ತ್ರಿ ಆಯ್ಕೆಯ ಭಾರತದ ಪ್ಲೇಯಿಂಗ್ XI
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಕರುಣ್ ನಾಯರ್, ರಿಷಭ್ ಪಂತ್ (ವಿ.ಕೀ), ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಪ್ರಸಿಧ್ ಕೃಷ್ಣ, ಮೊಹಮ್ಮದ್ ಸಿರಾಜ್