IND vs ENG: ಟೆಸ್ಟ್ ಸರಣಿಯಿಂದ ಹೊರಬಿದ್ದ ಬಳಿಕ ಭಾವನಾತ್ಮಕ ಸಂದೇಶ ಹಂಚಿಕೊಂಡ ರಿಷಭ್ ಪಂತ್!
ಪಾದದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಟೆಸ್ಟ್ ಸರಣಿಯ ಕೊನೆಯ ಪಂದ್ಯದಿಂದ ಹೊರ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಗಾಯದ ಬಗ್ಗೆ ಪ್ರಮುಖ ಮಾಹಿತಿಯನ್ನು ನೀಡಿದ್ದಾರೆ.

ರಿಷಭ್ ಪಂತ್ ತಮ್ಮ ಗಾಯದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯದ (IND vs ENG) ಮೊದಲನೇ ದಿನ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಪಾದದ ಗಾಯಕ್ಕೆ ತುತ್ತಾಗಿದ್ದರು. ಇದರ ಹೊರತಾಗಿಯೂ ಅವರು ಎರಡನೇ ದಿನ ಬ್ಯಾಟ್ ಮಾಡಿದ್ದರು. ಅಂತಿಮವಾಗಿ ಈ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಅಂದ ಹಾಗೆ ಈ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ರಿಷಭ್ ಪಂತ್‌ಗೆ ಬ್ಯಾಟಿಂಗ್‌ಗೆ ಅವಕಾಶ ಸಿಗಲಿಲ್ಲ. ಅಂದ ಹಾಗೆ ರಿಷಭ್ ಪಂತ್ ಐದನೇ ಹಾಗೂ ಟೆಸ್ಟ್ ಸರಣಿಯ ಕೊನೆಯ ಪಂದ್ಯದಿಂದ ಹೊರ ನಡೆದಿದ್ದಾರೆ. ಇವರ ಬದಲು ಐದನೇ ಟೆಸ್ಟ್‌ಗೆ ಎನ್ ಜಗದೀಶನ್ (N Jagadishan) ಅವರನ್ನು ಸೇರಿಸಿಕೊಳ್ಳಲಾಗಿದೆ. ರಿಷಭ್ ಪಂತ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ಪಾದದ ಗಾಯ ಹಾಗೂ ಕಮ್‌ಬ್ಯಾಕ್ ಬಗ್ಗೆ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
"ನನ್ನ ಕಡೆಗೆ ಬಂದಿರುವ ಎಲ್ಲಾ ಪ್ರೀತಿ ಮತ್ತು ಶುಭ ಹಾರೈಕೆಗಳನ್ನು ಶ್ಲಾಘಿಸುತ್ತೇನೆ. ಇದು ನಿಜವಾದ ಶಕ್ತಿಯ ಮೂಲವಾಗಿದೆ. ನನ್ನ ಮೂಳೆ ಮುರಿತ ಗುಣವಾದ ನಂತರ ಮತ್ತು ನಾನು ನಿಧಾನವಾಗಿ ಪ್ರಕ್ರಿಯೆಯಲ್ಲಿ ಹೊಂದಿಕೊಳ್ಳುತ್ತಿರುವಾಗ ನಾನು ಪುನಶ್ಚೇತನ ಕಾರ್ಯವನ್ನು ಪ್ರಾರಂಭಿಸುತ್ತೇನೆ. ತಾಳ್ಮೆಯಿಂದಿರುವುದು, ದಿನಚರಿಯನ್ನು ಅನುಸರಿಸುವುದು ಮತ್ತು ಅದಕ್ಕೆ ನನ್ನ ಕಡೆಯಿಂದ ಶೇ 100 ಪ್ರಯತ್ನವನ್ನು ಹಾಕುತ್ತೇನೆ. ನನ್ನ ದೇಶಕ್ಕಾಗಿ ಆಡುವುದು ಯಾವಾಗಲೂ ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ನಾನು ಇಷ್ಟಪಡುವುದನ್ನು ಮಾಡಲು ಮತ್ತೆ ಬರಲು ಕಾಯಲು ಸಾಧ್ಯವಿಲ್ಲ," ಎಂದು ರಿಷಭ್ ಪಂತ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
IND vs ENG: ಐದನೇ ಟೆಸ್ಟ್‌ನಲ್ಲಿ ಎರಡು ಐತಿಹಾಸಿಕ ದಾಖಲೆಗಳ ಮೇಲೆ ಕಣ್ಣಿಟ್ಟಿರುವ ಶುಭ್‌ಮನ್ ಗಿಲ್!
ಮ್ಯಾಂಚೆಸ್ಟರ್‌ನಲ್ಲಿ ನಡೆದಿದ್ದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಂದು 37 ರನ್ ಗಳಿಸಿ ಬ್ಯಾಟಿಂಗ್ ನಡೆಸುತ್ತಿದ್ದಾಗ ಕ್ರಿಸ್ ವೋಕ್ಸ್ ಅವರ ಸ್ಲೋ ಎಸೆತದಲ್ಲಿ ರಿವರ್ಸ್ ಸ್ವೀಪ್ ಮಾಡುವ ವೇಳೆ ಚೆಂಡು ನೇರವಾಗಿ ಪಂತ್ ಅವರ ಬಲಗಾಲಿನ ಪಾದಕ್ಕೆ ತಗುಲಿತ್ತು. ಈ ವೇಳೆ ನೋವು ತಾಳಲಾರದೆ ಅವರು ಕುಸಿದು ಬಿದ್ದರು. ತಕ್ಷಣ ವೈದ್ಯಕೀಯ ಸಿಬ್ಬಂದಿ ಮೈದಾನಕ್ಕೆ ಧಾವಿಸಿದರು. ಅವರನ್ನು ಗಾಲ್ಫ್ ಕಾರ್ಟ್‌ನಲ್ಲಿ ಹೊರಗೆ ಕರೆದೊಯ್ಯಲಾಯಿತು ಮತ್ತು ನಂತರ ಸ್ಕ್ಯಾನ್ ವರದಿಗಳು ಮುರಿತವಾಗಿರುವುದನ್ನು ದೃಢಪಡಿಸಿದವು. ಈ ಹಿನ್ನೆಲೆಯಲ್ಲಿ ಅವರು ಕನಿಷ್ಠ ಆರು ವಾರಗಳ ಕಾಲ ದೂರ ಉಳಿಯಬೇಕಾಗುತ್ತದೆ.
ಗಾಯದ ಹೊರತಾಗಿಯೂ ರಿಷಭ್ ಪಂತ್ ಮರುದಿನ ಬ್ಯಾಟಿಂಗ್‌ಗೆ ಮರಳಿ ಎಲ್ಲರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕುಂಟುತ್ತಾ ಕ್ರೀಸ್‌ಗೆ ಬಂದಿದ್ದ ಅವರು ಅರ್ಧಶತಕವನ್ನು ಪೂರ್ಣಗೊಳಿಸಿದ್ದಲ್ಲದೆ, ಭಾರತ ತಂಡ 350 ರನ್‌ಗಳ ಗಡಿ ದಾಟಲು ಸಹಾಯ ಮಾಡಿದ್ದರು. ಅಗತ್ಯವಿದ್ದರೆ ಅವರು ದ್ವಿತೀಯ ಇನಿಂಗ್ಸ್‌ನಲ್ಲಿ ಮತ್ತೆ ಬ್ಯಾಟಿಂಗ್‌ಗೆ ಬರಲು ಕಾಯುತ್ತಿದ್ದರು. ಆದರೆ ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜಾ ಐದನೇ ದಿನವನ್ನು ಮುಗಿಸಿದರು. ಆ ಮೂಲಕ ಪಂತ್ ಅವರನ್ನು ಮೈದಾನಕ್ಕೆ ಆಗಮಿಸದಂತೆ ತಡೆದಿದ್ದರು. ಅಂತಿಮವಾಗಿ ಸೋಲುವ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು.
IND vs ENG: ತಮ್ಮ ಬ್ಯಾಟಿಂಗ್ ಗೇಮ್ ಪ್ಲ್ಯಾನ್ ಏನೆಂದು ವಿವರಿಸಿದ ವಾಷಿಂಗ್ಟನ್ ಸುಂದರ್!
ಜುಲೈ 31 ರಂದು ಲಂಡನ್‌ನ ಕೆನಿಂಗ್ಟನ್ ಓವಲ್‌ನಲ್ಲಿ ಆರಂಭವಾಗಲಿರುವ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯಕ್ಕೆ ಪಂತ್ ಅನುಪಸ್ಥಿತಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ದೃಢಪಡಿಸಿದೆ. "ಬಿಸಿಸಿಐ ವೈದ್ಯಕೀಯ ತಂಡವು ಅವರ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ ಮತ್ತು ತಂಡ ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತದೆ," ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಸರಣಿಯಲ್ಲಿ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದವರಲ್ಲಿ ಪಂತ್ ಕೂಡ ಒಬ್ಬರು. ಏಳು ಇನಿಂಗ್ಸ್‌ಗಳಲ್ಲಿ 479 ರನ್ ಗಳಿಸಿದ್ದಾರೆ, ಇದರಲ್ಲಿ ಹೆಡಿಂಗ್ಲೆಯಲ್ಲಿ ನಡೆದಿದ್ದ ಸರಣಿಯ ಆರಂಭಿಕ ಪಂದ್ಯದಲ್ಲಿ ಅವಳಿ ಶತಕಗಳು ಸೇರಿವೆ. ಲಂಡನ್‌ನ ಲಾರ್ಡ್ಸ್‌ನಲ್ಲಿಯೂ ಅವರು ಉತ್ತಮ ಪ್ರದರ್ಶನವನ್ನು ತೋರಿದ್ದಾರೆ. ಅವರು ಲೀಡ್ಸ್ ಟೆಸ್ಟ್ ಪ್ರಥಮ ಇನಿಂಗ್ಸ್‌ನಲ್ಲಿ ಜಸ್‌ಪ್ರೀತ್ ಬುಮ್ರಾ ಎಸೆತದಲ್ಲಿ ಚೆಂಡು ರಿಷಭ್ ಪಂತ್ ಅವರ ಎಡಗೈ ತೋರು ಬೆರಳಿಗೆ ತಗುಲಿತ್ತು. ಐದನೇ ಟೆಸ್ಟ್ ಪಂದ್ಯದಲ್ಲಿ ಧ್ರುವ್ ಜುರೆಲ್ ವಿಕೆಟ್ ಕೀಪರ್ ಆಗಿ ಆಡಲಿದ್ದು, ಇವರಿಗೆ ಮೀಸಲು ವಿಕೆಟ್ ಕೀಪರ್ ಆಗಿ ಎನ್ ಜಗದೀಶನ್ ಕಾಣಿಸಿಕೊಳ್ಳಲಿದ್ದಾರೆ.