ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs PAK: 18 ಓವರ್‌ ಬೌಲ್‌ ಮಾಡಿದ ಸ್ಪಿನ್ನರ್ಸ್‌, ಅಪರೂಪದ ದಾಖಲೆ ಬರೆದ ಪಾಕಿಸ್ತಾನ!

ಭಾರತ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ ವಿಶೇಷ ದಾಖಲೆಯೊಂದನ್ನು ಬರೆದಿದೆ. ಈ ಪಂದ್ಯದಲ್ಲಿ ಪಾಕ್‌ ಒಟ್ಟು ಆರು ಮಂದಿ ಸ್ಪಿನ್ನರ್‌ಗಳನ್ನು ಬಳಸಿಕೊಂಡಿದೆ. 20 ಓವರ್‌ಗಳ ಪೈಕಿ 18 ಓವರ್‌ಗಳನ್ನು ಸ್ಪಿನ್ನರ್‌ಗಳು ಪೂರ್ಣಗೊಳಿಸಿದ್ದಾರೆ.

ಭಾರತದ ಎದುರು ಅಪರೂಪದ ದಾಖಲೆ ಬರೆದ ಪಾಕಿಸ್ತಾನ!

ಭಾರತದ ಎದುರು 6 ಸ್ಪಿನ್ನರ್‌ಗಳನ್ನು ಬಳಸಿದ ಪಾಕಿಸ್ತಾನ. ಚಿತ್ರ-ಐಸಿಸಿ -

Profile
Ramesh Kote Feb 15, 2026 10:00 PM

ಕೊಲಂಬೊ: ಭಾರತ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು (IND vs PAK) ಕಾದಾಟ ನಡೆಸಿದವು. ಈ ಪಂದ್ಯ ಭಾನುವಾರ ಇಲ್ಲಿನ ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಿತು. ಸೂಪರ್‌-8ಕ್ಕೆ ಅರ್ಹತೆ ಪಡೆಯಲು ಈ ಪಂದ್ಯದ ಉಭಯ ತಂಡಗಳಿಗೆ ಅಗತ್ಯವಿತ್ತು. ಈ ಪಂದ್ಯದಲ್ಲಿ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಪಾಕಿಸ್ಥಾನ ತಂಡದ ಯೋಜನೆಯನ್ನು ಭಾರತದ ಬ್ಯಾಟ್ಸ್‌ಮನ್‌ಗಳು ವಿಶೇಷವಾಗಿ ಇಶಾನ್‌ ಕಿಶನ್‌ ಉಲ್ಟಾ ಮಾಡಿದರು. ಎಡಗೈ ಬ್ಯಾಟ್ಸ್‌ಮನ್‌ನ ಅರ್ಧಶತಕದ ಬಲದಿಂದ ಟೀಮ್‌ ಇಂಡಿಯಾ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 175 ರನ್‌ಗಳನ್ನು ಕಲೆ ಹಾಕಿತು. ಈ ಇನಿಂಗ್ಸ್‌ ಮೂಲಕ ಪಾಕಿಸ್ತಾನ ವಿಶೇಷ ದಾಖಲೆಯನ್ನು ಬರೆದಿದೆ. ಟಿ20 ವಿಶ್ವಕಪ್‌ ಇತಿಹಾಸದಲ್ಲಿಯೇ ಸಲ್ಮಾನ್‌ ಆಘಾ (Salman Agha) ನಾಯಕತ್ವದ ಪಾಕ್‌ ನೂತನ ಮೈಲುಗಲ್ಲು ತಲುಪಿದೆ.

ಇಲ್ಲಿನ ಪಿಚ್‌ ಸ್ಪಿನ್‌ ಸ್ನೇಹಿಯಾಗಿತ್ತು, ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡ, ತನ್ನ ಪ್ಲೇಯಿಂಗ್‌ XIನಲ್ಲಿ ಹೆಚ್ಚಿನ ಸ್ಪಿನ್ನರ್‌ಗಳಿಗೆ ಸ್ಥಾನವನ್ನು ನೀಡಿತು. ಸಲ್ಮಾನ್‌ ಅಲಿ ಆಘಾ, ಸೈಯಮ್‌ ಆಯುಬ್‌, ಅಬ್ರಾರ್‌ ಅಹ್ಮದ್‌, ಮೊಹಮ್ಮದ್‌ ನವಾಝ್‌, ಶದಾಬ್‌ ಖಾನ್‌ ಹಾಗೂ ಉಸ್ಮಾನ್‌ ತಾರಿಖ್‌ ಸೇರಿ ಆರು ಮಂದಿ ಪಾಕ್‌ ಇನಿಂಗ್ಸ್‌ನಲ್ಲಿ ಒಟ್ಟು 20 ಓವರ್‌ಗಳ ಪೈಕಿ 18 ಓವರ್‌ಗಳನ್ನು ಬೌಲ್‌ ಮಾಡಿದ್ದರು. ಇನ್ನುಳಿದ ಬಾಕಿ ಎರಡು ಓವರ್‌ಗಳನ್ನು ಶಾಹೀನ್‌ ಶಾ ಅಫ್ರಿದಿ ಹಾಕಿದ್ದರು. 19 ವರ್ಷಗಳ ಟಿ20 ವಿಶ್ವಕಪ್‌ ಟೂರ್ನಿಯ ಇತಿಹಾಸದಲ್ಲಿ ಏಕೈಕ ಇನಿಂಗ್ಸ್‌ನಲ್ಲಿ ಆರು ಮಂದಿ ಸ್ಪಿನ್ನರ್‌ಗಳು ಬೌಲ್‌ ಮಾಡಿದ ಮೊದಲ ತಂಡ ಎಂಬ ಕೀರ್ತಿಗೆ ಪಾಕ್‌ ಭಾಜನವಾಯಿತು.

IND vs PAK: ಸ್ಪೋಟಕ ಅರ್ಧಶತಕ ಸಿಡಿಸಿ ಯುವರಾಜ್‌ ಸಿಂಗ್‌ ದಾಖಲೆ ಮುರಿದ ಇಶಾನ್‌ ಕಿಶನ್!

ಭಾರತ ತಂಡ ಕೂಡ ತನ್ನ ಪ್ಲೇಯಿಂಗ್‌ XIನಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. ಯುವ ವೇಗದ ಬೌಲರ್‌ ಅರ್ಷದೀಪ್‌ ಸಿಂಗ್‌ ಅವರನ್ನು ಕೈ ಬಿಟ್ಟು, ಇವರ ಸ್ಥಾನಕ್ಕೆ ಹೆಚ್ಚುವರಿ ಸ್ಪಿನ್ನರ್‌ ಆಗಿ ಕುಲ್ದೀಪ್‌ ಯಾದವ್‌ ಅವರನ್ನು ಆಡಿಸಲಾಯಿತು. ಒಟ್ಟಾರೆಯಾಗಿ ಭಾರತ ತಂಡದಲ್ಲಿ ಕುಲ್ದೀಪ್‌ ಯಾದವ್‌, ವರುಣ್‌ ಚಕ್ರವರ್ತಿ, ಅಕ್ಷರ್‌ ಪಟೇಲ್‌ ಮೂವರು ಸ್ಪಿನ್ನರ್‌ಗಳನ್ನು ಆಡಿಸಲಾಯಿತು. ಇವರ ಜೊತೆಗೆ ಅಭಿಷೇಕ್‌ ಶರ್ಮಾ ಹಾಗೂ ತಿಲಕ್‌ ವರ್ಮಾ ಅಗತ್ಯ ಬಿದ್ದರೆ ಚೆಂಡನ್ನು ತಿರುಗಿಸಬಲ್ಲರು.

175 ರನ್‌ಗಳನ್ನು ಕಲೆ ಹಾಕಿದ ಭಾರತ

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಭಾರತ ತಂಡ, ಅಭಿಷೇಕ್‌ ಶರ್ಮಾ ಅವರನ್ನು ಬೇಗ ಕಳೆದುಕೊಂಡಿತು. ಆದರೆ, ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌ ತಮ್ಮ ನೈಜ ಆಟವನ್ನು ಪ್ರದರ್ಶಿಸಿದರು. ಅವರು ಆಡಿದ 40 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ 77 ರನ್‌ಗಳನ್ನು ಸಿಡಿಸಿ ವಿಕೆಟ್‌ ಒಪ್ಪಿಸಿದರು. ಅಲ್ಲದೆ, ತಿಲಕ್‌ ವರ್ಮಾ ಅವರ ಜೊತೆಗೆ 87 ರನ್‌ಗಳ ಜೊತೆಯಾಟವನ್ನು ಆಡಿದರು. 25 ರನ್‌ ಗಳಿಸಿ ತಿಲಕ್‌ ಔಟ್‌ ಆದ ಬಳಿಕ ಮುಂದಿನ ಎಸೆತದಲ್ಲಿ ಹಾರ್ದಿಕ್‌ ಪಾಂಡ್ಯ ಗೋಲ್ಡನ್‌ ಡಕ್‌ಔಟ್‌ ಆದರು.

IND vs PAK: ಪಾಕಿಸ್ತಾನ ನಾಯಕ ಸಲ್ಮಾನ್‌ ಆಘಾಗೆ ಹ್ಯಾಂಡ್‌ಶೇಕ್‌ ಮಾಡದ ಸೂರ್ಯಕುಮಾರ್‌ ಯಾದವ್‌!

ಆದರೆ, ನಾಯಕ ಸೂರ್ಯಕುಮಾರ್‌ ಯಾದವ್‌ ಅವರು 29 ಎಸೆತಗಳಲ್ಲಿ 32 ರನ್‌ ಗಳಿಸಿದರು ಹಾಗೂ ಶಿವಂ ದುಬೆ 17 ಎಸೆತಗಳಲ್ಲಿ 27 ರನ್‌ಗಳನ್ನು ಚಚ್ಚಿದರು. ಅಂತಿಮವಾಗಿ ಭಾರತ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು 175 ರನ್‌ ಕಲೆ ಹಾಕಿತು. ಪಾಕಿಸ್ತಾನ ಪರ ಸೈಯಮ್‌ ಆಯುಬ್‌ 3 ವಿಕೆಟ್‌, ಉಸ್ಮಾನ್‌ ತಾರಿಖ್‌, ಸಲ್ಮಾನ್‌ ಆಘಾ, ಶಾಹೀನ್‌ ಅಫ್ರಿದಿ ತಲಾ ಒಂದೊಂದು ವಿಕೆಟ್‌ ಕಿತ್ತರು.