ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ವೇಗದ ಶತಕ ಸಿಡಿಸಿದ ಬಳಿಕ ತಮ್ಮ ಬ್ಯಾಟಿಂಗ್‌ ಗೇಮ್‌ ಪ್ಲ್ಯಾನ್‌ ತಿಳಿಸಿದ ಪ್ರಿಯಾಂಶ್‌ ಆರ್ಯ!

Priyansh Arya on his batting game Plan: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ತನ್ನ ಚೊಚ್ಚಲ ಶತಕ ಸಿಡಿಸುವ ಮೂಲಕ ಪ್ರಿಯಾಂಶ್‌ ಆರ್ಯ, ಪಂಜಾಬ್‌ ಕಿಂಗ್ಸ್‌ನ 18 ರನ್‌ಗಳ ಗೆಲುವಿಗೆ ನೆರವಾದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಬಳಿಕ ಶ್ರೇಯಸ್‌ ಅಯ್ಯರ್‌ ನೀಡಿದ್ದ ಸಲಹೆಯನ್ನು ರಿವೀಲ್‌ ಮಾಡಿದ್ದಾರೆ.

ತಮ್ಮ ಬ್ಯಾಟಿಂಗ್‌ ಗೇಮ್‌ ಪ್ಲ್ಯಾನ್‌ ತಿಳಿಸಿದ ಪ್ರಿಯಾಂಶ್‌ ಆರ್ಯ!

ಸ್ಪೋಟಕ ಶತಕ ಸಿಡಿಸಿದ ತಮ್ಮ ಬ್ಯಾಟಿಂಗ್‌ ಗೇಮ್‌ ಪ್ಲ್ಯಾನ್‌ ತಿಳಿಸಿದ ಪ್ರಿಯಾಂಶ್‌ ಆರ್ಯ.

Profile Ramesh Kote Apr 9, 2025 8:10 AM

ಚಂಡೀಗಢ: ಚೆನ್ನೈ ಸೂಪರ್‌ ಕಿಂಗ್ಸ್‌ ( Chennai Super kings) ವಿರುದ್ಧ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಪಂಜಾಬ್‌ ಕಿಂಗ್ಸ್‌ (Punjab Kings) ಯುವ ಆರಂಭಿಕ ಬ್ಯಾಟ್ಸ್‌ಮನ್‌ ಪ್ರಿಯಾಂಶ್‌ ಆರ್ಯ (Priyansh Arya) ತಮ್ಮ ಚೊಚ್ಚಲ ಐಪಿಎಲ್‌ ಶತಕವನ್ನು ಬಾರಿಸಿದ್ದರು. ಆ ಮೂಲಕ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 22ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಗೆಲ್ಲಲು ನೆರವಾಗಿದ್ದರು. ಆ ಮೂಲಕ ಯುವ ಆರಂಭಿಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಪಂದ್ಯದ ಬಳಿಕ ಮಾತನಾಡಿದ್ದ ಪ್ರಿಯಾಂಶ್‌ ಆರ್ಯ, ನಾಯಕ ಶ್ರೇಯಸ್‌ ಅಯ್ಯರ್‌ ನೀಡಿದ್ದ ಸಲಹೆ ಹಾಗೂ ತಾವು ಅನುಸರಿಸಿದ್ದ ಬ್ಯಾಟಿಂಗ್‌ ಗೇಮ್‌ ಪ್ಲ್ಯಾನ್‌ ಏನೆಂಬುದನ್ನು ರಿವೀಲ್‌ ಮಾಡಿದ್ದಾರೆ.

ಮಂಗಳವಾರ ಇಲ್ಲಿನ ಮುಲ್ಲಾನ್‌ಪುರದ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಪಂಜಾಬ್‌ ಕಿಂಗ್ಸ್‌ ಪರ ಓಪನಿಂಗ್‌ ಬಂದಿದ್ದ ಪ್ರಿಯಾಂಶ್‌ ಆರ್ಯ, ತಾವು ಎದುರಿಸಿದ ಮೊದಲನೇ ಎಸೆತದಲ್ಲಿಯೇ ಖಲೀಲ್‌ ಅಹ್ಮದ್‌ಗೆ ಸಿಕ್ಸರ್‌ ಬಾರಿಸಿದ್ದರು. ಆ ಮೂಲಕ ಸ್ಪೋಟಕ ಆರಂಭ ಪಡೆದಿದ್ದರು. ಅವರು ಸ್ಪೋಟಕ ಬ್ಯಾಟಿಂಗ್‌ ಮುಂದುವರಿಸಿದ ಕೇವಲ 39 ಎಸೆತಗಳಲ್ಲಿ ಶತಕವನ್ನು ಬಾರಿಸಿದ್ದರು. ಅಂತಿಮವಾಗಿ 42 ಎಸೆತಗಳಲ್ಲಿ ಬರೋಬ್ಬರಿ 9 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 103 ರನ್‌ಗಳನ್ನು ಚಚ್ಚಿದ್ದರು. ಆ ಮೂಲಕ ಪಂಜಾಬ್‌ ಕಿಂಗ್ಸ್‌ 219 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದಾರೆ.

PBKS vs CSK: ಸಿಎಸ್‌ಕೆಗೆ ಸತತ ನಾಲ್ಕನೇ ಸೋಲು, ಪಂಜಾಬ್‌ ಕಿಂಗ್ಸ್‌ಗೆ 18 ರನ್‌ ಜಯ!

ತಮ್ಮ ಈ ಸ್ಪೋಟಕ ಇನಿಂಗ್ಸ್‌ ಮೂಲಕ ಪ್ರಿಯಾಂಶ್‌ ಆರ್ಯ ಐಪಿಎಲ್‌ ಇತಿಹಾಸದ ನಾಲ್ಕನೇ ಜಂಟಿ ವೇಗದವನ್ನು ಶತಕವನ್ನು ಬಾರಿಸಿದ್ದರು ಹಾಗೂ ವೇಗದ ಐಪಿಎಲ್‌ ಶತಕ ಬಾರಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಪಂದ್ಯದ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಪ್ರಿಯಾಂಶ್‌ ಆರ್ಯ,"ಸದ್ಯ ನಾನು ಬೇರೆ ಪ್ರಪಂಚದಲ್ಲಿದ್ದೇನೆಂಬ ಭಾವನೆಗಳು ನನ್ನಲ್ಲಿ ಉಂಟಾಗುತ್ತಿದೆ. ನನ್ನ ಬಗ್ಗೆ ನನಗೆ ತುಂಬಾ ಖುಷಿಯಾಗಿದೆ ಆದರೆ, ತಂಡಕ್ಕೆ ಇನ್ನಷ್ಟು ಹೆಚ್ಚಿನದಾಗಿ ನಾನು ಕೊಡುಗೆ ನೀಡಬೇಕು," ಎಂದು ಹೇಳಿದ್ದಾರೆ.

IPL 2025: 39 ಎಸೆತಗಳಲ್ಲಿ ಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಪ್ರಿಯಾಂಶ್‌ ಆರ್ಯ!

ಶ್ರೇಯಸ್‌ ಅಯ್ಯರ್‌ ನೀಡಿದ್ದ ಸಲಹೆ ರಿವೀಲ್‌ ಮಾಡಿದ ಪ್ರಿಯಾಂಶ್‌

ಪಂದ್ಯದ ಆರಂಭಕ್ಕೂ ಮುನ್ನ ಪಂಜಾಬ್‌ ಕಿಂಗ್ಸ್‌ ನಾಯಕ ಶ್ರೇಯಸ್‌ ಅಯ್ಯರ್‌ ಹಾಗೂ ಪ್ರಿಯಾಂಶ್‌ ಆರ್ಯ ಸಂಭಾಷಣೆ ನಡೆಸಿದ್ದರು. ಪಂದ್ಯದ ಮೊದಲನೇ ಎಸೆತದಿಂದಲೇ ಆಕ್ರಮಣಕಾರಿಯಾಗಿ ಬ್ಯಾಟ್‌ ಮಾಡಬೇಕೆಂದು ಶ್ರೇಯಸ್‌ ಅಯ್ಯರ್‌ ಸಲಹೆ ನೀಡಿದ್ದರು ಎಂಬುದು ಯುವ ಆರಂಭಿಕ ಪ್ರಿಯಾಂಶ್‌ ಆರ್ಯ ರಿವೀಲ್‌ ಮಾಡಿದ್ದಾರೆ.

"ನನ್ನ ಉದ್ದೇಶ ಯಾವಾಗಲೂ ಒಂದೇ ರೀತಿ ಇರುತ್ತದೆ. ಶ್ರೇಯಸ್‌ ಭಾಯ್‌ ಹತ್ತಿರ ಮಾತನಾಡಿದಾಗ ಅವರು, ʻಸಕಾರಾತ್ಮಕ ಉದ್ದೇಶದಿಂದ ಬ್ಯಾಟ್‌ ಮಾಡಿ. ಮೊದಲನೇ ಎಸೆತವೇ ಸ್ಲಾಟ್‌ನಲ್ಲಿ ಇದ್ದರೆ ಹೋಗಿ ಹೊಡೆಯಿರಿ,ʼ ಎಂದು ನನಗೆ ಹೇಳಿದ್ದರು. ಅವರು ಹೇಳಿದ ರೀತಿ ಇಂದಿನ ರಾತ್ರಿ (ಮಂಗಳವಾರ) ನಾನು ಮಾಡಿದ್ದೇನೆ," ಎಂದು ಪ್ರಿಯಾಂಶ್‌ ಆರ್ಯ ತಿಳಿಸಿದ್ದಾರೆ.

CSK vs PBKS: ಪಂಜಾಬ್‌ ಎದುರು ಚೆನ್ನೈ ಸೋಲಿಗೆ ಅಸಲಿ ಕಾರಣ ತಿಳಿಸಿದ ಋತುರಾಜ್‌ ಗಾಯಕ್ವಾಡ್‌!

ಸನ್ನಿವೇಶಕ್ಕೆ ತಕ್ಕಂತೆ ಆಡಲು ಬಯಸುತ್ತೇನೆ

ಪ್ರಿಯಾಂಶ್‌ ಆರ್ಯ ಅವರ ಆಕ್ರಮಣಕಾರಿ ಬ್ಯಾಟಿಂಗ್‌ ಹೊರತಾಗಿಯೂ ಪಂಜಾಬ್‌ ಕಿಂಗ್ಸ್‌ ತಂಡ 83 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಪಂದ್ಯದ ಸನ್ನಿವೇಶಕ್ಕೆ ತಕ್ಕಂತೆ ಆಡಬೇಕೆಂದು ಪಂಜಾಬ್‌ ಓಪನರ್‌ ತಿಳಿಸಿದ್ದಾರೆ. ಕ್ರೀಸ್‌ನಲ್ಲಿ ನೆಹಾಲ್‌ ವಧೇರಾ ಅವರ ಜೊತೆ ಪ್ರಿಯಾಂಶ್‌ ಸಂಭಾಷಣೆ ನಡೆಸಿದ್ದರು. ಈ ವೇಳೆ ಅವರು ವಿಕೆಟ್‌ಗಳನ್ನು ಕಳೆದುಕೊಂಡ ಹೊರತಾಗಿಯೂ ನಿಮ್ಮ ಸ್ವಾಭವಿಕ ಆಟವನ್ನು ಮುಂದುವರಿಸಿ ಎಂದು ಹೇಳಿದ್ದರು ಎಂಬ ಮಾತನ್ನು ಪ್ರಿಯಾಂಶ್‌ ಬಹಿರಂಗಪಡಿಸಿದ್ದಾರೆ.

"ನಾನು ಯಾವಾಗಲೂ ಸನ್ನಿವೇಶಕ್ಕೆ ತಕ್ಕಂತೆ ಬ್ಯಾಟ್‌ ಮಾಡಲು ಬಯಸುತ್ತೇನೆ. ನೆಹಾಲ್‌ ವಧೇರಾ ಕ್ರೀಸ್‌ಗೆ ಬಂದ ತಕ್ಷಣ ಅವರ ಜೊತೆ ನಾನು ಮಾತನಾಡಿದೆ. ಈ ವೇಳೆ ಅವರು ನನಗೆ, ನೀವು ನಿಮ್ಮ ಸ್ವಾಭವಿಕ ಆಟ ಆಡುವುದನ್ನು ಮುಂದುವರಿಸಿ ಎಂದಿದ್ದರು ಹಾಗೂ ದೊಡ್ಡ-ದೊಡ್ಡ ಹೊಡೆತಗಳನ್ನು ಆಡಿ ಎಂದು ಹೇಳಿದ್ದರು," ಎಂಬುದನ್ನು ಪಂಜಾಬ್‌ ಕಿಂಗ್ಸ್‌ ಬ್ಯಾಟ್ಸ್‌ಮನ್‌ ತಿಳಿಸಿದ್ದಾರೆ.