ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: GT vs MI ನಡುವೆ ಎಲಿಮಿನೇಟರ್‌ ಪಂದ್ಯ ಗೆಲ್ಲುವ ನೆಚ್ಚಿನ ತಂಡ ಯಾವುದು?

GT vs MI Match Preview: ಗುಜರಾತ್‌ ಟೈಟನ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಮೇ 30 ರಂದು ಮುಲ್ಲನ್‌ಪುರದ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಸಂಭಾವ್ಯ ಪ್ಲೇಯಿಂಗ್‌ XI, ಮುಖಾಮುಖಿ ದಾಖಲೆ ಸೇರಿದಂತೆ ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.

ಎಲಿಮಿನೇಟರ್‌ ಪಂದ್ಯ ಗೆಲ್ಲಲು ಗುಜರಾತ್‌-ಮುಂಬೈ ಸಜ್ಜು!

ಮುಂಬೈ ಇಂಡಿಯನ್ಸ್‌ vs ಗುಜರಾತ್‌ ಟೈಟನ್ಸ್

Profile Ramesh Kote May 29, 2025 6:31 PM

ಚಂಡೀಗಢ: ಸತತ ಎರಡು ಪಂದ್ಯಗಳ ಸೋಲಿನ ಮೂಲಕ ಮೊದಲನೇ ಕ್ವಾಲಿಫೈಯರ್‌ಗೆ ಅರ್ಹತೆಯನ್ನು ಕಳೆದುಕೊಂಡಿರುವ ಗುಜರಾತ್‌ ಟೈಟನ್ಸ್‌(GT) ಹಾಗೂ ಐದು ಬಾರಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ (MI) ತಂಡಗಳು ಮೇ 30 ರಂದು ಶುಕ್ರವಾರ ನಡೆಯುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಕಾದಾಟ ನಡೆಸಲು ಸಜ್ಜಾಗುತ್ತಿವೆ. ಉಭಯ ತಂಡಗಳ ನಡವಣ ಈ ಹೈವೋಲ್ಟೇಜ್‌ ಪಂದ್ಯಕ್ಕೆ ಮುಲ್ಲನ್‌ಪುರದ ಮಹಾರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ದವಾಗಿದೆ.

ಶುಭಮನ್‌ ಗಿಲ್‌ ನಾಯಕತ್ವದ ಗುಜರಾತ್‌ ಟೈಟನ್ಸ್‌ ತಂಡ ಲೀಗ್‌ ಹಂತದ ಆರಂಭಿಕ 6 ಪಂದ್ಯಗಳನ್ನು ಗೆದ್ದುಕೊಂಡಿತ್ತು. ಟೂರ್ನಿಯ ಬಹುತೇಕ ಸಮಯ ಜಿಟಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿತ್ತು. ಆ ಮೂಲಕ ಲೀಗ್‌ ಹಂತವನ್ನು ಅಗ್ರ ಎರಡರಲ್ಲಿ ಮುಗಿಸುವ ನೆಚ್ಚಿನ ತಂಡವಾಗಿದ್ದ ಗುಜರಾತ್‌ ಟೈಟನ್ಸ್‌ ತಂಡ, ಮೊದಲನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿತ್ತು. ಆದರೆ, ಲೀಗ್‌ ಹಂತದ ಕೊನೆಯ ಎರಡು ಪಂದ್ಯಗಳಲ್ಲಿನ ಸೋಲು ಭಾರಿ ಹಿನ್ನಡೆಯನ್ನು ತಂದೊಡ್ಡಿದೆ. ಈ ಕಾರಣದಿಂದಾಗಿ ಮೂರನೇ ಸ್ಥಾನಕ್ಕೆ ಕುಸಿದು ಎಲಿಮಿನೇಟರ್‌ ಪಂದ್ಯವನ್ನು ಆಡಬೇಕಾದ ಪರಿಸ್ಥಿತಿಗೆ ಸಿಲುಕಿತು.

PBKS vs RCB Qualifier 1: ಇಂದಿನ ಪಂಜಾಬ್ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ತಂಡದಲ್ಲಿ 2 ಬದಲಾವಣೆ

ಮತ್ತೊಂದು ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್‌ ತಂಡ ಟೂರ್ನಿಯ ತನ್ನ ಆರಂಭಿಕ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಪಂದ್ಯಗಳನ್ನು ಸೋತಿತ್ತು. ಆದರೆ, ಟೂರ್ನಿಯ ಎರಡನೇ ಹಂತದಲ್ಲಿ ಮುಂಬೈ ಬಲವಾಗಿ ಕಮ್‌ಬ್ಯಾಕ್‌ ಮಾಡಿದೆ. ಸತತ ಆರು ಪಂದ್ಯಗಳಲ್ಲಿ ಗೆಲುವು ಪಡೆಯುವ ಮೂಲಕ ಐದು ಬಾರಿ ಚಾಂಪಿಯನ್ಸ್‌ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಿತು. ಪಂಜಾಬ್‌ ಕಿಂಗ್ಸ್‌ ವಿರುದ್ಧ ಐದು ವಿಕೆಟ್‌ಗಳ ಗೆಲುವಿನ ಮೂಲಕ ಎಲಿಮಿನೇಟರ್‌ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್‌ ಆಗಮಿಸುತ್ತಿದೆ.

ಪಿಚ್‌ ರಿಪೋರ್ಟ್‌

ಚಂಡೀಗಢದ ಮುಲ್ಲನ್‌ಪುರದ ಕ್ರೀಡಾಂಗಣ ಮೊದಲನೇ ಕ್ವಾಲಿಫೈಯರ್‌ ಹಾಗೂ ಎಲಿಮಿನೇಟರ್‌ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಗುರುವಾರ ಈ ಅಂಗಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಮೊದಲನೇ ಕ್ವಾಲಿಫೈಯರ್‌ನಲ್ಲಿ ಕಾದಾಟ ನಡೆಸಲಿವೆ. ಇದಾದ ಒಂದು ದಿನಗಳ ಎಲಿಮಿನೇಟರ್‌ ಪಂದ್ಯ ಕೂಡ ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಅಂಗಣದ ಪಿಚ್‌ ಬ್ಯಾಟ್ಸ್‌ಮನ್‌ಗಳ ಸ್ನೇಹಿಯಾಗಿದೆ. ಈ ಸೀಸನ್‌ನಲ್ಲಿ ಇಲ್ಲಿ ನಾಲ್ಕು ಪಂದ್ಯಗಳು ನಡೆದಿವೆ. ಮೊದಲು ಬ್ಯಾಟ್‌ ಮಾಡಿದ್ದ ತಂಡಗಳು ಮೂರರಲ್ಲಿ ಗೆಲುವು ಪಡೆದಿದ್ದರೆ, ಒಂದು ಪಂದ್ಯವನ್ನು ಚೇಸಿಂಗ್‌ ತಂಡ ಗೆದ್ದಿದೆ. ಪ್ರಥಮ ಇನಿಂಗ್ಸ್‌ನ ಸರಾಸರಿ ಮೊತ್ತ 174 ರನ್‌ಗಳಾಗಿವೆ. ಟಾಸ್‌ ಗೆದ್ದ ತಂಡದ ನಾಯಕ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಳ್ಳಲಿದ್ದಾರೆ.

IPL 2025:ʻದಿಗ್ವೇಶ್‌ ಸಿಂಗ್‌ ರನ್‌ಔಟ್‌ ವಿವಾದʼ-ರಿಷಭ್‌ ಪಂತ್‌ ವಿರುದ್ಧ ಅಶ್ವಿನ್‌ ಕಿಡಿ!

ಪಂದ್ಯದ ವಿವರ

ಮುಂಬೈ ಇಂಡಿಯನ್ಸ್‌ vs ಪಂಜಾಬ್‌ ಕಿಂಗ್ಸ್‌

ಐಪಿಎಲ್‌ 2025-ಎಲಿಮಿನೇಟರ್‌ ಪಂದ್ಯ

ದಿನಾಂಕ: ಮೇ 30, 2025

ಸಮಯ: ಸಂಜೆ 07: 30ಕ್ಕೆ

ಸ್ಥಳ: ಮಹಾರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣ, ಮುಲ್ಲನ್‌ಪುರ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಲೈವ್‌ ಸ್ಟ್ರೀಮಿಂಗ್‌: ಜಿಯೊ ಸಿನಿಮಾ, ಡಿಸ್ನಿ ಹಾಟ್‌ಸ್ಟಾರ್‌

ಮುಖಾಮುಖಿ ದಾಖಲೆ

ಒಟ್ಟು ಆಡಿರುವ ಪಂದ್ಯಗಳು: 07

ಗುಜರಾತ್‌ ಟೈಟನ್ಸ್‌ ಗೆಲುವು: 05

ಮುಂಬೈ ಇಂಡಿಯನ್ಸ್‌: 02

IPL 2025: ಮುಂಬೈ ಅಲ್ಲ! ಈ 2 ತಂಡಗಳು ಫೈನಲ್‌ ಆಡುವುದು ಪಕ್ಕಾ ಎಂದ ರಾಬಿನ್‌ ಉತ್ತಪ್ಪ!

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI

ಗುಜರಾತ್‌ ಟೈಟನ್ಸ್:‌ ಶುಭಮನ್‌ ಗಿಲ್‌ (ನಾಯಕ), ಕುಸಾಲ್‌ ಮೆಂಡಿಸ್‌ (ವಿ.ಕೀ), ಶೆರ್ಫೆನ್‌ ಋದರ್‌ಫೋರ್ಡ್‌, ಶಾರುಖ್‌ ಖಾನ್‌, ರಾಹುಲ್‌ ತೆವಾಟಿಯಾ, ರಶೀದ್‌ ಖಾನ್‌, ಅರ್ಷದ್‌ ಖಾನ್‌, ಜೆರಾಲ್ಡ್‌ ಕೊಯೆಡ್ಜಿ, ಸಾಯಿ ಕಿಶೋರ್‌, ಮೊಹಮ್ಮದ್‌ ಸಿರಾಜ್‌, ಪ್ರಸಿಧ್‌ ಕೃಷ್ಣ

ಇಂಪ್ಯಾಕ್ಸ್‌ ಪ್ಲೇಯರ್‌: ಸಾಯಿ ಸುದರ್ಶನ್‌

ಮುಂಬೈ ಇಂಡಿಯನ್ಸ್‌: ಜಾನಿ ಬೈರ್‌ಸ್ಟೋವ್‌ (ವಿ.ಕೀ), ರೋಹಿತ್‌ ಶರ್ಮಾ, ವಿಲ್‌ ಜ್ಯಾಕ್ಸ್‌, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ, ಹಾರ್ದಿಕ್‌ ಪಾಂಡ್ಯ (ನಾಯಕ), ನಮನ್‌ಧೀರ್‌, ಮಿಚೆಲ್‌ ಸ್ಯಾಂಟ್ನರ್‌, ದೀಪಕ್‌ ಚಹರ್‌, ಟ್ರೆಂಟ್‌ ಬೌಲ್ಟ್‌, ಜಸ್‌ಪ್ರೀತ್‌ ಬುಮ್ರಾ

ಇಂಪ್ಯಾಕ್ಟ್‌ ಪ್ಲೇಯರ್‌: ಕರಣ್‌ ಶರ್ಮಾ