IPL 2025: ʻಲಂಡನ್‌ನಲ್ಲಿ ಸರ್ಜರಿ ಮಾಡಿಸಿಕೊಂಡೆʼ-ಆರ್‌ಸಿಬಿಗೆ ಧನ್ಯವಾದ ತಿಳಿಸಿದ ಸುಯಶ್ ಶರ್ಮಾ!
Suyash Sharma in his hernia surgery: ಹರ್ನಿಯಾ ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸ್ಪಿನ್ನರ್ ಸುಯಶ್ ಶರ್ಮಾ ಧನ್ಯವಾದವನ್ನು ಅರ್ಪಿಸಿದ್ದಾರೆ. ಬೆಂಗಳೂರು ಫ್ರಾಂಚೈಸಿಯು ಹರ್ನಿಯಾ ಶಸ್ತ್ರ ಚಿಕಿತ್ಸೆಗಾಗಿ ಸುಯಶ್ ಶರ್ಮಾ ಅವರನ್ನು ಲಂಡನ್‌ಗೆ ಕಳುಹಿಸಿತ್ತು.

ಶಸಸ್ತ್ರ ಚಿಕಿತ್ಸೆ ಬಗ್ಗೆ ಸುಯಶ್ ಶರ್ಮಾ ಹೇಳಿಕೆ.

ಬೆಂಗಳೂರು: ಹರ್ನಿಯಾ ಸರ್ಜರಿಗೆ ನೆರವು ನೀಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಲೆಗ್ ಸ್ಪಿನ್ನರ್ ಸುಯಶ್ ಶರ್ಮಾ (Suyash Sharma) ಧನ್ಯವಾದವನ್ನು ಅರ್ಪಿಸಿದ್ದಾರೆ. ಗಾಯದ ಕಾರಣ ಟೂರ್ನಿಯ ಆರಂಭಿಕ ಕೆಲ ಪಂದ್ಯಗಳಲ್ಲಿ ನನಗೆ ಅವಕಾಶ ಸಿಗಬಹುದೆಂದು ನಾನು ನಿರೀಕ್ಷೆ ಮಾಡಿರಲಿಲ್ಲ. 2023ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ( IPL 2025) ಟೂರ್ನಿಗೆ ಪದಾರ್ಪಣೆ ಮಾಡಿದ್ದ ಸುಯಶ್ ಶರ್ಮಾ ಎರಡು ವರ್ಷಗಳ ಕಾಲ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದರು. ಕಳೆದ ವರ್ಷ ನಡೆದಿದ್ದ ಮೆಗಾ ಹರಾಜಿನಲ್ಲಿ ಬೆಂಗಳುರು ಫ್ರಾಂಚೈಸಿಯು 2.60 ಕೋಟಿ ರೂ. ಗಳಿಗೆ ಸುಯಶ್ ಶರ್ಮಾ ಅವರನ್ನು ಖರೀದಿಸಿತ್ತು.
ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ ಸುಯಶ್ ಶರ್ಮಾ ಆಡಿದ 22 ಪಂದ್ಯಗಳಿಂದ 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಹಿಂದಿನ ಎರಡು ಋತುಗಳಲ್ಲಿ ಇಂಜೆಕ್ಷನ್ ಚುಚ್ಚಿಕೊಂಡು ಆಡುತ್ತಿರುವುದಾಗಿ ಯುವ ಸ್ಪಿನ್ನರ್ ಹೇಳಿಕೊಂಡಿದ್ದಾರೆ.
ಆರ್‌ಸಿಬಿ ಬೋಲ್ಡ್ ಡೈರಿಸ್‌ನಲ್ಲಿ ಮಾತನಾಡಿದ ಸುಯಶ್ ಶರ್ಮಾ, "ನನಗೆ ತುಂಬಾ ಸಂತೋಷವಾಯಿತು, ಸಂಪೂರ್ಣವಾಗಿ ಸಂತೋಷವಾಯಿತು. ಆರ್‌ಸಿಬಿ ತಂಡದಲ್ಲಿ ನನಗೆ ಒಳ್ಳೆಯ ಅವಕಾಶ ಸಿಗಲಿದೆ ಎಂದು ನನಗೆ ಮೊದಲೇ ಗೊತ್ತಿತ್ತು. ನಾನು ಅಭ್ಯಾಸ ನಡೆಸುತ್ತಿದ್ದೆ, ಇದು ನಡೆದಿದ್ದು ಎರಡು ವರ್ಷಗಳ ಹಿಂದೆ. ಕಳೆದ ಎರಡು ವರ್ಷಗಳ ಕಾಲ ನಾನು ಇಂಜೆಕ್ಷನ್ ಚುಚ್ಚಿಕೊಂಡು ಕ್ರಿಕೆಟ್ ಆಡುತ್ತಿದ್ದೆ. ಸಮಸ್ಯೆ ಏನೆಂದು ನಮಗೆ ತಿಳಿದಿರಲಿಲ್ಲವಾದ್ದರಿಂದ, ಭಾರತದಲ್ಲಿ ಏನು ನಡೆಯುತ್ತಿದೆ ಎಂದು ನಮಗೆ ತಿಳಿದಿರಲಿಲ್ಲ. ನಂತರ ಇದು ನನಗೆ ಸಮಸ್ಯೆಯಾಗಿತ್ತು," ಎಂದು ತಿಳಿಸಿದ್ದಾರೆ.
RCB vs DC: ಕೊಹ್ಲಿ-ಕೃಣಾಲ್ ಅಬ್ಬರ, ಡೆಲ್ಲಿ ಎದುರು ಸೇಡು ತೀರಿಸಿಕೊಂಡ ಆರ್‌ಸಿಬಿ!
"ಸರ್ಜರಿ ಮಾಡಿಸಿಕೊಳ್ಳುವ ಸಲುವಾಗಿ ಆರ್‌ಸಿಬಿ ನನ್ನನ್ನು ಲಂಡನ್‌ಗೆ ಕಳುಹಿಸಿತ್ತು. ಅಲ್ಲಿ ಜೇಮ್ಸ್ ಪೈಪೀ ಇದ್ದರು. ಅವರು ನನ್ನನ್ನು ಕುಟುಂಬದ ಸದಸ್ಯರ ರೀತಿ ನೋಡಿಕೊಂಡಿದ್ದರು. ನನಗೆ ಮೂರು ಹರ್ನಿಯಾಸ್ ಇತ್ತು, ನಾನು ನಿಜ ಹೇಳುತ್ತಿದ್ದೇನೆ-ಮೊದಲನೇ ಪಂದ್ಯವನ್ನು ಆಡುತ್ತೇನೆಂದು ನನಗೆ ತಿಳಿದಿರಲಿಲ್ಲ. ದೊಡ್ಡ ಸರ್ಜರಿ ಮಾಡಿಕೊಂಡಿರುವ ಕಾರಣ ಮುಂದಿನ ಮೂರು ಅಥವಾ ನಾಲ್ಕು ಪಂದ್ಯಗಳ ಬಳಿಕ ಆರ್‌ಸಿಬಿಯಲ್ಲಿ ಆಡಲು ಅವಕಾಶ ಸಿಗಬಹುದು ಎಂದು ನಾನು ಭಾವಿಸಿದ್ದೆ," ಎಂದು ಸುಯಶ್ ಶರ್ಮಾ ಹೇಳಿದ್ದಾರೆ.
Through the thick and thin, RCB never let Suyash walk alone! 🥹 ❤
— Royal Challengers Bengaluru (@RCBTweets) May 1, 2025
🎥 Watch the full video, ‘𝐒𝐮𝐲𝐚𝐬𝐡 𝐒𝐡𝐚𝐫𝐦𝐚: 𝐓𝐡𝐞 𝐒𝐮𝐫𝐯𝐢𝐯𝐨𝐫’ on our Instagram and YouTube channels. 🙌#PlayBold #ನಮ್ಮRCB #IPL2025 pic.twitter.com/YnYf3DwsCX
"ನನ್ನನ್ನು ಜೇಮ್ಸ್ ತುಂಬಾ ಚೆನ್ನಾಗಿ ನೋಡಿಕೊಂಡಿದ್ದರು. ಬೇರೆಯವರಿಗಿಂತ ಚೆನ್ನಾಗಿ ನನ್ನನ್ನು ಹಾರೈಸಿದ್ದರು. ಈ ಫ್ರಾಂಚೈಸಿಗೆ ಬಂದಿದ್ದು ನನ್ನ ಪಾಲಿಗೆ ಪುಣ್ಯ ಹಾಗೂ ಇದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ನಾನು ಸಂಪೂರ್ಣವಾಗಹಿ ಫಿಟ್ ಆಗಿದ್ದೇನೆ. ಕಳೆದ ಎರಡು ವರ್ಷಗಳಿಂದ ನಾನು ಈ ಸಮಸ್ಯೆಯನ್ನು ಎದುರಿಸುತ್ತಿದೇನೆ. ಆಟ ಆಡುವಾಗ ನನಗೆ ಸ್ವಲ್ಪ ನೋವು ಕಾಣಿಸಿಕೊಳ್ಳುತ್ತಿತ್ತು," ಎಂದು ಆರ್‌ಸಿಬಿ ಸ್ಪಿನ್ನರ್ ತಿಳಿಸಿದ್ದಾರೆ.
ಆರ್‌ಸಿಬಿ ಪರ ಆಡಿದ 9 ಪಂದ್ಯಗಳಲ್ಲಿ ಸುಯಶ್ ಶರ್ಮಾ 7.97ರ ಎಕಾನಮಿ ರೇಟ್‌ನಲ್ಲಿ 4 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಪ್ರಿಲ್ 20 ರಂದು ಪಂಜಾಬ್ ಕಿಂಗ್ಸ್ ಎದುರು ಅವರು 4 ಓವರ್‌ಗಳಿಗೆ 26 ರನ್ ನೀಡಿ 2 ವಿಕೆಟ್ ಕಿತ್ತಿದ್ದು ಸುಯಶ್ ಶರ್ಮಾರ ಅತ್ಯುತ್ತಮ ಬೌಲಿಂಗ್ ಸ್ಪೆಲ್ ಆಗಿದೆ. ಆಡಿದ 10 ಪಂದ್ಯಗಳಿಂದ 14 ಅಂಕಗಳನ್ನು ಕಲೆ ಹಾಕಿರುವ ಆರ್‌ಸಿಬಿ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ.