ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಭುವನೇಶ್ವರ್ ಕುಮಾರ್‌ ದಾಖಲೆ ದಾಖಲೆ ಮುರಿದ ಜಸ್‌ಪ್ರೀತ್ ಬುಮ್ರಾ!

Jasprit Bumrah overtakes Bhuvneshwar Kumar: ಗುಜರಾತ್ ಟೈಟನ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 3 ವಿಕೆಟ್ ಸೋಲು ಅನುಭವಿಸಿತು. ಆದರೆ ಈ ಪಂದ್ಯದಲ್ಲಿ ಶುಭಮನ್ ಗಿಲ್ ಹಾಗೂ ಶಾರುಖ್ ಖಾನ್ ರವರನ್ನು ಬೌಲ್ಡ್ ಮಾಡಿದ ವೇಗಿ ಜಸ್‌ಪ್ರೀತ್ ಬುಮ್ರಾ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಭುವನೇಶ್ವರ್ ಕುಮಾರ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಭುವನೇಶ್ವರ್‌ ಕುಮಾರ್‌ ದಾಖಲೆ ಮುರಿದ ಜಸ್‌ಪ್ರೀತ್‌ ಬುಮ್ರಾ!

ಭುವನೇಶ್ವರ್‌ ಕುಮಾರ್‌ ದಾಖಲೆ ಮುರಿದ ಜಸ್‌ಪ್ರೀತ್‌ ಬುಮ್ರಾ.

Profile Ramesh Kote May 7, 2025 8:43 PM

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವೇಗಿ ಜಸ್‌ಪ್ರೀತ್ ಬುಮ್ರಾ (Jasprit Bumrah) ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಆ ಮೂಲಕ ಮುಂಬೈ ಇಂಡಿಯನ್ಸ್ ತಂಡ ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಇವರು ಮಹತ್ತರ ಪಾತ್ರ ವಹಿಸಿದ್ದಾರೆ. ಮಂಗಳವಾರ (ಮೇ 6) ಗುಜರಾತ್ ಟೈಟನ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲೂ ಕೂಡ ಬುಮ್ರಾ , ನಾಯಕ ಶುಭಮನ್ ಗಿಲ್ ಹಾಗೂ ಶಾರುಖ್ ಖಾನ್ ಅವರನ್ನು ಬೌಲ್ಡ್ ಮಾಡಿದರು. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ 43 ಬೌಲ್ಡ್ ಮಾಡಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ (41 ) ದಾಖಲೆಯನ್ನು ಮುರಿದಿದ್ದಾರೆ.

ಪ್ರಸಕ್ತ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ತಂಡದಿಂದ ದೂರ ಉಳಿದಿದ್ದ ಜಸ್‌ಪ್ರೀತ್ ಬುಮ್ರಾ, ನಂತರ ಆಡಿರುವ ಎಂಟು ಪಂದ್ಯಗಳಲ್ಲಿ 6.68ರ ಸರಾಸರಿಯಲ್ಲಿ 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 22 ರನ್‌ಗಳಿಗೆ 4 ವಿಕೆಟ್ ಇವರ ಉತ್ತಮ ಬೌಲಿಂಗ್‌ ಪ್ರದರ್ಶನವಾಗಿದೆ. ಈ ಪ್ರದರ್ಶನದಿಂದಲೇ ಆರಂಭಿಕ 4 ಪಂದ್ಯಗಳಲ್ಲಿ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್, ನಂತರ ಸತತ 6 ಪಂದ್ಯಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದೆ.

MI vs GT: ಲೋಸ್ಕೋರಿಂಗ್‌ ಪಂದ್ಯದಲ್ಲಿ ಮುಂಬೈ ಸದ್ದಡಗಿಸಿದ ಗುಜರಾತ್‌ ಟೈಟನ್ಸ್‌!

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೌಲ್ಡ್ ಮಾಡಿದ ಬೌಲರ್‌ಗಳು

* 63- ಲಸಿತ್ ಮಾಲಿಂಗ

* 53- ಸುನೀಲ್ ನರೇನ್

* 50- ಪಿಯೂಷ್ ಚಾವ್ಲಾ

* 43- ಜಸ್‌ಪ್ರೀತ್ ಬುಮ್ರಾ

* 40- ಭುವನೇಶ್ವರ್ ಕುಮಾರ್

ಮುಂಬೈ ಇಂಡಿಯನ್ಸ್‌ಗೆ 3 ವಿಕೆಟ್ ಸೋಲು

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿದ್ದ ಟೂರ್ನಿಯ 56ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಮುಂಬೈ ಇಂಡಿಯನ್ಸ್, ವಿಲ್ ಜಾಕ್ಸ್ ಅರ್ಧಶತಕ (53 ರನ್) ಹಾಗೂ ಸೂರ್ಯಕುಮಾರ್ ಯಾದವ್ (35 ರನ್) ಬ್ಯಾಟಿಂಗ್‌ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತ್ತು. ಗುಜರಾತ್ ಟೈಟನ್ಸ್ ಪರ ಸಾಯಿ ಕಿಶೋರ್ (34ಕ್ಕೆ2) ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು.

IPL 2025: 43 ರನ್‌ ಗಳಿಸಿ ವಿರಾಟ್‌ ಕೊಹ್ಲಿ ಒಳಗೊಂಡ ಎಲೈಟ್‌‌ ಲಿಸ್ಟ್ ಸೇರಿದ ಶುಭಮನ್‌ ಗಿಲ್‌!

ಬಳಿಕ ಗುರಿ ಹಿಂಬಾಲಿಸಿದ ಗುಜರಾತ್ ಟೈಟನ್ಸ್‌ಗೆ ಮಳೆ ಕಾಟ ನೀಡಿತ್ತು. 18 ಓವರ್‌ಗಳಿಗೆ ಜಿಟಿ 132 ರನ್‌ಗಳನ್ನು ಕಲೆ ಹಾಕಿದ್ದ ವೇಳೆ ಜೋರಾಗಿ ಮಳೆ ಬಂದಿತ್ತು. ಈ ವೇಳೆ ಆಟವನ್ನು ನಿಲ್ಲಿಸಲಾಗಿತ್ತು. ಮಳೆ ನಿಂತ ಬಳಿಕ ಡಿಎಲ್‌ಎಸ್‌ ನಿಯಮದ ಪ್ರಕಾರ ಪಂದ್ಯವನ್ನು 19 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಅದರಂತೆ ಕೊನೆಯ ಓವರ್‌ನಲ್ಲಿ ಗುಜರಾತ್‌ಗೆ 15 ರನ್‌ ಗುರಿಯನ್ನು ನೀಡಲಾಗಿತ್ತು. ರಾಹುಲ್‌ ತೆವಾಟಿಯಾ ಹಾಗೂ ಜೆರಾಲ್ಡ್‌ ಕೊಯೆಡ್ಜಿ ಕ್ರಮವಾಗಿ ಬೌಂಡರಿ ಹಾಗೂ ಸಿಕ್ಸರ್‌ ಸಿಡಿಸಿ ಗುಜರಾತ್‌ಗೆ ಗೆಲುವು ತಂದುಕೊಟ್ಟರು.