ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಡೆಲ್ಲಿ vs ಪಂಜಾಬ್‌ ಪಂದ್ಯ ರದ್ದಾದ ಬಳಿಕ 7 ತಂಡಗಳ ಪ್ಲೇಆಫ್ಸ್‌ ಲೆಕ್ಕಾಚಾರ!

ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ಪಾಕಿಸ್ತಾನದ ವಾಯುದಾಳಿಯ ಕಾರಣ ರದ್ದುಗೊಳಿಸಲಾಯಿತು, ಇದರಿಂದಾಗಿ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ಹಂಚಬಹುದು. ಇದು ನಡೆದರೆ ಪಂಜಾಬ್ 16 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿ ಉಳಿದರೆ, ಡೆಲ್ಲಿ 14 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿ ಉಳಿಯಲಿದೆ. ಇದರೊಂದಿಗೆ ಎಲ್ಲಾ ಏಳು ತಂಡಗಳ ಪ್ಲೇಆಫ್ಸ್‌ ಲೆಕ್ಕಾಚಾರ ಬದಲಾಗಿದೆ.

IPL 2025:  ಆರ್‌ಸಿಬಿ ಸೇರಿದಂತೆ 7 ತಂಡಗಳ ಪ್ಲೇಆಫ್ಸ್‌ ಲೆಕ್ಕಾಚಾರ!

2025ರ ಐಪಿಎಲ್‌ ಪ್ಲೇಆಫ್ಸ್‌ ಲೆಕ್ಕಾಚಾರ.

Profile Ramesh Kote May 9, 2025 12:20 AM

ಧರ್ಮಶಾಲಾ: ಗುರುವಾರ ಇಲ್ಲಿ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC vs PBKS) ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಪಂದ್ಯವನ್ನು ಭದ್ರತಾ ಕಾರಣಗಳಿಂದ ಅರ್ಧಕ್ಕೆ ರದ್ದುಗೊಳಿಸಲಾಯಿತು. ಇಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುದಾಳಿ ಎಚ್ಚರಿಕೆ ನೀಡಲಾಗಿದ್ದು, ನಗರದಲ್ಲಿ 'ಕತ್ತಲೆ' ಆವರಿಸಿದೆ. ಆರಂಭದಲ್ಲಿ ಫ್ಲಡ್‌ಲೈಟ್‌ಗಳ ಅಸಮರ್ಪಕ ಕಾರ್ಯವೇ ಕಾರಣ ಎಂದು ಹೇಳಲಾಗಿದ್ದರೂ, ಭದ್ರತೆಯ ಕಾರಣ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಸ್ಪಷ್ಟಪಡಿಸಿದೆ. ಅಂದ ಹಾಗೆ ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ 10.1 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 122 ರನ್ ಗಳಿಸಿತ್ತು.

ಪಂದ್ಯವನ್ನು ನಿಲ್ಲಿಸಿದ ಬಳಿಕ ತಂಡಗಳು ಮತ್ತು ಪ್ರೇಕ್ಷಕರನ್ನು ಅವರ ಸುರಕ್ಷತೆಗಾಗಿ ಕ್ರೀಡಾಂಗಣದಿಂದ ಸ್ಥಳಾಂತರಿಸಲಾಯಿತು. ಪ್ರಭ್‌ಸಿಮ್ರನ್ ಸಿಂಗ್ 28 ಎಸೆತಗಳಲ್ಲಿ 50 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು ಮತ್ತು ಅವರ ಆರಂಭಿಕ ಪಾಲುದಾರ ಪ್ರಿಯಾಂಶ್ ಆರ್ಯ 34 ಎಸೆತಗಳಲ್ಲಿ 70 ರನ್ ಗಳಿಸಿದ ಬಳಿಕ ವೇಗಿ ಟಿ ನಟರಾಜನ್ ಅವರನ್ನು ಔಟ್ ಮಾಡಿದರು. ನಂತರ ಆಟವನ್ನು ತಕ್ಷಣವೇ ನಿಲ್ಲಿಸಬೇಕಾಯಿತು. ಪಂದ್ಯ ರದ್ದಾದ ಕಾರಣ ಎರಡೂ ತಂಡಗಳು ತಲಾ ಒಂದೊಂದು ಅಂಕವನ್ನು ಹಂಚುವ ಸಾಧ್ಯತೆ ಇದೆ. ಈ ಪಂದ್ಯದ ಬಳಿಕ ಏಳು ತಂಡಗಳ ಪ್ಲೇಆಫ್ಸ್‌ ಲೆಕ್ಕಾಚಾರ ಇನ್ನಷ್ಟು ಆಸಕ್ತಿಯಿಂದ ಕೂಡಿದೆ.

DC vs PBKS: ಪಾಕ್‌ ದಾಳಿಯ ಕಾರಣ ಪಂಜಾಬ್‌ vs ಡೆಲ್ಲಿ ನಡುವಣ ಪಂದ್ಯ ರದ್ದು!

ಏಳು ತಂಡಗಳ ಪ್ಲೇಆಫ್ಸ್‌ ಲೆಕ್ಕಾಚಾರದ ವಿವರ

ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ರದ್ದಾದ ಕಾರಣ ಎರಡೂ ತಂಡಗಳು ತಲಾ ಒಂದು ಅಂಕವನ್ನು ಪಡೆಯಬಹುದು. ಒಂದು ವೇಳೆ ಒಂದು ಪಡೆದ ಪಂಜಾಬ್ ಕಿಂಗ್ಸ್ 16 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿ ಉಳಿದರೆ, ಡೆಲ್ಲಿ 14 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಉಳಿಯಲಿದೆ. ಇದರಿಂದಾಗಿ ಪ್ಲೇಆಫ್ಸ್‌ ಲೆಕ್ಕಾಚಾರ ಬದಲಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಹೊರತುಪಡಿಸಿ, ಇನ್ನುಳಿದ ಎಲ್ಲಾ ತಂಡಗಳು ಇನ್ನೂ 16 ಅಂಕಗಳನ್ನು ಕಲೆ ಹಾಕಬಹುದು. ಆದರೆ ಈ ಬಾರಿ ಪ್ಲೇಆಫ್ಸ್ ತಲುಪಲು 16 ಅಂಕಗಳು ಸಾಕಾಗುವುದಿಲ್ಲ, ಏಕೆಂದರೆ 16 ಅಂಕಗಳನ್ನು ಕಲೆ ಹಾಕಿದರೂ ರನ್‌ರೇಟ್‌ ಪ್ರಮುಖ ಪಾತ್ರವಹಿಸಲಿದೆ. ಉತ್ತಮ ರನ್‌ರೇಟ್‌ ಹೊಂದಿರುವ ತಂಡ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲಿದೆ. ಹಾಗಾಗಿ ಎಲ್ಲಾ ತಂಡಗಳು ಕನಿಷ್ಠ 18 ಅಂಕಗಳನ್ನು ತಲುಪಲು ಬಯಸುತ್ತಿವೆ. ಅಗ್ರ 5 ತಂಡಗಳು ಮಾತ್ರ 18 ಅಂಕಗಳನ್ನು ಕಲೆ ಹಾಕಬಹುದು.

IPL 2025: ಗಾಯಗೊಂಡು ಐಪಿಎಲ್‌ನಿಂದ ಹೊರಬಿದ್ದ ರಾಜಸ್ಥಾನ್‌ ತಂಡದ ನಿತೀಶ್‌ ರಾಣಾ

ಗುಜರಾತ್ ಟೈಟನ್ಸ್- 18 ಅಂಕಗಳನ್ನು ಗಳಿಸಲು 3 ಪಂದ್ಯಗಳಲ್ಲಿ ಒಂದು ಗೆಲುವು ಅಗತ್ಯ

ಆರ್‌ಸಿಬಿ- 18 ಅಂಕಗಳನ್ನು ಗಳಿಸಲು 3 ಪಂದ್ಯಗಳಲ್ಲಿ ಒಂದು ಗೆಲುವು ಅಗತ್ಯ

ಪಂಜಾಬ್ ಕಿಂಗ್ಸ್- 18 ಅಂಕಗಳನ್ನು ಗಳಿಸಲು 2 ಪಂದ್ಯಗಳಲ್ಲಿ ಒಂದು ಗೆಲುವು ಅಗತ್ಯ

ಮುಂಬೈ ಇಂಡಿಯನ್ಸ್- 18 ಅಂಕಗಳನ್ನು ಗಳಿಸಲು 2 ಪಂದ್ಯಗಳಲ್ಲಿ 2 ಗೆಲುವು ಅಗತ್ಯ

ಡೆಲ್ಲಿ ಕ್ಯಾಪಿಟಲ್ಸ್- 18 ಅಂಕಗಳನ್ನು ಗಳಿಸಲು 2 ಪಂದ್ಯಗಳನ್ನು ಗೆಲ್ಲಬೇಕು.

PBKS vs DC: ಇಂದಿನ ಐಪಿಎಲ್‌ ಪಂದ್ಯಕ್ಕೆ ಭಾರೀ ಭದ್ರತೆ; ಪ್ರೇಕ್ಷಕರ ಸಂಖ್ಯೆಯೂ ಕಡಿತ ಸಾಧ್ಯತೆ

ಎಲ್‌ಎಸ್‌ಜಿಯ ಲೆಕ್ಕಾಚಾರ ಹೇಗಿದೆ?

ಲಖನೌ ಸೂಪರ್ ಜಯಂಟ್ಸ್ ತನ್ನ 3 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆಲ್ಲುವ ಮೂಲಕ 16 ಅಂಕಗಳನ್ನು ತಲುಪಬಹುದು. ಆದರೆ ಕಳಪೆ ರನ್‌ರೇಟ್‌ನಿಂದ ಆ ತಂಡ ಪ್ಲೇಆಫ್ ತಲುಪುವುದು ಕಷ್ಟಕರವಾಗಿದೆ. ಆದಾಗ್ಯೂ, ಅಗ್ರ 4 ರಲ್ಲಿರುವ ತಂಡಗಳು 18 ಅಂಕಗಳನ್ನು ತಲುಪಿದರೆ, ಲಖನೌ ತಂಡದ ಪ್ಲೇಆಫ್ಸ್‌ ಪಯಣ ಅಂತ್ಯವಾಗಲಿದೆ. ಇನ್ನು ಎರಡೂ ಪಂದ್ಯಗಳನ್ನು ಗೆದ್ದರೂ ಕೆಕೆಆರ್ ಕೇವಲ 15 ಅಂಕಗಳನ್ನು ಮಾತ್ರ ಗಳಿಸಲು ಸಾಧ್ಯವಾಗುತ್ತದೆ. ಅಂದ ಹಾಗೆ ಕೆಕೆಆರ್‌ ಪ್ಲೇಆಫ್ಸ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ.