ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PBKS vs DC: ಇಂದಿನ ಐಪಿಎಲ್‌ ಪಂದ್ಯಕ್ಕೆ ಭಾರೀ ಭದ್ರತೆ; ಪ್ರೇಕ್ಷಕರ ಸಂಖ್ಯೆಯೂ ಕಡಿತ ಸಾಧ್ಯತೆ

ಧರ್ಮಶಾಲಾದ ಪಿಚ್‌ ಬೌಲಿಂಗ್‌-ಬ್ಯಾಟಿಂಗ್‌ಗೆ ಸಮಾನ ನೆರವು ನೀಡುತ್ತದೆ. ಸ್ವಿಂಗ್‌ ಬೌಲರ್‌ಗಳು ಹೆಚ್ಚಿನ ನೆರವು ಪಡೆಯಲಿದ್ದಾರೆ. ಇದುವರೆಗೆ ಇಲ್ಲಿ ನಡೆದಿರುವ ಪಂದ್ಯಗಳಲ್ಲಿ 9 ಬಾರಿ ಮೊದಲು ಬ್ಯಾಟಿಂಗ್‌ ಮಾಡಿದ ತಂಡ, 5 ಬಾರಿ ಚೇಸಿಂಗ್‌ ಮಾಡಿದ ತಂಡಗಳು ಗೆಲುವು ಸಾಧಿಸಿವೆ.

ಇಂದಿನ ಐಪಿಎಲ್‌ ಪಂದ್ಯಕ್ಕೆ ಭಾರೀ ಭದ್ರತೆ; ಪ್ರೇಕ್ಷಕರ ಸಂಖ್ಯೆಯೂ ಕಡಿತ!

Profile Abhilash BC May 8, 2025 8:18 AM

ಧರ್ಮಶಾಲಾ: ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ಗುರುವಾರ ಧರ್ಮಶಾಲಾದ(Dharamsala ) ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌(PBKS vs DC) ನಡುವಣ ಪಂದ್ಯಕ್ಕೆ ಭಾರೀ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಪಂದ್ಯಕ್ಕೆ 20,000 ಕ್ಕೂ ಹೆಚ್ಚು ಜನರು ಭಾಗವಹಿಸುವುದಕ್ಕೆ ಅವಕಾಶ ನೀಡುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.

ಡೆಲ್ಲಿ ಇದುವರೆಗೆ ಆಡಿದ 11 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು 13 ಅಂಕ ಗಳಿಸಿದೆ. ಅದು ಬಾಕಿ 3 ಪಂದ್ಯ ಗೆದ್ದರೆ ಮಾತ್ರ ಪ್ಲೇ ಆಫ್‌ ಪ್ರವೇಶಿಸಲಿದೆ. ಹೀಗಾಗಿ ಡೆಲ್ಲಿಗೆ ಇಂದಿನ ಪಂದ್ಯ ನಿರ್ಣಾಯಕವೆನಿಸಿದೆ. ಸೋತರೆ ಹೊರಬೀಳುವುದು ಬಹುತೇಕ ಖಾತ್ರಿ. ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 7 ಜಯ, 3 ಸೋಲು, 1 ರದ್ದು ಒಳಗೊಂಡಂತೆ 15 ಅಂಕ ಕಲೆಹಾಕಿರುವ ಪಂಜಾಬ್​ ತಂಡ ಈ ಪಂದ್ಯ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದೆ.

ಪಿಚ್‌ ರಿಪೋರ್ಟ್‌

ಧರ್ಮಶಾಲಾದ ಪಿಚ್‌ ಬೌಲಿಂಗ್‌-ಬ್ಯಾಟಿಂಗ್‌ಗೆ ಸಮಾನ ನೆರವು ನೀಡುತ್ತದೆ. ಸ್ವಿಂಗ್‌ ಬೌಲರ್‌ಗಳು ಹೆಚ್ಚಿನ ನೆರವು ಪಡೆಯಲಿದ್ದಾರೆ. ಇದುವರೆಗೆ ಇಲ್ಲಿ ನಡೆದಿರುವ ಪಂದ್ಯಗಳಲ್ಲಿ 9 ಬಾರಿ ಮೊದಲು ಬ್ಯಾಟಿಂಗ್‌ ಮಾಡಿದ ತಂಡ, 5 ಬಾರಿ ಚೇಸಿಂಗ್‌ ಮಾಡಿದ ತಂಡಗಳು ಗೆಲುವು ಸಾಧಿಸಿವೆ.

ಇದನ್ನೂ ಓದಿ IPL 2025: ಪಂಜಾಬ್-ಮುಂಬೈ ಪಂದ್ಯದ ಸ್ಥಳ ಬದಲಾವಣೆ ಸಾಧ್ಯತೆ!

ಸಂಭಾವ್ಯ ತಂಡಗಳು

ಪಂಜಾಬ್‌ ಕಿಂಗ್ಸ್‌: ಪ್ರಿಯಾಂಶ್‌ ಆರ್ಯ, ಪ್ರಭಸಿಮ್ರಾನ್‌ ಸಿಂಗ್‌, ಶ್ರೇಯಸ್‌ ಅಯ್ಯರ್‌ (ನಾಯಕ), ಜೋಶ್‌ ಇಂಗ್ಲಿಸ್‌, ಶಶಾಂಕ್‌ ಸಿಂಗ್‌, ನೇಹಲ್‌ ವಧೇರ, ಮಾರ್ಕಸ್‌ ಸ್ಟಾಯಿನಿಸ್‌, ಅಜ್ಮತುಲ್ಲ ಒಮರ್ಜಾಯ್‌, ಮಾರ್ಕೊ ಜಾನ್ಸೆನ್‌, ಯಜುವೇಂದ್ರ ಚಹಲ್‌, ಅರ್ಶದೀಪ್‌ ಸಿಂಗ್‌.

ಡೆಲ್ಲಿ ಕ್ಯಾಪಿಟಲ್ಸ್‌: ಫಾ ಡು ಪ್ಲೆಸಿಸ್‌, ಅಭಿಷೇಕ್‌ ಪೊರೆಲ್‌, ಕರುಣ್‌ ನಾಯರ್‌, ಕೆ.ಎಲ್‌.ರಾಹುಲ್‌, ಅಕ್ಷರ್‌ ಪಟೇಲ್‌, ಟ್ರಿಸ್ಟನ್‌ ಸ್ಟಬ್ಸ್, ವಿಪ್ರಜ್‌ ನಿಗಮ್‌, ಮಿಚೆಲ್‌ ಸ್ಟಾರ್ಕ್‌, ದುಷ್ಮಂತ ಚಮೀರ, ಕುಲದೀಪ್‌ ಯಾದವ್‌, ಟಿ.ನಟರಾಜನ್‌.