ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಪಂಜಾಬ್ ವಿರುದ್ಧದ ಸೋಲಿಗೆ ಕಾರಣ ಕೊಟ್ಟ ಜಿ.ಟಿ ಕೋಚ್ ಪಾರ್ಥಿವ್ ಪಟೇಲ್!

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 19ನೇ ಆವೃತ್ತಿಯಲ್ಲಿ ಮಾಜಿ ಚಾಂಪಿಯನ್ಸ್‌ ಗುಜರಾತ್‌ ಟೈಟನ್ಸ್ ತಂಡ ಶುಭಾರಂಭ ಮಾಡಲು ವಿಫಲವಾಗಿದೆ. ಸ್ಟಾರ್‌ ಆಟಗಾರರ ದಂಡನ್ನೇ ಹೊಂದಿರುವ ಟೈಟನ್ಸ್‌ ತಂಡ ಪಂಜಾಬ್‌ ಕಿಂಗ್ಸ್‌ ಎದುರು ಕೊನೇ ಓವರ್‌ನಲ್ಲಿ ಸೋಲನುಭವಿಸಿತು. ಈ ಬಗ್ಗೆ ತಂಡದ ಸಹಾಯಕ ಕೋಚ್‌ ಪಾರ್ಥಿವ್‌ ಪಟೇಲ್‌ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪಂಜಾಬ್ ವಿರುದ್ಧದ ಸೋಲಿಗೆ ಕಾರಣ ಕೊಟ್ಟ ಜಿ.ಟಿ ಕೋಚ್ ಪಾರ್ಥಿವ್ ಪಟೇಲ್!

ಜಿ.ಟಿ ತಂಡದ ಸಹಾಯಕ ಕೋಚ್‌ ಪಾರ್ಥಿವ್ ಪಟೇಲ್. -

Vijeth Kumar DN
Vijeth Kumar DN Apr 1, 2026 7:59 PM

ಬೆಂಗಳೂರು: ಐಪಿಎಲ್ 2026 ಮಾಜಿ ಚಾಂಪಿಯನ್ಸ್‌ ಗುಜರಾತ್‌ ಟೈಟನ್ಸ್‌ ತಂಡ ಆಡಿದ ಆರಂಭಿಕ ಪಂದ್ಯದಲ್ಲಿ ಅಪಾಯಕಾರಿ ಪಂಜಾಬ್‌ ಕಿಂಗ್ಸ್‌ ಎದುರು ಮೂರು ವಿಕೆಟ್‌ಗಳಿಂದ ಸೋಲನುಭವಿಸಿತು. ಈ ಸೋಲಿನ ನಂತರ ಮಾತನಾಡಿದ ತಂಡದ ಸಹಾಯಕ ಕೋಚ್ ಪಾರ್ಥಿವ್‌ ಪಟೇಲ್‌ ಪಿಚ್ ಪರಿಸ್ಥಿತಿಯೇ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

ಪಂಜಾಬ್ ತಂಡ 163 ರನ್ ಗುರಿಯನ್ನು ಬೆನ್ನತ್ತಿ ಕೊನೆಯ ಓವರ್‌ವರೆಗೆ ಹೋರಾಟ ನಡೆಸಿ ಜಯ ಸಾಧಿಸಿತು. ಪಂದ್ಯ ನಂತರ ಮಾತನಾಡಿದ ಪಾರ್ಥಿವ್, "ಇದು ಬ್ಯಾಟಿಂಗ್ ಮಾಡಲು ಸುಲಭವಾದ ಪಿಚ್ ಅಲ್ಲ. ಕಳೆದ ಮೂರು-ನಾಲ್ಕು ದಿನಗಳಿಂದ ಮಳೆ ಬಂದಿದ್ದು, ಪಿಚ್ ಮೇಲೆ ಅದರ ಪರಿಣಾಮ ಕಂಡುಬಂದಿತು," ಎಂದು ಹೇಳಿದರು.

IPL 2026: ಶ್ರೇಯಸ್‌ ಅಯ್ಯರ್‌ಗೆ ಗಾಯದ ಬಗ್ಗೆ ಅಪ್‌ಡೇಟ್‌ ನೀಡಿದ ಯುಜ್ವೇಂದ್ರ ಚಹಲ್‌!

ಅವರು ವಿವರಿಸಿದಂತೆ, ಚೆಂಡು ಹಳೆಯದಾದ ನಂತರ ಸ್ವಲ್ಪ ರಿವರ್ಸ್ ಸ್ವಿಂಗ್ ಆಗುತ್ತಿತ್ತು ಮತ್ತು ಪಿಚ್‌ನಲ್ಲಿ ಹಿಡಿತವೂ ಕಾಣಿಸುತ್ತಿತ್ತು. ಪವರ್‌ಪ್ಲೇ ನಂತರ ಬ್ಯಾಟಿಂಗ್ ಮಾಡುವುದು ಬಹಳಾ ಕಷ್ಟಕರವಾಗಿತ್ತು ಎಂದು ಹೇಳಿದರು. ಆದರೂ, ಪಂಜಾಬ್ ಬೌಲರ್‌ಗಳ ಪ್ರದರ್ಶನವನ್ನು ಅವರು ಮೆಚ್ಚಿದರು. ಅಂತಿಮ ಓವರ್‌ಗಳಲ್ಲಿ ಬೌಲರ್‌ಗಳು ಚಾಣಾಕ್ಷತನದಿಂದ ಬೌಲಿಂಗ್ ಮಾಡಿದ ಕಾರಣವೇ ಪಂದ್ಯ ಅವರ ಪರವಾಗಿ ತಿರುಗಿತು ಎಂದರು.

ಪಂಜಾಬ್ ಪರ ಲೆಗ್‌ ಸ್ಪಿನ್ನರ್ವ ಯುಜ್ವೇಂದ್ರ ಚಹಲ್‌ (2/28) ಮತ್ತು ವೇಗಿ ವೈಶಾಖ್‌ ವಿಜಯ್‌ ಕುಮಾರ್‌ (3/34) ಉತ್ತಮ ಪ್ರದರ್ಶನ ನೀಡಿದರು. ಜೊತೆಗೆ ಆಸ್ಟ್ರೇಲಿಯಾದ ಯುವ ಆಟಗಾರ ಕೂಪರ್‌ ಕಾನೊಲಿ 44 ಎಸೆತಗಳಲ್ಲಿ ಅಜೇಯ 72 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

IPL 2026: ಐಪಿಎಲ್‌ ಇತಿಹಾಸದಲ್ಲಿ ಮುರಿಯಲಾಗದ ಪಂಜಾಬ್‌ ಕಿಂಗ್ಸ್‌ನ 3 ದೊಡ್ಡ ದಾಖಲೆಗಳು!

ಶುಭಮನ್‌ ಗಿಲ್ ನಾಯಕತ್ವದ ಗುಜರಾತ್ ತಂಡಕ್ಕೆ ಪರಿಸ್ಥಿತಿಗಳು ಕೂಡ ದೊಡ್ಡ ಸವಾಲಾಗಿ ಪರಿಣಮಿಸಿತು. "ಪಂದ್ಯ 20ನೇ ಓವರ್‌ವರೆಗೆ ಸಾಗಿತು. ಒಂದು ವಿಕೆಟ್ ಬೇಗ ಬಿದ್ದಿದ್ದರೆ ಫಲಿತಾಂಶ ಬದಲಾಗುತ್ತಿತ್ತು. ಮಳೆಯಿಂದ ಪಿಚ್ ಸ್ವಭಾವ ಬದಲಾಗಿದ್ದು, ಚೆಂಡು ಬ್ಯಾಟ್‌ಗೆ ಸರಾಗವಾಗಿ ಬರುತ್ತಿತ್ತು," ಎಂದು ಪಾರ್ಥಿವ್ ವಿವರಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಪಿಚ್ ಮತ್ತು ಪರಿಸ್ಥಿತಿಗಳು ದೊಡ್ಡ ಪಾತ್ರ ವಹಿಸುತ್ತವೆ ಎಂಬುದನ್ನು ಅವರು ಮತ್ತೊಮ್ಮೆ ಒತ್ತಿಹೇಳಿದರು. "ಪರಿಸ್ಥಿತಿಗಳು ಸರಿಯಾಗಿದ್ದರೆ ಫಲಿತಾಂಶವೂ ಬದಲಾಗುತ್ತದೆ," ಎಂದು ಪಾರ್ಥಿವ್‌ ಅಭಿಪ್ರಾಯಪಟ್ಟರು.