ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RCB vs GT: ಭಾರತ ತಂಡದ ಆಯ್ಕೆಯ ಬಗ್ಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದ ರಜತ್‌ ಪಾಟಿದಾರ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕನಾಗಿ ಹಾಗೂ ಬ್ಯಾಟ್ಸ್‌ಮನ್‌ ಆಗಿ ಸಕ್ಸಸ್‌ ಕಂಡಿರುವ ರಜತ್‌ ಪಾಟಿದಾರ್‌ ಅವರಿಗೆ ಭಾರತ ತಂಡದಲ್ಲಿ ಸ್ಥಾನ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಗುಜರಾತ್‌ ಟೈಟನ್ಸ್‌ ನಡುವಣ ಫೈನಲ್‌ ಪಂದ್ಯದ ನಿಮಿತ್ತ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಇದೇ ಪ್ರಶ್ನೆಯನ್ನು ಆರ್‌ಸಿಬಿ ನಾಯಕನಿಗೆ ಕೇಳಲಾಯಿತು. ಇದಕ್ಕೆ ಪಾಟಿದಾರ್‌ ಬುದ್ದಿವಂತಿಕೆಯ ಉತ್ತರ ನೀಡಿದ್ದಾರೆ.

ಭಾರತ ತಂಡದ ಆಯ್ಕೆಯ ಬಗ್ಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದ ಪಾಟಿದಾರ್‌!

ಭಾರತ ಟಿ20 ತಂಡದ ಆಯ್ಕೆಯ ಬಗ್ಗೆ ರಜತ್‌ ಪಾಟಿದಾರ್‌ ಪ್ರತಿಕ್ರಿಯೆ. -

Profile
Ramesh Kote May 30, 2026 10:05 PM

ಅಹಮದಾಬಾದ್‌: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ ಟೂರ್ನಿಯಲ್ಲಿ (IPL 2026) ಗಮನಾರ್ಹ ಪ್ರದರ್ಶನವನ್ನು ತೋರಿದ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ರಜತ್‌ ಪಾಟಿದಾರ್‌ (Rajat Patidar) ಅವರಿಗೆ ಭಾರತ ತಂಡದಲ್ಲಿ ಅವಕಾಶ ನೀಡಬೇಕೆಂಬ ಚರ್ಚೆಗಳು ಕೇಳಿ ಬರುತ್ತಿವೆ. 2025ರ ಐಪಿಎಲ್‌ ಟೂರ್ನಿಗೂ ಮುನ್ನ ಆರ್‌ಸಿಬಿಗೆ ನಾಯಕನಾಗಿ ನೇಮಕವಾದ ಬಳಿಕ ರಜತ್‌ ಯಶಸ್ವಿಯಾಗಿದ್ದಾರೆ. ಆ ಸೀಸನ್‌ನಲ್ಲಿ ಆರ್‌ಸಿಬಿಗೆ ಚೊಚ್ಚಲ ಟ್ರೋಫಿ ಗೆದ್ದುಕೊಟ್ಟಿದ್ದರು. ಇದೀಗ 2026ರ ಟೂರ್ನಿಯಲ್ಲಿ ಆರ್‌ಸಿಬಿ ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದಾರೆ. ಆ ಮೂಲಕ ನಾಯಕನಾಗಿ ಹಾಗೂ ಬ್ಯಾಟ್ಸ್‌ಮನ್‌ ಆಗಿ ಐಪಿಎಲ್‌ ಟೂರ್ನಿಯಲ್ಲಿ ಸಕ್ಸಸ್‌ ಕಂಡಿದ್ದಾರೆ.

ಈ ಸೀಸನ್‌ನಲ್ಲಿ ರಜತ್‌ ಆಡಿದ 14 ಪಂದ್ಯಗಳಲ್ಲಿ 44.18ರ ಸರಾಸರಿ ಮತ್ತು 196.76ರ ಸ್ಟ್ರೈಕ್‌ ರೇಟ್‌ನಲ್ಲಿ 486 ರನ್‌ಗಳನ್ನು ಸಿಡಿಸಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಗುಜರಾತ್‌ ಟೈಟನ್ಸ್‌ ಎದುರು ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಅವರು ಕೇವಲ 33 ಎಸೆತಗಳಲ್ಲಿ ಅಜೇಯ 93 ರನ್‌ ಸಿಡಿಸುವ ಮೂಲಕ ಆರ್‌ಸಿಬಿಯನ್ನು ಗೆಲ್ಲಿಸಿ, ಫೈನಲ್‌ಗೆ ಕರೆ ತಂದಿದ್ದರು. ಇದು ಎಲ್ಲರ ಮೆಚ್ಚುಗೆ ಪಾತ್ರವಾಗಿದೆ. ಇದೇ ಪ್ರದರ್ಶನವನ್ನು ಅವರು ಮೇ 31 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್‌ನಲ್ಲಿಯೂ ಮುಂದುವರಿಸಲು ಬಯಸುತ್ತಿದ್ದಾರೆ.

IPL 2026 Final: ಎರಡನೇ ಐಪಿಎಲ್‌ ಟ್ರೋಫಿ ಮೇಲೆ ಆರ್‌ಸಿಬಿ ಕಣ್ಣು, ಸಂಭಾವ್ಯ ಪ್ಲೇಯಿಂಗ್‌ XI,ಪಿಚ್‌ ರಿಪೋರ್ಟ್‌ ವಿವರ!

ಭಾರತ ಟಿ20 ತಂಡದ ಆಯ್ಕೆಯ ಬಗ್ಗೆ ಪಾಟಿದಾರ್‌ ಪ್ರತಿಕ್ರಿಯೆ

2026ರ ಐಪಿಎಲ್‌ ಟೂರ್ನಿಯಲ್ಲಿ ಪ್ರದರ್ಶನದ ಆಧಾರದ ಮೇಲೆ ಭಾರತ ಟಿ20 ತಂಡಕ್ಕೆ ರಜತ್‌ ಪಾಟಿದಾರ್‌ ಅವರನ್ನು ಆಯ್ಕೆ ಮಾಡಬೇಕೆಂಬ ಬೇಡಿಕೆಗಳು ಬರುತ್ತಿವೆ. ಕೆಲ ಮಾಜಿ ಕ್ರಿಕೆಟಿಗರು ಕೂಡ ಆರ್‌ಸಿಬಿ ನಾಯಕನಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಅಂದ ಹಾಗೆ ಗುಜರಾತ್‌ ಟೈಟನ್ಸ್‌ ವಿರುದ್ಧದ ಐಪಿಎಲ್‌ ಫೈನಲ್‌ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯನ್ನು ಹಮ್ಮಿಕೊಂಡಿದ್ದರು. ಈ ವೇಳೆ ಭಾರತ ತಂಡಕ್ಕೆ ಆಯ್ಕೆಯ ಬಗ್ಗೆ ಸುದ್ದಿಗಾರರೊಬ್ಬರು ಪ್ರಶ್ನೆಯನ್ನು ಕೇಳಿದರು.

"ನಿಮ್ಮ ಪ್ರಶ್ನೆಗೆ ನಾನು ನೀಡುವ ಉತ್ತರ ಏನೆಂದರೆ, ಸದ್ಯ ಭಾರತ ತಂಡದ ಆಯ್ಕೆಯ ಬಗ್ಗೆ ನಾನು ಯೋಚಿಸುತ್ತಿಲ್ಲ. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಕೂಡ ನಾನು ಎದುರು ನೋಡುತ್ತಿಲ್ಲ," ಎಂದು ಕಡ್ಡಿ ಮುರಿದಂತೆ ಆರ್‌ಸಿಬಿ ಕಪ್ತಾನ ಉತ್ತರ ನೀಡಿದ್ದಾರೆ.

IPL 2026 Final: ಗುಜರಾತ್‌ ಟೈಟನ್ಸ್‌ ಎದುರು ಅಹಮದಾಬಾದ್‌ನಲ್ಲಿ ಆರ್‌ಸಿಬಿ ತಂಡದ ದಾಖಲೆ ಹೇಗಿದೆ?

ಭಾರತ ಟಿ20 ತಂಡದ ನಾಯಕತ್ವ ಬಗ್ಗೆ ಕಲ್ಪನೆಯೂ ಮಾಡಿಲ್ಲ

ಭಾರತ ಟಿ20 ತಂಡದ ನಾಯಕತ್ವದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, " ನಾನು ಭಾರತ ಟಿ20 ತಂಡಕ್ಕೆ ನಾಯಕನಾಗುವ ಬಗ್ಗೆ ಕಲ್ಪನೆ ಮಾಡಿಕೊಳ್ಳುತ್ತಿಲ್ಲ. ಆದರೆ ಇದೇ ಸಮಯದಲ್ಲಿ ಪ್ರತಿಯೊಬ್ಬ ನಾಯಕ ಟ್ರೋಫಿಯನ್ನು ಗೆಲ್ಲಲು ಬಯಸುತ್ತಾರೆ. ಹಾಗಾಗಿ ಕಳೆದ ವರ್ಷ ಇದನ್ನು ನಾವು ಮಾಡಿದ್ದೇವೆ, ಇದೀಗ ಹೊಸ ಸೀಸನ್‌ ಬಂದಿದೆ. ಅದರ ಬಗ್ಗೆ ನಾವು ಇದೀಗ ಮಾತನಾಡುವುದು ಸರಿಯಿಲ್ಲ. ನಾವು ಈಗ ವರ್ತಮಾನದಲ್ಲಿ ಉಳಿಯಬೇಕು, ಫೈನಲ್‌ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನು ತೋರಬೇಕು," ಎಂದು ಹೇಳಿದ್ದಾರೆ.

RCB vs GT: ಗುಜರಾತ್‌ ಟೈಟನ್ಸ್‌ ತಂಡವನ್ನು ಸೋಲಿಸಲು ಆರ್‌ಸಿಬಿ ರೂಪಿಸಬೇಕಾದ ರಣತಂತ್ರಗಳೇನು?

2026ರ ಐಪಿಎಲ್‌ ಫೈನಲ್‌ಗೆ ಆರ್‌ಸಿಬಿಯ ಸಂಭಾವ್ಯ ಪ್ಲೇಯಿಂಗ್‌ XI

1.ವಿರಾಟ್‌ ಕೊಹ್ಲಿ

2.ವೆಂಕಟೇಶ್‌ ಅಯ್ಯರ್‌

3.ದೇವದತ್‌ ಪಡಿಕ್ಕಲ್‌

4.ರಜತ್‌ ಪಾಟಿದಾರ್‌ (ನಾಯಕ)

5.ಕೃಣಾಲ್‌ ಪಾಂಡ್ಯ

6.ಟಿಮ್‌ ಡೇವಿಡ್‌

7.ಜಿತೇಶ್‌ ಶರ್ಮಾ (ವಿಕೆಟ್‌ ಕೀಪರ್‌)

8.ರಸಿಖ್‌ ದಾರ್‌ ಸಲಾಮ್‌

9.ಭುವನೇಶ್ವರ್‌ ಕುಮಾರ್‌

10.ಜಾಶ್‌ ಹೇಝಲ್‌ವುಡ್‌

11.ಜೇಕಬ್‌ ಡಫಿ