RCB vs GT: ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಲು ಆರ್‌ಸಿಬಿ ರೂಪಿಸಬೇಕಾದ ರಣತಂತ್ರಗಳೇನು?
ಎರಡನೇ ಐಪಿಎಲ್ ಟ್ರೋಫಿ ಗೆಲ್ಲಲು ಎದುರು ನೋಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮೇ 31 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಜಿಟಿ ತಂಡವನ್ನು ಸೋಲಿಸಲು ಆರ್‌ಸಿಬಿ ಯಾವೆಲ್ಲಾ ತಂತ್ರಗಳನ್ನು ರೂಪಿಸಬೇಕೆಂದು ಇಲ್ಲಿ ವಿವರಿಸಲಾಗಿದೆ.
ಗುಜರಾತ್ ತಂಡವನ್ನು ಮಣಿಸಲು ಆರ್‌ಸಿಬಿಯ ರಣತಂತ್ರವೇನು? -
ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 31 ರಂದು ಭಾನುವಾರ ನಡೆಯುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ (RCB vs GT) ತಂಡಗಳು ಕಾದಾಟ ನಡೆಸಲಿವೆ. ಎರಡನೇ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲು ಎರಡೂ ತಂಡಗಳು ಎದುರು ನೋಡುತ್ತಿವೆ. ಹಾಗಾಗಿ ಆರ್‌ಸಿಬಿ ಮತ್ತು ಜಿಟಿ ಆಟಗಾರರು ಕಠಿಣ ಪರಿಶ್ರಮವನ್ನು ಪಡುತ್ತಿದ್ದಾರೆ. ಈ ಬಾರಿ ಟೂರ್ನಿಯಲ್ಲಿ ಉಭಯ ತಂಡಗಳು ಒಟ್ಟು ಮೂರು ಬಾರಿ ಕಾದಾಟ ನಡೆಸಿದ್ದು, ಎರಡರಲ್ಲಿ ಆರ್‌ಸಿಬಿ ಗೆದ್ದಿದ್ದರೆ, ಒಂದರಲ್ಲಿ ಜಿಟಿ ಗೆದ್ದಿದೆ. ಅದರಲ್ಲಿಯೂ ವಿಶೇಷವಾಗಿ ಫೈನಲ್ ನಡೆಯುವ ಅಹಮಾದಾಬಾದ್‌ನಲ್ಲಿ ಆರ್‌ಸಿಬಿ ಲೀಗ್ ಹಂತದಲ್ಲಿ ಒಮ್ಮೆ ಸೋತಿತ್ತು. ಇದು ಜಿಟಿಗೆ ಕೊಂಚ ವಿಶ್ವಾಸವನ್ನು ಮೂಡಿಸಬಹುದು.
ರಜತ್ ಪಾಟಿದಾರ್ ನಾಯತ್ವದ ಆರ್‌ಸಿಬಿ ಹಾಗೂ ಶುಭಮನ್ ಗಿಲ್ ನಾಯಕತ್ವದ ಜಿಟಿ ತಂಡಗಳು ಮೊದಲನೇ ಕ್ವಾಲಿಫೈಯರ್‌ನಲ್ಲಿ ಕೊನೆಯ ಬಾರಿ ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಆರ್‌ಸಿಬಿ 92 ರನ್‌ಗಳ ಭರ್ಜರಿ ಜಯವನ್ನು ದಾಖಲಿಸಿತ್ತು ಹಾಗೂ ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ, ಇಲ್ಲಿ ಸೋಲು ಅನುಭವಿಸಿದ್ದ ಗುಜರಾತ್ ಟೈಟನ್ಸ್, ಎರಡನೇ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸುವ ಮೂಲಕ ಫೈನಲ್‌ಗೆ ಪ್ರವೇಶ ಮಾಡಿತ್ತು. ಆ ಮೂಲಕ 2022ರ ಬಳಿಕ ಎರಡನೇ ಐಪಿಎಲ್ ಕಪ್ ಗೆಲ್ಲಲ್ಲು ಗಿಲ್ ಬಳಗ ಎದುರು ನೋಡುತ್ತಿದೆ.
ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಲು ಆರ್‌ಸಿಬಿ ರಣತಂತ್ರ ಹೇಗಿರಬೇಕು?
1.ಶುಭಮನ್ ಗಿಲ್-ಸಾಯಿ ಸುದರ್ಶನ್ ಜೋಡಿಯನ್ನು ಬೇಗ ಕಟ್ಟಿಹಾಕಬೇಕು
ಈ ಸೀಸನ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದ ಯಶಸ್ಸಿನಲ್ಲಿ ಶುಭಮನ್ ಗಿಲ್ (718 ರನ್), ಸಾಯಿ ಸುದರ್ಶನ್ (710 ರನ್) ಅವರ ಪಾತ್ರ ಮಹತ್ತರವಾಗಿದೆ. ಈ ಇಬ್ಬರೂ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿದ್ದಾರೆ. ಈ ಜೋಡಿ ತಮ್ಮ ಅದ್ಭುತ ಫಾರ್ಮ್ ಮೂಲಕ ಗುಜರಾತ್ ತಂಡವನ್ನು ಹಲವು ಪಂದ್ಯಗಳಲ್ಲಿ ಗೆಲ್ಲಿಸಿದ್ದಾರೆ. ಈ ಇಬ್ಬರೂ ಜಿಟಿಗೆ ಕೀ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಹಾಗಾಗಿ ಆರ್‌ಸಿಬಿ ತಂಡ ಈ ಇಬ್ಬರನ್ನೂ ದೊಡ್ಡ ಜೊತೆಯಾಟವಾಡಲು ಅವಕಾಶ ನೀಡಬಾರದು. ಪವರ್‌ಪ್ಲೇನಲ್ಲಿ ಈ ಇಬ್ಬರನ್ನು ಔಟ್ ಮಾಡಲು ಆರ್‌ಸಿಬಿ ಬೌಲಿಂಗ್ ವಿಭಾಗ ಉತ್ತಮ ರಣತಂತ್ರವನ್ನು ರೂಪಿಸಬೇಕು. ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮಾಡಿದಂತೆ ಅಹಮದಾಬಾದ್‌ನಲ್ಲಿಯೂ ಈ ಜೋಡಿಯನ್ನು ಬೇಗ ಕಟ್ಟಿ ಹಾಕಬೇಕಾಗುತ್ತದೆ.
2.ಜೋಸ್ ಬಟ್ಲರ್‌ರನ್ನು ದೀರ್ಘಾವಧಿ ಆಡಲು ಬಿಡಬಾರದು
ಜೋಸ್ ಬಟ್ಲರ್ ಅವರು ಕೂಡ ಜಿಟಿ ತಂಡದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದಾರೆ. ಅವರು ಇಲ್ಲಿಯವರೆಗೂ 501 ರನ್‌ಗಳನ್ನು ಗಳಿಸಿದ್ದಾರೆ. ಇವರು ಫೈನಲ್ ಸೇರಿದಂತೆ ಪ್ರಮುಖ ಪಂದ್ಯಗಳಲ್ಲಿ ಮ್ಯಾಚ್ ವಿನ್ನರ್ ಆಗಿದ್ದಾರೆ. ಹಾಗಾಗಿ ಆರ್‌ಸಿಬಿ ಇಂಗ್ಲೆಂಡ್ ಆಟಗಾರನ ಈ ಸೀಸನ್‌ನಲ್ಲಿ ವೀಕ್‌ನೆಸ್ ಅನ್ನು ಅರಿತು ಅದಕ್ಕೆ ತಕ್ಕಂತೆ ರಣತಂತ್ರವನ್ನು ರೂಪಿಸಿಕೊಂಡು ಅಂಗಣಕ್ಕೆ ಪ್ರವೇಶಿಸಬೇಕಾಗುತ್ತದೆ. ಗಿಲ್ ಹಾಗೂ ಸಾಯಿ ಸುದರ್ಶನ್ ವಿಫಲರಾದರೂ ಜೋಸ್ ಬಟ್ಲರ್ ಕೊನೆಯವರೆಗೂ ಬ್ಯಾಟ್ ಮಾಡಿ ಪಂದ್ಯದ ದಿಕ್ಕನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹಾಗಾಗಿ ಆರ್‌ಸಿಬಿ ಟೀಮ್ ಮ್ಯಾನೇಜ್‌ಮೆಂಟ್ ಜೋಸ್ ಬಟ್ಲರ್ ಅವರನ್ನು ದೀರ್ಘಾವಧಿ ಕ್ರೀಸ್‌ನಲ್ಲಿ ಉಳಿಯಲು ಬಿಡಬಾರದು.
IPL 2026 Final: ಗುಜರಾತ್ ಟೈಟನ್ಸ್ ಎದುರು ಅಹಮದಾಬಾದ್‌ನಲ್ಲಿ ಆರ್‌ಸಿಬಿ ತಂಡದ ದಾಖಲೆ ಹೇಗಿದೆ?
3.ರಶೀದ್ ಖಾನ್‌ಗೆ ಎಚ್ಚರಿಕೆಯಿಂದ ಆಡಬೇಕು
ಆರ್‌ಸಿಬಿ ತಂಡ, ಅಹಮದಾಬಾದ್‌ನಲ್ಲಿ ಕೊನೆಯ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಆ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಬಿಟ್ಟರೆ ಇನ್ನುಳಿದ ಬ್ಯಾಟರ್‌ಗಳು ಜಿಟಿ ಬೌಲಿಂಗ್ ದಾಳಿಗೆ ಶರಣಾಗಿದ್ದರು. ಈ ಪಂದ್ಯದಲ್ಲಿ ರಶೀದ್ ಖಾನ್ ಸ್ಪಿನ್ ಮೋಡಿಯ ಮೂಲಕ ಮಿಂಚಿದ್ದರು. ಆದರೆ, ಫೈನಲ್ ನಡೆಯುವ ನರೇಂದ್ರ ಮೋದಿ ಕ್ರೀಡಾಂಗಣದ ಬೌಂಡರಿ ಲೈನ್‌ನ ಅಂತರ ದೊಡ್ಡವಾಗಿದೆ. ಹಾಗಾಗಿ ಆರ್‌ಸಿಬಿ, ರಶೀದ್ ಖಾನ್ ಎದುರು ಸ್ಟ್ರೈಕ್ ರೊಟೇಟ್ ಮಾಡುತ್ತಾ, ಕೆಟ್ಟ ಎಸೆತಗಳು ಬಂದಾಗ ಮಾತ್ರ ಸಿಕ್ಸರ್, ಬೌಂಡರಿ ಬಾರಿಸಬೇಕು.
4.ಪವರ್‌ಪ್ಲೇನಲ್ಲಿ ರಬಾಡ, ಸಿರಾಜ್ ಎದುರು ಬುದ್ದಿವಂತಿಕೆಯ ಆಟ ಅಗತ್ಯ
ಗುಜರಾತ್ ತಂಡದ ಇಲ್ಲಿಯವರೆಗಿನ ಯಶಸ್ಸಿನಲ್ಲಿ ಕಗಿಸೊ ರಬಾಡ ಮತ್ತು ಮೊಹಮ್ಮದ್ ಸಿರಾಜ್ ಅವರ ಕೊಡುಗೆಯೂ ಬಹಳಷ್ಟು ಇದೆ. ರಬಾಡ 28 ವಿಕೆಟ್‌ಗಳ ಮೂಲಕ ಪರ್ಪಲ್ ಕ್ಯಾಪ್ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಸಿರಾಜ್ ಈ ಟೂರ್ನಿಯಲ್ಲಿ 18 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಇಬ್ಬರೂ ಪವರ್‌ಪ್ಲೇನಲ್ಲಿ ಪರಿಣಾಮಕಾರಿಯಾಗಿ ಬೌಲ್ ಮಾಡುತ್ತಾರೆ. ಹಾಗಾಗಿ ಈ ಇಬ್ಬರನ್ನೂ ಹೊಸ ಚೆಂಡಿನಲ್ಲಿ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ವಿಶೇಷವಾಗಿ ಓಪನರ್ಸ್ ವಿರಾಟ್ ಕೊಹ್ಲಿ ಹಾಗೂ ವೆಂಕಟೇಶ್ ಅಯ್ಯರ್ ಸಮರ್ಥವಾಗಿ ಎದುರಿಸಬೇಕು.
IPL 2026 Final: ಈ ಸಲನೂ ಕಪ್ ನಮ್ಮದಾಗಲಿ...
5.ವಿರಾಟ್ ಕೊಹ್ಲಿಯಿಂದ ಆಂಕರಿಂಗ್ ಪಾತ್ರ
ವಿರಾಟ್ ಕೊಹ್ಲಿ ಅವರ ಪಾತ್ರ ಈ ಪಂದ್ಯದಲ್ಲಿ ಅತ್ಯಂತ ಮಹತ್ವದ್ದಾಗಿರಲಿದೆ. ಆರಂಭದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ತಂಡಕ್ಕೆ ಉತ್ತಮ ವೇಗ ನೀಡಬಹುದಾದರೂ, ಇನಿಂಗ್ಸ್ ಅನ್ನು ನಿಯಂತ್ರಿಸುವುದು, ಸಿಂಗಲ್ಸ್ ಹಾಗೂ ಡಬಲ್ಸ್ ಮೂಲಕ ಸ್ಟ್ರೈಕ್ ರೋಟೇಟ್ ಮಾಡುವುದು ಮತ್ತು ಸರಿಯಾದ ಸಮಯದಲ್ಲಿ ವೇಗ ಹೆಚ್ಚಿಸುವ ಕೋಹ್ಲಿಯ ಸಾಮರ್ಥ್ಯ ಸಾಮಾನ್ಯ ಸ್ಪರ್ಧಾತ್ಮಕ ಮೊತ್ತ ಮತ್ತು ಪಂದ್ಯ ಗೆಲ್ಲಿಸುವ ಮೊತ್ತದ ನಡುವಿನ ಪ್ರಮುಖ ವ್ಯತ್ಯಾಸವಾಗಬಹುದು.
6.ಪವರ್‌ಪ್ಲೇ ಹೋರಾಟದಲ್ಲಿ ಮೇಲುಗೈ ಸಾಧಿಸಬೇಕು
ಮೊದಲ ಆರು ಓವರ್‌ಗಳಲ್ಲಿ ಪ್ರಾಬಲ್ಯ ಸಾಧಿಸುವ ತಂಡ ಪಂದ್ಯದಲ್ಲಿ ನಿರ್ಣಾಯಕ ಮುನ್ನಡೆ ಪಡೆಯುವ ಸಾಧ್ಯತೆ ಇದೆ. ಆರ್‌ಸಿಬಿ ಬ್ಯಾಟರ್‌ಗಳು ಆಕ್ರಮಣಕಾರಿಯಾಗಿದ್ದರೂ ಲೆಕ್ಕಾಚಾರದ ಆಟ ಪ್ರದರ್ಶಿಸಬೇಕು. ಅದೇ ವೇಳೆ ಬೌಲರ್‌ಗಳು ಎದುರಾಳಿ ತಂಡಕ್ಕೆ ಸುಲಭವಾಗಿ ಬೌಂಡರಿಗಳನ್ನು ಬಿಟ್ಟುಕೊಡದೇ ಒತ್ತಡವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ.
7.ಡೆತ್ ಓವರ್‌ಗಳ ಬೌಲಿಂಗ್ ಯೋಜನೆಯನ್ನು ಪರಿಪೂರ್ಣಗೊಳಿಸಬೇಕು
ಜಿಟಿ ತಂಡದಲ್ಲಿ ಕೊನೆಯ ಓವರ್‌ಗಳಲ್ಲಿ ವೇಗವಾಗಿ ರನ್‌ಗಳಿಸುವ ಸಾಮರ್ಥ್ಯ ಹೊಂದಿರುವ ಹಲವು ಫಿನಿಷರ್‌ಗಳಿದ್ದಾರೆ. ಆದ್ದರಿಂದ ಆರ್‌ಸಿಬಿ ಬೌಲರ್‌ಗಳು ಒತ್ತಡದ ಪರಿಸ್ಥಿತಿಯಲ್ಲೂ ನಿಖರ ಯಾರ್ಕರ್‌ಗಳು, ಸ್ಲೋವರ್ ಬಾಲ್‌ಗಳು ಮತ್ತು ವೈಡ್ ಲೈನ್‌ಗಳನ್ನು ಸಮರ್ಥವಾಗಿ ಬಳಸಬೇಕು. ಇದರಿಂದ ಎದುರಾಳಿಯ ಕೊನೆಯ ಹಂತದ ರನ್‌ಗಳ ಹರಿವನ್ನು ನಿಯಂತ್ರಿಸಬಹುದು.
ಇತಿಹಾಸದ ಹೊಸ್ತಿಲಲ್ಲಿ ಆರ್‌ಸಿಬಿ; ಫೈನಲ್ ತನಕ ನಡೆದು ಬಂದ ಹಾದಿ...
8.ಫೀಲ್ಡಿಂಗ್ ಪಂದ್ಯದ ಫಲಿತಾಂಶವನ್ನು ನಿರ್ಧರಿಸಬಹುದು
ಫೈನಲ್ ಪಂದ್ಯಗಳು ಬಹುತೇಕ ಸಣ್ಣ ಸಣ್ಣ ಕ್ಷಣಗಳಿಂದಲೇ ನಿರ್ಧಾರವಾಗುತ್ತವೆ. ಚುರುಕಾದ ಕ್ಯಾಚ್‌ಗಳು, ಬೌಂಡರಿ ರೇಖೆಯ ಬಳಿ ಅಥ್ಲೆಟಿಕ್ ಫೀಲ್ಡಿಂಗ್ ಹಾಗೂ ನೇರ ಥ್ರೋ ಮೂಲಕ ರನ್‌ಔಟ್ ಮಾಡುವ ಅವಕಾಶಗಳು ಹೈ-ಪ್ರೆಶರ್ ಪಂದ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು. ಆರ್‌ಸಿಬಿ ಫೀಲ್ಡಿಂಗ್‌ನಲ್ಲಿ ತಪ್ಪುಗಳಿಗೆ ಅವಕಾಶ ನೀಡದೇ ಅತ್ಯುತ್ತಮ ಪ್ರದರ್ಶನ ನೀಡಬೇಕಿದೆ.