ಅಂತಾರಾಷ್ಟ್ರೀಯ ಕ್ರಿಕೆಟ್‌ಗಿಂತ ಐಪಿಎಲ್ ಕಠಿಣ ಎಂದ ಬ್ಲೆಸಿಂಗ್ ಮುಜರಾಬಾನಿ!
ಕಳೆದ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಣಿಸಿಕೊಂಡಿದ್ದ ಜಿಂಬಾಬ್ವೆಯ ವೇಗದ ಬೌಲರ್ ಬ್ಲೆಸಿಂಗ್ ಮುಜರಾಬಾನಿ, 2026 ಆವೃತ್ತಿಯಲ್ಲಿ ಮಾಜಿ ಚಾಂಪಿಯನ್ಸ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಬ್ಲೆಸಿಂಗ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗಿಂತಲೂ ಐಪಿಎಲ್ ಆಟ ಬಹಳಾ ಕಠಿಣ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಜಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಜರಾಬಾನಿ -
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ತೀವ್ರ ಸ್ಪರ್ಧೆ ಮತ್ತು ವೇಗದ ಆಟವು ಅಂತಾರಾಷ್ಟ್ರೀಯ ಕ್ರಿಕೆಟ್‌ಗಿಂತಲೂ ಹೆಚ್ಚು ಕಠಿಣವಾಗುವಂತೆ ಮಾಡಿದೆ ಎಂದು ಜಿಂಬಾಬ್ವೆ ಸ್ಟಾರ್ ವೇಗಿ ಬ್ಲೆಸಿಂಗ್ ಮುಜರಾಬಾನಿ ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ 2026 ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಆಡುತ್ತಿರುವ ಬ್ಲೆಸಿಂಗ್, ತಂಡದ ಮೆಂಟರ್ ಡ್ವೇನ್ ಬ್ರಾವೋ ಮಾರ್ಗದರ್ಶನದಲ್ಲಿ ತಮ್ಮ ಆಟದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಲಿದೆ ಎಂದು ಮುಜರಾಬಾನಿ ತಿಳಿಸಿದ್ದಾರೆ.
IPL 2026: ಲಖನೌ vs ಡೆಲ್ಲಿ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡ ಯಾವುದು?
"ನಾನು ಆಟ ಆರಂಭಿಸಿದಾಗಿನಿಂದ ಬ್ರಾವೋ ಅವರು ನನಗೆ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಬೇಕಾದ ಕೌಶಲ್ಯಗಳು, ಹೇಗೆ ಅಭ್ಯಾಸ ಮಾಡಬೇಕು, ಪಂದ್ಯವನ್ನು ಹೇಗೆ ಗಮನಿಸಬೇಕು ಎಂಬುದರ ಬಗ್ಗೆ ಅವರು ಮಾರ್ಗದರ್ಶನ ನೀಡಿದ್ದರು. ಈ ಸೀಸನ್ ಅಂತ್ಯದ ವೇಳೆಗೆ ನಾನು ಸಂಪೂರ್ಣವಾಗಿ ಹೊಸ ಬೌಲರ್ ಆಗುತ್ತೇನೆಂದು ನಂಬಿದ್ದೇನೆ,” ಎಂದು ಹೇಳಿದ್ದಾರೆ.
ಬಾಂಗ್ಲಾದೇಶದ ವೇಗಿ ಮುಸ್ತಾಫಿಝುರ್ ರೆಹಮಾನ್ ಹೊರಗುಳಿದ ನಂತರ, ಕೆಕೆಆರ್ ತಂಡ 29 ವರ್ಷದ ಜಿಂಬಾಬ್ವೆ ವೇಗಿ ಮುಜರಾಬಾನಿಯನ್ನು ಸಂಪರ್ಕಿಸಿತ್ತು. ಇದೇ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಬ್ಲೆಸಿಂಗ್ ಒಟ್ಟು 13 ವಿಕೆಟ್ ಪಡೆದು ಗಮನಸೆಳೆದಿದ್ದರು. ಇದೇ ಕಾರಣಕ್ಕೆ ಅವರಿಗೆ ಐಪಿಎಲ್ ಟಿಕೆಟ್ ಸಿಕ್ಕಿದೆ.
ಹಿಂದಿನ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಲುಂಗಿ ಎನ್ಗಿಡಿ ಸ್ಥಾನಕ್ಕೆ ಬದಲಿ ಆಟಗಾರನಾಗಿ ಆಡಿದ್ದರು, ಆದರೆ, ಆಡುವ 11ರ ಬಳಗದಲ್ಲಿ ಅವರಿಗೆ ಹೆಚ್ಚು ಅವಕಾಶ ಸಿಗಲಿಲ್ಲ. ಆದರೂ ಆ ಅನುಭವದಿಂದ ಐಪಿಎಲ್ ಆಟದ ವೇಗ ಮತ್ತು ಸ್ಪರ್ಧೆಯನ್ನು ಅರ್ಥಮಾಡಿಕೊಂಡಿದ್ದಾರೆ.
IPL 2026: ಶ್ರೇಯಸ್ ಅಯ್ಯರ್‌ಗೆ ಗಾಯದ ಬಗ್ಗೆ ಅಪ್‌ಡೇಟ್ ನೀಡಿದ ಯುಜ್ವೇಂದ್ರ ಚಹಲ್!
"ನನಗೆ ಆಡಬೇಕು ಮತ್ತು ಪ್ರದರ್ಶನ ನೀಡಬೇಕು. ಐಪಿಎಲ್ ಆಟದ ಗುಣಮಟ್ಟ ತುಂಬಾ ಕಠಿಣವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗಿಂತಲೂ ಕಷ್ಟ. ಕಳೆದ ವರ್ಷ ಆರ್‌ಸಿಬಿ ತಂಡದಲ್ಲಿ ಇದ್ದಾಗ ಈ ಉತ್ಕೃಷ್ಟ ಮಟ್ಟವನ್ನು ನೋಡಿದ್ದೇನೆ. ಈ ಬಾರಿ ನಾನು ಆ ವೇಗಕ್ಕೆ ಹೊಂದಿಕೊಳ್ಳುತ್ತಿದ್ದೇನೆ," ಎಂದು ಮುಜರಾಬಾನಿ ಹೇಳಿದ್ದಾರೆ.
ಇದಲ್ಲದೆ, ಕೆಕೆಆರ್ ತಂಡದ ಸ್ನೇಹಪೂರ್ಣ ವಾತಾವರಣ ಮತ್ತು ಸಹ ಆಟಗಾರರ ಪರಿಶ್ರಮವನ್ನು ಅವರು ಮೆಚ್ಚಿಕೊಂಡಿದ್ದಾರೆ. "ಇಲ್ಲಿ ಎಲ್ಲರೂ ಬಹಳ ಪರಿಶ್ರಮಿಗಳಾಗಿದ್ದಾರೆ. ಅವರ ಪರಿಶ್ರಮ ನನ್ನನ್ನೂ ಉತ್ತಮ ಆಟಗಾರನಾಗಲು ಪ್ರೇರೇಪಿಸುತ್ತಿದೆ," ಎಂದು ಹೇಳಿದರು.
IPL 2026 Tickets: ಈಡೇರಿದ ಶಾಸಕರ ಬೇಡಿಕೆ; ಪ್ರತಿ ಐಪಿಎಲ್ ಪಂದ್ಯಕ್ಕೂ ಸಿಗುತ್ತೆ 3 ಟಿಕೆಟ್!
ಇನ್ನು 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಕೆಕೆಆರ್ ತಂಡ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು 6 ವಿಕೆಟ್‌ಗಳ ಸೋಲನುಭವಿಸಿತು. ಪಂದ್ಯದಲ್ಲಿ ಕೆಕೆಆರ್ ಪ್ಲೇಯಿಂಗ್ 11 ಸೇರಿದ್ದ ಬ್ಲೆಸಿಂಗ್ ಅಷ್ಟು ಪರಿಣಾಮಕಾರಿ ಪ್ರದರ್ಶನ ನೀಡಲಿಲ್ಲ. ಮುಂದಿನ ದಿನಗಳಲ್ಲಿ ಅವರ ಪ್ರದರ್ಶನ ಉತ್ತಮವಾಗುವುದೇ? ಕಾದು ನೋಡಬೇಕು.