Ranji Trophy 2026-27: ಆಂಧ್ರ ವಿರುದ್ಧದ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿದ ಕರುಣ್ ನಾಯರ್!
ಆಂಧ್ರ ವಿರುದ್ಧದ 2026-27ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಕರುಣ್ ನಾಯರ್, ದ್ವಿತೀಯ ಇನಿಂಗ್ಸ್ನಲ್ಲಿ ಭರ್ಜರಿ ಶತಕವನ್ನು ಬಾರಿಸಿದ್ದಾರೆ. ಇದು ಅವರು 20ನೇ ರಣಜಿ ಶತಕವಾಗಿದೆ. 242 ಎಸೆತಗಳನ್ನು ಆಡಿದ ಕರುಣ್ ಎರಡು ಸಿಕ್ಸರ್ ಹಾಗೂ 16 ಬೌಂಡರಿಗಳೊಂದಿಗೆ ಅಜೇಯ 155 ರನ್ಗಳನ್ನು ಗಳಿಸಿದ್ದರು.
ಆಂಧ್ರ ವಿರುದ್ಧ ಶತಕ ಸಿಡಿಸಿದ ಕರುಣ್ ನಾಯರ್. -
ವಿಜಯವಾಡ: ಆಂಧ್ರ ವಿರುದ್ಧದ 2026-27ರ ರಣಜಿ ಟ್ರೋಫಿ (Ranji Trophy 2026-27) ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ ತಂಡದ ಹಿರಿಯ ಬ್ಯಾಟ್ಸ್ಮನ್ ಕರುಣ್ ನಾಯರ್ (Karun Nair) ಭರ್ಜರಿ ಶತಕವನ್ನು ಬಾರಿಸಿದ್ದಾರೆ. ಪ್ರಥಮ ಇನಿಂಗ್ಸ್ನಲ್ಲಿ ಕೇವಲ 8 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದ ಕರುಣ್ ನಾಯರ್, ದ್ವಿತೀಯ ಇನಿಂಗ್ಸ್ನಲ್ಲಿ ದೊಡ್ಡ ಇನಿಂಗ್ಸ್ ಆಡಿದರು. ಇವರ ಅದ್ಭುತ ಬ್ಯಾಟಿಂಗ್ ಬಲದಿಂದ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ 339 ರನ್ಗಳಿಗೆ ಡಿಕ್ಲೆರ್ ಮಾಡಿಕೊಂಡಿತು. ಆ ಮೂಲಕ ಎದುರಾಳಿ ಆಂಧ್ರ ತಂಡಕ್ಕೆ 194 ರನ್ಗಳ ಗುರಿಯನ್ನು ನೀಡಿತು.
ಬುಧವಾರ 4 ವಿಕೆಟ್ಗಳ ನಷ್ಟಕ್ಕೆ 176 ರನ್ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಭಾರತ ತಂಡದ ಪರ ಕ್ರೀಸ್ಗೆ ಆಗಮಿಸಿದ ಕರುಣ್ ನಾಯರ್ ಅವರ ಖಾತೆಯಲ್ಲಿ 81 ರನ್ಗಳು ಇದ್ದವು. ಮತ್ತೊಂದು ತುದಿಯಲ್ಲಿ ನಾಯಕ ಸ್ಮರಣ್ ರವಿಚಂದ್ರನ್ ಇದ್ದರು. ಸ್ಮರಣ್ 21 ರನ್ಗೆ ವಿಕೆಟ್ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಕರುಣ್ ನಾಯರ್ ಅದ್ಭುತವಾಗಿ ಬ್ಯಾಟ್ ಮಾಡಿದರು.
Ranji Trophy 2026-27: ಪ್ರಥಮ ಇನಿಂಗ್ಸ್ನಲ್ಲಿ ಹಿನ್ನಡೆ ಅನುಭವಿಸಿದ ಕರ್ನಾಟಕಕ್ಕೆ ಕರುಣ್ ನಾಯರ್ ಆಸರೆ!
242 ಎಸೆತಗಳನ್ನು ಎದುರಿಸಿದ ಕರುಣ್ ನಾಯರ್ ಎರಡು ಸಿಕ್ಸರ್ ಹಾಗೂ 16 ಬೌಂಡರಿಗಳೊಂದಿಗೆ ಅಜೇಯ 155 ರನ್ಗಳನ್ನು ಕಲೆ ಹಾಕಿದರು. ಆದರೆ, ಮತ್ತೊಂದು ತುದಿಯಲ್ಲಿ ಯಾವುದೇ ಬ್ಯಾಟ್ಸ್ಮನ್ ಸಾಥ್ ನೀಡಲಿಲ್ಲ. ಅಂತಿಮವಾಗಿ ಕರ್ನಾಟಕ ತಂಡ ಇನ್ನೂ ಒಂದು ವಿಕೆಟ್ ಬಾಕಿ ಇರುವಾಗಲೇ 339 ರನ್ಗಳಿಗೆ ಡಿಕ್ಲೆರ್ ಮಾಡಿಕೊಂಡಿತು ಹಾಗೂ ಆಂಧ್ರ ತಂಡಕ್ಕೆ 194 ರನ್ಗಳ ಗುರಿಯನ್ನು ನೀಡಿತು.
ಕರುಣ್ ನಾಯರ್ ಅವರು ಸ್ಪಿನ್ನರ್ಗಳಾದ ಸೌರಭ್ ಹಾಗೂ ಲಲಿತ್ ಮೋಹನ್ ಅವರ ಬೌಲಿಂಗ್ನಲ್ಲಿ ಹಲವು ಸಿಕ್ಸರ್ಗಳನ್ನು ಸಿಡಿಸಿದರು. ಅವರ ಮನ ಮೋಹಕ ಬ್ಯಾಟಿಂಗ್ ಎಲ್ಲರ ಗಮನ ಸೆಳೆದರು. ಒಂದು ಹಂತದಲ್ಲಿ 43 ರನ್ಗಳಿಗೆ 3 ವಿಕೆಟ್ಗಳನ್ನು ಕಳೆದುಕೊಂಡಿದ್ದ ಕರ್ನಾಟಕ ತಂಡ ಆರಂಭಿಕ ಆಘಾತವನ್ನು ಅನುಭವಿಸಿತ್ತು. ಆದರೆ, ಕರುಣ್ ನಾಯರ್ ಅವರು ತಮ್ಮ ಅದ್ಭುತ ಇನಿಂಗ್ಸ್ ಮೂಲಕ ಕರ್ನಾಟಕ ತಂಡವನ್ನು ಮೇಲೆತ್ತಿದರು.
- 129 Matches in First Class. - 209 Innings. - 9537 Runs. - 49.93 Average. - 27* Hundreds. - 40 Fifties. KARUN NAIR - THE LEGEND IN FIRST CLASS CRICKET. 🙇 https://t.co/InqwCas4Tz
— Tanuj (@ImTanujSingh) October 14, 2026
ಕರುಣ್ ನಾಯರ್ ಅವರು ಸ್ಪಿನ್ನರ್ಗಳಾದ ಸೌರಭ್ ಹಾಗೂ ಲಲಿತ್ ಮೋಹನ್ ಅವರ ಬೌಲಿಂಗ್ನಲ್ಲಿ ಹಲವು ಸಿಕ್ಸರ್ಗಳನ್ನು ಸಿಡಿಸಿದರು. ಅವರ ಮನ ಮೋಹಕ ಬ್ಯಾಟಿಂಗ್ ಎಲ್ಲರ ಗಮನ ಸೆಳೆದರು. ಒಂದು ಹಂತದಲ್ಲಿ 43 ರನ್ಗಳಿಗೆ 3 ವಿಕೆಟ್ಗಳನ್ನು ಕಳೆದುಕೊಂಡಿದ್ದ ಕರ್ನಾಟಕ ತಂಡ ಆರಂಭಿಕ ಆಘಾತವನ್ನು ಅನುಭವಿಸಿತ್ತು. ಆದರೆ, ಕರುಣ್ ನಾಯರ್ ಅವರು ತಮ್ಮ ಅದ್ಭುತ ಇನಿಂಗ್ಸ್ ಮೂಲಕ ಕರ್ನಾಟಕ ತಂಡವನ್ನು ಮೇಲೆತ್ತಿದರು.
ಡ್ರಾನತ್ತ ವಿಜಯವಾಡ ಪಂದ್ಯ
194 ರನ್ಗಳ ಗುರಿಯನ್ನು ಹಿಂಬಾಲಿಸಿದ ಆಂಧ್ರ ತಂಡ, 27 ಓವರ್ಗಳ ಅಂತ್ಯಕ್ಕೆ 4 ವಿಕೆಟ್ಗಳ ನಷ್ಟಕ್ಕೆ 55 ರನ್ಗಳನ್ನು ಗಳಿಸಿದೆ. ಕ್ರೀಸ್ನಲ್ಲಿ ಪ್ರಥಮ ಇನಿಂಗ್ಸ್ನಲ್ಲಿ ಶತಕ ಗಳಿಸಿದ್ದ ಸೀರಾಮ್ ವೆಂಕಟ ರಾಹುಲ್ ಹಾಗೂ ರೇವಂತ್ ರೆಡ್ಡಿ ಇದ್ದಾರೆ. ಗೆಲುವಿಗೆ ಆಂಧ್ರ ತಂಡಕ್ಕೆ ಇನ್ನೂ 139 ರನ್ಗಳ ಅಗತ್ಯವಿದೆ. ಆದರೆ, ನಾಲ್ಕನೇ ದಿನ ಹಾಗೂ ಪಂದ್ಯ ಮುಗಿಯಲು ಇನ್ನೂ ಕೇವಲ ಎರಡು ಗಂಟೆಗಳು ಮಾತ್ರ ಬಾಕಿ ಇದೆ. ಹಾಗಾಗಿ ಈ ಪಂದ್ಯ ಡ್ರಾನಲ್ಲಿ ಅಂತ್ಯವಾಗಬಹುದು.