ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kuldeep Yadav: ಎಲ್ಲಾ ಸ್ವರೂಪದಲ್ಲಿಯೂ ವಿಶ್ವದ ನಂ.1 ಸ್ಪಿನ್ನರ್‌ ಹೆಸರಿಸಿದ ಯುಜ್ವೇಂದ್ರ ಚಹಲ್‌!

ನ್ಯೂಜಿಲೆಂಡ್‌ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರುವಲ್ಲಿ ವಿಫಲರಾದರೂ ಭಾರತ ತಂಡದ ಚೈನಾಮನ್‌ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಅವರನ್ನು ಹಿರಿಯ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ. ಕುಲ್ದೀಪ್‌ ಯಾದವ್‌ ಮೂರೂ ಸ್ವರೂಪದಲ್ಲಿ ನಂ1 ಸ್ಪಿನ್ನರ್‌ ಎಂದು ಚಹಲ ಬಣ್ಣಿಸಿದ್ದಾರೆ.

IND vs NZ: ವಿಶ್ವದ ನಂ. 1 ಸ್ಪಿನ್ನರ್‌ ಆರಿಸಿದ ಯುಜ್ವೇಂದ್ರ ಚಹಲ್‌!

ಕುಲ್ದೀಪ್‌ ಯಾದವ್‌ ಅವರನ್ನು ನಂ1 ಸ್ಪಿನ್ನರ್‌ ಎಂದ ಯುಜ್ವೇಂದ್ರ ಚಹಲ್‌. -

Profile
Ramesh Kote Jan 15, 2026 8:17 PM

ನವದೆಹಲಿ: ನ್ಯೂಜಿಲೆಂಡ್‌ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ (IND vs NZ) ಉತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರುವಲ್ಲಿ ವಿಫಲರಾದರೂ ಭಾರತ ತಂಡದ ಹಿರಿಯ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ (Kuldeep Yadav) ಅವರನ್ನು ಹಿರಿಯ ಆಟಗಾರ ಯುಜ್ವೇಂದ್ರ ಚಹಲ್‌ (Yuzvendra Chahal) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಮೂರೂ ಸ್ವರೂಪದಲ್ಲಿ ಕುಲ್ದೀಪ್‌ ಯಾದವ್‌ ಪ್ರಸ್ತುತ ನಂಬರ್‌ 1 ಸ್ಪಿನ್ನರ್‌ ಎಂದು ಲೆಗ್‌ ಸ್ಪಿನ್ನರ್‌ ಚಹಲ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ ರಾಜ್‌ಕೋಟ್‌ನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಬೌಲ್‌ ಮಾಡಿದ್ದ 10 ಓವರ್‌ಗಳಿಗೆ 82 ರನ್‌ ನೀಡಿ ಒಂದೇ ಒಂದು ವಿಕೆಟ್‌ ಕಬಳಿಸಿದ್ದರು. ಆ ಮೂಲಕ ದುಬಾರಿಯಾಗಿದ್ದರು.

ಕಿವೀಸ್‌ ಎದುರು ನಡೆಯುತ್ತಿರುವ ಏಕದಿನ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಕುಲ್ದೀಪ್‌ ಯಾದವ್‌ ಪಡೆದಿದ್ದು ಕೇವಲ ಎರಡು ವಿಕೆಟ್‌ಗಳನ್ನು ಮಾತ್ರ, ಆದರೆ ಅವರು 19 ಓವರ್‌ಗಳಲ್ಲಿ67ರ ಸರಾಸರಿಯಲ್ಲಿ 134 ರನ್‌ಗಳನ್ನು ನೀಡಿದ್ದಾರೆ. ಈ ಸರಣಿಯಲ್ಲಿ ವಿಲ್‌ ಯಂಗ್‌ ಹಾಗೂ ಡಾರಿಲ್‌ ಮಿಚೆಲ್‌ ಅವರನ್ನು ಮಾತ್ರ ಔಟ್‌ ಮಾಡಿದ್ದಾರೆ. ಕಳಪೆ ಪ್ರದರ್ಶನದ ಹೊರತಾಗಿಯೂ ಕುಲ್ದೀಪ್‌ ಅವರನ್ನು ಚಹಲ್‌ ವಿಶ್ವದ ನಂ. 1 ಸ್ಪಿನ್ನರ್‌ ಎಂದು ಬಣ್ಣಿಸಿದ್ದಾರೆ.

ವಿರಾಟ್‌ ಕೊಹ್ಲಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಂಜಯ್‌ ಮಾಂಜ್ರೇಕರ್‌ರನ್ನು ಟೀಕಿಸಿದ ಹರ್ಭಜನ್‌ ಸಿಂಗ್‌!

ತಮ್ಮ ಎಕ್ಸ್‌ ಖಾತೆಯಲ್ಲಿ ಯುಜ್ವೇಂದ್ರ ಚಹಲ್‌, "ಇಡೀ ವಿಶ್ವಕ್ಕೆ ಕುಲ್ದೀಪ್‌ ಯಾದವ್‌ ಅವರು ನಂಬರ್‌ 1 ಸ್ಪಿನ್ನರ್‌! ಯಾವುದೇ ಸ್ವರೂಪವಾದರೂ ಅವರು ಚಾಂಪಿಯನ್‌# ಕುಲ್ದೀಪ್‌ ಯಾದವ್‌," ಎಂದು ಪೋಸ್ಟ್‌ ಹಾಕಿದ್ದಾರೆ.



ಭಾರತ ತಂಡದಲ್ಲಿ ಈಗ ಇರುವ ಸ್ಪಿನ್ನರ್‌ಗಳು ಬರುವುದಕ್ಕೂ ಮುನ್ನ ಯುಜ್ವೇಂದ್ರ ಚಹಲ್‌ ಹಾಗೂ ಕುಲ್ದೀಪ್‌ ಯಾದವ್‌ ಜೊತೆಯಾಗಿ ಹೆಚ್ಚಿನ ಪಂದ್ಯಗಳನ್ನು ಆಡಿದ್ದರು ಹಾಗೂ ತಮ್ಮ ಜತೆಯಾಟದಲ್ಲಿ ಭಾರತಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿದ್ದರು. ಈ ಜೋಡಿ ಜೊತೆಯಾಗಿ ಆಡಿದ 70 ಒಡಿಐ ಪಂದ್ಯಗಳಿಂದ 130 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಕುಲ್ದೀಪ್‌ 70 ವಿಕೆಟ್‌ ಕಿತ್ತಿದ್ದರೆ, ಚಹಲ್‌ 60 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ʻಬಿಗ್‌ಬ್ಯಾಷ್‌ ಲೀಗ್‌ನಲ್ಲಿ ಮೊಹಮ್ಮದ್‌ ರಿಝ್ವಾನ್‌ಗೆ ಅವಮಾನʼ: ಕಮ್ರಾನ್‌ ಅಕ್ಮಲ್‌ ಆಕ್ರೋಶ!

ಕುಲ್ದೀಪ್‌ ಯಾದವ್‌ ಎದುರು ರೂಪಿಸಿದ್ದ ಗೇಮ್‌ ಪ್ಲ್ಯಾನ್‌ ತಿಳಿಸಿದ ಮಿಚೆಲ್‌

ಎರಡನೇ ಏಕದಿನ ಪಂದ್ಯದ ಬಳಿಕ ಕಿವೀಸ್‌ ಬ್ಯಾಟ್ಸ್‌ಮನ್‌ ಡ್ಯಾರಿಲ್‌ ಮಿಚೆಲ್‌ ಅವರು ಶತಕ ಬಾರಿಸಿದ್ದರು ಹಾಗೂ ಕುಲ್ದೀಪ್‌ ಯಾದವ್‌ ಅವರನ್ನು ಸಮರ್ಥವಾಗಿ ಮೆಟ್ಟಿ ನಿಂತಿದ್ದರು. ಈ ಬಗ್ಗೆ ಬಲಗೈ ಬ್ಯಾಟ್ಸ್‌ಮನ್‌ ಮಾಹಿತಿ ನೀಡಿದ್ದಾರೆ.

"ಇದೆಲ್ಲವೂ ವಿಭಿನ್ನ ಸನ್ನಿವೇಶವನ್ನು ಅಳವಡಿಸಿಕೊಳ್ಳುವುದಾಗಿದೆ ಹಾಗೂ ಅವರ(ಕುಲ್ದೀಪ್‌) ವಿರುದ್ಧ ವಿಭಿನ್ನ ಆಯ್ಕೆಗಳನ್ನು ಪತ್ತೆ ಹಚ್ಚಿದ್ದೇವೆ," ಎಂದು ಹೇಳಿದ ಡ್ಯಾರಿಲ್‌ ಮಿಚೆಲ್‌, ಭಾರತೀಯ ಸ್ಪಿನ್ನರ್‌ ಅನ್ನು ಗುರಿಯನ್ನಾಗಿಸಲು ತಾವು ಅನುಸರಿಸಿದ ಪ್ರಕ್ರಿಯೆಯನ್ನು ರಿವೀಲ್‌ ಮಾಡಿದ್ದಾರೆ.

ಭಾರತದ ಸೋಲಿಗೆ ಕಾರಣ ತಿಳಿಸಿದ ಸಹಾಯಕ ಕೋಚ್

ಸಮಬಲ ಕಾಯ್ದುಕೊಂಡಿರುವ ಭಾರತ VS ನ್ಯೂಜಿಲೆಂಡ್‌

ಎರಡು ಪಂದ್ಯಗಳ ಅಂತ್ಯಕ್ಕೆ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಏಕದಿನ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿವೆ. ಇನ್ನು ಮೂರನೇ ಹಾಗೂ ಸರಣಿಯ ಕೊನೆಯ ಪಂದ್ಯ ಜನವರಿ 18 ರಂದು ಇಂದೋರ್‌ನ ಹೋಳ್ಕರ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.