MI vs SRH: ಸತತ ನಾಲ್ಕನೇ ಪಂದ್ಯದಿಂದಲೂ ರೋಹಿತ್ ಶರ್ಮಾ ಔಟ್! ಹಿಟ್‌ಮ್ಯಾನ್ ಕೆರಿಯರ್ ಅಂತ್ಯ?
Mumbai Indians Playing XI: ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಬುಧವಾರದ ಪಂದ್ಯದಲ್ಲಿಯೂ ರೋಹಿತ್ ಶರ್ಮಾ ಆಡುತ್ತಿಲ್ಲ. ಇದರಿಂದಾಗಿ ರೋಹಿತ್ ಅಭಿಮಾನಿಗಳಿಗೆ ಭಾರಿ ನಿರಾಶೆಯಾಗಿದೆ. ಸತತ ನಾಲ್ಕನೇ ಪಂದ್ಯದಲ್ಲಿ ಮುಂಬೈ ಹಿಟ್‌ಮ್ಯಾನ್ ಸೇವೆಯನ್ನು ಎಂಐ ಕಳೆದುಕೊಳ್ಳುವಂತಾಗಿದೆ. ಇದಕ್ಕೆ ಕಾರಣವೇನೆಂದು ಇಲ್ಲಿ ವಿವರಿಸಲಾಗಿದೆ.
ರೋಹಿತ್ ಶರ್ಮಾ ಬಗ್ಗೆ ಹಾರ್ದಿಕ್ ಪಾಂಡ್ಯ ಅಪ್‌ಡೇಟ್. -
ಮುಂಬೈ: ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾಗೆ (Rohit Sharma) ಮತ್ತೊಮ್ಮೆ ನಿರಾಶೆಯಾಗಿದೆ. ಬುಧವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿಯೂ (MI vs SRH) ರೋಹಿತ್ ಶರ್ಮಾ ಕಾಣಿಸಿಕೊಂಡಿಲ್ಲ. ಆ ಮೂಲಕ ಅಭಿಮಾನಿಗಳ ನೆಚ್ಚಿನ ಹಿಟ್‌ಮ್ಯಾನ್ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಸತತ ನಾಲ್ಕನೇ ಪಂದ್ಯದಿಂದ ಹೊರಗುಳಿದಂತಾಯಿತು. ಇದು ಅಭಿಮಾನಿಗಳ ಮನಸಿನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಅಂದ ಹಾಗೆ ಕಳೆದ ಪಂದ್ಯಗಳ ಸಮಯದಲ್ಲಿ ರೋಹಿತ್ ಶರ್ಮಾ ನೆಟ್ಸ್‌ನಲ್ಲಿ ಕಾಣಿಸಿಕೊಂಡಿದ್ದರು, ಇದನ್ನು ನೋಡಿದ್ದ ಅಭಿಮಾನಿಗಳು ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ ಆಡಬಹುದೆಂಬ ಆಸೆಯನ್ನು ಇಟ್ಟುಕೊಂಡಿದ್ದರು. ಆದರೆ, ಟಾಸ್ ವೇಳೆ ಹಾರ್ದಿಕ್ ಪಾಂಡ್ಯ, ಮುಂಬೈ ಇಂಡಿಯನ್ಸ್ ತಂಡದ ಪ್ಲೇಯಿಂಗ್ XI ಅನ್ನು ಪ್ರಕಟಿಸಿದ ಬಳಿಕ ಅಭಿಮಾನಿಗಳಿ ಭಾರಿ ನಿರಾಶೆಯಾಯಿತು. ಅಂದ ಹಾಗೆ ನಾಯಕ ಹಾರ್ದಿಕ್, ರೋಹಿತ್ ಶರ್ಮಾ ಅಲಭ್ಯತೆ ಬಗ್ಗೆ ಮಾಹಿತಿ ನೀಡಿದರು.
ʻನನ್ನನ್ನು ಕ್ಷಮಿಸಿ ಬಾಸ್ʼ: ರೋಹಿತ್ ಶರ್ಮಾ ಬಳಿ ಕ್ಷಮೆ ಕೇಳಿದ ಕೃಷ್ಣಮಾಚಾರಿ ಶ್ರೀಕಾಂತ್!
ಟಾಸ್ ವೇಳೆ ಹಾರ್ದಿಕ್ ಪಾಂಡ್ಯ ಏನಂದ್ರು?
"ರೋಹಿತ್ ಶರ್ಮಾ ಅವರು ಮುಂದಿನ ಇನ್ನೂ ಕೆಲ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಅವರು ಪ್ರಯತ್ನಿಸುತ್ತಿದ್ದಾರೆ ಆದರೆ, ಅವರು ಬಯಸುವ ಸ್ಥಳಕ್ಕೆ ಇನ್ನೂ ಹೊಂದಾಣಿಕೆಯಾಗುತ್ತಿಲ್ಲ, ಹಾಗಾಗಿ ಅವರು ತಂಡಕ್ಕೆ ಲಭ್ಯರಾಗುತ್ತಿಲ್ಲ," ಎಂದು ಟಾಸ್ ಬಳಿಕ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.
🚨 TOSS 🚨@mumbaiindians won the toss & chose to bat first against @SunRisers in Wankhede!
— IndianPremierLeague (@IPL) April 29, 2026
Updates ▶️ https://t.co/ypWTkEr2Rc#TATAIPL | #KhelBindaas | #MIvSRH pic.twitter.com/5JNhDPJD96
ರೋಹಿತ್ ಶರ್ಮಾ ಆಡದೇ ಇರಲು ನೈಜ ಕಾರಣವೇನು?
ಏಪ್ರಿಲ್ 12 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ಈ ಪಂದ್ಯದಲ್ಲಿ ಆರ್‌ಸಿಬಿ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐದು ಬಾರಿ ಚಾಂಪಿಯನ್ಸ್ ಅನ್ನು ಹೀನಾಯವಾಗಿ ಸೋಲಿಸಿತ್ತು.
ಅಂದಿನಿಂದ ರೋಹಿತ್ ಶರ್ಮಾ ಮೆಡಿಕಲ್ ಸ್ಟಾಫ್ ಜೊತೆಗೆ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ಸಂಪೂರ್ಣ ಫಿಟ್‌ನೆಸ್‌ಗೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರ ಚೇತರಿಕೆಗೆ ಹೆಚ್ಚಿನ ಸಮಯ ಹಿಡಿಯುತ್ತಿದೆ. ತರಬೇತಿ ಪಡೆದಿದ್ದರೂ ಅವರು ಇನ್ನೂ ಪಂದ್ಯಕ್ಕೆ ಸಿದ್ಧವಾಗಿಲ್ಲದಿರುವುದು ಗಾಯದ ವ್ಯಾಪ್ತಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Our playing XI for tonight's encounter at Wankhede 💙 pic.twitter.com/5VxLbtux8i
— Mumbai Indians (@mipaltan) April 29, 2026
ಅವರ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಸ್ಥಿರವಾದ ಓಪನಿಂಗ್ ಜೋಡಿಯನ್ನು ಕಂಡುಹಿಡಿಯಲು ಸಂಕಷ್ಟ ಅನುಭವಿಸಿದೆ. ಕ್ವಿಂಟನ್ ಡಿ ಕಾಕ್, ರಯಾನ್ ರಿಕ್ಕೆಲ್ಟನ್ ಮತ್ತು ದಾನಿಶ್ ಮಲೇವಾರ್ ಅವರನ್ನು ಪ್ರಯತ್ನಿಸಿದರೂ, ಯಾರಿಗೂ ಆ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ವಿಶೇಷವಾಗಿ ಮಲೇವಾರ್ ಸಂಕಷ್ಟದಲ್ಲಿದ್ದು, ತಮ್ಮ ಕೊನೆಯ ಎರಡು ಇನಿಂಗ್ಸ್‌ಗಳಲ್ಲಿ 2 ಮತ್ತು 0 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಇದರಿಂದ ತಂಡದ ಟಾಪ್ ಆರ್ಡರ್‌ನಲ್ಲಿ ಇರುವ ಕೊರತೆ ಸ್ಪಷ್ಟವಾಗಿ ಕಾಣಿಸಿದೆ.