ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs RR: ರಾಜಸ್ಥಾನ್‌ ಪ್ಲೇಆಫ್ಸ್‌ ಕನಸು ಭಗ್ನ, ಮುಂಬೈ ಇಂಡಿಯನ್ಸ್‌ಗೆ ಸತತ ಆರನೇ ಜಯ!

MI vs RR Match Highlights: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಅಬ್ಬರಿಸಿದ ಮುಂಬೈ ಇಂಡಿಯನ್ಸ್‌, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 50 ನೇ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ವಿರುದ್ದ 100 ರನ್‌ಗಳ ಭಾರಿ ಅಂತರದಲ್ಲಿ ಗೆಲುವು ಪಡೆಯಿತು. ಆ ಮೂಲಕ ಈ ಟೂರ್ನಿಯಲ್ಲಿ ಮುಂಬೈ ಸತತ ಆರನೇ ಗೆಲುವು ಪಡೆದಂತಾಯಿತು.

MI vs RR: ರಾಜಸ್ಥಾನ್‌ ರಾಯಲ್ಸ್‌ಗೆ ಆಘಾತ ನೀಡಿದ ಮುಂಬೈ ಇಂಡಿಯನ್ಸ್‌!*

ಮುಂಬೈ ಇಂಡಿಯನ್ಸ್‌ಗೆ 100 ರನ್‌ಗಳ ಜಯ.

Profile Ramesh Kote May 1, 2025 11:37 PM

ಜೈಪುರ: ‌ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ಸತತ ಆರನೇ ಗೆಲುವು ಪಡೆದಿದೆ. ರಯಾನ್‌ ರಿಕೆಲ್ಟನ್‌ ಹಾಗೂ ರೋಹಿತ್‌ ಶರ್ಮಾ ಅವರ ಅರ್ಧಶತಕಗಳು ಹಾಗೂ ಟ್ರೆಂಟ್‌ ಬೌಲ್ಟ್‌ ಹಾಗೂ ಕರಣ್‌ ಶರ್ಮಾರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಮುಂಬೈ (Mumabi Indians), ರಾಜಸ್ಥಾನ್‌ ರಾಯಲ್ಸ್ (Rajasthan Royals) ವಿರುದ್ಧ 100 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ.

ಇಲ್ಲಿನ ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ದ 200ಕ್ಕೂ ಅಧಿಕ ರನ್‌ಗಳನ್ನು ಯಶಸ್ವಿಯಾಗಿ ಚೇಸ್‌ ಮಾಡಿದ್ದ ರಾಜಸ್ಥಾನ್‌ ರಾಯಲ್ಸ್‌, ಗುರುವಾರ ಮುಂಬೈ ಇಂಡಿಯನ್ಸ್‌ ಎದುರು 218 ರನ್‌ಗಳ ಟಾರ್ಗೆಟ್‌ ಚೇಸ್‌ ಮಾಡುವಲ್ಲಿ ವಿಫಲವಾಯಿತು. ಟ್ರೆಂಟ್‌ ಬೌಲ್ಟ್‌ (28ಕ್ಕೆ 3) ಹಾಗೂ ಕರಣ್‌ ಶರ್ಮಾ (23ಕ್ಕೆ 3) ಅವರ ಬೌಲಿಂಗ್‌ ದಾಳಿಗೆ ನಲುಗಿ 16.1 ಓವರ್‌ಗಳಿಗೆ 117 ರನ್‌ಗಳಿಗೆ ಆಲ್‌ಔಟ್‌ ಆಯಿತು. ಜೋಫ್ರಾ ಆರ್ಚರ್‌ 30 ರನ್‌ ಗಳಿಸಿದ್ದು ಬಿಟ್ಟರೆ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್‌ ವೈಯಕ್ತಿಕ 20 ರನ್‌ ಗಳಿಸಲಿಲ್ಲ. ಅಂತಿಮವಾಗಿ ರಾಜಸ್ಥಾನ್‌ ರಾಯಲ್ಸ್‌, ಐದು ಚಾಂಪಿಯನ್ಸ್‌ಗೆ ಶರಣಾಯಿತು.

IPL 2025: ಮುಂಬೈ ಇಂಡಿಯನ್ಸ್‌ ಪರ ವಿಶೇಷ ದಾಖಲೆ ಬರೆದ ರೋಹಿತ್‌ ಶರ್ಮಾ!

ಮುಂಬೈ ಇಂಡಿಯನ್ಸ್‌ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಟ್ರೆಂಟ್‌ ಬೌಲ್ಟ್‌ ಹಾಗೂ ಕರಣ್‌ ಶರ್ಮಾ ತಲಾ 3 ವಿಕೆಟ್‌ಗಳನ್ನು ಪಡೆದರೆ, ಜಸ್‌ಪ್ರೀತ್‌ ಬುಮ್ರಾ 2 ಮತ್ತು ದೀಪಕ್‌ ಚಹರ್‌ ಒಂದು ವಿಕೆಟ್‌ ಕಿತ್ತಿದ್ದಾರೆ.

217 ರನ್‌ ಕಲೆ ಹಾಕಿದ್ದ ಮುಂಬೈ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಮುಂಬೈ ಇಂಡಿಯನ್ಸ್‌ ತಂಡ, ರಯಾನ್‌ ರಿಕೆಲ್ಟನ್‌ ಹಾಗೂ ರೋಹಿತ್‌ ಶರ್ಮಾ ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ ಎರಡು ವಿಕೆಟ್‌ಗಳಿಗೆ 217 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ 218 ರನ್‌ಗಳ ಗುರಿಯನ್ನು ನೀಡಿತ್ತು.



ಇನಿಂಗ್ಸ್‌ ಆರಂಭಿಸಿದ ರೋಹಿತ್‌ ಶರ್ಮಾ ಹಾಗೂ ರಯಾನ್‌ ರಿಕೆಲ್ಟನ್‌ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಆ ಮೂಲಕ ಮುರಿಯದ ಮೊದಲನೇ ವಿಕೆಟ್‌ಗೆ 116 ರನ್‌ಗಳನ್ನು ಕಲೆ ಹಾಕಿದರು. ಅತ್ಯಂತ ಸ್ಪೋಟಕ ಬ್ಯಾಟ್‌ ಮಾಡಿದ ರಯಾನ್‌, ಕೇವಲ 38 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 61 ರನ್‌ಗಳನ್ನು ಸಿಡಿಸಿ ವಿಕೆಟ್‌ ಒಪ್ಪಿಸಿದರು.

ಅರ್ಧಶತಕ ಬಾರಿಸಿದ ರೋಹಿತ್‌ ಶರ್ಮಾ

ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟ್‌ ಮಾಡುತ್ತಿದ್ದ ರೋಹಿತ್‌ ಶರ್ಮಾ, ರಾಜಸ್ಥಾನ್‌ ರಾಯಲ್ಸ್‌ ಬೌಲರ್‌ಗಳನ್ನು ದಂಡಿಸಿದರು. ಅವರು ಆಡಿದ್ದ 36 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 53 ರನ್‌ಗಳನ್ನು ಸಿಡಿಸಿದರು. ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿದ ಸೂರ್ಯಕುಮಾರ್‌ ಯಾದವ್‌ ಹಾಗೂ ಹಾರ್ದಿಕ್‌ ಪಾಂಡ್ಯ ಇಬ್ಬರೂ ತಲಾ 23 ಎಸೆತಗಳಲ್ಲಿ ಅಜೇಯ 48 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಮುಂಬೈ ಇಂಡಿಯನ್ಸ್‌ ದೊಡ್ಡ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದ್ದರು.



ಸ್ಕೋರ್‌ ವಿವರ

ಮುಂಬೈ ಇಂಡಿಯನ್ಸ್:‌ 20 ಓವರ್‌ಗಳಿಗೆ 217-2 (ರಯಾನ್‌ ರಿಕೆಲ್ಟನ್‌ 61, ರೋಹಿತ್‌ ಶರ್ಮಾ 53, ಹಾರ್ದಿಕ್‌ ಪಾಂಡ್ಯ 48, ಸೂರ್ಯಕುಮಾರ್‌ ಯಾದವ್‌ 48 (ರಿಯಾನ್‌ ಪರಾಗ್‌ 12 ಕ್ಕೆ 1, ಮಹೇಶ್‌ ತೀಕ್ಷಣ 47ಕ್ಕೆ 1)

ರಾಜಸ್ಥಾನ್‌ ರಾಯಲ್ಸ್:‌ 16.1 ಓವರ್‌ಗಳಿಗೆ 117-10 (ಜೋಫ್ರಾ ಆರ್ಚರ್‌ 30; ಟ್ರೆಂಟ್‌ ಬೌಲ್ಟ್‌ 28ಕ್ಕೆ 3, ಕರಣ್‌ ಶರ್ಮಾ 23 ಕ್ಕೆ 3)

ಪಂದ್ಯ ಶ್ರೇಷ್ಠ ಪ್ರಶಸ್ತಿ: ರಯಾನ್‌ ರಿಕೆಲ್ಟನ್‌