ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NAM: ನಮೀಬಿಯಾ ಎದುರು ಟಾಸ್‌ ಸೋತ ಭಾರತ ತಂಡ ಮೊದಲ ಬ್ಯಾಟಿಂಗ್‌!

IND vs NAM Match: ದೆಹಲಿಯ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಭಾರತ ಹಾಗೂ ನಮೀಬಿಯಾ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ನಮೀಬಿಯಾ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಹಾಗಾಗಿ ಭಾರತ ತಂಡ ಮೊದಲು ಬ್ಯಾಟ್‌ ಮಾಡಲಿದೆ.

ನಮೀಬಿಯಾ ಎದುರು ಟಾಸ್‌ ಸೋತ ಭಾರತ ಮೊದಲ ಬ್ಯಾಟಿಂಗ್‌!

ಭಾರತ ಹಾಗೂ ನಮೀಬಿಯಾ ನಡುವಣ ಟಿ20 ವಿಶ್ವಕಪ್‌ ಪಂದ್ಯ. -

Profile
Ramesh Kote Feb 12, 2026 6:53 PM

ನವದೆಹಲಿ: ಇಲ್ಲಿನ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಭಾರತ ಹಾಗೂ ನಮೀಬಿಯಾ (IND vs NAM) ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ನಮೀಬಿಯಾ ತಂಡ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದು, ಸೂರ್ಯಕುಮಾರ್‌ ಯಾದವ್‌ (Suryakumar Yadav) ನಾಯಕತ್ವದ ಭಾರತ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ. ಭಾರತ ತಂಡ,ತನ್ನ ಮೊದಲನೇ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ ಗೆದ್ದಿತ್ತು. ಇದೀಗ ಎರಡನೇ ಪಂದ್ಯವನ್ನು ಕೂಡ ಸುಲಭವಾಗಿ ಗೆದ್ದುಕೊಳ್ಳುವ ನಿರೀಕ್ಷೆಯಲ್ಲಿದೆ.

ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಎರಡು ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ. ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ಇನ್ನೂ ಅನಾರೋಗ್ಯದಿಂದ ಚೇತರಿಸಿಕೊಂಡಿಲ್ಲ. ಹಾಗಾಗಿ ಅವರು ಆಯ್ಕೆಗೆ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಶಾನ್‌ ಕಿಶನ್‌ ಅವರ ಜೊತೆ ಇನಿಂಗ್ಸ್‌ ಆರಂಭಿಸಲು ಸಂಜು ಸ್ಯಾಮ್ಸನ್‌ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನು ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದರ ಹೊರತಾಗಿಯೂ ಮೊಹಮ್ಮದ್‌ ಸಿರಾಜ್‌ ಅವರನ್ನು ಕೈ ಬಿಟ್ಟು ಜಸ್‌ಪ್ರೀತ್‌ ಬುಮ್ರಾಗೆ ಆಡಲು ಅವಕಾಶವನ್ನು ನೀಡಲಾಗಿದೆ.

NEP vs ITA: ನೇಪಾಳ ತಂಡಕ್ಕೆ ಸೋಲು, ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಇಟಲಿಗೆ ಮೊದಲ ಜಯ!

ಇನ್ನು ಎದುರಾಳಿ ನಮೀಬಿಯಾ ತಂಡದ ಪ್ಲೇಯಿಂಗ್‌ XIನಲ್ಲಿಯೂ ಎರಡು ಬದಲಾವಣೆಯನ್ನು ತರಲಾಗಿದೆ. ಹೆಚ್ಚುವರಿ ಸೀಮರ್‌ ಆಗಿ ಬೆನ್‌ ಶಿಕಾಂಗೊ ಅವರನ್ನು ಕರೆಸಿಕೊಳ್ಳಲಾಗಿದೆ ಹಾಗೂ ಬ್ಯಾಟಿಂಗ್‌ ವಿಭಾಗಕ್ಕೆ ಮಲನ್‌ ಕ್ರಗರ್‌ ಬಂದಿದ್ದಾರೆ ಎಂದು ನಾಯಕ ಗೆರಾಲ್ಟಾಡ್ಸ್‌‌ ಎರಾಸ್ಮಸ್‌ ಟಾಸ್‌ ಗೆದ್ದ ಬಳಿಕ ತಿಳಿಸಿದ್ದಾರೆ. ತನ್ನ ಮೊದಲನೇ ಪಂದ್ಯದಲ್ಲಿ ನಮೀಬಿಯಾ ತಂಡ, ನೆದರ್ಲೆಂಡ್ಸ್‌ ವಿರುದ್ಧ ಏಳು ವಿಕೆಟ್‌ಗಳಿಂದ ಸೋತಿತ್ತು. ಇದೀಗ ಭಾರತದ ವಿರುದ್ದ ಕಠಿಣ ಹೋರಾಟ ನೀಡಲು ಪ್ರಯತ್ನಿಸಲಿದೆ.



ಇತ್ತಂಡಗಳ ಪ್ಲೇಯಿಂಗ್‌ XI

ಭಾರತ: ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್‌), ಸಂಜು ಸ್ಯಾಮ್ಸನ್‌, ತಿಲಕ್‌ ವರ್ಮಾ, ಸೂರ್ಯಕುಮಾರ್‌ ಯಾದವ್‌ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬುಮ್ರಾ



ನಮೀಬಿಯಾ: ಲಾರೆನ್‌ ಸ್ಟೀನ್‌ಕಾಂಪ್‌, ಜ್ಯಾನ್‌ ಫ್ರೈಲಿಂಕ್‌, ಜ್ಯಾನ್‌ ನಿಕೋಲ್‌ ಲಾಫ್ಟಿ ಈಟನ್‌, ಗೆರಾರ್ಡ್‌ ಎರಾಸ್ಮಸ್‌ (ನಾಯಕ), ಜೆಜೆ ಸ್ಮಿತ್‌, ಮಲನ್‌ ಕ್ರಗರ್‌, ಝ್ಯಾನ್‌ ಗ್ರೀನ್‌ (ವಿಕೆಟ್‌ ಕೀಪರ್‌), ರುಬೆನ್‌ ಟ್ರಂಪೆಲ್ಮನ್‌, ಬೆನಾರ್ಡ್‌ ಸ್ಕಾಲ್ಟ್ಸ್‌, ಬೆನ್‌ ಶಿಕಾಂಗೊ, ಮ್ಯಾಕ್ಸ್‌ ಹೀಂಗ್‌

ಯುಎಸ್‌ಎ ವಿರುದ್ಧ 29 ರನ್‌ಗಳ ಜಯ

ಭಾರತ ತಂಡ ಫೆಬ್ರವರಿ 7ರಂದು ತನ್ನ ಮೊದಲನೇ ಪಂದ್ಯವನ್ನು ಯುಎಸ್‌ಎ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡ, ಆರಂಭದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಆ ಮೂಲಕ 77 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಅಪಾಯಕ್ಕೆ ಸಿಲುಕಿತ್ತು. ಆದರೆ, ನಾಯಕ ಸೂರ್ಯಕುಮಾರ್‌ ಯಾದವ್‌ ನಿರ್ಣಾಯಕ ಇನಿಂಗ್ಸ್‌ ಆಡಿ 84 ರನ್‌ಗಳನ್ನು ಕಲೆ ಹಾಕಿ ತಂಡವನ್ನು ಪಾರು ಮಾಡಿದ್ದರು. ಆ ಮೂಲಕ ಭಾರತ ತಂಡ, 161 ರನ್‌ಗಳನ್ನು ಗಳಿಸಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಯುಎಸ್‌ಎ ಕಠಿಣ ಹೋರಾಟ ನಡೆಸಿತಾದರೂ 132 ರನ್‌ಗಳಿಗೆ ಸೀಮಿತವಾಗಿತ್ತು.