ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಮೊದಲನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ಸಂಜಯ್‌ ಬಾಂಗರ್‌!

Sanjay Bangar Picks India's Playing XI: ಇಂಗ್ಲೆಂಡ್‌ ವಿರುದ್ದದ ಜೂನ್‌ 20 ರಂದು ಆರಂಭವಾಗಲಿರುವ ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಮಾಜಿ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಾಂಗರ್‌, ಭಾರತ ತಂಡದ ಪ್ಲೇಯಿಂಗ್‌ XI ಅನ್ನು ಆರಿಸಿದ್ದಾರೆ. ಆದರೆ, ರವೀಂದ್ರ ಜಡೇಜಾ ಅವರನ್ನು ಕೈ ಬಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

IND vs ENG: ಭಾರತದ ಪ್ಲೇಯಿಂಗ್‌ XI ಆರಿಸಿದ ಸಂಜಯ್‌ ಬಾಂಗರ್‌!

ಭಾರತದ ಪ್ಲೇಯಿಂಗ್‌ XI ಆರಿಸಿದ ಸಂಜಯ್‌ ಬಾಂಗರ್.

Profile Ramesh Kote Jun 12, 2025 5:13 PM

ನವದೆಹಲಿ: ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಯ (IND vs ENG) ಮೂಲಕ ಭಾರತ ತಂಡ 2025-27ರ ಸಾಲಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ (WTC 2025-27) ಅಭಿಯಾನವನ್ನು ಆರಂಭಿಸಲಿದೆ. ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಹಿನ್ನೆಲೆಯಲ್ಲಿ ಶುಭಮನ್‌ ಗಿಲ್‌ (Shubman Gill) ನಾಯಕತ್ವದಲ್ಲಿ ಭಾರತ ತಂಡ ಟೆಸ್ಟ್‌ ಸರಣಿಯನ್ನು ಆಡಲಿದೆ. ಮೊದಲನೇ ಟೆಸ್ಟ್‌ ಪಂದ್ಯ ಜೂನ್‌ 20 ರಂದು ಲೀಡ್ಸ್‌ನಲ್ಲಿ ಆರಂಭವಾಗಲಿದೆ. ಅಂದ ಹಾಗೆ ಈ ಸರಣಿಯಲ್ಲಿ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಹಲವು ಬದಲಾವಣೆಗಳನ್ನು ನಾವು ನಿರೀಕ್ಷೆ ಮಾಡಬಹುದಾಗಿದೆ.

ಈ ಟೆಸ್ಟ್‌ ಸರಣಿಯಲ್ಲಿ ಉತ್ತಮ ಪ್ಲೇಯಿಂಗ್‌ XI ಅನ್ನು ಆಯ್ಕೆ ಮಾಡುವುದು ಕೂಡ ಭಾರತ ತಂಡಕ್ಕೆ ಕೀ ಸಂಗತಿಯಾಗಲಿದೆ. ಭಾರತ ತಂಡದ ಪ್ಲೇಯಿಂಗ್‌ Xiನಲ್ಲಿ ಸಾಯಿ ಸುದರ್ಶನ್‌ ಹಾಗೂ ಕರುಣ್‌ ನಾಯರ್‌ ಅವರಲ್ಲಿ ಯಾರಿಗೆ ಅವಕಾಶ ನೀಡಬೇಕೆಂಬುದು ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಗೊಂದಲವಾಗಿದೆ. ಏಕೆಂದರೆ ಈ ಇಬ್ಬರೂಕೂಡ ಸದ್ಯ ಅತ್ಯುತ್ತಮ ಪಾರ್ಮ್‌ನಲ್ಲಿದ್ದಾರೆ. ಅಂದ ಹಾಗೆ ಅತ್ಯುತ್ತಮ ಬೌಲಿಂಗ್‌ ಕಾಂಬಿನೇಷನ್‌ ಹೊಂದಿರುವ ಭಾರತ ತಂಡ ಈ ಸರಣಿಯಲ್ಲಿ ಯಶಸ್ವಿಯಾಗಬಹುದು. ಶಾರ್ದುಲ್‌ ಠಾಕೂರ್‌ ಹಾಗೂ ನಿತೀಶ್‌ ರೆಡ್ಡಿ ಇಬ್ಬರೂ ಬೌಲಿಂಗ್‌ ಜೊತೆಗೆ ಬ್ಯಾಟಿಂಗ್‌ನಲ್ಲಿ ಕೊಡುಗೆ ನೀಡುವುದರ ಫಲವಾಗಿ ಇವರಿಬ್ಬರೂ ಪ್ಲೇಯಿಂಗ್‌ xiನಲ್ಲಿ ಆಡಬಹುದು.

IND vs ENG: ಭಾರತ ತಂಡದ ಮೂರನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ಸಂಜಯ್‌ ಬಾಂಗರ್‌!

ಇಂಗ್ಲೆಂಡ್‌ ವಿರುದ್ದದ ಮೊದಲನೇ ಟೆಸ್ಟ್‌ ಪಂದ್ಯದ ನಿಮಿತ್ತ ಭಾರತ ತಂಡದ ಮಾಜಿ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಾಂಗರ್‌ ಅವರು ತನ್ನ ನೆಚ್ಚಿನ ಪ್ಲೇಯಂಗ್‌ XI ಅನ್ನು ಆಯ್ಕೆ ಮಾಡಿದ್ದಾರೆ. ಓಪನಿಂಗ್‌ ಬ್ಯಾಟ್ಸ್‌ಮನ್‌ಗಳಾಗಿ ಕೆಎಲ್‌ ರಾಹುಲ್‌ ಹಾಗೂ ಯಶಸ್ವಿ ಜೈಸ್ವಾಲ್‌ ಅವರನ್ನು ಆಯ್ಕೆ ಮಾಡಿದ್ದಾರೆ. ಮೂರನೇ ಕ್ರಮಾಂಕಕ್ಕೆ ಅವರು ಅಭಿಮನ್ಯು ಈಶ್ವರನ್‌ ಅವರನ್ನು ಆಯ್ಕೆ ಮಾಡಿದ್ದಾರೆ.

ನಾಯಕ ಶುಭಮನ್‌ ಗಿಲ್‌ ಅವರನ್ನು ನಾಲ್ಕನೇ ಕ್ರಮಾಂಕಕ್ಕೆ ಆರಿಸಿದ ಸಂಜಯ್‌ ಬಾಂಗರ್‌ ಕ್ರಮವಾಗಿ 5 ಮತ್ತು 6ನೇ ಕ್ರಮಾಂಕಗಳಿಗೆ ರಿಷಭ್‌ ಪಂತ್‌ ಹಾಗೂ ಕರುಣ್‌ ನಾಯರ್‌ ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ, ಸ್ಪಿನ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರನ್ನು ಕೈ ಬಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇನ್ನು ವೇಗದ ಬೌಲಿಂಗ್‌ ವಿಭಾಗಕ್ಕೆ ಪ್ರಸಿಧ್‌ ಕೃಷ್ಣ, ಮೊಹಮ್ಮದ್‌ ಸಿರಾಜ್‌ ಹಾಗೂ ಜಸ್‌ಪ್ರೀತ್‌ ಬುಮ್ರಾ ಅವರನ್ನು ಆರಿಸಿದ್ದಾರೆ.

IND vs ENG: ಜಸ್‌ಪ್ರೀತ್‌ ಬುಮ್ರಾ ಬಗ್ಗೆ ಇಂಗ್ಲೆಂಡ್‌ಗ ವಾರ್ನಿಂಗ್‌ ಕೊಟ್ಟ ಮಾರ್ನೆ ಮಾರ್ಕೆಲ್!

ಸಂಜಯ್‌ ಬಾಂಗರ್‌ ಆಯ್ಕೆಯ ಭಾರತ ತಂಡದ ಪ್ಲೇಯಿಂಗ್‌ XI

ಯಶಸ್ವಿ ಜೈಸ್ವಾಲ್‌, ಕೆಎಲ್‌ ರಾಹುಲ್‌, ಅಭಿಮನ್ಯು ಈಶ್ವರನ್‌, ಶುಭಮನ್‌ ಗಿಲ್‌, ರಿಷಭ್‌ ಪಂತ್‌, ಕರುಣ್‌ ನಾಯರ್‌, ನಿತೀಶ್‌ ರೆಡ್ಡಿ, ಜಸ್‌ಪ್ರೀತ್‌ ಬುಮ್ರಾ, ಕುಲ್ದೀಪ್‌ ಯಾದವ್‌, ಪ್ರಸಿಧ್‌ ಕೃಷ್ಣ, ಮೊಹಮ್ಮದ್‌ ಸಿರಾಜ್‌