ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಿದ ಬೆನ್ನಲ್ಲೆ ಯುವ ಸಮುದಾಯಕ್ಕೆ ದಿನೇಶ್‌ ಕಾರ್ತಿಕ್‌ ವಿಶೇಷ ಸಂದೇಶ!

2026ರ ನೀಟ್‌-ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ ಸಂಬಂಧ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌, ಯುವ ಸಮುದಾಯವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಭಾರತದ ಯುವ ಸಮುದಾಯಕ್ಕೆ ಸ್ಪಷ್ಟ ದೃಷ್ಟಿಕೋನ, ಪರಸ್ಪರ ಸಹಕಾರ ಮತ್ತು ನಿರಂತರ ಹೋರಾಟದ ಮನೋಭಾವವನ್ನು ದಿನೇಶ್ ಕಾರ್ತಿಕ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಭಾರತದ ಯುವ ಸಮುದಾಯಕ್ಕೆ ವಿಶೇಷ ಸಂದೇಶ ರವಾನಿಸಿದ ದಿನೇಶ್‌ ಕಾರ್ತಿಕ್‌!

ಭಾರತದ ಯುವ ಸಮುದಾಯಕ್ಕೆ ದಿನೇಶ್‌ ಕಾರ್ತಿಕ್‌ ವಿಶೇಷ ಸಂದೇಶ. -

Profile
Ramesh Kote Jul 25, 2026 10:00 PM

ನವದೆಹಲಿ: ಧರ್ಮೇಂದ್ರ ಪ್ರಧಾನ್‌ (Dharmendra Pradhan) ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೆ ಭಾರತ ಕ್ರಿಕೆಟ್‌ ತಂಡದ ಮಾಜಿ ವಿಕೆಟ್‌ ಕೀಪರ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮೆಂಟರ್‌ ದಿನೇಶ್‌ ಕಾರ್ತಿಕ್‌ (Dinesh karthik) ದೇಶದ ಯುವ ಸಮುದಾಯಕ್ಕೆ ಆಶವಾದ ಸಂದೇಶವನ್ನು ರವಾನಿಸಿದ್ದಾರೆ. 2026ರ NEET-UG ಪರೀಕ್ಷೆಯ ಪ್ರಶ್ನೆ ಪತ್ರಿಕ ಸೋರಿಕೆಯ ಸಂಬಂಧ ದೇಶದಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರವಾದ ಹಿನ್ನೆಲೆಯಲ್ಲಿ ಧರ್ಮೇಂದ್ರ ಪ್ರಧಾನ್‌ ಜುಲೈ 25 ರಂದು ತಮ್ಮ ಸಚಿವ ಸ್ಥಾನವನ್ನು ಸ್ವಪ್ರೇರಣೆಯಿಂದ ತೊರೆದರು. ತಮ್ಮ ರಾಜೀನಾಮೆ ಪತ್ರವನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ರವಾನಿಸಿದ್ದರು.

ಈ ಪ್ರತಿಭಟನೆಗೆ ವಿಶೇಷವಾಗಿ ಕಾಕ್ರೋಚ್‌ ಜನತಾ ಪಾರ್ಟಿ (CJP) ಮುಂದಾಳತ್ವವನ್ನು ವಹಿಸಿತ್ತು. ಜುಲೈ ಒಂದರಂದು ಆರಂಭವಾಗಿದ್ದ ಪ್ರತಿಭಟನೆ 26 ದಿನಗಳನ್ನು ಪೂರೈಸಿತ್ತು. ಅದರಲ್ಲಿಯೂ ವಿಶೇಷವಾಗಿ ಪರಿಸರವಾದಿ, ಸಾಮಾಜಿಕ ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ಸೋನಮ್‌ ವಾಗ್ಚುಕ್‌ ಅವರು ನವದೆಹಲಿಯ ಜಂತರ್‌ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದರು. ಇವರ ಜೊತೆಗೆ ಕೆಲವು ವಿದ್ಯಾರ್ಥಿಗಳು ಕೂಡ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದರು. ಇದಕ್ಕೆ ದೇಶಾದ್ಯಂತ ವಿದ್ಯಾರ್ಥಿ ಸಮೂಹ, ಸೆಲೆಬ್ರಿಟಿಗಳು, ವಿವಿಧ ರಾಜಕೀಯ ಪಕ್ಷಗಳ ನಾಯಕರು ಕೂಡ ಕೈ ಜೋಡಿಸಿದ್ದರು.

Breaking News: ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಧರ್ಮೇಂದ್ರ ಪ್ರಧಾನ್‌!

ಇದರ ಪರಿಣಾಮ ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಕೇಂದ್ರ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಬಿದ್ದಿತು. ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದ ಧರ್ಮೇಂದ್ರ ಪ್ರಧಾನ್‌ ಅವರು, ತಮ್ಮ ಎಕ್ಸ್‌ ಖಾತೆಯಲ್ಲಿ ಎರಡು ಪುಟಗಳ ವಿವರಣೆಯ ಮೂಲಕ ತಮ್ಮ ರಾಜೀನಾಮೆಯನ್ನು ಅಂಗೀಕರಿಸಿದರು. ಇದರ ಬೆನ್ನಲ್ಲೆ ಈ ಬೆಳವಣಿಗೆಗಳಿಗೆ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ರಂಗಗಳಿಂದಲೂ ಪ್ರತಿಕ್ರಿಯೆಗಳು ಮೂಡಿ ಬಂದವು. ಅದರಂತೆ ಆರ್‌ಸಿಬಿ ಮೆಂಟರ್‌ ದಿನೇಶ್‌ ಕಾರ್ತಿಕ್‌ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ ಹಾಗೂ ಎಕ್ಸ್‌ ಖಾತೆಯಲ್ಲಿ ವಿದ್ಯಾರ್ಥಿಗಳ ಗೆಲುವನ್ನು ಸಂಭ್ರಮಿಸುವ ಜೊತೆಗೆ ಅವರಿಗೆ ಆಶಾವಾದಿ ಸಂದೇಶವನ್ನು ರವಾನಿಸಿದ್ದಾರೆ.

ದೇಶದ ಯುವ ಸಮುದಾಯಕ್ಕೆ ದಿನೇಶ್‌ ಕಾರ್ತಿಕ್‌ ಸಂದೇಶ

ದಿನೇಶ್‌ ಕಾರ್ತಿಕ್‌ ಅವರು ರಾಜಕೀಯ ಬೆಳವಣಿಗೆಗಳು ಅಥವಾ ವಿದ್ಯಾರ್ಥಿ ಚಳವಳಿಯನ್ನು ನೇರವಾಗಿ ಉಲ್ಲೇಖಿಸದಿದ್ದರೂ, "ಭಾರತದ ಯುವಕರ ಸ್ಪಷ್ಟ ದೃಷ್ಟಿಕೋನ, ಪರಸ್ಪರ ಸಹಕಾರ ಮತ್ತು ನಿರಂತರ ಹೋರಾಟದ ಮನೋಭಾವ"ವನ್ನು ಶ್ಲಾಘಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದರು.



"ದಿನದ ಅಂತ್ಯದಲ್ಲಿ, ನಾವೆಲ್ಲರೂ ಉತ್ತಮ ಭಾರತದ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಯುವ ಪೀಳಿಗೆಯ ಸ್ಪಷ್ಟ ದೃಷ್ಟಿಕೋನ, ಪರಸ್ಪರ ಸಹಕಾರ ಮತ್ತು ನಿರಂತರ ಹೋರಾಟದ ಮನೋಭಾವ ನನ್ನಲ್ಲಿ ಅಪಾರ ಮೆಚ್ಚುಗೆ ಮೂಡಿಸಿದೆ. ಭಾರತದ ಭವಿಷ್ಯ ಉಜ್ವಲವಾಗಿದೆ. ಮುಂದಿನ ಪೀಳಿಗೆ ನಮ್ಮ ದೇಶವನ್ನು ಇನ್ನಷ್ಟು ಎತ್ತರದ ಸಾಧನೆಗಳತ್ತ ಕೊಂಡೊಯ್ಯಲಿದೆ. ಜೈ ಹಿಂದ್," ಎಂದು ದಿನೇಶ್‌ ಕಾರ್ತಿಕ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

NEET Protests: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ವಿಶೇಷ ಸಂದೇಶ ರವಾನಿಸಿದ ಶುಭಮನ್‌ ಗಿಲ್!

ಪ್ರತಿಭಟನೆಗಳ ಆರಂಭಿಕ ಹಂತದಲ್ಲಿಯೇ ಸಚಿನ್ ತೆಂಡೂಲ್ಕರ್ ಮತ್ತು ಯುವರಾಜ್ ಸಿಂಗ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹಂಚಿಕೊಂಡು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದರು ಹಾಗೂ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ, ಪ್ರತಿಭಟನೆಗೆ ಸಂಬಂಧಿಸಿದ ರಾಜಕೀಯ ಬೇಡಿಕೆಗಳ ಬಗ್ಗೆ ಇಬ್ಬರೂ ಯಾವುದೇ ಸ್ಪಷ್ಟ ನಿಲುವು ತೆಗೆದುಕೊಳ್ಳದೆ, ತಟಸ್ಥ ಧೋರಣೆಯನ್ನೇ ಕಾಯ್ದುಕೊಂಡಿದ್ದರು.