IPL 2026: ಮುಂಬೈ ಇಂಡಿಯನ್ಸ್ ಪರ ಅತ್ಯಂತ ವೇಗದ ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ಗಳು!
ಬುಧವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಸ್ಪೋಟಕ ಬ್ಯಾಟ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡದ ರಯಾನ್ ರಿಕೆಲ್ಟನ್ ಅವರು 44ಎಸೆತಗಳಲ್ಲಿ ಶತಕವನ್ನು ಸಿಡಿಸಿದರು. ಆ ಮೂಲಕ ಮುಂಬೈ ಪರ ವೇಗದ ಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ಪರ ದಾಖಲಾದ ವೇಗದ 5 ಶತಕಗಳು. -
ಮುಂಬೈ: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) 2026ರ ಸಾಲಿನ ಪಂದ್ಯದಲ್ಲಿ(SRH vs MI) ಮುಂಬೈ ಇಂಡಿಯನ್ಸ್ ಆರಂಭಿಕ ಬ್ಯಾಟ್ಸ್‌ಮನ್ ರಯಾನ್ ರಿಕೆಲ್ಟನ್ (Ryan Rickelton) ಅದ್ಭುತ ಶತಕ ಸಿಡಿಸಿದರು. ಇದು ರಿಕೆಲ್ಟನ್ ಅವರ ಐಪಿಎಲ್ ವೃತ್ತಿಜೀವನದ ಮೊದಲ ಶತಕವಾಗಿದೆ. ರಿಕೆಲ್ಟನ್ ಕೇವಲ 44 ಎಸೆತಗಳಲ್ಲಿ ಈ ಮೈಲುಗಲ್ಲು ತಲುಪಿದರು, ಇದು ಐಪಿಎಲ್ ಇತಿಹಾಸದಲ್ಲಿ ಮುಂಬೈ ಪರ ಗಳಿಸಿದ ಅತ್ಯಂತ ವೇಗದ ಶತಕವಾಗಿದೆ. ಆ ಮೂಲಕ ಸನತ್ ಜಯಸೂರ್ಯ ಅವರ ದಾಖಲೆಯನ್ನು ರಯಾನ್ ಮುರಿದಿದ್ದಾರೆ.
ರಯಾನ್ ರಿಕೆಲ್ಟನ್ ಅವರ ಶತಕದ ಬಲದಿಂದ ಮುಂಬೈ ಇಂಡಿಯನ್ಸ್ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 243 ರನ್‌ಗಳನ್ನು ದಾಖಲಿಸಿತು. ಆ ಮೂಲಕ ಎದುರಾಳಿ ಎಸ್‌ಆರ್‌ಎಚ್‌ಗೆ 244 ರನ್‌ಗಳ ಗುರಿಯನ್ನು ನೀಡಿತು. ಕೊನೆಯವರೆಗೂ ಬ್ಯಾಟ್ ಮಾಡಿದ ರಿಕೆಲ್ಟನ್ 55ಎಸೆತಗಳಲ್ಲಿ ಅಜೇಯ 123 ರನ್ ದಾಖಲಿಸಿದ್ದಾರೆ.
MI vs SRH: 44 ಬಾಲ್‌ಗಳಲ್ಲಿ ಶತಕ ಬಾರಿಸಿ ಸನತ್ ಜಯಸೂರ್ಯ ದಾಖಲೆ ಮುರಿದ ರಯಾನ್ ರಿಕೆಲ್ಟನ್!
ಅಂದ ಹಾಗೆ ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಪರ ಅತ್ಯಂತ ವೇಗದ ಶತಕಗಳನ್ನು ಗಳಿಸಿದ ಐದು ಬ್ಯಾಟ್ಸ್‌ಮನ್‌ಗಳನ್ನು ಇಲ್ಲಿ ವಿವರಿಸಲಾಗಿದೆ.
ರಯಾನ್ ರಿಕೆಲ್ಟನ್ ( 44 ಎಸೆತಗಳು)
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ, ರಯಾನ್ ರಿಕೆಲ್ಟನ್ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಮುಂಬೈ ಇಂಡಿಯನ್ಸ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ್ದಾರೆ. ಅವರು ಕೇವಲ 44 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಸಾಧನೆಯೊಂದಿಗೆ, ಕೇವಲ ಒಂಬತ್ತು ದಿನಗಳ ಹಿಂದೆ ತಿಲಕ್ ವರ್ಮಾ ನಿರ್ಮಿಸಿದ್ದ ದಾಖಲೆಯನ್ನು ಅವರು ಇದೀಗ ಮುರಿದಿದ್ದಾರೆ.
ತಿಲಕ್ ವರ್ಮಾ (45 ಎಸೆತಗಳು)
ಮುಂಬೈ ಇಂಡಿಯನ್ಸ್ ತಂಡದ ವಿಶ್ವಾಸಾರ್ಹ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಕೇವಲ 45 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ತಮ್ಮ ಶ್ರೇಷ್ಠತೆ ಮತ್ತು ಶಕ್ತಿಯನ್ನು ಪ್ರದರ್ಶಿಸಿದರು. ಈ ಋತುವಿನ ಆರಂಭದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ತಿಲಕ್ ಈ ದಾಖಲೆಯನ್ನು ಸ್ಥಾಪಿಸಿದರು.
MI vs SRH: ಸತತ ನಾಲ್ಕನೇ ಪಂದ್ಯದಿಂದಲೂ ರೋಹಿತ್ ಶರ್ಮಾ ಔಟ್! ಹಿಟ್‌ಮ್ಯಾನ್ ಕೆರಿಯರ್ ಅಂತ್ಯ?
ಸನತ್ ಜಯಸೂರ್ಯ (45 ಎಸೆತಗಳು)
ಐಪಿಎಲ್‌ನ ಮೊದಲ ಋತುವಿನಲ್ಲಿ (2008), ಶ್ರೀಲಂಕಾದ ದಂತಕಥೆ ಸನತ್ ಜಯಸೂರ್ಯ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೇವಲ 45 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿದ್ದರು. ಹಲವು ವರ್ಷಗಳ ಕಾಲ ಇದು ಮುಂಬೈ ಪರ ಅತ್ಯಂತ ವೇಗದ ಶತಕದ ದಾಖಲೆಯಾಗಿತ್ತು. ಅಂತಿಮವಾಗಿ ಈ ದಾಖಲೆಯನ್ನು ತಿಲಕ್ ವರ್ಮಾ 2026ರಲ್ಲಿ ಮುರಿದಿದ್ದರು.
ಕ್ಯಾಮೆರಾನ್ ಗ್ರೀನ್ (47 ಎಸೆತಗಳು)
ಮುಂಬೈ ಇಂಡಿಯನ್ಸ್ ಪರ 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 47 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದ್ದರು. ಆ ಮೂಲಕ ಮುಂಬೈ ಪರ ಮೂರನೇ ವೇಗದ ಶತಕವನ್ನು ಬಾರಿಸಿದ್ದರು.
IPL 2026 ಫೈನಲ್‌ಗೆ ಅರ್ಹತೆ ಪಡೆಯಬಲ್ಲ 2 ತಂಡಗಳನ್ನು ಆರಿಸಿದ ಸೌರವ್ ಗಂಗೂಲಿ!
ಸೂರ್ಯಕುಮಾರ್ ಯಾದವ್ (49 ಎಸೆತಗಳು)
ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಆದರೆ ಕೇವಲ 49 ಎಸೆತಗಳಲ್ಲಿ ಶತಕ ಗಳಿಸಿದ್ದು ಅವರ ಪರಾಕ್ರಮಕ್ಕೆ ಸಾಕ್ಷಿಯಾಗಿದೆ. 2023ರ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಸೂರ್ಯ 49 ಎಸೆತಗಳಲ್ಲಿ ಈ ಶತಕವನ್ನು ಪೂರೈಸಿದ್ದರು.