ʻಶ್ರೇಯಸ್ ಅಯ್ಯರ್ ಅನುಪಸ್ಥಿತಿ ಕಾಡುತ್ತಿದೆʼ:ಬಿಸಿಸಿಐ ಸೆಲೆಕ್ಟರ್‌ಗಳಿಗೆ ಸಂದೇಶ ರವಾನಿಸಿದ ಆರ್ ಅಶ್ವಿನ್!
ಭಾರತ ಟಿ20 ತಂಡದಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಕಡೆಗಣಿಸಿರುವ ಬಿಸಿಸಿಐ ಆಯ್ಕೆದಾರರನ್ನು ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಟೀಕಿಸಿದ್ದಾರೆ. ಶ್ರೇಯರ್ ಅಯ್ಯರ್ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ನಷ್ಟ ಎಂದು ಅವರು ಉಲ್ಲೇಖಿಸಿದ್ದಾರೆ. 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿದ್ದಾರೆ.
ಶ್ರೇಯಸ್‌ಅಯ್ಯರ್‌ಗೆ ಆರ್ ಅಶ್ವಿನ್ ಮೆಚ್ಚುಗೆ. -
ನವದೆಹಲಿ: ಪಂಜಾಬ್ ಕಿಂಗ್ಸ್ ಪರ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿರುವ ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ (R Ashwin ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಭಾರತ ಟಿ20 ತಂಡದಲ್ಲಿ ಶ್ರೇಯಸ್ ಅಯ್ಯರ್ ಅನುಪಸ್ಥಿತಿ ದೊಡ್ಡ ನಷ್ಟವಾಗಿದೆ. ಕೇವಲ ಆಟಗಾರನಾಗಿ ಮಾತ್ರವಲ್ಲ, ನಾಯಕತ್ವದ ಗುಂಪಿನಲ್ಲಿಯೂ ಅವರನ್ನು ಆಡಿಸಬೇಕಾಗುತ್ತದೆ ಎಂದು ಅಶ್ವಿನ್ ತಿಳಿಸಿದ್ದಾರೆ.
2023ರಿಂದ ಶ್ರೇಯಸ್ ಅಯ್ಯರ್ ಅವರು ಭಾರತ ಟಿ20 ತಂಡದಲ್ಲಿ ಆಡುತ್ತಿಲ್ಲ. 2024 ಹಾಗೂ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗಳ ಭಾರತ ತಂಡದಲ್ಲಿಯೂ ಶ್ರೇಯಸ್ ಅಯ್ಯರ್‌ಗೆ ಸ್ಥಾನ ನೀಡಲಾಗಿರಲಿಲ್ಲ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೊದಲ್ಲಿ ಮಾತನಾಡಿದ ಆರ್ ಅಶ್ವಿನ್, "ಶ್ರೇಯಸ್ ಅಯ್ಯರ್ ಅವರಂತಹ ಆಟಗಾರರು ಭಾರತ ತಂಡಕ್ಕೆ ಅಥವಾ ನಾಯಕತ್ವದ ಗುಂಪಿಗೆ ನಿಮ್ಮ ಯೋಜನೆಯ ಆಟಗಾರ ಅಲ್ಲ. ಅವರನ್ನು ಆಯ್ಕೆ ಮಾಡಿಲ್ಲ ಎಂದಾದರೆ ಅದು ಅವರಿಗೆ ಯಾವುದೇ ನಷ್ಟವಿಲ್ಲ, ಅದು ಭಾರತ ತಂಡಕ್ಕೆ ನಷ್ಟ," ಎಂದು ಹೇಳಿದ್ದಾರೆ.
RCB vs DC: ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಹೇಗಿರಲಿದೆ ಆರ್‌ಸಿಬಿ ಪ್ಲೇಯಿಂಗ್ 11
ಗುರುವಾರ ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡ ಅಧಿಕಾರಯುತ ಗೆಲುವು ದಾಖಲಿಸಿದ ಬಳಿಕ ಆರ್ ಅಶ್ವಿನ್, ಭಾರತ ಟಿ20 ತಂಡಕ್ಕೆ ಶ್ರೇಯಸ್ ಅಯ್ಯರ್ ಮರಳಬೇಕೆಂದು ಆಗ್ರಹಿಸಿದ್ದಾರೆ. ಶ್ರೇಯಸ್ ಅಯ್ಯರ್ ಅವರು ಈ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ 66 ರನ್‌ಗಳ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ತೋರಿದ್ದರು. ಕೇವಲ ಐಪಿಎಲ್ ಮಾತ್ರವಲ್ಲ, ಅವರು ದೇಶಿ ಕ್ರಿಕೆಟ್‌ನಲ್ಲಿಯೂ ನಿಯಮಿತವಾಗಿ ಉತ್ತಮ ಪ್ರದರ್ಶನವನ್ನು ತೋರುತ್ತಿದ್ದಾರೆ.
MI vs PBKS: ಗೆಲುವಿನ ಓಟ ಮುಂದುವರಿಸಿದ ಪಂಜಾಬ್; ಮುಂಬೈ ವಿರುದ್ಧ 7 ವಿಕೆಟ್ ಜಯ
ಮುಂಬೈ ಮೂಲದ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ 2024ರಲ್ಲಿ ಮೂರನೇ ಬಾರಿ ಚಾಂಪಿಯನ್ ಆಗಿತ್ತು. ಒಂದು ದಶಕದ ಬಳಿಕ ಅವರು ಕೆಕೆಆರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಅಲ್ಲದೆ ತಮ್ಮ ನಾಯಕತ್ವದಲ್ಲಿ ಮುಂಬೈ ತಂಡಕ್ಕೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಗೆದ್ದುಕೊಟ್ಟಿದ್ದರು. ತಮ್ಮ ಹೊಸ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ತಂಡದಲ್ಲಿಯೂ ಅವರು ತಮ್ಮ ಫಾರ್ಮ್ ಅನ್ನು ಮುಂದುವರಿಸಿದ್ದಾರೆ. ಕಳೆದ 2025ರ ಐಪಿಎಲ್ ಟೂರ್ನಿಯಲ್ಲಿಯೂ ಅವರ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ ಫೈನಲ್‌ಗೆ ಪ್ರವೇಶಿಸಿತ್ತು.
ಶಾರ್ಟ್ ಬಾಲ್‌ಗೆ ಶ್ರೇಯಸ್ ಆಡಲ್ಲ ಎಂದಿದ್ದರು
“ಅವರು ಯಾರಿಗೂ ಉತ್ತರ ಕೊಡಬೇಕೆಂಬ ಅಗತ್ಯವೇನು? ತನ್ನೊಳಗಿನ ಆ ಉತ್ಸಾಹವನ್ನು ಬಳಸಿಕೊಂಡು, ಶ್ರೇಯಸ್ ಎಲ್ಲರಿಗೂ ನಿಜವಾದ ಶ್ರೇಷ್ಠತೆ ಹೇಗಿರುತ್ತದೆ ಎಂಬುದನ್ನು ತೋರಿಸಿದ್ದಾರೆ. ಜನರು ಸದಾ ಪ್ರಶ್ನೆಗಳನ್ನು ಎಬ್ಬಿಸುತ್ತಿದ್ದರು—ಅವರು ಶಾರ್ಟ್ ಬಾಲ್ ಅನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ಆದರೆ ಜಸ್‌ಪ್ರೀತ್ ಬುಮ್ರಾ ವಿರುದ್ಧ ಅವರು ಹೇಗೆ ಪ್ರತಿಕ್ರಿಯೆ ನೀಡಿದರು ನೋಡಿ. ಫ್ರಂಟ್ ಪ್ರೆಸ್ ಬಳಸಿ ಶಾರ್ಟ್ ಡೆಲಿವರಿಯನ್ನು ಮಿಡ್‌ವಿಕೆಟ್ ಮೇಲೆ ಭರ್ಜರಿ ಸಿಕ್ಸರ್ ಸಿಡಿಸಿದರು,” ಎಂದು ಹೇಳಿದ್ದಾರೆ.
MI vs PBKS: ಮುಂಬೈ ಮಣಿಸಿ ಹಲವು ದಾಖಲೆ ಬರೆದ ಪಂಜಾಬ್ ಕಿಂಗ್ಸ್
ಪ್ರಸ್ತುತ ಸಾಗುತ್ತಿರುವ 2026ರ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಅವರು ಅತ್ಯತ್ತಮ ಪ್ರದರ್ಶನವನ್ನು ತೋರುತ್ತಿದ್ದಾರೆ. ಅವರು ಇಲ್ಲಿಯವರೆಗೂ ಆಡಿದ ಐದು ಇನಿಂಗ್ಸ್‌ಗಳಲ್ಲಿ 187.96ರ ಸ್ಟ್ರೈಕ್ ರೇಟ್‌ನಲ್ಲಿ 203 ರನ್‌ಗಳನ್ನು ಬಾರಿಸಿದ್ದಾರೆ. ಪಂಜಾಬ್ ತಂಡ ಇನ್ನೂ ಈ ಆವೃತ್ತಿಯಲ್ಲಿ ಸೋಲು ಕಾಣದೆ ಮುನ್ನುಗ್ಗುತ್ತಿದೆ. ಇನ್ನು ಏಪ್ರಿಲ್ 19 ರಂದು ಲಖನೌ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತನ್ನ ಮುಂದಿನ ಪಂದ್ಯವನ್ನು ಆಡಲಿದೆ.