ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಕೆಲವು ಗಾಯದ ಗುರುತುಗಳು ಹೋರಾಟಕ್ಕೆ ಯೋಗ್ಯ ಪುರಾವೆಯಾಗಿವೆʼ: ಕೃಣಾಲ್‌ ಪಾಂಡ್ಯ ಇನ್‌ಸ್ಟಾಗ್ರಾಮ್‌ ಸ್ಟೋರಿ!

ಮುಂಬೈ ಇಂಡಿಯನ್ಸ್‌ ವಿರುದ್ದದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದ ಚೇಸಿಂಗ್‌ ವೇಳೆ ಸಂಭವಿಸಿದ್ದ ಗಾಯದ ಗುರುತನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಲ್‌ರೌಂಡರ್‌ ಕೃಣಾಲ್‌ ಪಾಂಡ್ಯ ಪ್ರದರ್ಶಿಸಿದ್ದಾರೆ. ಅವರು ಆರ್‌ಸಿಬಿಯ ಚೇಸಿಂಗ್‌ನಲ್ಲಿ 73 ರನ್‌ಗಳ ಹೋರಾಟದ ಇನಿಂಗ್ಸ್‌ ಆಡಿದ್ದರು. ಆ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.

ಗಾಯದ ಗುರುತನ್ನು ಅಭಿಮಾನಿಗಳಿಗೆ ತೋರಿಸಿದ ಕೃಣಾಲ್‌ ಪಾಂಡ್ಯ!

ಬ್ಯಾಟಿಂಗ್‌ ವೇಳೆ ಸಂಭವಿಸಿದ್ದ ಗಾಯದ ಗುರುತನ್ನು ತೋರಿಸಿದ ಕೃಣಾಲ್‌ ಪಾಂಡ್ಯ. -

Profile
Ramesh Kote May 11, 2026 3:44 PM

ರಾಯ್ಪುರ: ಮುಂಬೈ ಇಂಡಿಯನ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ 54ನೇ ಪಂದ್ಯದಲ್ಲಿ(RCB vs MI) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಎರಡು ವಿಕೆಟ್‌ಗಳ ರೋಚಕ ಗೆಲವು ಸಾಧಿಸಿತು. ಈ ರೋಚಕ ಗೆಲುವಿನ ರೂವಾರಿಗಳು ಕೃಣಾಲ್‌ ಪಾಂಡ್ಯ (Krunal Pandya) ಹಾಗೂ ಭುವನೇಶ್ವರ್‌ ಕುಮಾರ್‌ (Bhuvneshwar Kumar). ವಿಶೇಷವಾಗಿ ಆರ್‌ಸಿಬಿ ತಂಡದ ಚೇಸಿಂಗ್‌ನಲ್ಲಿ ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ವಿಕೆಟ್‌ ಒಪ್ಪಿಸಿದ ಬಳಿಕ ಕೃಣಾಲ್‌ ಪಾಂಡ್ಯ ಏಕಾಂಗಿ ಹೋರಾಟ ನಡೆಸಿ ನಿರ್ಣಾಯಕ ಅರ್ಧಶತಕವನ್ನು ಬಾರಿಸಿದರು. ಈ ವೇಳೆ ಅವರಿಗೆ ಸಂಭವಿಸಿದ್ದ ಗಾಯದ ಗುರುತನ್ನು ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಪ್ರದರ್ಶಿಸಿದ್ದಾರೆ.

ಅಂದ ಹಾಗೆ ಕೃಣಾಲ್‌ ಪಾಂಡ್ಯ ಇನಿಂಗ್ಸ್‌ ಸುಲಭವಾಗಿರಲಿಲ್ಲ. ಅವರು ತನ್ನ ಏಕಾಂಗಿ ಹೋರಾಟದ ಸಂದರ್ಭದಲ್ಲಿ ಸ್ನಾಯು ಸೆಳೆತದ ಗಾಯ ಹಾಗೂ ತಮ್ಮ ಹೊಟ್ಟೆಯ ಭಾಗದಲ್ಲಿ ಚರ್ಮ ಉಜ್ಜಿಕೊಂಡ ಗಾಯವಾಗಿತ್ತು. ಪಂದ್ಯದ ಬಳಿಕ ಅವರು ಇದರ ಫೋಟೋವನ್ನ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಾಕಿದ್ದಾರೆ. ಇದಕ್ಕೆ ಉತ್ತಮವಾದ ಶೀರ್ಷಿಕೆಯನ್ನು ನೀಡಿದ್ದಾರೆ. "ಕೆಲವು ಗಾಯಗಳು ಹೋರಾಟಕ್ಕೆ ಯೋಗ್ಯವಾಗಿವೆ ಎಂಬುದಕ್ಕೆ ಸೂಕ್ತ ಪುರಾವೆಯಾಗಿವೆ," ಎಂಬ ಶೀರ್ಷಿಕೆಯನ್ನು ಕೊಟ್ಟಿದ್ದಾರೆ. ಇದನ್ನು ಗಮನಿಸಿದ ಆರ್‌ಸಿಬಿ ಅಭಿಮಾನಿಗಳು ಕೃಣಾಲ್‌ ಪಾಂಡ್ಯ ಅವರನ್ನು ಗುಣಗಾನ ಮಾಡಿದ್ದಾರೆ.

RCB vs MI: ಮುಂಬೈ ಎದುರು ಕೊನೆಯ ಓವರ್‌ ಥ್ರಿಲ್ಲರ್‌ ಗೆದ್ದ ಆರ್‌ಸಿಬಿಗೆ ಅಗ್ರ ಸ್ಥಾನ!

ಪಂದ್ಯದ ಬಗ್ಗೆ ಹೇಳುವುದಾದರೆ ಭಾನುವಾರ ರಾಯ್ಪುರದ ಶಾಹೀದ್‌ವೀರ್‌ ನಾರಾಯಣ್‌ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ ನೀಡಿದ್ದ 167 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ತಂಡ, ಆರಾಮದಾಯಕವಾಗಿ ಗೆಲ್ಲಬಹುದು ಎಂದು ನಿರೀಕ್ಷೆ ಮಾಡಲಾಗಿತ್ತಾದರೂ ವಿರಾಟ್‌ ಕೊಹ್ಲಿ, ದೇವದತ್‌ ಪಡಿಕ್ಕಲ್‌, ರಜತ್‌ ಪಾಟಿದಾರ್‌, ಟಿಮ್‌ ಡೇವಿಡ್‌ ವಿಫಲರಾದರು. ಜೇಕಬ್‌ ಬೆಥೆಲ್‌ ಯೋಗ್ಯ ಪ್ರದರ್ಶನವನ್ನು ನೀಡಿದರಾದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ.



ಆದರೆ, ಒಂದು ತುದಿಯಲ್ಲಿ ಮೇಲಿನ ಕ್ರಮಾಂಕದಲ್ಲಿ ಬಡ್ತಿ ಪಡೆದು ಕ್ರೀಸ್‌ಗೆ ಬಂದ ಕೃಣಾಲ್‌ ಪಾಂಡ್ಯ, ಮುಂಬೈ ಇಂಡಿಯನ್ಸ್‌ ಬೌಲಿಂಗ್‌ ಸವಾಲನ್ನು ಮೆಟ್ಟಿ ನಿಂತರು. ಬ್ಯಾಟಿಂಗ್‌ಗೆ ಕಠಿಣವಾದ ಪಿಚ್‌ಗೆ ಹೊಂದಿಕೊಂಡು ಆಡಿದರು. ಒಂದು, ಎರಡು ರನ್‌ಗಳನ್ನು ತೆಗೆದುಕೊಳ್ಳುವ ಜೊತೆಗೆ ಕೆಟ್ಟ ಎಸೆತಗಳಲ್ಲಿ ಬೌಂಡರಿ, ಸಿಕ್ಸರ್‌ ಗೆರೆ ದಾಟಿಸುತ್ತಿದ್ದರು. ಅವರು ಆಡಿದ 46 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 73 ರನ್‌ ಗಳಿಸಿದರು.ಇನ್ನೇನು ತಂಡವನ್ನು ಗೆಲ್ಲಿಸುವ ಸಮಯದಲ್ಲಿ ಅವರು ಘಝನ್‌ಫರ್‌ಗೆ ವಿಕೆಟ್‌ ಒಪ್ಪಿಸಿದರು. ಆದರೆ, ಆರ್‌ಸಿಬಿ ಸೋಲಿನ ಸನಿಹಕ್ಕೆ ಬಂದಿದ್ದರೂ ಕೊನೆಯಲ್ಲಿ ಭುವನೇಶ್ವರ್‌ ಕುಮಾರ್‌ ಸಿಕ್ಸರ್‌ ಬಾರಿಸುವ ಮೂಲಕ ಗೆಲ್ಲಿಸಿದರು.

ಮುಂಬೈ ವಿರುದ್ಧ ಅಸಭ್ಯ ರೀತಿಯ ಸಂಭ್ರಮಾರಣೆ ಮಾಡಿದ ಟಿಮ್‌ ಡೇವಿಡ್‌; ವಿಡಿಯೊ ವೈರಲ್

ಅಗ್ರ ಸ್ಥಾನಕ್ಕೇರಿದ ಆರ್‌ಸಿಬಿ

ಮುಂಬೈ ಇಂಡಿಯನ್ಸ್‌ ವಿರುದ್ಧ ಎರಡು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದ ಬಳಿಕ ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ ತಂಡ 2026ರ ಐಪಿಎಲ್‌ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೇರಿತು. ಆ ಮೂಲಕ ಪ್ಲೇಆಫ್ಸ್‌ಗೆ ಇನ್ನಷ್ಟು ಸನಿಹವಾಯಿತು. ಇನ್ನುಳಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದರೆ ಬೆಂಗಳೂರು ತಂಡ ಅಗ್ರ ಎರಡು ಸ್ಥಾನಗಳ ಮೂಲಕ ಲೀಗ್‌ ಹಂತವನ್ನು ಮುಗಿಸಿ ಮೊದಲನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯಲಿದೆ.