ವೈಭವ್ ಸೂರ್ಯವಂಶಿ ಅಬ್ಬರ, ಇಂಗ್ಲೆಂಡ್‌ಗೆ ಮಣ್ಣು ಮುಕ್ಕಿಸಿ ಅಂಡರ್-19 ವಿಶ್ವಕಪ್ ಗೆದ್ದ ಭಾರತ!
India won U-19 World Cup 2026: ವೈಭವ್ ಸೂರ್ಯವಂಶಿ ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ಭಾರತ ತಂಡ, 2026ರ ಐಸಿಸಿ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 100 ರನ್‌ಗಳ ಅಂತರದಲ್ಲಿ ಗೆಲುವು ಪಡೆದಿದೆ. ಆ ಮೂಲಕ ಆರನೇ ಬಾರಿ ಭಾರತದ ಕಿರಿಯರು ಅಂಡರ್-19 ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿದ್ದಾರೆ.
ಅಂಡರ್-19 ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತ ಕಿರಿಯರು. -
ಹರಾರೆ: ವೈಭವ್ ಸೂರ್ಯವಂಶಿ (Vaibhav Suryanshi) ಅವರ ದಾಖಲೆಯ ಬ್ಯಾಟಿಂಗ್ ಬಲದಿಂದ ಭಾರತ ತಂಡ, ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 100 ರನ್‌ಗಳಿಂದ ಮಣಿಸಿ 2026ರ ಅಂಡರ್-19 ವಿಶ್ವಕಪ್ (U-19 World Cup 2026) ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಇದು ಭಾರತ ತಂಡದ (India U-19) ಕಿರಿಯರ ಪಾಲಿಗೆ ಆರನೇ 19ರ ವಯೋಮಿತಿಯ ಏಕದಿನ ವಿಶ್ವಕಪ್ ಆಗಿದೆ. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್, ಕೇವಲ 80 ಎಸೆತಗಳಲ್ಲಿ 175 ರನ್‌ಗಳನ್ನು ಬಾರಿಸಿ ಭಾರತ ತಂಡದ ಗೆಲುವಿಗೆ ನೆರವು ನೀಡಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಶುಕ್ರವಾರ ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದಿದ್ದ ಫೈನಲ್ ಹಣಾಹಣಿಯಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ ತಂಡ, ವೈಭವ್ ಸೂರ್ಯವಂಶಿ ಶತಕ ಹಾಗೂ ಆಯುಷ್ ಮ್ಹಾತ್ರೆ ಅರ್ಧಶತಕದ ಬಲದಿಂದ ತನ್ನ ಪಾಲಿನ 50 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 411 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಇಂಗ್ಲೆಂಡ್ ಕಿರಿಯರ ತಂಡಕ್ಕೆ 412 ರನ್‌ಗಳ ಗುರಿಯನ್ನು ನೀಡಿತು. ವೈಭವ್ ಜತೆಗೆ ನಾಯಕ ಆಯುಷ್ ಮ್ಹಾತ್ರೆ 53 ರನ್, ಅಭಿಜ್ಞಾನ್ ಕುಂಡು 40 ರನ್, ಕಾನಿಷ್ಕ್ ಚೌವ್ಹಾಣ್ 37 ರನ್ ಗಳಿಸಿದರು.
U-19 World Cup: 80 ಎಸೆತಗಳಲ್ಲಿ 175 ರನ್ ಚಚ್ಚಿ ಹಲವು ದಾಖಲೆಗಳನ್ನು ಮುರಿದ ವೈಭವ್ ಸೂರ್ಯವಂಶಿ!
ಬಳಿಕ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್ ತಂಡ, ಕ್ಯಾಲೆಬ್ ಫಾಲ್ಕನರ್ ಶತಕ ಹಾಗೂ ಬೆನ್ ಡಾಕಿನ್ಸ್ ಅವರ ಅರ್ಧಶತಕದ ಹೊರತಾಗಿಯೂ ಆರ್ ಎಸ್ ಅಂಬರೀಶ್ ಸೇರಿದಂತೆ ಇತರೆ ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್ ದಾಳಿಗೆ ನಲುಗಿತು. ಆ ಮೂಲಕ 40.1 ಓವರ್‌ಗಳಿಗೆ 311 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ 100 ರನ್‌ಗಳಿಂದ ಸೋಲು ಅನುಭವಿಸಿತು. ಭಾರತದ ಪರ ಅಂಬರೀಶ್ ಮೂರು ವಿಕೆಟ್ ಪಡೆದರೆ, ದಿಪೇಶ್ ದೇವೇಂದ್ರ ಹಾಗೂ ಕಾನಿಷ್ಕ್ ಚೌವ್ಹಾಣ್ ಅವರು ತಲಾ ಎರಡೆರಡು ವಿಕೆಟ್ ಕಿತ್ತುರು.
𝗖.𝗛.𝗔.𝗠.𝗣.𝗜.𝗢.𝗡.𝗦 🏆
— BCCI (@BCCI) February 6, 2026
Congratulations to India U19 on winning the ICC Men's U19 World Cup 2026 👏👏
Their historic 6⃣th title 🫡
Take. A. Bow 🙇
Scorecard ▶️ https://t.co/hisult7mtv #U19WorldCup pic.twitter.com/5a0Pf4wpTw
ವೈಭವ್ ಸೂರ್ಯವಂಶಿ ದಾಖಲೆಯ ಶತಕ
ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಅವರು ಆಡಿದ 80 ಎಸೆತಗಳಲ್ಲಿ 15 ಸಿಕ್ಸರ್ ಹಾಗೂ 15 ಬೌಂಡರಿಗಳೊಂದಿಗೆ 175 ರನ್‌ಗಳನ್ನು ಬಾರಿಸಿದರು. ಅದರಲ್ಲಿಯೂ ಅವರು 52 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಆ ಮೂಲಕ ಅಂಡರ್-19 ವಿಶ್ವಕಪ್‌ನಲ್ಲಿಯೇ ಅತ್ಯಂತ ವೇಗದ ಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅಲ್ಲದೆ ನಾಯಕ ಆಯುಷ್ ಮ್ಹಾತ್ರೆ ಅವರ ಜೊತೆಗೆ ಎರಡನೇ ವಿಕೆಟ್‌ಗೆ 142 ರನ್‌ಗಳನ್ನು ಕಲೆ ಹಾಕಿದ್ದರು.
4⃣3⃣9⃣ Runs
— BCCI (@BCCI) February 6, 2026
6⃣2⃣.7⃣1⃣ Average
1⃣7⃣5⃣ Highest
3⃣ Fifties and 1⃣ Hundred
For his staggering impact with the bat, Vaibhav Sooryavanshi is named the Player of the Tournament at the #U19WorldCup 2026 👌👌
Updates ▶️ https://t.co/hisult6ODX pic.twitter.com/hqMQZB0LrO
ಆಯುಷ್ ಮ್ಹಾತ್ರೆ ಅರ್ಧಶತಕ
ನಾಯಕ ಆಯುಷ್ ಮ್ಹಾತ್ರೆ ಅವರು ಕೂಡ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದರು. ಅವರು ಆಡಿದ 51 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 53 ರನ್ ಗಳಿಸಿದರು. ಇವರ ಜೊತೆಗೆ ವೇದಾಂತ್ ತ್ರಿವೇದಿ 32 ರನ್, ವಿಹಾನ್ ಮೆಲ್ಹೋತ್ರಾ 30 ರನ್, ಅಭಿಜ್ಞಾನ್ ಕುಂಡು 40 ರನ್ ಹಾಗೂ ಕಾನಿಷ್ಕ್ ಚೌವ್ಹಾಣ್ ಅಜೇಯ 35 ರನ್ ಗಳಿಸಿದರು. ಇಂಗ್ಲೆಂಡ್ ಪರ ಜೇಮ್ಸ್ ಮಿಂಟೊ 3 ವಿಕೆಟ್ ಪಡೆದರು.
Phenomenal effort from Caleb Falconer! 🔥
— England Cricket (@englandcricket) February 6, 2026
A hundred in a World Cup final in just 63 balls 👏 pic.twitter.com/vPkGK2QneM
ಕ್ಯಾಲೆಬ್ ಫಾಲ್ಕನರ್ ಶತಕ ವ್ಯರ್ಥ
ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕ್ಯಾಲೆಬ್ ಫಾಲ್ಕನರ್ ಅವರು ಶತಕ ಬಾರಿಸಿದರು. ಒಂದು ತುದಿಯಲ್ಲಿ ನಿರಂತರವಾಗಿ ವಿಕೆಟ್ ಬಿದ್ದರೂ ಮತ್ತೊಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್ ಮಾಡಿದ ಕೇವಲ 67ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ 115 ರನ್‌ಗಳನ್ನು ಕಲೆ ಹಾಕಿದರು. ಇದಕ್ಕೂ ಮುನ್ನ ಆರಂಭಿಕ ಬ್ಯಾಟ್ಸ್‌ಮನ್ ಬೆನ್ ಡಾಕಿನ್ಸ್ 56 ಎಸೆತಗಳಲ್ಲಿ 66 ರನ್‌ಗಳನ್ನ ಕಲೆ ಹಾಕಿದ್ದರು. ಬೆನ್ ಮಯಾಸ್ 45 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಅಂತಿಮವಾಗಿ ಇಂಗ್ಲೆಂಡ್ ತಂಡ, ಇನ್ನೂ 56 ಎಸೆತಗಳು ಬಾಕಿ ಇರುವಾಗಲೇ ಆಲ್‌ಔಟ್ ಆಯಿತು.
ಭಾರತದ ಪರ ಆರ್‌ಎಸ್ ಅಂಬರೀಶ್ ಮೂರು ವಿಕೆಟ್ ಪಡೆದರೆ, ದಿಪೇಶ್ ದೇವೇಂದ್ರ ಹಾಗೂ ಕಾನಿಷ್ಕ್ ಚೌವ್ಹಾಣ್ ತಲಾ ಎರಡು ವಿಕೆಟ್ ಕಿತ್ತರು.