ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

TIME100 Next India ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಹೆಸರು; ಯುವ ಕ್ರಿಕೆಟಿಗನ ಸಾಧನೆಗೆ ಮನಸೋತ ನಟ ಆಯುಷ್ಮಾನ್ ಖುರಾನಾ!

ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಪ್ರತಿಷ್ಠಿತ TIME100 Next India ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಸಾಧನೆಗೆ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಮೆಚ್ಚುಗೆ ವ್ಯಕ್ತಪಡಿಸಿ ವಿಶೇಷ ಬರಹ ಬರೆದಿದ್ದಾರೆ. 14ನೇ ವಯಸ್ಸಿನಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ವೈಭವ್ ಇದೀಗ ದೇಶದ ಯುವ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ.

TIME100 Next India ಪಟ್ಟಿಯಲ್ಲಿ ವೈಭವ್‌ ಸೂರ್ಯವಂಶಿ!

ವೈಭವ್‌ಗೆ ಆಯುಷ್ಮಾನ್ ಖುರಾನಾ ವಿಶೇಷ ಸಂದೇಶ. -

Profile
Ramesh Kote Nov 19, 2026 8:56 PM

ನವದೆಹಲಿ: ಭಾರತೀಯ ಕ್ರಿಕೆಟ್‌ನ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಮತ್ತೊಂದು ಮಹತ್ವದ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರತಿಷ್ಠಿತ 'TIME100 Next India' ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ 15ರ ವಯಸ್ಸಿನ ಈ ಯುವ ಕ್ರಿಕೆಟಿಗ ಗಮನ ಸೆಳೆದಿದ್ದಾರೆ. ಅವರ ಸಾಧನೆಗೆ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ವೈಭವ್ ಕುರಿತು ಹೃದಯಸ್ಪರ್ಶಿ ಬರಹವೊಂದನ್ನು ಹಂಚಿಕೊಂಡಿದ್ದಾರೆ.

ಅಮೆರಿಕದ ಪ್ರತಿಷ್ಠಿತ 'TIME' ನಿಯತಕಾಲಿಕೆ ಇದೇ ಮೊದಲ ಬಾರಿ ಭಾರತದ ಆವೃತ್ತಿಯ 'TIME100 Next India' ಪಟ್ಟಿಯನ್ನು ಪ್ರಕಟಿಸಿದೆ. ದೇಶದ ಭವಿಷ್ಯವನ್ನು ರೂಪಿಸುವ 100 ಉದಯೋನ್ಮುಖ ನಾಯಕರು, ಪ್ರತಿಭೆಗಳು ಮತ್ತು ಪ್ರಭಾವಿ ವ್ಯಕ್ತಿಗಳನ್ನು ಈ ಪಟ್ಟಿಯಲ್ಲಿ ಗುರುತಿಸಲಾಗಿದೆ. ಕ್ರೀಡೆ, ಮನರಂಜನೆ, ಉದ್ಯಮ, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಇದರಲ್ಲಿ ಸ್ಥಾನ ನೀಡಲಾಗಿದೆ.

ʻಇದಿನ್ನೂ ಟ್ರೇಲರ್‌, ಮುಂದೆ ಇದೆ ನಿಮಗೆ ಮಾರಿ ಹಬ್ಬʼ: ಮೊಹಮ್ಮದ್‌ ಸಿರಾಜ್‌ರನ್ನು ಕೈ ಬಿಟ್ಟಿದ್ದಕ್ಕೆ ಆರ್‌ ಅಶ್ವಿನ್‌ ಕಿಡಿ!

ವೈಭವ್ ಸಾಧನೆಗೆ ಆಯುಷ್ಮಾನ್ ಖುರಾನಾ ಮೆಚ್ಚುಗೆ

ಈ ಹಿಂದೆ TIME100 ಗೌರವ ಪಡೆದಿರುವ ಹಾಗೂ TIME Impact Award ಪುರಸ್ಕೃತರಾಗಿರುವ ನಟ ಆಯುಷ್ಮಾನ್ ಖುರಾನಾ ಅವರು ವೈಭವ್ ಸೂರ್ಯವಂಶಿ ಕುರಿತು ವಿಶೇಷ ಬರಹ ಬರೆದಿದ್ದಾರೆ.

"ಕ್ರಿಕೆಟ್ ಮೈದಾನದಲ್ಲಿ ವೈಭವ್ ಸೂರ್ಯವಂಶಿ ಬ್ಯಾಟ್ ಬೀಸುವಾಗ, ವಿಭಿನ್ನವಾಗಿ ಆಲೋಚಿಸುವವರದ್ದೇ ಭವಿಷ್ಯ ಎಂಬುದನ್ನು ಅವರು ನಮಗೆ ನೆನಪಿಸುತ್ತಾರೆ. ಅವರು ಕೇವಲ ಕ್ರೀಡಾ ಪ್ರತಿಭೆಯಲ್ಲ, ಅದಕ್ಕಿಂತಲೂ ಹೆಚ್ಚಿನ ಮಹತ್ವ ಹೊಂದಿರುವ ವ್ಯಕ್ತಿ," ಎಂದು ಆಯುಷ್ಮಾನ್ ಬರೆದುಕೊಂಡಿದ್ದಾರೆ.

"ವೈಭವ್ ಬದಲಾಗುತ್ತಿರುವ ಭಾರತದ ಪ್ರತಿನಿಧಿಯಾಗಿದ್ದಾರೆ. 14ನೇ ವಯಸ್ಸಿನಲ್ಲಿ ಐಪಿಎಲ್ ಇತಿಹಾಸದ ಅತ್ಯಂತ ಕಿರಿಯ ಆಟಗಾರನಾದ ಅವರು, ಕೇವಲ ಒಂದು ವರ್ಷದ ಅವಧಿಯಲ್ಲಿ ಅಂದರೆ 2026ರಲ್ಲಿ ದಾಖಲೆ ಬರೆಯುವ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಪ್ರತಿಭೆ ದೇಶದ ಯಾವುದೇ ಮೂಲೆಯಿಂದಲೂ ಹೊರಹೊಮ್ಮಬಹುದು ಎಂಬುದನ್ನು ಅವರ ಯಶಸ್ಸು ತೋರಿಸಿಕೊಟ್ಟಿದೆ," ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈಭವ್ ಅವರ ಯಶಸ್ಸನ್ನು ಅವರು ಗಳಿಸುವ ರನ್‌ಗಳ ಮೂಲಕ ಮಾತ್ರ ಅಳೆಯಲು ಸಾಧ್ಯವಿಲ್ಲ. ಕೋಟ್ಯಂತರ ಕನಸುಗಳಿಗೆ ಅಸಾಧಾರಣ ಸಾಧನೆ ಮಾಡುವ ಸ್ವಾತಂತ್ರ್ಯ ಸಿಕ್ಕರೆ ಏನಾಗಬಹುದು ಎಂಬುದಕ್ಕೆ ವೈಭವ್ ಅವರ ಪಯಣವೇ ಉತ್ತರ ನೀಡಬಹುದು ಎಂದು ಆಯುಷ್ಮಾನ್ ಹೇಳಿದ್ದಾರೆ.

BAN vs SA: 6 ವಿಕೆಟ್‌ ಸಾಧನೆಯ ಮೂಲಕ 130 ವರ್ಷಗಳ ಹಳೆಯ ದಾಖಲೆ ಮುರಿದ ಸೈಮನ್‌ ಹಾರ್ಮರ್‌!

14ನೇ ವಯಸ್ಸಿನಲ್ಲೇ ಐಪಿಎಲ್ ದಾಖಲೆ ನಿರ್ಮಿಸಿದ್ದ ವೈಭವ್

ವೈಭವ್ ಸೂರ್ಯವಂಶಿ 2025ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್‌ಗೆ ಪದಾರ್ಪಣೆ ಮಾಡುವ ಮೂಲಕ ಟೂರ್ನಿಯ ಇತಿಹಾಸದಲ್ಲೇ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಅದೇ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಶತಕ ಸಿಡಿಸಿ ಪುರುಷರ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಕಿರಿಯ ಶತಕವೀರ ಎಂಬ ದಾಖಲೆಯನ್ನೂ ಬರೆದಿದ್ದರು.

2026ರ ಐಪಿಎಲ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದ ವೈಭವ್, ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು. ಇದಲ್ಲದೆ, 2026ರ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಮೂಲಕ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಪುರುಷ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಿಹಾರ ತಂಡವನ್ನು ಮುನ್ನಡೆಸುವ ಮೂಲಕ ಮತ್ತೊಂದು ಸಾಧನೆ ಮಾಡಿದ್ದಾರೆ.

59 ಎಸೆತಗಳಲ್ಲಿ ಶತಕ ಬಾರಿಸಿ ತನ್ನನ್ನು ರಿಲೀಸ್‌ ಮಾಡಿದ ಆರ್‌ಸಿಬಿಗೆ ಗ್ರೇಸ್‌ ಹ್ಯಾರಿಸ್‌ ತಿರುಗೇಟು!

ಹರ್ಮನ್‌ಪ್ರೀತ್ ಕೌರ್ ಸೇರಿದಂತೆ ಹಲವು ಕ್ರೀಡಾಪಟುಗಳಿಗೆ ಗೌರವ

ವೈಭವ್ ಸೂರ್ಯವಂಶಿ ಮಾತ್ರವಲ್ಲದೆ, ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಬಾಕ್ಸರ್ ಲವ್ಲಿನಾ ಬೊರ್ಗೊಹೈನ್, ವೇಟ್‌ಲಿಫ್ಟರ್ ಮೀರಾಬಾಯಿ ಚಾನು, ಚೆಸ್ ವಿಶ್ವ ಚಾಂಪಿಯನ್ ಡಿ. ಗುಕೇಶ್, ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಹಾಕಿ ಗೋಲ್‌ಕೀಪರ್ ಸವಿತಾ ಪುನಿಯಾ ಸೇರಿದಂತೆ ಹಲವು ಕ್ರೀಡಾ ಸಾಧಕರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.