Duleep Trophy 2026: ಪೂರ್ವ ವಲಯ ತಂಡಕ್ಕೆ ವೈಭವ್ ಸೂರ್ಯವಂಶಿ ಉಪ ನಾಯಕ!
2026ರ ದುಲೀಪ್ ಟ್ರೋಫಿ ಟೂರ್ನಿಗೆ ಪೂರ್ವ ವಲಯ ತಂಡವನ್ನು ಪ್ರಕಟಿಸಲಾಗಿದ್ದು, ಇಶಾನ್ ಕಿಶನ್‌ಗೆ ನಾಯಕತ್ವವನ್ನು ನೀಡಲಾಗಿದ್ದು, ವೈಭವ್ ಸೂರ್ಯವಂಶಿಗೆ ಉಪನಾಯಕನ ಜವಾಬ್ದಾರಿಯನ್ನು ನೀಡಲಾಗಿದೆ. ಆಗಸ್ಟ್ 23 ರಂದು ಆರಂಭವಾಗಲಿರುವ ಪ್ರತಿಷ್ಠಿತ ದುಲೀಪ್ ಟ್ರೋಫಿ ಟೂರ್ನಿಗೆ ಪೂರ್ವ ವಲಯದ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.
ಪೂರ್ವ ವಲಯ ತಂಡಕ್ಕೆ ವೈಭವ್ ಸೂರ್ಯವಂಶಿ ಉಪ ನಾಯಕ. -
ನವದೆಹಲಿ: ಆಗಸ್ಟ್ 23 ರಂದು ಆರಂಭವಾಗಲಿರುವ 2026ರ ದುಲೀಪ್ ಟ್ರೋಫಿ (Duleep Trophy 2026) ಟೂರ್ನಿಗೆ 15 ಸದಸ್ಯರ ಪೂರ್ವ ವಲಯ (East Zone) ತಂಡವನ್ನು ಪ್ರಕಟಿಸಲಾಗಿದೆ. ಪೂರ್ವ ವಲಯ ತಂಡಕ್ಕೆ ಇಶಾನ್ ಕಿಶನ್ ಅವರನ್ನು ನಾಯಕನನ್ನಾಗಿ ನೇಮಕ ಮಾಡಲಾಗಿದ್ದು, ಉಪ ನಾಯಕತ್ವದ ಜವಾಬ್ದಾರಿಯನ್ನು 15ರ ವಯಸ್ಸಿನ ವೈಭವ್ ಸೂರ್ಯವಂಶಿಗೆ (Vaibhav Sooryavanshi) ನೀಡಲಾಗಿದೆ. 2025ರಲ್ಲಿ ಈ ತಂಡವನ್ನು ಮುನ್ನಡೆಸಿದ್ದ ರಿಯಾನ್ ಪರಾಗ್ ಅವರು ಸ್ಮಾಯು ಸೆಳೆತದ ಗಾಯದಿಂದಾಗಿ ಟೂರ್ನಿಯಿಂದ ಹೊರ ನಡೆದಿದ್ದಾರೆ.
ವೈಭವ್ ಸೂರ್ಯವಂಶಿಗೆ ಉಪ ನಾಯಕತ್ವದ ಜವಾಬ್ದಾರಿ ನೀಡಿರುವುದು ವಿಶೇಷವಾಗಿದೆ. ಯುವ ಆಟಗಾರನನ್ನು ಭವಿಷ್ಯದ ನಾಯಕತ್ವಕ್ಕೆ ಸಿದ್ಧಪಡಿಸುವ ಉದ್ದೇಶದಿಂದ ಬಿಸಿಸಿಐ ಈ ರೀತಿಯ ಅವಕಾಶಗಳನ್ನು ನೀಡುತ್ತಿದೆ. 15 ವರ್ಷದ ವೈಭವ್ ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧದ ಯುವ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ, ಇದೇ ವರ್ಷದ ಆರಂಭದಲ್ಲಿ ನಡೆದಿದ್ದ ಅಂಡರ್-19 ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಉಪನಾಯಕನಾಗಿಯೂ ಆಯ್ಕೆಯಾಗಿದ್ದರು.
ಭಾರತ ತಂಡವನ್ನು ತೊರೆದ ಬೆನ್ನಲ್ಲೆ ಕೆಕೆಆರ್ ತಂಡದಲ್ಲಿ ದೊಡ್ಡ ಹುದ್ದೆಯನ್ನು ಅಲಂಕರಿಸಿದ ರಯಾನ್ ಟೆನ್ ಡಶ್ಕಾಟೆ!
ಮೊಹಮ್ಮದ್ ಶಮಿಗೆ ಅಗ್ನಿಪರೀಕ್ಷೆ
ಮತ್ತೊಂದೆಡೆ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರಿಗೆ ದುಲೀಪ್ ಟ್ರೋಫಿ ಪ್ರಮುಖ ಪರೀಕ್ಷೆಯಾಗಲಿದೆ. ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಅವರು ಭಾರತ ತಂಡದ ಬಾಗಿಲು ತಟ್ಟುತ್ತಿದ್ದು, ದೇಶಿ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಆದರೂ ಬಿಸಿಸಿಐ ಆಯ್ಕೆ ಸಮಿತಿ ಹಿರಿಯ ಆಟಗಾರನತ್ತ, ವಿಶೇಷವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನೂ ಗಮನ ಹರಿಸುತ್ತಿಲ್ಲ. ಅಂದ ಹಾಗೆ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಶಮಿಯ ಫಿಟ್ನೆಸ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಆದರೆ ಕಳೆದ ರಣಜಿ ಟ್ರೋಫಿ ಋತುವಿನಲ್ಲಿ ಶಮಿ ಉತ್ತಮ ಲಯದಲ್ಲಿದ್ದು, ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು. ಇದೀಗ ದುಲೀಪ್ ಟ್ರೋಫಿಯಲ್ಲಿನ ಅವರ ಪ್ರದರ್ಶನವು ಭಾರತ ತಂಡದ ಮರಳುವಿಕೆಗೆ ಮಹತ್ವದ ಪಾತ್ರ ವಹಿಸಬಹುದು.
ಶ್ರೀಲಂಕಾ ಟೆಸ್ಟ್ ಸರಣಿಗೂ ಮುನ್ನ ರಿಷಭ್ ಪಂತ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಎಬಿ ಡಿ ವಿಲಿಯರ್ಸ್!
ಭಾರತ ತಂಡವು ಟೆಸ್ಟ್ ಕ್ರಿಕೆಟ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಕಷ್ಟ ಎದುರಿಸುತ್ತಿದ್ದು, ತವರಿನಲ್ಲೇ ಹಲವು ಸರಣಿಗಳನ್ನು ಕಳೆದುಕೊಂಡಿದೆ. ಇಂತಹ ಕಠಿಣ ಸಂದರ್ಭದಲ್ಲಿ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ನಿರೀಕ್ಷೆಯಂತೆ ನಡೆಯದಿದ್ದರೆ, ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ಮತ್ತೆ ರಾಷ್ಟ್ರೀಯ ತಂಡಕ್ಕೆ ಪರಿಗಣಿಸುವ ಸಾಧ್ಯತೆಯಿದೆ.
ಮತ್ತೊಂದೆಡೆ, ಮುಖೇಶ್ ಕುಮಾರ್ ಅವರಿಗೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಇದು ಉತ್ತಮ ಅವಕಾಶವಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯ ನಂತರ ಬಂಗಾಳ ಮೂಲದ ವೇಗದ ಬೌಲರ್ ಭಾರತ ತಂಡದ ಯೋಜನೆಗಳಿಂದ ಹೊರಗಿದ್ದಾರೆ.
ICC Rankings: ಶುಭಮನ್ ಗಿಲ್ ನಂ 1 ಒಡಿಐ ಬ್ಯಾಟ್ಸ್‌ಮನ್; 230ರ ಸ್ಥಾನಗಳಲ್ಲಿ ಏರಿಕೆ ಕಂಡ ವೈಭವ್ ಸೂರ್ಯವಂಶಿ!
ಇನ್ನು ಐಪಿಎಲ್ ವೇಳೆ ಬೆನ್ನು ನೋವಿಗೆ ಒಳಗಾದ ಆಕಾಶ್ ದೀಪ್ ಅನುಪಸ್ಥಿತಿಯಲ್ಲಿ, ಸೂರಜ್ ಸಿಂಧು ಜೈಸ್ವಾಲ್ ಅವರಿಗೆ ಆಡುವ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ. 2025-26ರ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಬಂಗಾಳ ವೇಗದ ಬೌಲರ್ ಮೇಲೆ ಈಗ ಎಲ್ಲರ ಗಮನ ನೆಟ್ಟಿದೆ.
ಪೂರ್ವ ವಲಯ ತಂಡ: ಅಭಿಮನ್ಯು ಈಶ್ವರನ್, ಸುದೀಪ್ ಕುಮಾರ್ ಘರಮಿ, ಶಹಬಾಝ್ ಅಹ್ಮದ್, ಸೂರಜ್ ಸಿಂಧು ಜೈಸ್ವಾಲ್, ಮೊಹಮ್ಮದ್ ಶಮಿ, ಮುಖೇಶ್ ಕುಮಾರ್, ಇಶಾನ್ ಕಿಶನ್ (ನಾಯಕ), ಕುಮಾರ್ ಕುಶಾಗ್ರ, ಶಿಖರ್ ಮೋಹನ್, ಅನುಕುಲ್ ರಾಯ್, ವಿರಾಟ್ ಸಿಂಗ್, ವೈಭವ್ ಸೂರ್ಯವಂಶಿ (ಉಪ ನಾಯಕ), ಸುಬ್ರಾಂಶು ಸೇನಾಪತಿ, ದೆನಿಶ್ ದಾಸ್, ಅಭಿಜೀತ್ ಸರ್ಕಾರ್