ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರೋಹಿತ್‌ ಶರ್ಮ ಫಿಟ್ನೆಸ್‌ ಕಂಡು ದಂಗಾದ ಅಭಿಮಾನಿಗಳು

Rohit Sharma: ಇಂಡಿಯನ್ ಪ್ರೀಮಿಯರ್ ಲೀಗ್ 2026 ಮಾರ್ಚ್ 28 ರಂದು ಆರಂಭವಾಗಲಿದೆ. ಮುಂಬೈ ತಂಡವು 29 ರಂದು ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ತಮ್ಮ ತವರು ಮೈದಾನವಾದ ವಾಂಖೇಡೆ ಕ್ರೀಡಾಂಗಣದಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.

ರೋಹಿತ್‌ ಶರ್ಮ ಫಿಟ್ನೆಸ್‌ ಕಂಡು ದಂಗಾದ ಅಭಿಮಾನಿಗಳು

Rohit Sharma fittest -

Abhilash BC
Abhilash BC Mar 14, 2026 2:38 PM

ಮುಂಬಯಿ, ಮಾ.14: ಟೀಮ್‌ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ(Rohit Sharma) ತಮ್ಮ ದೈಹಿಕ ಬದಲಾವಣೆಯೊಂದಿಗೆ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದ್ದಾರೆ. ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪರ ಕಾಣಿಸಿಕೊಳ್ಳಲು ಸಿದ್ಧರಾಗಿರುವ ಅವರು ಸಿಕ್ಸ್‌ ಪ್ಯಾಕ್‌ ಹೊಂದಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಫೋಟೊ ಭಾರೀ ವೈರಲ್‌ ಆಗಿದೆ.

ಕಳೆದ ಐಪಿಎಲ್ ಋತುವಿನಲ್ಲಿ ರೋಹಿತ್‌ ಅವರನ್ನು ಕೆಲವು ಪಂದ್ಯಗಳಲ್ಲಿ ಇಂಪ್ಯಾಕ್ಟ್‌ ಆಟಗಾರನಾಗಿ ಮಾತ್ರ ಬಳಸಿಕೊಳ್ಳಲಾಗಿತ್ತು. ಈ ಬಾರಿ ಅವರನ್ನು ಪೂರ್ಣ ಪ್ರಮಾಣದ ಆಟಗಾರನಾಗಿ ಬಳಸಿಕೊಳ್ಳಬೇಕು ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.

"ರೋಹಿತ್ ಅವರಂತಹ ಅನುಭವಿ ಆಟಗಾರನನ್ನು ಬದಲಿ ಆಟಗಾರನಾಗಿ ಬಳಸಿಕೊಳ್ಳುವುದಕ್ಕೆ ಸೀಮಿತಗೊಳಿಸಬಾರದು, ಏಕೆಂದರೆ ಅವರ ಕ್ರಿಕೆಟ್ ಚಾತುರ್ಯವು ಮುಂಬೈ ಮೂಲದ ಫ್ರಾಂಚೈಸಿ ಫೀಲ್ಡಿಂಗ್ ಮಾಡುವಾಗ ಕಠಿಣ ಸಂದರ್ಭಗಳಲ್ಲಿ ಪಂದ್ಯಗಳನ್ನು ಗೆಲ್ಲಲು ಸಹಾಯ ಮಾಡುತ್ತದೆ" ಎಂದು ಚೋಪ್ರಾ ಹೇಳಿದರು.



ಹರ್ಭಜನ್‌ ಸಿಂಗ್‌ ಕೂಡ ರೋಹಿತ್‌ ಅವರನ್ನು ಬದಲಿ ಆಟಗಾರನನ್ನಾಗಿ ಆಡಿಸುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. "ರೋಹಿತ್ ಶರ್ಮಾ ಅವರನ್ನು ಕೇವಲ ಬ್ಯಾಟಿಂಗ್ ಮಾಡುವ 12 ನೇ ಆಟಗಾರನಾಗಿ ಬಳಸಲಾಗಿದೆ. ಆದರೆ ಅವರು ನಾಯಕರಾಗಿದ್ದಂತಹ ಆಟಗಾರ. ಅವರು ಮೈದಾನದಲ್ಲಿರಬೇಕು ಎಂದು ನಾನು ಭಾವಿಸುತ್ತೇನೆ. ಕಠಿಣ ಪಂದ್ಯಗಳಲ್ಲಿ, ನೀವು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದಾಗ, ನಾಯಕನಿಗೆ ಸಲಹೆ ಅಗತ್ಯವಿದ್ದಾಗ, ರೋಹಿತ್ ಅವರು ಹಾರ್ದಿಕ್ ಪಾಂಡ್ಯ ಪರವಾಗಿ ಅದನ್ನು ಮಾಡಬಹುದು" ಎಂದು ಹರ್ಭಜನ್ ಜಿಯೋಸ್ಟಾರ್ ಮೂಲಕ ಹೇಳಿದರು.



ಇಂಡಿಯನ್ ಪ್ರೀಮಿಯರ್ ಲೀಗ್ 2026 ಮಾರ್ಚ್ 28 ರಂದು ಆರಂಭವಾಗಲಿದೆ. ಮುಂಬೈ ತಂಡವು 29 ರಂದು ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ತಮ್ಮ ತವರು ಮೈದಾನವಾದ ವಾಂಖೇಡೆ ಕ್ರೀಡಾಂಗಣದಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.