ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs ZIM: ಭಾರತ ತಂಡಕ್ಕೆ ವಿವಿಎಸ್‌ ಲಕ್ಷ್ಮಣ್‌ ಹೆಡ್‌ ಕೋಚ್‌? ಗೌತಮ್‌ ಗಂಭೀರ್‌ ಇಲ್ಲ!

ಬಿಡುವಿಲ್ಲದೆ ಕ್ರಿಕೆಟ್‌ ವೇಳಾಪಟ್ಟಿಯ ಪ್ರಸಕ್ತ ಕ್ಯಾಲೆಂಡ್‌ ವರ್ಷದಲ್ಲಿ ಬಿಸಿಸಿಐ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಜಿಂಬಾಬ್ವೆ ಪ್ರವಾಸದ ಟಿ20ಐ ಸರಣಿ ಹಾಗೂ 2026ರ ಏಷ್ಯನ್‌ ಗೇಮ್ಸ್‌ ಟೂರ್ನಿಯಲ್ಲಿ ಭಾಗವಹಿಸುವ ಭಾರತ ತಂಡಕ್ಕೆ ವಿವಿಎಸ್‌ ಲಕ್ಷ್ಮಣ್‌ ಹೆಡ್‌ ಕೋಚ್‌ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಜಿಂಬಾಬ್ವೆ ಟಿ20ಐ ಸರಣಿಯ ಭಾರತಕ್ಕೆ ವಿವಿಎಸ್‌ ಲಕ್ಷ್ಮಣ್‌ ಹೆಡ್‌ ಕೋಚ್‌?

ಭಾರತ ತಂಡಕ್ಕೆ ವಿವಿಎಸ್‌ ಲಕ್ಷ್ಮಣ್‌ ಹೆಡ್‌ ಕೋಚ್‌? -

Profile
Ramesh Kote Jul 7, 2026 4:35 PM

ನವದೆಹಲಿ: ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಗೆ 15 ಸದಸ್ಯರ ಭಾರತ ತಂಡವನ್ನು (India's T20 team) ಪ್ರಕಟಿಸಿದ ಒಂದು ದಿನದ ಬೆನ್ನಲ್ಲೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಕೇವಲ ಈ ಸರಣಿಗೆ ಮಾತ್ರವಲ್ಲ 2026ರ ಏಷ್ಯಾ ಕ್ರೀಡಾಕೂಟದಲ್ಲಿಯೂ ಭಾರತ ತಂಡ ಕೋಚಿಂಗ್‌ ವಿಭಾಗದಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ. ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿ ಹಾಗೂ ಏಷ್ಯನ್ ಗೇಮ್ಸ್‌ ನಿಮಿತ್ತ ಭಾರತ ತಂಡಕ್ಕೆ ವಿವಿಎಸ್‌ ಲಕ್ಷ್ಮಣ್‌ (VVS Laxman) ಅವರನ್ನು ಹೆಡ್‌ ಕೋಚ್‌ ಆಗಿ ನೇಮಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಇದಕ್ಕೆ ಬಲವಾದ ಕಾರಣವೇನೆಂದು ಇಲ್ಲಿ ವಿವರಿಸಲಾಗಿದೆ.

2026ರ ಏಷ್ಯನ್‌ ಗೇಮ್ಸ್‌ ಹಾಗೂ ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಯು ಏಕ ಕಾಲದಲ್ಲಿ ನಡೆಯಲಿವೆ. ಹಾಗಾಗಿ ಬಿಸಿಸಿಐ ಏಷ್ಯನ್‌ ಗೇಮ್ಸ್‌ಗೆ ವಿಭಿನ್ನ ತಂಡವನ್ನು ಕಳುಹಿಸಿ, ಅಲ್ಲಿ ತಂಡದ ಹೆಡ್‌ ಕೋಚ್‌ ವಿವಿಎಸ್‌ ಲಕ್ಷ್ಮಣ್‌ ಹೆಡ್‌ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇನ್ನು ತವರಿನಲ್ಲಿ ಸೆಪ್ಟಂಬರ್‌ 27 ರಂದು ಕೆರಿಬಿಯನ್‌ ವಿರುದ್ಧದ ಸರಣಿಯಲ್ಲಿ ಭಾರತ ತಂಡಕ್ಕೆ ಹೆಡ್‌ ಕೋಚ್‌ ಆಗಿ ಗೌತಮ್‌ ಗಂಭೀರ್‌ ಕಾರ್ಯನಿರ್ವಹಿಸಲಿದ್ದಾರೆ.

IND vs ZIM: ಜಿಂಬಾಬ್ವೆ ಟಿ20ಐ ಸರಣಿಗೆ ಭಾರತ ತಂಡ ಪ್ರಕಟ, ಸಂಜು ಸ್ಯಾಮ್ಸನ್‌ ಔಟ್‌!

ಬಿಸಿಸಿಐ ಸೆಂಟರ್‌ ಅಫ್‌ ಎಕ್ಸಲೆನ್ಸ್‌ನಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ವಿವಿಎಸ್‌ ಲಕ್ಷ್ಮಣ್ ಅವರನ್ನು ಜಿಂಬಾಬ್ವೆ ಪ್ರವಾಸದ ಟಿ20ಐ ಸರಣಿಯಲ್ಲಿ ಕೋಚಿಂಗ್‌ ವಿಭಾಗದಲ್ಲಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇವರ ಜೊತೆಗೆ ಮಾಜಿ ಸ್ಪಿನ್ನರ್‌ ಸುನೀಲ್‌ ಜೋಶಿ ಅವರು ಬೌಲಿಂಗ್‌ ಕೋಚ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸ್ಪೋರ್ಟ್ಸ್‌ಸ್ಟಾರ್‌ ವರದಿ ಮಾಡಿದೆ. ಇನ್ನು ಬ್ಯಾಟಿಂಗ್‌ ಕೋಚ್‌ ಆಗಿ ಹೃಷಿಕೇಶ್‌ ಕಾಣಿಟ್ಕರ್‌ ಅವರು ಬ್ಯಾಟಿಂಗ್‌ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇದೇ ಕೋಚಿಂಗ್‌ ತಂಡ, ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ನಲ್ಲಿಯೂ ಕಾಣಿಸಿಕೊಳ್ಳಲಿದೆ.



ಈ ಹಿಂದೆ ಕೋಚ್‌ ಆಗಿ ಅನುಭವ ಪೆಡದಿದ್ದ ಲಕ್ಷ್ಮಣ್‌

ಬಿಸಿಸಿಐ ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರೂ ವಿವಿಎಸ್‌ ಲಕ್ಷ್ಮಣ್‌ ಅವರು ಅಗತ್ಯ ಸಂದರ್ಭಗಳಲ್ಲಿ ಭಾರತ ತಂಡದಲ್ಲಿ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ರಾಹುಲ್‌ ದ್ರಾವಿಡ್‌ ಹೆಡ್‌ ಕೋಚ್‌ ಅವಧಿಯಲ್ಲಿಯೂ ಮಾಜಿ ಟೆಸ್ಟ್‌ ಬ್ಯಾಟ್ಸ್‌ಮನ್‌ ಹಂಗಾಮಿ ಕೋಚ್‌ ಆಗಿ ಯಶಸ್ವಿಯಾಗಿದ್ದರು.

2022ರಲ್ಲಿ ಐರ್ಲೆಂಡ್‌ ಪ್ರವಾಸ ಕೈಗೊಂಡಿದ್ದ ಭಾರತ ತಂಡಕ್ಕೆ ವಿವಿಎಸ್‌ ಕೋಚ್‌ ಆಗಿದ್ದರು ಹಾಗೂ ಈ ಸರಣಿಯಲ್ಲಿ ಟೀಮ್‌ ಇಂಡಿಯಾ 2-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಗೆಲುವು ಪಡೆದಿತ್ತು. ಬಳಿಕ ಮುಂದಿನ ವರ್ಷವೇ ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡ, ಲಕ್ಷ್ಮಣ್‌ ಕೋಚ್‌ ಅಡಿಯಲ್ಲಿ ಟಿ20ಐ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತ್ತು.

IND vs ENG: ಸಂಜು ಸ್ಯಾಮ್ಸನ್‌ರನ್ನು ಕೈ ಬಿಡಲು ಕಾರಣ ತಿಳಿಸಿದ ಆರ್‌ ಅಶ್ವಿನ್‌!

ಜಿಂಬಾಬ್ವೆ ಟಿ20ಐ ಸರಣಿಗೆ ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ (ಉಪನಾಯಕ), ಇಶಾನ್ ಕಿಶನ್ (ವಿಕೆಟ್‌ಕೀಪರ್), ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ, ಮಯಾಂಕ್ ಯಾದವ್ ಹಾಗೂ ಪ್ರಭ್‌ಸಿಮ್ರನ್ ಸಿಂಗ್ (ವಿಕೆಟ್‌ಕೀಪರ್)