ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs WI 5th T20I: ಟಾಸ್‌ ಸೋತ ಭಾರತ ಮೊದಲ ಬ್ಯಾಟಿಂಗ್‌, 4 ವರ್ಷಗಳ ಬಳಿಕ ಭುವಿ ಕಮ್‌ಬ್ಯಾಕ್‌!

IND vs WI 5th T20I Match: ಭಾರತ ಹಾಗೂ ವೆಸ್ಟ್‌ ಇಂಡೀಸ್‌ ನಡುವಣ ಐದನೇ ಟಿ20ಐ ಪಂದ್ಯವನ್ನು ಮಳೆಯಿಂದ 9 ಓವರ್‌ಗಳಿಗೆ ಸೀಮಿತಗೊಳಿಸಲಾಗಿದೆ. ಟಾಸ್‌ ಗೆದ್ದ ವೆಸ್ಟ್‌ ಇಂಡೀಸ್‌ ಬೌಲಿಂಗ್‌ ಆರಿಸಿಕೊಂಡಿದ್ದಾರೆ. 4 ವರ್ಷಗಳ ಬಳಿಕ ಭುವನೇಶ್ವರ್‌ ಕುಮಾರ್‌ ಭಾರತ ತಂಡದ ಪರ ಕಣಕ್ಕೆ ಇಳಿದಿದ್ದಾರೆ.

ಭಾರತ ಮೊದಲ ಬ್ಯಾಟಿಂಗ್‌, 4 ವರ್ಷಗಳ ಬಳಿಕ ಭುವಿ ಕಮ್‌ಬ್ಯಾಕ್‌!

ಭಾರತ vs ವೆಸ್ಟ್‌ ಇಂಡೀಸ್‌ ನಡುವಣ ಐದನೇ ಟಿ20ಐ ಪಂದ್ಯ. -

Profile
Ramesh Kote Oct 17, 2026 9:15 PM

ಬೆಂಗಳೂರು: ಮಳೆ ನಿಂತ ಬಳಿಕ ಭಾರತ ಹಾಗೂ ವೆಸ್ಟ್‌ ಇಂಡೀಸ್‌ (IND vs WI) ನಡುವಣ ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಯಿತು. ಮಳೆಯಿಂದಾಗಿ ಪಂದ್ಯವನ್ನು ಎರಡು ಗಂಟೆಗಳ ತಡವಾಗಿ ಆರಂಭಿಸಲಾಯಿತು. ಹಾಗಾಗಿ ಈ ಪಂದ್ಯವನ್ನು 9 ಓವರ್‌ಗಳಿಗೆ ಸೀಮಿತಗೊಳಿಸಲಾಗಿದೆ. ಟಾಸ್‌ ಗೆದ್ದ ಪ್ರವಾಸಿ ತಂಡದ ನಾಯಕ ಶೇಯ್‌ ಹೋಪ್‌ (Shai Hope) ಬೌಲಿಂಗ್‌ ಆರಿಸಿಕೊಂಡಿದ್ದು, ಭಾರತವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ.

ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಎರಡು ಬದಲಾವಣೆಯನ್ನು ತರಲಾಗಿದೆ ಎಂದು ನಾಯಕ ಶ್ರೇಯಸ್‌ ಅಯ್ಯರ್‌ ಟಾಸ್‌ ವೇಳೆ ಮಾಹಿತಿ ನೀಡಿದರು. ನಿತೀಶ್‌ ಕುಮಾರ್‌ ರೆಡ್ಡಿ ಅವರ ಸ್ಥಾನಕ್ಕೆ ಶಿವಂ ದುಬೆ ಹಾಗೂ ಮಯಾಂಕ್‌ ಯಾದವ್‌ ಅವರ ಬದಲು ಭುವನೇಶ್ವರ್‌ ಕುಮಾರ್‌ ಆಡುತ್ತಿದ್ದಾರೆ. ಇನ್ನು ಎದುರಾಳಿ ವಿಂಡೀಸ್‌ ತಂಡದ ಪ್ಲೇಯಿಂಗ್‌ XIನಲ್ಲಿ ಯಾವುದೇ ಬದಲಾವಣೆಯನ್ನು ತರಲಾಗಿಲ್ಲ. ಕಳೆದ ಪಂದ್ಯವನ್ನು ಆಡಿದ್ದ ಅದೇ ಆಡುವ ಬಳಗವನ್ನು ಉಳಿಸಿಕೊಳ್ಳಲಾಗಿದೆ ಎಂದು ನಾಯಕ ಶೇಯ್‌ ಹೋಪ್‌ ತಿಳಿಸಿದ್ದಾರೆ.

IND vs WI: ಬೆಂಗಳೂರಿನಲ್ಲಿ ಮಳೆ ಬಂದರೂ ಐದನೇ ಟಿ20ಐ ಪಂದ್ಯವನ್ನು ನಡೆಸಬಹುದು! ಹೇಗೆ ಗೊತ್ತೆ?

ಉಭಯ ತಂಡಗಳ ಪ್ಲೇಯಿಂಗ್‌ XI

ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ನಮನ್ ಧೀರ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಪ್ರಿನ್ಸ್ ಯಾದವ್, ಅರ್ಷದೀಪ್ ಸಿಂಗ್

ವೆಸ್ಟ್ ಇಂಡೀಸ್: ಶೇಯ್ ಹೋಪ್ (ನಾಯಕ ಮತ್ತು ವಿಕೆಟ್ ಕೀಪರ್), ಜುವೆಲ್ ಆಂಡ್ರ್ಯೂ, ಶಿಮ್ರಾನ್ ಹೆಟ್ಮಾಯರ್, ರೊವ್ಮನ್‌ ಪೊವೆಲ್, ಶೆರ್ಫೇನ್ ಋದರ್‌ಫೋರ್ಡ್, ರೊಮ್ಯಾರಿಯೊ ಶೆಫರ್ಡ್, ರಾಸ್ಟನ್ ಚೇಸ್, ಕೀಮೋ ಪಾಲ್, ಶಮರ್ ಸ್ಪ್ರಿಂಗರ್, ಗುಡಕೇಶ್ ಮೋಟಿ, ಶಮರ್ ಜೋಸೆಫ್



ನಾಲ್ಕು ವರ್ಷಗಳ ಬಳಿಕ ಭುವನೇಶ್ವರ್‌ ಕುಮಾರ್‌ ಕಮ್‌ಬ್ಯಾಕ್‌

ಹಿರಿಯ ವೇಗಿ ಹಾಗೂ ಸ್ವಿಂಗ್‌ ಮಾಸ್ಟರ್‌ ಭುವನೇಶ್ವರ್‌ ಕುಮಾರ್‌ ಅವರು ಐದನೇ ಟಿ20ಐ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್‌ XIನಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಆ ಮೂಲಕ ನಾಲ್ಕು ವರ್ಷಗಳ ಬಳಿಕ ಅವರು ರಾಷ್ಟ್ರೀಯ ತಂಡದ ಪರ ಕಣಕ್ಕೆ ಇಳಿದಿದ್ದಾರೆ. 2022ರಲ್ಲಿ ಅವರು ನ್ಯೂಜಿಲೆಂಡ್‌ ವಿರುದ್ಧ ಭಾರತದ ಪರ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.

ಐದನೇ ಪಂದ್ಯ ಗೆದ್ದ ತಂಡಕ್ಕೆ ಟಿ20ಐ ಸರಣಿ

ಉಭಯ ತಂಡಗಳು ನಾಲ್ಕು ಪಂದ್ಯಗಳ ಅಂತ್ಯಕ್ಕೆ ಟಿ20ಐ ಸರಣಿಯಲ್ಲಿ 2-2 ಸಮಬಲವನ್ನು ಕಾಯ್ದುಕೊಂಡಿವೆ. ಇದೀಗ ಬೆಂಗಳೂರಿನ ಪಂದ್ಯವನ್ನು ಗೆದ್ದ ತಂಡ ಟಿ20ಐ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ. ಈ ಸರಣಿಯಲ್ಲಿ ಎರಡೂ ತಂಡಗಳು ಸಮಬಲದ ಹೋರಾಟವನ್ನು ನಡೆಸಿಕೊಂಡು ಬಂದಿವೆ. ಹಾಗಾಗಿ ಐದನೇ ಪಂದ್ಯದಲ್ಲಿ ಯಾವ ತಂಡ ಗೆಲ್ಲಬಹುದು ಎಂದು ಅಂದಾಜಿಸುವುದು ಕಷ್ಟ.