ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs ENG: ಟಿ20 ವಿಶ್ವಕಪ್‌ ಮೂರನೇ ಬಾರಿ ಸೆಮೀಸ್‌ನಲ್ಲಿ ಕಾದಾಟ, ಕೊನೆಯ 2 ಬಾರಿ ಯಾವ ತಂಡ ಗೆದ್ದಿತ್ತು?

IND vs ENG Semifinal: 2026ರ ಟಿ20 ವಿಶ್ವಕಪ್‌ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮಾರ್ಚ್‌ 5 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಈ ಎರಡೂ ತಂಡಗಳು ಕಳೆದ ಎರಡು ಟಿ20 ವಿಶ್ವಕಪ್‌ ಟೂರ್ನಿಗಳ ಸೆಮಿಫೈನಲ್‌ನಲ್ಲಿ ಎದುರಾಗಿದ್ದವು ಮತ್ತು ಈ ಎರಡೂ ಪಂದ್ಯಗಳು ಒನ್‌ ಸೈಡ್‌ ಪಂದ್ಯವಾಗಿದ್ದವು.

ಟಿ20 ವಿಶ್ವಕಪ್‌ ಸೆಮೀಸ್‌: 2 ಬಾರಿ ಕಾದಾಟ ನಡೆಸಿದ್ದ ಭಾರತ-ಇಂಗ್ಲೆಂಡ್‌!

ಭಾರತ vs ಇಂಗ್ಲೆಂಡ್‌ ಸೆಮೀಸ್‌ ಮುಖಾಮುಖಿ ಕಾದಾಟ. -

Profile
Ramesh Kote Mar 2, 2026 10:43 PM

ನವದೆಹಲಿ: ಭಾರತ (India) ತಂಡ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಎರಡೂ ತಂಡಗಳು ಮಾರ್ಚ್ 5 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವಿನ ಸತತ ಮೂರನೇ ಟಿ20 ವಿಶ್ವಕಪ್ ಸೆಮಿಫೈನಲ್ ಇದಾಗಿದೆ. 2022 ಮತ್ತು 2024ರ ಟೂರ್ನಿಗಳಲ್ಲಿ ಎರಡೂ ತಂಡಗಳು ಸೆಮಿಫೈನಲ್‌ನಲ್ಲಿಯೂ ಮುಖಾಮುಖಿಯಾಗಿವೆ. ಎರಡೂ ಪಂದ್ಯಗಳ ಫಲಿತಾಂಶಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

2022ರಲ್ಲಿ ಅಡಿಲೇಡ್ ಓವಲ್‌ನಲ್ಲಿ ನಡೆದಿದ್ದ ಐಸಿಸಿ ಟಿ20 ವಿಶ್ವಕಪ್‌ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ 10 ವಿಕೆಟ್‌ಗಳಿಂದ ಜಯಗಳಿಸಿತ್ತು. ಹಾರ್ದಿಕ್ ಪಾಂಡ್ಯ ಅವರ 63 ಮತ್ತು ವಿರಾಟ್ ಕೊಹ್ಲಿ ಅವರ 50 ರನ್‌ಗಳ ನೆರವಿನಿಂದ ಭಾರತ 6 ವಿಕೆಟ್‌ಗಳಿಗೆ 168 ರನ್ ಗಳಿಸಿತ್ತು. ಇಂಗ್ಲೆಂಡ್ ಇನ್ನೂ ನಾಲ್ಕು ಓವರ್‌ಗಳು ಬಾಕಿ ಇರುವಾಗ ಈ ಗುರಿಯನ್ನು ಬೆನ್ನಟ್ಟಿತು. ಅಲೆಕ್ಸ್ ಹೇಲ್ಸ್ 47 ಎಸೆತಗಳಲ್ಲಿ 86 ರನ್ ಗಳಿಸಿದರೆ, ಜೋಸ್ ಬಟ್ಲರ್ 49 ಎಸೆತಗಳಲ್ಲಿ 80 ರನ್ ಗಳಿಸಿದರು. ಇಂಗ್ಲೆಂಡ್ ತಂಡ ಆ ಟೂರ್ನಿಯನ್ನು ಗೆದ್ದುಕೊಂಡಿತು.

T20 World Cup: ಅಭಿಷೇಕ್‌ ಶರ್ಮಾ ಔಟ್‌! ಇಂಗ್ಲೆಂಡ್‌ ವಿರುದ್ಧ ಸೆಮಿಫೈನಲ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಭಾರತ ತಂಡಕ್ಕೆ 68 ರನ್‌ ಗೆಲುವು

2024ರಲ್ಲಿ ಗಯಾನಾದ ಜಾರ್ಜ್‌ಟೌನ್‌ನಲ್ಲಿ ನಡೆದಿದ್ದ ಟಿ29 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಿದ್ದವು. ರೋಹಿತ್ ಶರ್ಮಾ 57 ರನ್ ಮತ್ತು ಸೂರ್ಯಕುಮಾರ್ ಯಾದವ್ 47 ರನ್ ಗಳಿಸಿ ಭಾರತವನ್ನು 171 ರನ್‌ಗಳ ಗಡಿ ದಾಟಿಸಿದರು. ಇಂಗ್ಲೆಂಡ್ 17ನೇ ಓವರ್‌ನಲ್ಲಿ ಕೇವಲ 103 ರನ್‌ಗಳಿಗೆ ಆಲೌಟ್ ಆಯಿತು. ಭಾರತ 68 ರನ್‌ಗಳ ಬೃಹತ್ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು. ಕುಲ್‌ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ತಲಾ ಮೂರು ವಿಕೆಟ್‌ಗಳನ್ನು ಪಡೆದರೆ, ಜಸ್‌ಪ್ರೀತ್‌ ಬುಮ್ರಾ ಎರಡು ವಿಕೆಟ್‌ಗಳನ್ನು ಪಡೆದರು. ಭಾರತ ತಂಡ ಫೈನಲ್ ಅನ್ನು ಗೆದ್ದುಕೊಂಡಿತು ಮತ್ತು 2024ರ ಟಿ20 ವಿಶ್ವಕಪ್ ಅನ್ನು ಸಹ ತನ್ನದಾಗಿಸಿಕೊಂಡಿತು.

ವಿಂಡೀಸ್‌ ಎದುರು ಭಾರತ ತಡವನ್ನು ಗೆಲ್ಲಿಸಿದ ಸಂಜು ಸ್ಯಾಮ್ಸನ್‌ಗೆ ರೋಹಿತ್‌ ಶರ್ಮಾ ವಿಶೇಷ ಸಂದೇಶ!

ಎರಡೂ ಸೆಮಿಫೈನಲ್‌ಗಳು ಒನ್‌ಸೈಡ್‌ ಮ್ಯಾಚ್‌ ಆಗಿದ್ದವು

ಭಾರತ ಮತ್ತು ಇಂಗ್ಲೆಂಡ್ ನಡುವಿನ ಹಿಂದಿನ ಎರಡು ಸೆಮಿಫೈನಲ್ ಪಂದ್ಯಗಳು ಏಕಪಕ್ಷೀಯವಾಗಿದ್ದವು. ಈ ಬಾರಿ ಪಂದ್ಯವು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇಂಗ್ಲೆಂಡ್ ಫಾರ್ಮ್‌ನಲ್ಲಿಲ್ಲದಿದ್ದರೂ ಇನ್ನೂ ಪಂದ್ಯಗಳನ್ನು ಗೆಲ್ಲುತ್ತಿದ್ದಾರೆ. ಆಂಗ್ಲರು ಗುಂಪು ಹಂತದಲ್ಲಿ ನೇಪಾಳ ಮತ್ತು ಇಟಲಿ ವಿರುದ್ಧ ಸ್ವಲ್ಪ ಅಂತರದಲ್ಲಿ ಗೆದ್ದಿದ್ದರು. ಸೂಪರ್-8 ರಲ್ಲಿ ಅವರ ಎಲ್ಲಾ ಪಂದ್ಯಗಳು ಸಹ ಸ್ಪರ್ಧಾತ್ಮಕವಾಗಿದ್ದವು. ಭಾರತ ತಂಡ, ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿಲ್ಲ. ಹಲವು ಸ್ಟಾರ್‌ ಆಟಗಾರರು ಫಾರ್ಮ್‌ನೊಂದಿಗೆ ಹೋರಾಡುತ್ತಿದ್ದಾರೆ.